2 ಕೊರಿಂಥದವರಿಗೆ Chapter 12 KANIRV Bible Verse Images

2 ಕೊರಿಂಥದವರಿಗೆ 12 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 2 ಕೊರಿಂಥದವರಿಗೆ 12 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


2 ಕೊರಿಂಥದವರಿಗೆ 12:1 (KANIRV)
Square Portrait Landscape 4K UHD
ಹೊಗಳಿಕೊಳ್ಳುವುದು ಹಿತಕರವಲ್ಲ. ಆದರೂ ಹೊಗಳಿಕೊಳ್ಳುವುದು ನನಗೆ ಅನಿವಾರ್ಯವಾಗಿದೆ. ಆದ್ದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನೂ ಮತ್ತು ತಿಳಿಯಪಡಿಸಿದ ರಹಸ್ಯಗಳನ್ನೂ ಕುರಿತು ಹೇಳುತ್ತೇನೆ.

2 ಕೊರಿಂಥದವರಿಗೆ 12:2 (KANIRV)
Square Portrait Landscape 4K UHD
ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು. ಅವನು ಹದಿನಾಲ್ಕು ವರ್ಷಗಳ ಹಿಂದೆ ಮೂರನೆಯ ಸ್ವರ್ಗಕ್ಕೆ ಒಯ್ಯಲ್ಪಟ್ಟನು. ಅವನು ದೇಹಸಹಿತನಾಗಿ ಒಯ್ಯಲ್ಪಟ್ಟನೋ, ಅಥವಾ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನರಿಯೆನು, ದೇವರೇ ಬಲ್ಲನು.

2 ಕೊರಿಂಥದವರಿಗೆ 12:3 (KANIRV)
Square Portrait Landscape 4K UHD
ಅವನು ಪರದೈಸಿ ತನಕ ಒಯ್ಯಲ್ಪಟ್ಟು ಮನುಷ್ಯರಿಂದ ಉಚ್ಚರಿಸಲೂ, ಆಡಲೂ ಬಾರದಂತಹ ಮಾತುಗಳನ್ನು ಕೇಳಿದನೆಂದೂ ಬಲ್ಲೆನು. ಆ ಸಮಯದಲ್ಲಿ ಆತನು ದೇಹಸಹಿತನಾಗಿದ್ದನೋ ಅಥವಾ ದೇಹರಹಿತನಾಗಿದ್ದನೋ ನಾನರಿಯೆನು, ದೇವರೇ ಬಲ್ಲನು.

2 ಕೊರಿಂಥದವರಿಗೆ 12:4 (KANIRV)
Square Portrait Landscape 4K UHD
ಅವನು ಪರದೈಸಿ ತನಕ ಒಯ್ಯಲ್ಪಟ್ಟು ಮನುಷ್ಯರಿಂದ ಉಚ್ಚರಿಸಲೂ, ಆಡಲೂ ಬಾರದಂತಹ ಮಾತುಗಳನ್ನು ಕೇಳಿದನೆಂದೂ ಬಲ್ಲೆನು. ಆ ಸಮಯದಲ್ಲಿ ಆತನು ದೇಹಸಹಿತನಾಗಿದ್ದನೋ ಅಥವಾ ದೇಹರಹಿತನಾಗಿದ್ದನೋ ನಾನರಿಯೆನು, ದೇವರೇ ಬಲ್ಲನು.

2 ಕೊರಿಂಥದವರಿಗೆ 12:5 (KANIRV)
Square Portrait Landscape 4K UHD
ಅವನನ್ನು ಕುರಿತಾಗಿ ನಾನು ಹೆಮ್ಮೆ ಪಡುವೆನು. ಆದರೆ ನನ್ನನ್ನು ಕುರಿತಂತೆ ನನ್ನ ಬಲಹೀನತೆಯನ್ನು ಕುರಿತಲ್ಲದೆ ಬೇರೆ ಹೊಗಳಿಕೆ ನನಗೆ ಇಲ್ಲ.

2 ಕೊರಿಂಥದವರಿಗೆ 12:6 (KANIRV)
Square Portrait Landscape 4K UHD
ಹೊಗಳಿಕೊಳ್ಳುವುದಕ್ಕೆ ನನಗೆ ಒಂದು ವೇಳೆ ಮನಸ್ಸಿದ್ದರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾನು ಬುದ್ಧಿಹೀನನಾಗುವುದಿಲ್ಲ, ಯಾಕೆಂದರೆ ನಾನು ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾರೂ ನನ್ನಲ್ಲಿ ಕಾಣುವುದಕ್ಕಿಂತಲೂ ಅಥವಾ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಪರಿಗಣಿಸಬಾರದು.

2 ಕೊರಿಂಥದವರಿಗೆ 12:7 (KANIRV)
Square Portrait Landscape 4K UHD
ಈ ಕಾರಣದಿಂದಲೂ ಮತ್ತು ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲವು ನನ್ನನ್ನು ತಿವಿಯುವುದಕ್ಕಾಗಿ ನನ್ನ ದೇಹದೊಳಗೆ ಇರಿಸಲಾಗಿದೆ. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು.

2 ಕೊರಿಂಥದವರಿಗೆ 12:8 (KANIRV)
Square Portrait Landscape 4K UHD
ಈ ನೋವು ನನ್ನನ್ನು ಬಿಟ್ಟುಹೋಗುವಂತೆ ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು ಆದರೆ

2 ಕೊರಿಂಥದವರಿಗೆ 12:9 (KANIRV)
Square Portrait Landscape 4K UHD
ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು,ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.

2 ಕೊರಿಂಥದವರಿಗೆ 12:10 (KANIRV)
Square Portrait Landscape 4K UHD
ಆದ್ದರಿಂದ ಕ್ರಿಸ್ತನ ನಿಮಿತ್ತ ನನಗೆ ಬಲಹೀನತೆಯಲ್ಲಿಯೂ, ತಿರಸ್ಕಾರದಲ್ಲಿಯೂ, ಕೊರತೆಯಲ್ಲಿಯೂ, ಹಿಂಸೆಯಲ್ಲಿಯೂ ಮತ್ತು ಇಕ್ಕಟ್ಟೂ ಸಂಭವಿಸಿದಾಗಲೂ ಸಂತುಷ್ಟನಾಗಿದ್ದೇನೆ. ಯಾಕೆಂದರೆ ನಾನು ಯಾವಾಗ ದುರ್ಬಲನಾಗಿರುವೆನೋ, ಆವಾಗಲೇ ಬಲವುಳ್ಳವನೂ ಆಗಿರುತ್ತೇನೆ.

2 ಕೊರಿಂಥದವರಿಗೆ 12:11 (KANIRV)
Square Portrait Landscape 4K UHD
ನಾನು ಹೀಗೆ ಬರೆದು, ಬುದ್ಧಿಹೀನನಾಗಿದ್ದೇನೆ! ಅದಕ್ಕೆ ನೀವೇ ನನ್ನನ್ನು ಬಲವಂತ ಮಾಡಿದಿರಿ. ನಿಮ್ಮಿಂದ ನನಗೆ ಹೊಗಳಿಕೆಯು ಉಂಟಾಗಬೇಕಾಗಿತ್ತು, ಯಾಕೆಂದರೆ ನಾನು ಕೇವಲ ಅಲ್ಪನಾದರೂ “ಅತಿಶ್ರೇಷ್ಟರಾದ, ಅಪೊಸ್ತಲರು” ಅನ್ನಿಸಿಕೊಳ್ಳುವವರಿಗಿಂತಲೂ ಒಂದರಲ್ಲಿಯಾದರೂ ಕಡಿಮೆಯಾದವನಲ್ಲ.

2 ಕೊರಿಂಥದವರಿಗೆ 12:12 (KANIRV)
Square Portrait Landscape 4K UHD
ನಾನು ಹಿಂಸೆಯನ್ನು ಸ್ಥಿರಚಿತ್ತದಿಂದ ತಾಳಿಕೊಳ್ಳುವುದರಲ್ಲಿಯೂ, ಸೂಚಕಕಾರ್ಯಗಳನ್ನೂ ಮತ್ತು ಅದ್ಭುತಗಳನ್ನೂ, ಹಾಗೂ ಮಹತ್ಕಾರ್ಯಗಳನ್ನೂ ನಡಿಸಿದ್ದರಲ್ಲಿಯೂ ಒಬ್ಬ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳು ನಿಮ್ಮ ಮಧ್ಯದಲ್ಲಿ ಪ್ರಕಟವಾದವಲ್ಲಾ.

2 ಕೊರಿಂಥದವರಿಗೆ 12:13 (KANIRV)
Square Portrait Landscape 4K UHD
ನನ್ನನ್ನು ಸಂರಕ್ಷಿಸುವ ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬುವ ಒಂದೇ ವಿಷಯದಲ್ಲಿ ಹೊರತು ಇನ್ಯಾವ ವಿಷಯದಲ್ಲಿಯೂ ನಿಮ್ಮನ್ನು ಮಿಕ್ಕಾದ ಸಭೆಗಳವರಿಗಿಂತ ಕಡಿಮೆಮಾಡಿಲ್ಲವಲ್ಲಾ? ನನ್ನ ಈ ತಪ್ಪನ್ನು ಕ್ಷಮಿಸಿರಿ.

2 ಕೊರಿಂಥದವರಿಗೆ 12:14 (KANIRV)
Square Portrait Landscape 4K UHD
ಇಗೋ ನಾನು ನಿಮ್ಮ ಬಳಿಗೆ ಮೂರನೇ ಸಾರಿ ಬರುವುದಕ್ಕೆ ಸಿದ್ಧವಾಗಿದ್ದೇನೆ ಮತ್ತು ನಿಮಗೆ ಭಾರವಾಗಿರುವುದಿಲ್ಲ. ನಾನು ನಿಮ್ಮ ಸೊತ್ತನ್ನು ಬಯಸದೇ ನಿಮ್ಮನ್ನೇ ಆಶಿಸುತ್ತೇನೆ. ಮಕ್ಕಳು ತಂದೆತಾಯಿಗಳಿಗೋಸ್ಕರ ಕೂಡಿಸಿಡುವುದು ಧರ್ಮವಲ್ಲ. ಆದರೆ ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುವುದೇ ಧರ್ಮ.

2 ಕೊರಿಂಥದವರಿಗೆ 12:15 (KANIRV)
Square Portrait Landscape 4K UHD
ನಾನಂತೂ ನನಗಿರುವುದನ್ನು ನಿಮ್ಮ ಆತ್ಮ ಸಂರಕ್ಷಣೆಗೋಸ್ಕರ ಅತಿ ಸಂತೋಷದಿಂದ ವೆಚ್ಚ ಮಾಡುತ್ತೇನೆ; ನನ್ನನ್ನೇ ವೆಚ್ಚ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುತ್ತಿರೋ?

2 ಕೊರಿಂಥದವರಿಗೆ 12:16 (KANIRV)
Square Portrait Landscape 4K UHD
ಆದರೆ ಹೀಗಿರಲು, ನಾನು ನಿಮಗೆ ಭಾರವಾಗಲಿಲ್ಲ, ಆದರೆ ಉಪಾಯದಿಂದ ನಿಮ್ಮನ್ನು ಸಂಚುಹೂಡಿ ಹಿಡಿದೆನು ಎಂದು ಹೇಳಿರಿ.

2 ಕೊರಿಂಥದವರಿಗೆ 12:17 (KANIRV)
Square Portrait Landscape 4K UHD
ನಾನು ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾವನ ಮೂಲಕವಾದರೂ ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡೆನೋ?

2 ಕೊರಿಂಥದವರಿಗೆ 12:18 (KANIRV)
Square Portrait Landscape 4K UHD
ನಿಮ್ಮ ಬಳಿಗೆ ಹೋಗುವುದಕ್ಕೆ ನಾನು ತೀತನನ್ನು ಬೇಡಿಕೊಂಡು ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿ ಕೊಟ್ಟೆನು, ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ? ನಾವಿಬ್ಬರೂ ಒಂದೇ ಹಾದಿಯಲ್ಲಿ ನಡೆಯಲಿಲ್ಲವೋ? ನಾವು ಅದೇ ಕ್ರಮದಲ್ಲಿ ಹೆಜ್ಜೆ ಇಡಲಿಲ್ಲವೋ?

2 ಕೊರಿಂಥದವರಿಗೆ 12:19 (KANIRV)
Square Portrait Landscape 4K UHD
ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುತ್ತಿರುವವರೆಂದು ಭಾವಿಸುತ್ತೀರೋ? ದೇವರ ಸನ್ನಿಧಾನದಲ್ಲಿಯೇ, ನಾವು ಕ್ರಿಸ್ತನಲ್ಲಿದ್ದು ನಿಮ್ಮ ಭಕ್ತಿವೃದ್ಧಿಗೋಸ್ಕರವೇ ಮಾತನಾಡುವವರಾಗಿದ್ದೇವೆ.

2 ಕೊರಿಂಥದವರಿಗೆ 12:20 (KANIRV)
Square Portrait Landscape 4K UHD
ನಾನು ಬರುವಾಗ ಒಂದು ವೇಳೆ ನೀವು ಇಚ್ಛಿಸಿದ ಪ್ರಕಾರ ನಾನು ಕಾಣಿಸುವುದಿಲ್ಲವೇನೋ ಎಂಬ ಭಯ ನನಗಿದೆ. ಹಾಗೆಯೇ ನಾನು ಇಚ್ಛಿಸಿದ ಪ್ರಕಾರ ನೀವು ಕಾಣಿಸುವುದಿಲ್ಲವೇನೋ ಎಂಬ ಶಂಕೆ ನನಗಿದೆ. ಒಂದು ವೇಳೆ ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ದ್ವೇಷ, ಸ್ವಾರ್ಥಬುದ್ಧಿ, ಚಾಡಿಹೇಳುವುದು, ಕಿವಿಯೂದುವುದು, ಉಬ್ಬಿಕೊಳ್ಳುವುದು ಕಲಹ ಎಬ್ಬಿಸುವುದು ಇರಬಹುದೆಂದು ನನಗೆ ಸಂಶಯವುಂಟು.

2 ಕೊರಿಂಥದವರಿಗೆ 12:21 (KANIRV)
Square Portrait Landscape 4K UHD
ನಾನು ತಿರುಗಿ ಬಂದಾಗ ನನ್ನ ದೇವರು ನಿಮ್ಮ ವಿಷಯದಲ್ಲಿ ನನ್ನನ್ನು ತಗ್ಗಿಸಿಕೊಳ್ಳಲು ಗುರಿಮಾಡುವನೆಂತಲೂ, ಮೊದಲಿನಂತೆ ಪಾಪಮಾಡಿ, ಬಂಡುತನ ಹಾದರತನ, ಕೆಟ್ಟತನಗಳನ್ನು ನಡಿಸಿ ಪಶ್ಚಾತ್ತಾಪಡದಿರುವ ಅನೇಕರ ವಿಷಯವಾಗಿ ನಾನು ದುಃಖಪಡಬೇಕಾದೀತೆಂತಲೂ ನನಗೆ ಭಯವುಂಟು.

Available Bible Translations

American Standard Version (ASV)
2 Corinthians 12 (ASV) »
King James Version (KJV)
2 Corinthians 12 (KJV) »
GOD’S WORD® (GW)
2 Corinthians 12 (GW) »
Berean Bible (BSB)
2 Corinthians 12 (BSB) »
World English Bible (WEB)
2 Corinthians 12 (WEB) »
French Bible (LSG)
2 Corinthiens 12 (LSG) »
German Bible (LUTH1912)
2 Korinther 12 (LUTH1912) »
Portuguese Bible (BSL)
2 Coríntios 12 (BSL) »
Vietnamese Bible (VIE)
2 Cô-rinh-tô 12 (VIE) »
Spanish Bible (RVA)
2 Corintios 12 (RVA) »
Italian Bible (RIV)
2 Corinzi 12 (RIV) »
Chinese Simplified (CUVS)
哥 林 多 后 书 12 (CUVS) »
Chinese Traditional (CUVT)
歌 林 多 後 書 12 (CUVT) »
Albanian Bible (ALB)
2 Korintasve 12 (ALB) »
Ukrainian Bible (UKR)
2 коринтян 12 (UKR) »
Hungarian Bible (KAR)
2 Korinthus 12 (KAR) »
Norwegian Bible (NORSK)
2 Korinter 12 (NORSK) »

2 ಕೊರಿಂಥದವರಿಗೆ (KANIRV) Chapter Selection

1 2 3 4 5 6 7 8 9 10 11 12 13

KANIRV Book Selection List