1 ಕೊರಿಂಥದವರಿಗೆ Chapter 3 KANIRV Bible Verse Images

1 ಕೊರಿಂಥದವರಿಗೆ 3 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಕೊರಿಂಥದವರಿಗೆ 3 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಕೊರಿಂಥದವರಿಗೆ 3:1 (KANIRV)
Square Portrait Landscape 4K UHD
ಆದರೆ ಸಹೋದರರೇ ನಾನಂತೂ ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ ಪ್ರಾಪಂಚಿಕರೂ ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು.

1 ಕೊರಿಂಥದವರಿಗೆ 3:2 (KANIRV)
Square Portrait Landscape 4K UHD
ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ.

1 ಕೊರಿಂಥದವರಿಗೆ 3:3 (KANIRV)
Square Portrait Landscape 4K UHD
ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ?

1 ಕೊರಿಂಥದವರಿಗೆ 3:4 (KANIRV)
Square Portrait Landscape 4K UHD
ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ?

1 ಕೊರಿಂಥದವರಿಗೆ 3:5 (KANIRV)
Square Portrait Landscape 4K UHD
ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ.

1 ಕೊರಿಂಥದವರಿಗೆ 3:6 (KANIRV)
Square Portrait Landscape 4K UHD
ನಾನು ಸಸಿಯನ್ನು ನೆಟ್ಟೆನು. ಅಪೊಲ್ಲೋಸನು ನೀರನ್ನು ಹೊಯ್ಯಿದನು. ಆದರೆ ಅದನ್ನು ಬೆಳೆಸಿದವನು ದೇವರೇ.

1 ಕೊರಿಂಥದವರಿಗೆ 3:7 (KANIRV)
Square Portrait Landscape 4K UHD
ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು.

1 ಕೊರಿಂಥದವರಿಗೆ 3:8 (KANIRV)
Square Portrait Landscape 4K UHD
ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು.

1 ಕೊರಿಂಥದವರಿಗೆ 3:9 (KANIRV)
Square Portrait Landscape 4K UHD
ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ. ದೇವರ ಮಂದಿರವೂ ಆಗಿದ್ದೀರಿ.

1 ಕೊರಿಂಥದವರಿಗೆ 3:10 (KANIRV)
Square Portrait Landscape 4K UHD
ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು.

1 ಕೊರಿಂಥದವರಿಗೆ 3:11 (KANIRV)
Square Portrait Landscape 4K UHD
ಯೇಸು ಕ್ರಿಸ್ತನೆಂಬ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.

1 ಕೊರಿಂಥದವರಿಗೆ 3:12 (KANIRV)
Square Portrait Landscape 4K UHD
ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ,

1 ಕೊರಿಂಥದವರಿಗೆ 3:13 (KANIRV)
Square Portrait Landscape 4K UHD
ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು.

1 ಕೊರಿಂಥದವರಿಗೆ 3:14 (KANIRV)
Square Portrait Landscape 4K UHD
ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಪ್ರತಿಫಲ ಸಿಕ್ಕುವುದು.

1 ಕೊರಿಂಥದವರಿಗೆ 3:15 (KANIRV)
Square Portrait Landscape 4K UHD
ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು.

1 ಕೊರಿಂಥದವರಿಗೆ 3:16 (KANIRV)
Square Portrait Landscape 4K UHD
ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?

1 ಕೊರಿಂಥದವರಿಗೆ 3:17 (KANIRV)
Square Portrait Landscape 4K UHD
ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ.

1 ಕೊರಿಂಥದವರಿಗೆ 3:18 (KANIRV)
Square Portrait Landscape 4K UHD
ಯಾವನೂ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳದಿರಲಿ ನಿಮ್ಮಲ್ಲಿ ಯಾವನಾದರೂ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವುದಾದರೆ ಅವನು ಜ್ಞಾನಿಯಾಗುವುದಕ್ಕಾಗಿ “ಮೂರ್ಖನಾಗಲಿ”

1 ಕೊರಿಂಥದವರಿಗೆ 3:19 (KANIRV)
Square Portrait Landscape 4K UHD
ಯಾಕೆಂದರೆ ಇಹಲೋಕದ ಜ್ಞಾನವು ದೇವರ ಮುಂದೆ ಮೂರ್ಖತನವಾಗಿದೆ. “ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೆ ಹಿಡಿದುಕೊಳ್ಳುತ್ತಾನೆಂತಲೂ,”

1 ಕೊರಿಂಥದವರಿಗೆ 3:20 (KANIRV)
Square Portrait Landscape 4K UHD
“ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳಿದುಕೊಳ್ಳುತ್ತಾನೆಂತಲೂ” ಬರೆದದೆಯಲ್ಲಾ

1 ಕೊರಿಂಥದವರಿಗೆ 3:21 (KANIRV)
Square Portrait Landscape 4K UHD
ಆದಕಾರಣ ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹೊಗಳಿಕೊಳ್ಳದಿರಲಿ. ಯಾಕೆಂದರೆ ಸಮಸ್ತವೂ ನಿಮಗಾಗಿಯೇ ಇದೆ.

1 ಕೊರಿಂಥದವರಿಗೆ 3:22 (KANIRV)
Square Portrait Landscape 4K UHD
ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ.

1 ಕೊರಿಂಥದವರಿಗೆ 3:23 (KANIRV)
Square Portrait Landscape 4K UHD
ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರಿನವನು.

Available Bible Translations

American Standard Version (ASV)
1 Corinthians 3 (ASV) »
King James Version (KJV)
1 Corinthians 3 (KJV) »
GOD’S WORD® (GW)
1 Corinthians 3 (GW) »
Berean Bible (BSB)
1 Corinthians 3 (BSB) »
World English Bible (WEB)
1 Corinthians 3 (WEB) »
French Bible (LSG)
1 Corinthiens 3 (LSG) »
German Bible (LUTH1912)
1 Korinther 3 (LUTH1912) »
Portuguese Bible (BSL)
1 Coríntios 3 (BSL) »
Vietnamese Bible (VIE)
1 Cô-rinh-tô 3 (VIE) »
Spanish Bible (RVA)
1 Corintios 3 (RVA) »
Italian Bible (RIV)
1 Corinzi 3 (RIV) »
Chinese Simplified (CUVS)
哥 林 多 前 书 3 (CUVS) »
Chinese Traditional (CUVT)
歌 林 多 前 書 3 (CUVT) »
Albanian Bible (ALB)
1 Korintasve 3 (ALB) »
Swedish Bible (SV1917)
1 Korinthierbrevet 3 (SV1917) »
Ukrainian Bible (UKR)
1 коринтян 3 (UKR) »
Hungarian Bible (KAR)
1 Korinthus 3 (KAR) »
Bulgarian Bible (BULG)
1 Коринтяни 3 (BULG) »
Norwegian Bible (NORSK)
1 Korinter 3 (NORSK) »

1 ಕೊರಿಂಥದವರಿಗೆ (KANIRV) Chapter Selection

1 2 3 4 5 6 7 8 9 10 11 12 13 14 15 16

KANIRV Book Selection List