1 ಕೊರಿಂಥದವರಿಗೆ Chapter 11 KANIRV Bible Verse Images

1 ಕೊರಿಂಥದವರಿಗೆ 11 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಕೊರಿಂಥದವರಿಗೆ 11 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಕೊರಿಂಥದವರಿಗೆ 11:1 (KANIRV)
Square Portrait Landscape 4K UHD
ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.

1 ಕೊರಿಂಥದವರಿಗೆ 11:2 (KANIRV)
Square Portrait Landscape 4K UHD
ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.

1 ಕೊರಿಂಥದವರಿಗೆ 11:3 (KANIRV)
Square Portrait Landscape 4K UHD
ಆದರೂ ನೀವು ಒಂದು ಸಂಗತಿಯನ್ನು ತಿಳಿದಿರಬೇಕೆಂಬುದು ನನ್ನ ಇಷ್ಟ. ಅದೇನೆಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆಯಾಗಿದ್ದಾನೆ. ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ.

1 ಕೊರಿಂಥದವರಿಗೆ 11:4 (KANIRV)
Square Portrait Landscape 4K UHD
ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.

1 ಕೊರಿಂಥದವರಿಗೆ 11:5 (KANIRV)
Square Portrait Landscape 4K UHD
ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದೆ ಇರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ.

1 ಕೊರಿಂಥದವರಿಗೆ 11:6 (KANIRV)
Square Portrait Landscape 4K UHD
ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಯಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.

1 ಕೊರಿಂಥದವರಿಗೆ 11:7 (KANIRV)
Square Portrait Landscape 4K UHD
ಪುರುಷನು ದೇವರ ಪ್ರತಿರೂಪವೂ ಮತ್ತು ಪ್ರಭಾವವೂ ಆಗಿರುವುದರಿಂದ ತಲೆಯನ್ನು ಮುಚ್ಚಿಕೊಳ್ಳಬಾರದು. ಸ್ತ್ರೀಯಾದರೋ ಪುರುಷನ ಪ್ರಭಾವವಾಗಿದ್ದಾಳೆ.

1 ಕೊರಿಂಥದವರಿಗೆ 11:8 (KANIRV)
Square Portrait Landscape 4K UHD
ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.

1 ಕೊರಿಂಥದವರಿಗೆ 11:9 (KANIRV)
Square Portrait Landscape 4K UHD
ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು.

1 ಕೊರಿಂಥದವರಿಗೆ 11:10 (KANIRV)
Square Portrait Landscape 4K UHD
ಹೀಗಿರುವುದರಿಂದ ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರವನ್ನು ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು.

1 ಕೊರಿಂಥದವರಿಗೆ 11:11 (KANIRV)
Square Portrait Landscape 4K UHD
ಆದರೂ ಕರ್ತನ ವಿಷಯದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ, ಸ್ತ್ರೀಯರಿಲ್ಲದೆ ಪುರುಷರೂ ಇಲ್ಲ.

1 ಕೊರಿಂಥದವರಿಗೆ 11:12 (KANIRV)
Square Portrait Landscape 4K UHD
ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು.

1 ಕೊರಿಂಥದವರಿಗೆ 11:13 (KANIRV)
Square Portrait Landscape 4K UHD
ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವುದು ಯುಕ್ತವೋ

1 ಕೊರಿಂಥದವರಿಗೆ 11:14 (KANIRV)
Square Portrait Landscape 4K UHD
ಪುರುಷನು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ,

1 ಕೊರಿಂಥದವರಿಗೆ 11:15 (KANIRV)
Square Portrait Landscape 4K UHD
ಸ್ತ್ರೀಯು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವಳಿಗೆ ಮುಸುಕಿಗೆ ಬದಲಾಗಿ ನೀಡಲಾಗಿದ್ದು ಅದು ಅವಳಿಗೆ ಗೌರವವಾಗಿದೆಯೆಂದೂ ಸ್ವಾಭಾವಿಕವಾಗಿ ನಿಮಗೆ ತಿಳಿಯುತ್ತದಲ್ಲವೋ?

1 ಕೊರಿಂಥದವರಿಗೆ 11:16 (KANIRV)
Square Portrait Landscape 4K UHD
ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ.

1 ಕೊರಿಂಥದವರಿಗೆ 11:17 (KANIRV)
Square Portrait Landscape 4K UHD
ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ.

1 ಕೊರಿಂಥದವರಿಗೆ 11:18 (KANIRV)
Square Portrait Landscape 4K UHD
ಹೇಗೆಂದರೆ ಮೊದಲನೆಯದಾಗಿ ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಭಿನ್ನತೆ, ಭೇದಗಳು ಉಂಟಾಗುತ್ತವೆಂದು ಕೇಳಿದ್ದೇನೆ. ಮತ್ತು ಇದು ನಿಜವೆಂದು ಸ್ವಲ್ಪ ಮಟ್ಟಿಗೆ ನಂಬುತ್ತೇನೆ.

1 ಕೊರಿಂಥದವರಿಗೆ 11:19 (KANIRV)
Square Portrait Landscape 4K UHD
ನಿಮ್ಮಲ್ಲಿ ಕೆಲವರು ಯೋಗ್ಯರೆಂದು ಕಂಡುಬರುವುದಕ್ಕಾಗಿ ಭಿನ್ನಾಭಿಪ್ರಾಯಗಳು ಇರುವುದು ಅವಶ್ಯವೇ.

1 ಕೊರಿಂಥದವರಿಗೆ 11:20 (KANIRV)
Square Portrait Landscape 4K UHD
ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ.

1 ಕೊರಿಂಥದವರಿಗೆ 11:21 (KANIRV)
Square Portrait Landscape 4K UHD
ಭೋಜನ ಮಾಡುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ. ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.

1 ಕೊರಿಂಥದವರಿಗೆ 11:22 (KANIRV)
Square Portrait Landscape 4K UHD
ನಿಮಗೆ ತಿನ್ನುವುದಕ್ಕೂ, ಕುಡಿಯುವುದಕ್ಕೂ ಮನೆಗಳಿಲ್ಲವೋ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ಅವಮಾನಮಾಡುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವುದಿಲ್ಲ.

1 ಕೊರಿಂಥದವರಿಗೆ 11:23 (KANIRV)
Square Portrait Landscape 4K UHD
ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನೆಂದರೆ, ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು,

1 ಕೊರಿಂಥದವರಿಗೆ 11:24 (KANIRV)
Square Portrait Landscape 4K UHD
“ಇದುನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರಹೀಗೆ ಮಾಡಿರಿ” ಅಂದನು.

1 ಕೊರಿಂಥದವರಿಗೆ 11:25 (KANIRV)
Square Portrait Landscape 4K UHD
ಊಟವಾದ ಮೇಲೆ ಆತನು ಅದೇ ರೀತಿಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾನಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. ನೀವು ಇದರಲ್ಲಿ ಪಾನಮಾಡುವಾಗೆಲೆಲ್ಲಾ ನನ್ನನ್ನು ನೆನಪುಮಾಡಿಕೊಳ್ಳುವುದಕ್ಕೋಸ್ಕರ ಇದನ್ನು ಪಾನಮಾಡಿರಿ” ಅಂದನು.

1 ಕೊರಿಂಥದವರಿಗೆ 11:26 (KANIRV)
Square Portrait Landscape 4K UHD
ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.

1 ಕೊರಿಂಥದವರಿಗೆ 11:27 (KANIRV)
Square Portrait Landscape 4K UHD
ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾನಪಾತ್ರೆಯಲ್ಲಿ ಪಾನ ಮಾಡಿದರೆ ಅವನು ಕರ್ತನ ದೇಹಕ್ಕೂ ಮತ್ತು ಕರ್ತನ ರಕ್ತಕ್ಕೂ ಸಂಬಂಧಿಸಿದಂತೆ ದ್ರೋಹಮಾಡಿದವನಾಗಿರುವನು.

1 ಕೊರಿಂಥದವರಿಗೆ 11:28 (KANIRV)
Square Portrait Landscape 4K UHD
ಪ್ರತಿ ಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯನ್ನು ತೆಗೆದುಕೊಂಡು ತಿನ್ನಲಿ, ಆ ಪಾನಪಾತ್ರೆಯಲ್ಲಿ ಕುಡಿಯಲಿ.

1 ಕೊರಿಂಥದವರಿಗೆ 11:29 (KANIRV)
Square Portrait Landscape 4K UHD
ಯಾಕೆಂದರೆ ಕರ್ತನ ದೇಹವೆಂದು ವಿವೇಚಿಸದೇ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು.

1 ಕೊರಿಂಥದವರಿಗೆ 11:30 (KANIRV)
Square Portrait Landscape 4K UHD
ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರು ಮತ್ತು ರೋಗಿಗಳು ಆಗುತ್ತಾರೆ ಮತ್ತು ಅನೇಕರು ಸಾಯುತ್ತಾರೆ.

1 ಕೊರಿಂಥದವರಿಗೆ 11:31 (KANIRV)
Square Portrait Landscape 4K UHD
ನಮ್ಮನ್ನು ನಾವೇ ಪರೀಕ್ಷಿಸಿಕೊಂಡರೆ ನ್ಯಾಯ ವಿಚಾರಣೆಗೊಳಗಾಗುವುದಿಲ್ಲ.

1 ಕೊರಿಂಥದವರಿಗೆ 11:32 (KANIRV)
Square Portrait Landscape 4K UHD
ಆದರೆ ನಾವು ಕರ್ತನಿಂದ ನ್ಯಾಯವಿಚಾರಣೆಗೆ ಒಳಗಾಗಿರಲಾಗಿ ಆತನು, ನಮಗೆ ಲೋಕದವರ ಸಂಗಡ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ನಮ್ಮನ್ನು ದಂಡನೆಗೆ ಗುರಿಪಡಿಸುತ್ತಾನೆ.

1 ಕೊರಿಂಥದವರಿಗೆ 11:33 (KANIRV)
Square Portrait Landscape 4K UHD
ಆದಕಾರಣ ನನ್ನ ಸಹೋದರರೇ, ಈ ಭೋಜನವನ್ನು ಮಾಡುವುದಕ್ಕೆ ಸೇರಿಬರುವಾಗ ಒಬ್ಬರು ಇನ್ನೊಬ್ಬರಿಗಾಗಿ ಕಾಯಿರಿ.

1 ಕೊರಿಂಥದವರಿಗೆ 11:34 (KANIRV)
Square Portrait Landscape 4K UHD
ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟಮಾಡಲಿ ನೀವು ಸೇರಿಬಂದದ್ದು ನ್ಯಾಯ ತೀರ್ಪಿಗೊಳಗಾಗುವುದಕ್ಕೆ ಕಾರಣವಾಗಬಾರದು. ಇನ್ನುಳಿದಿರುವ ಸಂಗತಿಗಳನ್ನು ನಾನು ಬಂದ ನಂತರ ಆದೇಶಿಸುತ್ತೇನೆ.

Available Bible Translations

American Standard Version (ASV)
1 Corinthians 11 (ASV) »
King James Version (KJV)
1 Corinthians 11 (KJV) »
GOD’S WORD® (GW)
1 Corinthians 11 (GW) »
Berean Bible (BSB)
1 Corinthians 11 (BSB) »
World English Bible (WEB)
1 Corinthians 11 (WEB) »
French Bible (LSG)
1 Corinthiens 11 (LSG) »
German Bible (LUTH1912)
1 Korinther 11 (LUTH1912) »
Portuguese Bible (BSL)
1 Coríntios 11 (BSL) »
Vietnamese Bible (VIE)
1 Cô-rinh-tô 11 (VIE) »
Spanish Bible (RVA)
1 Corintios 11 (RVA) »
Italian Bible (RIV)
1 Corinzi 11 (RIV) »
Chinese Simplified (CUVS)
哥 林 多 前 书 11 (CUVS) »
Chinese Traditional (CUVT)
歌 林 多 前 書 11 (CUVT) »
Albanian Bible (ALB)
1 Korintasve 11 (ALB) »
Ukrainian Bible (UKR)
1 коринтян 11 (UKR) »
Hungarian Bible (KAR)
1 Korinthus 11 (KAR) »
Norwegian Bible (NORSK)
1 Korinter 11 (NORSK) »

1 ಕೊರಿಂಥದವರಿಗೆ (KANIRV) Chapter Selection

1 2 3 4 5 6 7 8 9 10 11 12 13 14 15 16

KANIRV Book Selection List