ಇಬ್ರಿಯರಿಗೆ Chapter 11 KANIRV Bible Verse Images

ಇಬ್ರಿಯರಿಗೆ 11 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಇಬ್ರಿಯರಿಗೆ 11 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಇಬ್ರಿಯರಿಗೆ 11:1 (KANIRV)
Square Portrait Landscape 4K UHD
ನಂಬಿಕೆಯೋ ನಾವು ನಿರೀಕ್ಷಿಸುವಂಥವುಗಳ ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ.

ಇಬ್ರಿಯರಿಗೆ 11:2 (KANIRV)
Square Portrait Landscape 4K UHD
ನಮ್ಮ ಹಿರಿಯರು ತಮ್ಮ ನಂಬಿಕೆಯಿಂದಲೇ ದೈವಸಮ್ಮತಿಯನ್ನು ಪಡೆದರು.

ಇಬ್ರಿಯರಿಗೆ 11:3 (KANIRV)
Square Portrait Landscape 4K UHD
ವಿಶ್ವವು ದೇವರ ಮಾತಿನಿಂದಲೇ ನಿರ್ಮಿತವಾಯಿತೆಂದು ನಾವು ನಂಬಿಕೆಯಿಂದಲೇ ತಿಳಿದುಕೊಂಡಿದ್ದೇವೆ. ಈ ಕಾರಣದಿಂದ ಕಾಣಿಸುವ ಈ ಜಗತ್ತು ದೃಶ್ಯವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.

ಇಬ್ರಿಯರಿಗೆ 11:4 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಇದರ ಮೂಲಕ ಅವನು ನೀತಿವಂತನೆಂದು ಸಾಕ್ಷಿ ಹೊಂದಿದನು. ದೇವರು ಅವನ ಕಾಣಿಕೆಗಳನ್ನು ಕುರಿತು ಪ್ರಶಂಸಿಸಿದನು. ಅವನು ಸತ್ತುಹೋಗಿದ್ದರೂ, ಅವನ ನಂಬಿಕೆಯ ಮೂಲಕ ಇನ್ನೂ ಮಾತನಾಡುವವನಾಗಿದ್ದಾನೆ.

ಇಬ್ರಿಯರಿಗೆ 11:5 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಹನೋಕನು ಮರಣವನ್ನು ಅನುಭವಿಸದೇ ಒಯ್ಯಲ್ಪಟ್ಟನು. ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಯಾರಿಗೂ ಕಾಣಿಸಿಗಲಿಲ್ಲ. ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಹೊಂದಿದನು.

ಇಬ್ರಿಯರಿಗೆ 11:6 (KANIRV)
Square Portrait Landscape 4K UHD
ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.

ಇಬ್ರಿಯರಿಗೆ 11:7 (KANIRV)
Square Portrait Landscape 4K UHD
ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.

ಇಬ್ರಿಯರಿಗೆ 11:8 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.

ಇಬ್ರಿಯರಿಗೆ 11:9 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು.

ಇಬ್ರಿಯರಿಗೆ 11:10 (KANIRV)
Square Portrait Landscape 4K UHD
ಯಾಕೆಂದರೆ ಅವನು ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.

ಇಬ್ರಿಯರಿಗೆ 11:11 (KANIRV)
Square Portrait Landscape 4K UHD
ಇದಲ್ಲದೆ ಸಾರಳು ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವುದಕ್ಕೆ ಶಕ್ತಿಯನ್ನು ಹೊಂದಿದಳು.

ಇಬ್ರಿಯರಿಗೆ 11:12 (KANIRV)
Square Portrait Landscape 4K UHD
ಆದುದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.

ಇಬ್ರಿಯರಿಗೆ 11:13 (KANIRV)
Square Portrait Landscape 4K UHD
ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು ಒಪ್ಪಿಕೊಂಡರು.

ಇಬ್ರಿಯರಿಗೆ 11:14 (KANIRV)
Square Portrait Landscape 4K UHD
ಇಂಥ ಮಾತುಗಳನ್ನಾಡುವವರು ತಾವು ಸ್ವದೇಶವನ್ನು ಹುಡುಕುವವರಾಗಿದ್ದರೆಂಬುದನ್ನು ವ್ಯಕ್ತಪಡಿಸುತ್ತದೆ.

ಇಬ್ರಿಯರಿಗೆ 11:15 (KANIRV)
Square Portrait Landscape 4K UHD
ತಾವು ಬಿಟ್ಟು ಬಂದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು.

ಇಬ್ರಿಯರಿಗೆ 11:16 (KANIRV)
Square Portrait Landscape 4K UHD
ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ, ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.

ಇಬ್ರಿಯರಿಗೆ 11:17 (KANIRV)
Square Portrait Landscape 4K UHD
ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.

ಇಬ್ರಿಯರಿಗೆ 11:18 (KANIRV)
Square Portrait Landscape 4K UHD
ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.

ಇಬ್ರಿಯರಿಗೆ 11:19 (KANIRV)
Square Portrait Landscape 4K UHD
ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು.

ಇಬ್ರಿಯರಿಗೆ 11:20 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಇಸಾಕನು ಯಾಕೋಬನನ್ನು ಮತ್ತು ಏಸಾವನನ್ನು ಆಶೀರ್ವದಿಸಿದಾಗ ಮುಂದೆ ಸಂಭವಿಸಬಹುದಾದ ವಿಷಯಗಳನ್ನು ಸೂಚಿಸಿದನು.

ಇಬ್ರಿಯರಿಗೆ 11:21 (KANIRV)
Square Portrait Landscape 4K UHD
ಯಾಕೋಬನು ತಾನು ಮರಣ ಹೊಂದುವ ಸಮಯದಲ್ಲಿ ನಂಬಿಕೆಯಿಂದಲೇ ಯೋಸೇಫನ ಮಕ್ಕಳಿಬ್ಬರನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.

ಇಬ್ರಿಯರಿಗೆ 11:22 (KANIRV)
Square Portrait Landscape 4K UHD
ಯೋಸೇಫನು ತನ್ನ ಮರಣ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಡುವುದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳನ್ನು ತೆಗೆದುಕೊಂಡು ಹೋಗುವ ವಿಷಯದಲ್ಲಿ ಅಪ್ಪಣೆ ಕೊಟ್ಟನು.

ಇಬ್ರಿಯರಿಗೆ 11:23 (KANIRV)
Square Portrait Landscape 4K UHD
ಮೋಶೆ ಹುಟ್ಟಿದಾಗ ಅವನ ತಂದೆತಾಯಿಗಳು ಕೂಸು ಸುಂದರವಾಗಿದೆ ಎಂದು ನೋಡಿ ಅರಸನ ಅಪ್ಪಣೆಗೆ ಭಯಪಡದೇ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.

ಇಬ್ರಿಯರಿಗೆ 11:24 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಮೋಶೆಯು ದೊಡ್ಡವನಾದ ಮೇಲೆ ಫರೋಹನ ಪುತ್ರಿಯ ಮಗನೆನಿಸಿಕೊಳ್ಳುವುದು ಬೇಡವೆಂದುಕೊಂಡನು.

ಇಬ್ರಿಯರಿಗೆ 11:25 (KANIRV)
Square Portrait Landscape 4K UHD
ಸ್ವಲ್ಪ ಕಾಲದಲ್ಲಿ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟವನ್ನು ಅನುಭವಿಸುವುದೇ ಮೇಲೆಂದು ತೀರ್ಮಾನಿಸಿಕೊಂಡನು.

ಇಬ್ರಿಯರಿಗೆ 11:26 (KANIRV)
Square Portrait Landscape 4K UHD
ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ, ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.

ಇಬ್ರಿಯರಿಗೆ 11:27 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು.

ಇಬ್ರಿಯರಿಗೆ 11:28 (KANIRV)
Square Portrait Landscape 4K UHD
ಚೊಚ್ಚಲ ಮಕ್ಕಳನ್ನು ಸಂಹರಿಸುವವನು, ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ, ನಂಬಿಕೆಯಿಂದಲೇ ಅವನು ಪಸ್ಕವನ್ನೂ ರಕ್ತಪೋಕ್ಷಣಾಚಾರವನ್ನೂ ಆಚರಿಸಿದನು.

ಇಬ್ರಿಯರಿಗೆ 11:29 (KANIRV)
Square Portrait Landscape 4K UHD
ಇಸ್ರಾಯೇಲ್ಯರು ನಂಬಿಕೆಯಿಂದಲೇ ಕೆಂಪು ಸಮುದ್ರವನ್ನು ಒಣ ಭೂಮಿಯನ್ನು ದಾಟುವಂತೆ ದಾಟಿದರು. ಐಗುಪ್ತದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿ ಹೋದರು.

ಇಬ್ರಿಯರಿಗೆ 11:30 (KANIRV)
Square Portrait Landscape 4K UHD
ನಂಬಿಕೆಯಿಂದಲೇ ಅವರು ಏಳು ದಿನಗಳ ತನಕ ಯೆರಿಕೋ ಪಟ್ಟಣದ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು.

ಇಬ್ರಿಯರಿಗೆ 11:31 (KANIRV)
Square Portrait Landscape 4K UHD
ನಂಬಿಕೆಯಿಂದಲೇ ರಾಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು, ಅವಿಧೇಯರೊಂದಿಗೆ ನಾಶವಾಗದೆ ಉಳಿದಳು.

ಇಬ್ರಿಯರಿಗೆ 11:32 (KANIRV)
Square Portrait Landscape 4K UHD
ಇನ್ನೂ ಏನು ಹೇಳಬೇಕು? ಗಿದ್ಯೋನ್, ಬಾರಾಕ ಸಂಸೋನ, ಯೆಪ್ತಾಹ, ದಾವೀದ, ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು.

ಇಬ್ರಿಯರಿಗೆ 11:33 (KANIRV)
Square Portrait Landscape 4K UHD
ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು.,

ಇಬ್ರಿಯರಿಗೆ 11:34 (KANIRV)
Square Portrait Landscape 4K UHD
ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು.

ಇಬ್ರಿಯರಿಗೆ 11:35 (KANIRV)
Square Portrait Landscape 4K UHD
ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು.

ಇಬ್ರಿಯರಿಗೆ 11:36 (KANIRV)
Square Portrait Landscape 4K UHD
ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು.

ಇಬ್ರಿಯರಿಗೆ 11:37 (KANIRV)
Square Portrait Landscape 4K UHD
ಕೆಲವರನ್ನು ಜನರು ಕಲ್ಲೆಸೆದು ಕೊಂದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು.

ಇಬ್ರಿಯರಿಗೆ 11:38 (KANIRV)
Square Portrait Landscape 4K UHD
ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು.

ಇಬ್ರಿಯರಿಗೆ 11:39 (KANIRV)
Square Portrait Landscape 4K UHD
ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ, ವಾಗ್ದಾನದ ಫಲವನ್ನು ಹೊಂದಲಿಲ್ಲ.

ಇಬ್ರಿಯರಿಗೆ 11:40 (KANIRV)
Square Portrait Landscape 4K UHD
ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ, ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು.

Available Bible Translations

American Standard Version (ASV)
Hebrews 11 (ASV) »
King James Version (KJV)
Hebrews 11 (KJV) »
GOD’S WORD® (GW)
Hebrews 11 (GW) »
Berean Bible (BSB)
Hebrews 11 (BSB) »
World English Bible (WEB)
Hebrews 11 (WEB) »
French Bible (LSG)
Hébreux 11 (LSG) »
German Bible (LUTH1912)
Hebräer 11 (LUTH1912) »
Portuguese Bible (BSL)
Hebreus 11 (BSL) »
Vietnamese Bible (VIE)
Hê-bơ-rơ 11 (VIE) »
Spanish Bible (RVA)
Hebreos 11 (RVA) »
Italian Bible (RIV)
Ebrei 11 (RIV) »
Chinese Simplified (CUVS)
希 伯 来 书 11 (CUVS) »
Chinese Traditional (CUVT)
希 伯 來 書 11 (CUVT) »
Albanian Bible (ALB)
Hebrenjve 11 (ALB) »
Swedish Bible (SV1917)
Hebreerbrevet 11 (SV1917) »
Russian Bible (RUSV)
Евреям 11 (RUSV) »
Ukrainian Bible (UKR)
євреїв 11 (UKR) »
Hungarian Bible (KAR)
Zsidók 11 (KAR) »
Bulgarian Bible (BULG)
Евреи 11 (BULG) »
Norwegian Bible (NORSK)
Hebreerne 11 (NORSK) »

ಇಬ್ರಿಯರಿಗೆ (KANIRV) Chapter Selection

1 2 3 4 5 6 7 8 9 10 11 12 13

KANIRV Book Selection List