ನ್ಯಾಯಸ್ಥಾಪಕರು Chapter 9 KANIRV Bible Verse Images

ನ್ಯಾಯಸ್ಥಾಪಕರು 9 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ನ್ಯಾಯಸ್ಥಾಪಕರು 9 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ನ್ಯಾಯಸ್ಥಾಪಕರು 9:1 (KANIRV)
Square Portrait Landscape 4K UHD
ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿಗೆ ಹೋಗಿ ತನ್ನ ಸೋದರಮಾವಂದಿರಿಗೂ, ತಾಯಿಯ ಬಂಧುಗಳೆಲ್ಲರಿಗೂ ಹೇಳಿದ್ದೇನೆಂದರೆ,

ನ್ಯಾಯಸ್ಥಾಪಕರು 9:2 (KANIRV)
Square Portrait Landscape 4K UHD
“ನೀವು ದಯವಿಟ್ಟು ಶೆಕೆಮಿನ ಹಿರಿಯರನ್ನು ಮಾತನಾಡಿಸಿ, ‘ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳ್ವಿಕೆ ಮಾಡುವುದು ಒಳ್ಳೆಯದೋ ಅಥವಾ ಒಬ್ಬನೇ ಆಳುವುದು ಮೇಲೋ?’ ಎಂದು ಅವರನ್ನು ಕೇಳಿ, ನಾನು ಅವರ ರಕ್ತಸಂಬಂಧಿಯಾಗಿದ್ದೇನೆ ಎಂಬುದನ್ನು ತಿಳಿಸಿರಿ” ಅಂದನು.

ನ್ಯಾಯಸ್ಥಾಪಕರು 9:3 (KANIRV)
Square Portrait Landscape 4K UHD
ಅವರು ಶೆಕೆಮಿನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಲು ಅವರು, “ಇವನು ನಮ್ಮ ಸಹೋದರನಾಗಿದ್ದಾನಲ್ಲಾ” ಅಂದುಕೊಂಡು ಅವನ ಪಕ್ಷವನ್ನು ಹಿಡಿಯುವುದಕ್ಕೆ ಒಪ್ಪಿಕೊಂಡರು.

ನ್ಯಾಯಸ್ಥಾಪಕರು 9:4 (KANIRV)
Square Portrait Landscape 4K UHD
ಮತ್ತು ಅವರು ಬಾಳ್‍ಬೆರೀತಿನ ದೇವಸ್ಥಾನದಿಂದ ಎಪ್ಪತ್ತು ರೂಪಾಯಿಗಳನ್ನು ಅವನಿಗೆ ಕೊಟ್ಟರು. ಅವನು ಈ ಹಣದಿಂದ ಕೆಲವು ಕಾಕಪೋಕರನ್ನು ಕೂಡಿಸಿ,

ನ್ಯಾಯಸ್ಥಾಪಕರು 9:5 (KANIRV)
Square Portrait Landscape 4K UHD
ಅವರ ನಾಯಕನಾಗಿ ಹೊರಟು, ಒಫ್ರದಲ್ಲಿದ್ದ ತನ್ನ ತಂದೆಯಾದ ಯೆರುಬ್ಬಾಳನ ಮನೆಗೆ ಹೋಗಿ, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಹಿಡಿದು, ಒಂದೇ ಬಂಡೆಯ ಮೇಲೆ ಕೊಲ್ಲಿಸಿದನು. ಆದರೆ ಕಿರಿಯವನಾದ ಯೋತಾಮನೆಂಬವನು ಅಡಗಿಕೊಂಡು ಉಳಿದನು.

ನ್ಯಾಯಸ್ಥಾಪಕರು 9:6 (KANIRV)
Square Portrait Landscape 4K UHD
ತರುವಾಯ ಎಲ್ಲಾ ಶೆಕೆಮಿನವರೂ ಮಿಲ್ಲೋ ಕೋಟೆಯವರೂ ಶೆಕೆಮಿನ ಬಳಿಯಲ್ಲಿ ಜ್ಞಾಪಕಸ್ತಂಭವಿರುವ ಏಲೋನ್ ವೃಕ್ಷದ ಹತ್ತಿರ ಕೂಡಿಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು.

ನ್ಯಾಯಸ್ಥಾಪಕರು 9:7 (KANIRV)
Square Portrait Landscape 4K UHD
ಯೋತಾಮನು ಇದನ್ನು ಕೇಳಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ, “ಶೆಕೆಮಿನ ಜನರೇ, ನನ್ನ ಮಾತನ್ನು ಕೇಳಿರಿ; ಆಗ ದೇವರು ನಿಮ್ಮ ಮೊರೆಗೆ ಕಿವಿಗೊಡುವನು” ಎಂದನು.

ನ್ಯಾಯಸ್ಥಾಪಕರು 9:8 (KANIRV)
Square Portrait Landscape 4K UHD
“ಒಮ್ಮೆ, ಮರಗಳು ತಮಗೋಸ್ಕರ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಎಣ್ಣೆಯ ಮರದ ಬಳಿಗೆ ಬಂದು, ‘ನೀನು ಬಂದು ನಮಗೆ ಅರಸನಾಗು’ ಅಂದವು.

ನ್ಯಾಯಸ್ಥಾಪಕರು 9:9 (KANIRV)
Square Portrait Landscape 4K UHD
ಆಗ ಅದು ಅವುಗಳಿಗೆ, ‘ನನ್ನಲ್ಲಿರುವ ಎಣ್ಣೆಗೋಸ್ಕರ ದೇವತೆಗಳೂ, ಮನುಷ್ಯರು ನನ್ನನ್ನು ಘನಪಡಿಸುತ್ತಾರೆ; ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಅಂದಿತು.

ನ್ಯಾಯಸ್ಥಾಪಕರು 9:10 (KANIRV)
Square Portrait Landscape 4K UHD
ತರುವಾಯ ಅವು ಅಂಜೂರ ಗಿಡದ ಬಳಿಗೆ ಹೋಗಿ ಅದಕ್ಕೆ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು

ನ್ಯಾಯಸ್ಥಾಪಕರು 9:11 (KANIRV)
Square Portrait Landscape 4K UHD
ಅದು, ‘ನಾನು ನನ್ನ ಶ್ರೇಷ್ಠವಾದ ಮಧುರಫಲದಾನವನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು.

ನ್ಯಾಯಸ್ಥಾಪಕರು 9:12 (KANIRV)
Square Portrait Landscape 4K UHD
ಅನಂತರ ಅವು ದ್ರಾಕ್ಷಾಲತೆಯ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು

ನ್ಯಾಯಸ್ಥಾಪಕರು 9:13 (KANIRV)
Square Portrait Landscape 4K UHD
ಅದು ಅವುಗಳಿಗೆ, ‘ನಾನು ನನ್ನ ರಸದಿಂದ ದೇವತೆಗಳಿಗೂ ಮನುಷ್ಯರಿಗೂ ಆನಂದಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು.

ನ್ಯಾಯಸ್ಥಾಪಕರು 9:14 (KANIRV)
Square Portrait Landscape 4K UHD
ಕೊನೆಗೆ ಎಲ್ಲಾ ಮರಗಳು ಮುಳ್ಳುಗಿಡದ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಅನ್ನಲು

ನ್ಯಾಯಸ್ಥಾಪಕರು 9:15 (KANIRV)
Square Portrait Landscape 4K UHD
ಅದು, ‘ನೀವು ಯಥಾರ್ಥಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ ಬಂದು ನನ್ನ ನೆರಳನ್ನು ಆಶ್ರಯಿಸಿಕೊಳ್ಳಿರಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡುವುದು’ ಎಂದಿತು.

ನ್ಯಾಯಸ್ಥಾಪಕರು 9:16 (KANIRV)
Square Portrait Landscape 4K UHD
“ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯವೋ? ಅದು ಧರ್ಮಕಾರ್ಯವೋ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕೋಸ್ಕರ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರಮಾಡಿದಿರೋ?

ನ್ಯಾಯಸ್ಥಾಪಕರು 9:17 (KANIRV)
Square Portrait Landscape 4K UHD
ನನ್ನ ತಂದೆಯು ತನ್ನ ಜೀವದ ಆಶೆಯನ್ನು ತೊರೆದು, ಹೋರಾಡಿ, ನಿಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದನಲ್ಲಾ.

ನ್ಯಾಯಸ್ಥಾಪಕರು 9:18 (KANIRV)
Square Portrait Landscape 4K UHD
ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿ, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಮ್ಮ ಬಂಧುವೆಂದು ಹೇಳಿ, ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ.

ನ್ಯಾಯಸ್ಥಾಪಕರು 9:19 (KANIRV)
Square Portrait Landscape 4K UHD
ನೀವು ಈಗ ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ, ಧರ್ಮವೂ ಆಗಿದ್ದರೆ ಅಬೀಮೆಲೆಕನಲ್ಲಿ ಆನಂದಿಸಿರಿ; ಅವನು ನಿಮ್ಮಲ್ಲಿ ಆನಂದಿಸಲಿ.

ನ್ಯಾಯಸ್ಥಾಪಕರು 9:20 (KANIRV)
Square Portrait Landscape 4K UHD
ಇಲ್ಲವಾದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನವರನ್ನೂ, ಮಿಲ್ಲೋ ಕೋಟೆಯವರನ್ನೂ ದಹಿಸಿಬಿಡಲಿ; ಶೆಕೆಮಿನವರಿಂದಲೂ, ಮಿಲ್ಲೋ ಕೋಟೆಯವರಿಂದಲೂ ಬೆಂಕಿಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ” ಎಂದನು.

ನ್ಯಾಯಸ್ಥಾಪಕರು 9:21 (KANIRV)
Square Portrait Landscape 4K UHD
ಯೋತಾಮನು ಇಷ್ಟು ಹೇಳಿ ತನ್ನ ಸಹೋದರನಾದ ಅಬೀಮೆಲೆಕನಿಂದ ತಪ್ಪಿಸಿಕೊಂಡು ಬೇರಕ್ಕೆ ಓಡಿಹೋಗಿ ಅಲ್ಲೇ ವಾಸಮಾಡಿದನು.

ನ್ಯಾಯಸ್ಥಾಪಕರು 9:22 (KANIRV)
Square Portrait Landscape 4K UHD
ಅಬೀಮೆಲೆಕನು ಇಸ್ರಾಯೇಲರನ್ನು ಮೂರು ವರ್ಷ ಆಳಿದ ನಂತರ

ನ್ಯಾಯಸ್ಥಾಪಕರು 9:23 (KANIRV)
Square Portrait Landscape 4K UHD
ಯೆಹೋವನು ಅವನಿಗೂ ಶೆಕೆಮಿನ ಹಿರಿಯರಿಗೂ ವೈಮನಸ್ಸು ಹುಟ್ಟುವಂತೆ ಮಾಡಿದನು. ಅವರು ಅವನಿಗೆ ದ್ರೋಹಮಾಡಿದರು.

ನ್ಯಾಯಸ್ಥಾಪಕರು 9:24 (KANIRV)
Square Portrait Landscape 4K UHD
ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳನ್ನು ಕ್ರೂರತನದಿಂದ ಕೊಂದುಹಾಕಿದ ರಕ್ತಾಪರಾಧಫಲವು ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಆ ಕೃತ್ಯದಲ್ಲಿ ಅವನಿಗೆ ಸಹಾಯಕರಾಗಿದ್ದ ಶೆಕೆಮಿನವರ ಮೇಲೆಯೂ ಬರುವುದಕ್ಕೆ ಕಾರಣವಾಯಿತು.

ನ್ಯಾಯಸ್ಥಾಪಕರು 9:25 (KANIRV)
Square Portrait Landscape 4K UHD
ಶೆಕೆಮಿನವರು ಅಬೀಮೆಲೆಕನಿಗೆ ವಿರೋಧವಾಗಿ ಪರ್ವತಶಿಖರಗಳಲ್ಲಿ ಹೊಂಚುಗಾರರನ್ನಿಟ್ಟರು. ಇವರು ಆ ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸುಲಿಗೆ ಮಾಡಿಕೊಳ್ಳುತ್ತಿದ್ದರು. ಈ ವರ್ತಮಾನವು ಅಬೀಮೆಲೆಕನಿಗೆ ಮುಟ್ಟಿತು.

ನ್ಯಾಯಸ್ಥಾಪಕರು 9:26 (KANIRV)
Square Portrait Landscape 4K UHD
ಅದೇ ಸಮಯದಲ್ಲಿ ಎಬೆದನ ಮಗನಾದ ಗಾಳನೆಂಬುವನು ತನ್ನ ಬಂಧುಗಳೊಡನೆ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಅವನಲ್ಲಿ ಭರವಸವಿಟ್ಟರು.

ನ್ಯಾಯಸ್ಥಾಪಕರು 9:27 (KANIRV)
Square Portrait Landscape 4K UHD
ಆ ಊರಿನವರು ಒಂದಾನೊಂದು ದಿನ ತಮ್ಮ ದ್ರಾಕ್ಷಾಫಲಗಳನ್ನು ಕೊಯಿದು, ಆಲೆಗಳಲ್ಲಿ ರಸತೆಗೆದು, ತಮ್ಮ ದೇವರ ಗುಡಿಗೆ ಹೋಗಿ ಹಬ್ಬಮಾಡಿ, ಉಂಡು ಕುಡಿದು ಅಬೀಮೆಲೆಕನನ್ನು ಶಪಿಸಿದರು.

ನ್ಯಾಯಸ್ಥಾಪಕರು 9:28 (KANIRV)
Square Portrait Landscape 4K UHD
ಎಬೆದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನನ್ನು ಯಾಕೆ ಸೇವಿಸಬೇಕು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪುರಾಧಿಕಾರಿಯು ಜೆಬುಲನಲ್ಲವೋ? ನಾವು ಅವನನ್ನು ಯಾಕೆ ಸೇವಿಸಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರ ಸೇವೆಯನ್ನು ಮಾಡಲಿ.

ನ್ಯಾಯಸ್ಥಾಪಕರು 9:29 (KANIRV)
Square Portrait Landscape 4K UHD
ಈ ಜನರ ಮೇಲೆ ನನಗೆ ಅಧಿಕಾರವಿದ್ದಿದ್ದರೆ ಅಬೀಮೆಲೆಕನನ್ನು ಓಡಿಸಿಬಿಡುತ್ತಿದ್ದೆನು” ಎಂದು ಹೇಳಿ, “ಎಲಾ, ಅಬೀಮೆಲೆಕನೇ, ಸೈನ್ಯವನ್ನು ತೆಗೆದುಕೊಂಡು ನನ್ನೊಡನೆ ಯುದ್ಧಕ್ಕೆ ಬಾ” ಎಂದು ಕೊಚ್ಚಿಕೊಂಡನು.

ನ್ಯಾಯಸ್ಥಾಪಕರು 9:30 (KANIRV)
Square Portrait Landscape 4K UHD
ಪುರಾಧಿಕಾರಿಯಾದ ಜೆಬುಲನು ಎಬೆದನ ಮಗನಾದ ಗಾಳನ ಮಾತುಗಳನ್ನು ಕೇಳಿ, ಕೋಪಗೊಂಡು ಯಾರಿಗೂ ತಿಳಿಯದಂತೆ ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿ,

ನ್ಯಾಯಸ್ಥಾಪಕರು 9:31 (KANIRV)
Square Portrait Landscape 4K UHD
“ಇಗೋ, ಎಬೆದನ ಮಗನಾದ ಗಾಳನೂ ಅವನ ಬಂಧುಗಳೂ ಇಲ್ಲಿಗೆ ಬಂದು ಶೆಕೆಮಿನವರೆಲ್ಲರನ್ನೂ ನಿನಗೆ ವಿರೋಧವಾಗಿ ಹುರಿದುಂಬಿಸುತ್ತಿದ್ದಾರೆ.

ನ್ಯಾಯಸ್ಥಾಪಕರು 9:32 (KANIRV)
Square Portrait Landscape 4K UHD
ಆದುದರಿಂದ ನೀನು ಈ ರಾತ್ರಿಯೇ ಸೈನ್ಯವನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕಿಕೊಂಡಿರು. ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು. ಅವನೂ ಅವನ ಜೊತೆಯಲ್ಲಿರುವವರೂ

ನ್ಯಾಯಸ್ಥಾಪಕರು 9:33 (KANIRV)
Square Portrait Landscape 4K UHD
ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು” ಎಂದು ಹೇಳಿಸಿದನು.

ನ್ಯಾಯಸ್ಥಾಪಕರು 9:34 (KANIRV)
Square Portrait Landscape 4K UHD
ಅಬೀಮೆಲೆಕನೂ, ಅವನ ಜನರೂ ರಾತ್ರಿಯಲ್ಲೇ ಹೊರಟು ಬಂದು ನಾಲ್ಕು ಗುಂಪಾಗಿ ಶೆಕೆಮಿನವರನ್ನು ಹೊಂಚಿಕಾಯುತ್ತಿದ್ದರು.

ನ್ಯಾಯಸ್ಥಾಪಕರು 9:35 (KANIRV)
Square Portrait Landscape 4K UHD
ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಊರಬಾಗಿಲಲ್ಲಿ ನಿಂತುಕೊಂಡಾಗ ಅಬೀಮೆಲೆಕನೂ ಅವನ ಜನರೂ ತಾವು ಹೊಂಚಿನೋಡುತ್ತಿದ್ದ ಸ್ಥಳದಿಂದ ಎದ್ದು ಬಂದರು.

ನ್ಯಾಯಸ್ಥಾಪಕರು 9:36 (KANIRV)
Square Portrait Landscape 4K UHD
ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ” ಎಂದು ಹೇಳಿದನು. ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ” ಅನ್ನಲು

ನ್ಯಾಯಸ್ಥಾಪಕರು 9:37 (KANIRV)
Square Portrait Landscape 4K UHD
ಅವನು ತಿರುಗಿ, “ನೋಡು, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ; ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ” ಅಂದನು.

ನ್ಯಾಯಸ್ಥಾಪಕರು 9:38 (KANIRV)
Square Portrait Landscape 4K UHD
ಆಗ ಜೆಬುಲನು ಅವನಿಗೆ, “ಈಗ ನಿನ್ನ ಬಾಯೆಲ್ಲಿದೆ? ಅಬೀಮೆಲೆಕನು ಎಷ್ಟರವನು? ನಾವು ಅವನನ್ನು ಯಾಕೆ ಸೇವಿಸಬೇಕು ಎಂದು ಕೊಚ್ಚಿಕೊಂಡಿಯಲ್ಲಾ; ಅವರು ನೀನು ತಿರಸ್ಕರಿಸಿದ ಜನರಲ್ಲವೋ? ಹಾಗಾದರೆ ಹೋಗಿ ಅವರೊಡನೆ ಯುದ್ಧಮಾಡು, ನೋಡೋಣ” ಎಂದು ಹೇಳಿದನು.

ನ್ಯಾಯಸ್ಥಾಪಕರು 9:39 (KANIRV)
Square Portrait Landscape 4K UHD
ಗಾಳನು ಶೆಕೆಮಿನವರ ನಾಯಕನಾಗಿ ಹೊರಟು ಅಬೀಮೆಲೆಕನೊಡನೆ ಕಾದಾಡಿದನು.

ನ್ಯಾಯಸ್ಥಾಪಕರು 9:40 (KANIRV)
Square Portrait Landscape 4K UHD
ಆದರೆ ಅಬೀಮೆಲೆಕನಿಗೆ ಬೆನ್ನು ತೋರಿಸಿ ಓಡಿಹೋಗಲು, ಅವನು ಇವನನ್ನು ಹಿಂದಟ್ಟಿದನು. ಊರುಬಾಗಿಲಿನವರೆಗೆ ಅನೇಕ ಮಂದಿ ಹತರಾಗಿ ಬಿದ್ದರು.

ನ್ಯಾಯಸ್ಥಾಪಕರು 9:41 (KANIRV)
Square Portrait Landscape 4K UHD
ಅನಂತರ ಅಬೀಮೆಲೆಕನು ಹೋಗಿ ಅರೂಮದಲ್ಲಿ ವಾಸಮಾಡಿದನು. ಇತ್ತ ಜೆಬುಲನು ಗಾಳನನ್ನೂ ಅವನ ಬಂಧುಗಳನ್ನೂ ಶೆಕೆಮಿನಿಂದ ಓಡಿಸಿಬಿಟ್ಟನು.

ನ್ಯಾಯಸ್ಥಾಪಕರು 9:42 (KANIRV)
Square Portrait Landscape 4K UHD
ಮರುದಿನ ಜನರು ಬೈಲಿಗೆ ಹೊರಟು ಬಂದರು;

ನ್ಯಾಯಸ್ಥಾಪಕರು 9:43 (KANIRV)
Square Portrait Landscape 4K UHD
ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪು ಮಾಡಿ ಅವರನ್ನು ಕರೆದುಕೊಂಡು ಬಂದು ಹೊಲಗಳಲ್ಲಿ ಹೊಂಚಿ ನೋಡುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೇ, ಅಲ್ಲಿಂದ ಎದ್ದು ಅವರನ್ನು ಹೊಡೆದನು.

ನ್ಯಾಯಸ್ಥಾಪಕರು 9:44 (KANIRV)
Square Portrait Landscape 4K UHD
ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿ ಬಂದು ಊರು ಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು.

ನ್ಯಾಯಸ್ಥಾಪಕರು 9:45 (KANIRV)
Square Portrait Landscape 4K UHD
ಅಬೀಮೆಲೆಕನು ಆ ದಿನವೆಲ್ಲಾ ಯುದ್ಧಮಾಡಿ, ಪಟ್ಟಣವನ್ನು ಸ್ವಾಧೀನಮಾಡಿಕೊಂಡು, ಅದರ ಜನರನ್ನೆಲ್ಲಾ ಸಂಹರಿಸಿ, ಊರನ್ನು ಕೆಡವಿಬಿಟ್ಟು, ಅಲ್ಲಿ ಉಪ್ಪನ್ನು ಎರಚಿಬಿಟ್ಟನು.

ನ್ಯಾಯಸ್ಥಾಪಕರು 9:46 (KANIRV)
Square Portrait Landscape 4K UHD
ಶೆಕೆಮಿನ ಕೋಟೆಯವರು ಇದನ್ನು ಕೇಳಿ ಏಲ್‌ಬೆರೀತೆ ಎಂಬ ದೇವರ ಗುಡಿಯ ನೆಲಮನೆಯಲ್ಲಿ ಅಡಗಿಕೊಂಡರು.

ನ್ಯಾಯಸ್ಥಾಪಕರು 9:47 (KANIRV)
Square Portrait Landscape 4K UHD
ಕೋಟೆಯವರೆಲ್ಲರೂ ಅಲ್ಲಿ ಅಡಗಿಕೊಂಡಿದ್ದಾರೆಂಬುದು ಅಬೀಮೆಲೆಕನಿಗೆ ಗೊತ್ತಾದಾಗ

ನ್ಯಾಯಸ್ಥಾಪಕರು 9:48 (KANIRV)
Square Portrait Landscape 4K UHD
ಅವನು ಕೊಡಲಿಯನ್ನು ತೆಗೆದುಕೊಂಡು ತನ್ನ ಜನರೆಲ್ಲರೊಡನೆ ಚಲ್ಮೋನ್ ಗುಡ್ಡವನ್ನೇರಿ ತನ್ನವರಿಗೆ, “ನಾನು ಮಾಡುವಂತೆಯೇ ನೀವೂ ತೀವ್ರವಾಗಿ ಮಾಡಿರಿ” ಎಂದು ಹೇಳಿ ತಾನು ಒಂದು ಮರದ ಕೊಂಬೆಯನ್ನು ಕಡಿದು ಹೆಗಲ ಮೇಲೆ ಹೊತ್ತುಕೊಳ್ಳಲು

ನ್ಯಾಯಸ್ಥಾಪಕರು 9:49 (KANIRV)
Square Portrait Landscape 4K UHD
ಅವರೂ ಅದರಂತೆಯೇ ಮಾಡಿ, ಅವನ ಹಿಂದೆ ಹೋಗಿ, ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ, ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್‌ ಕೋಟೆಯವರೆಲ್ಲರೂ ಸತ್ತರು. ಅವರ ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.

ನ್ಯಾಯಸ್ಥಾಪಕರು 9:50 (KANIRV)
Square Portrait Landscape 4K UHD
ಅನಂತರ ಅಬೀಮೆಲೆಕನು ತೇಬೇಚಿಗೆ ಹೋಗಿ ಮುತ್ತಿಗೆಹಾಕಿ ಅದನ್ನು ಹಿಡಿದನು.

ನ್ಯಾಯಸ್ಥಾಪಕರು 9:51 (KANIRV)
Square Portrait Landscape 4K UHD
ಆ ಊರಿನ ಮಧ್ಯದಲ್ಲಿ ಒಂದು ಭದ್ರವಾದ ಬುರುಜು ಇತ್ತು; ಊರಿನ ಸ್ತ್ರೀಪುರುಷರೆಲ್ಲರೂ ಓಡಿಹೋಗಿ, ಅದರೊಳಗೆ ಹೊಕ್ಕು, ಬಾಗಿಲನ್ನು ಮುಚ್ಚಿಕೊಂಡು ಮೇಲೆ ಹತ್ತಿದರು.

ನ್ಯಾಯಸ್ಥಾಪಕರು 9:52 (KANIRV)
Square Portrait Landscape 4K UHD
ಅಬೀಮೆಲೆಕನು ಅಲ್ಲಿಗೆ ಬಂದು ಯುದ್ಧಮಾಡುತ್ತಾ ಬುರುಜಿನ ಬಾಗಿಲಿಗೆ ಬೆಂಕಿ ಹೊತ್ತಿಸಬೇಕೆಂದು ಅದರ ಸಮೀಪಕ್ಕೆ ಹೋಗಲು,

ನ್ಯಾಯಸ್ಥಾಪಕರು 9:53 (KANIRV)
Square Portrait Landscape 4K UHD
ಒಬ್ಬ ಸ್ತ್ರೀಯು ಮೇಲಿನಿಂದ ಒಂದು ಬೀಸುವ ಕಲ್ಲನ್ನು ಬೀಳಿಸಿ, ಅವನ ತಲೆಬುರುಡೆಯನ್ನು ಒಡೆದುಬಿಟ್ಟಳು.

ನ್ಯಾಯಸ್ಥಾಪಕರು 9:54 (KANIRV)
Square Portrait Landscape 4K UHD
ಅವನು ಕೂಡಲೆ ತನ್ನ ಆಯುಧ ಹೊರುವವನನ್ನು ಕರೆದು ಅವನಿಗೆ, “ಕತ್ತಿಯನ್ನು ಹಿರಿದು ನನ್ನನ್ನು ಕೊಲ್ಲು; ಇಲ್ಲವಾದರೆ ನಾನು ಹೆಂಗಸಿನ ಕೈಯಿಂದ ಸತ್ತನೆಂದು ಜನರು ಹೇಳಾರು” ಎನ್ನಲು ಆ ಪ್ರಾಯಸ್ಥನು ಅವನನ್ನು ತಿವಿದು ಕೊಂದುಹಾಕಿದನು.

ನ್ಯಾಯಸ್ಥಾಪಕರು 9:55 (KANIRV)
Square Portrait Landscape 4K UHD
ಅಬೀಮೆಲೆಕನು ಸತ್ತು ಹೋದದ್ದನ್ನು ಕಂಡು ಇಸ್ರಾಯೇಲರು ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು.

ನ್ಯಾಯಸ್ಥಾಪಕರು 9:56 (KANIRV)
Square Portrait Landscape 4K UHD
ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿ, ತನ್ನ ತಂದೆಗೆ ದ್ರೋಹಿಯಾದ ಅಬೀಮೆಲೆಕನಿಗೆ ದೇವರು ಈ ರೀತಿಯಾಗಿ ಮುಯ್ಯಿತೀರಿಸಿದನು.

ನ್ಯಾಯಸ್ಥಾಪಕರು 9:57 (KANIRV)
Square Portrait Landscape 4K UHD
ಶೆಕೆಮಿನವರಿಗಾದರೋ ಅವರ ದುಷ್ಟತನವನ್ನು ಅವರ ತಲೆಯ ಮೇಲೆಯೇ ಬರಮಾಡಿದನು. ಹೀಗೆ ಯೆರುಬ್ಬಾಳನ ಮಗನಾದ ಯೋತಾಮನು ಇವರ ವಿಷಯದಲ್ಲಿ ನುಡಿದ ಶಾಪವು ನೆರವೇರಿತು.

Available Bible Translations

American Standard Version (ASV)
Judges 9 (ASV) »
King James Version (KJV)
Judges 9 (KJV) »
GOD’S WORD® (GW)
Judges 9 (GW) »
Berean Bible (BSB)
Judges 9 (BSB) »
World English Bible (WEB)
Judges 9 (WEB) »
French Bible (LSG)
Juges 9 (LSG) »
German Bible (LUTH1912)
Richter 9 (LUTH1912) »
Punjabi Bible (PANIRV)
ਕਜ਼ਾૃ 9 (PANIRV) »
Marathi Bible (MARIRV)
शास्ते 9 (MARIRV) »
Hebrew Bible (HEB)
שפטים 9 (HEB) »
Portuguese Bible (BSL)
Juízes 9 (BSL) »
Vietnamese Bible (VIE)
Các Thủ Lãnh 9 (VIE) »
Spanish Bible (RVA)
Jueces 9 (RVA) »
Italian Bible (RIV)
Giudici 9 (RIV) »
Chinese Simplified (CUVS)
士 师 记 9 (CUVS) »
Chinese Traditional (CUVT)
士 師 記 9 (CUVT) »
Albanian Bible (ALB)
Gjyqtarët 9 (ALB) »
Swedish Bible (SV1917)
Domarboken 9 (SV1917) »
Hungarian Bible (KAR)
Bírák 9 (KAR) »
Bulgarian Bible (BULG)
Съдии 9 (BULG) »
Japanese Bible (JPN)
士師記 9 (JPN) »
Norwegian Bible (NORSK)
Dommerne 9 (NORSK) »

ನ್ಯಾಯಸ್ಥಾಪಕರು (KANIRV) Chapter Selection

KANIRV Book Selection List