ರೋಮಾಪುರದವರಿಗೆ Chapter 9 KANIRV Bible Verse Images

ರೋಮಾಪುರದವರಿಗೆ 9 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ರೋಮಾಪುರದವರಿಗೆ 9 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ರೋಮಾಪುರದವರಿಗೆ 9:1 (KANIRV)
Square Portrait Landscape 4K UHD
ನಾನು ಕ್ರಿಸ್ತನಲ್ಲಿದುಕೊಂಡು ಸುಳ್ಳಾಡದೆ, ಸತ್ಯವಾಗಿ ಹೇಳುತ್ತೇನೆ. ಪವಿತ್ರಾತ್ಮನಿಂದ ನೆಲೆಗೊಂಡಿರುವ ನನ್ನ ಮನಸ್ಸಾಕ್ಷಿಯೇ ಇದಕ್ಕೆ ಸಾಕ್ಷಿ.

ರೋಮಾಪುರದವರಿಗೆ 9:2 (KANIRV)
Square Portrait Landscape 4K UHD
ನನಗೆ ಹೆಚ್ಚಾದ ದುಃಖವೂ, ನನ್ನ ಹೃದಯದಲ್ಲಿ ಎಡೆಬಿಡದೆ ವೇದನೆಯೂ ಉಂಟು.

ರೋಮಾಪುರದವರಿಗೆ 9:3 (KANIRV)
Square Portrait Landscape 4K UHD
ನನ್ನ ಸ್ವಜನರೂ ರಕ್ತಸಂಬಂಧಿಕರೂ ಆದ ನನ್ನ ಪ್ರಿಯರಿಗೋಸ್ಕರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕ್ರಿತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ.

ರೋಮಾಪುರದವರಿಗೆ 9:4 (KANIRV)
Square Portrait Landscape 4K UHD
ಅವರು ಇಸ್ರಾಯೇಲಿನ ವಂಶದವರು. ದೇವರು ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡನು; ಇವರಿಗೆ ತನ್ನ ಮಹಿಮೆಯನ್ನು ವ್ಯಕ್ತಪಡಿಸಿದನು; ಅವರ ಸಂಗಡ ದೇವರು ಒಡಂಬಡಿಕೆಗಳನ್ನು ಮಾಡಿಕೊಂಡಿದ್ದಾನೆ ಅವರಿಗೆ ಧರ್ಮಶಾಸ್ತ್ರವು, ದೇವಾಲಯದಲ್ಲಿ ನಡೆಯುವ ಆರಾಧನೆಯೂ, ವಾಗ್ದಾನಗಳೂ ಕೊಡಲ್ಪಟ್ಟವು.

ರೋಮಾಪುರದವರಿಗೆ 9:5 (KANIRV)
Square Portrait Landscape 4K UHD
ಅವರ ಪೂರ್ವಿಕರು ಇವರಿಗೆ ಸಂಬಂಧಪಟ್ಟವರೇ, ಕ್ರಿಸ್ತನು ಶರೀರಸಂಬಂಧವಾಗಿ ಅವರ ವಂಶದಲ್ಲಿಯೇ ಹುಟ್ಟಿದನು. ಆತನು ಎಲ್ಲಾದರ ಮೇಲೆ ಒಡೆಯನೂ, ನಿರಂತರ ಸ್ತುತಿ ಹೊಂದತಕ್ಕ ದೇವರೂ ಆಗಿದ್ದಾನೆ. ಆಮೆನ್.

ರೋಮಾಪುರದವರಿಗೆ 9:6 (KANIRV)
Square Portrait Landscape 4K UHD
ದೇವರ ವಾಕ್ಯವು ವ್ಯರ್ಥವಾಯಿತೆಂದು ನಾವು ಭಾವಿಸಬಾರದು. ಯಾಕೆಂದರೆ ಇಸ್ರಾಯೇಲ ವಂಶದಲ್ಲಿ ಹುಟ್ಟಿದವರೆಲ್ಲರೂ ಇಸ್ರಾಯೇಲ್ಯರಲ್ಲ.

ರೋಮಾಪುರದವರಿಗೆ 9:7 (KANIRV)
Square Portrait Landscape 4K UHD
ಹಾಗೆಯೇ ಅಬ್ರಹಾಮನ ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಅವರೆಲ್ಲರೂ ಮಕ್ಕಳೆಂದು ಎಣಿಸಲ್ಪಡುವುದಿಲ್ಲ. ಆದರೆ “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು.” ಎಂದು ದೇವರು ಹೇಳಿದನು.

ರೋಮಾಪುರದವರಿಗೆ 9:8 (KANIRV)
Square Portrait Landscape 4K UHD
ಆ ಮಾತಿನ ಅರ್ಥವೇನಂದರೆ ಶರೀರಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ಅಬ್ರಹಾಮನ ಸಂತತಿಯವರೆಂದು ಎಣಿಸಲ್ಪಡುವರು ಎಂಬುದು.

ರೋಮಾಪುರದವರಿಗೆ 9:9 (KANIRV)
Square Portrait Landscape 4K UHD
“ಮುಂದಿನ ವರ್ಷದಲ್ಲಿ ಇದೇ ಕಾಲದಲ್ಲಿ ನಾನು ಬರುವೆನು ಆಗ ಸಾರಳಿಗೆ ಮಗನು ಇರುವನು” ಎಂಬ ವಾಗ್ದಾನವಾಗಿದೆ.

ರೋಮಾಪುರದವರಿಗೆ 9:10 (KANIRV)
Square Portrait Landscape 4K UHD
ಇದು ಮಾತ್ರವಲ್ಲದೆ ರೆಬೆಕ್ಕಳು ಸಹ ನಮ್ಮ ಮೂಲಪಿತೃವಾದ ಇಸಾಕನಿಂದ ಅವಳಿ ಜವಳಿ ಮಕ್ಕಳಿಗೆ ಬಸುರಾದಾಗ ಅದರಂತೆಯೇ ಆಯಿತು.

ರೋಮಾಪುರದವರಿಗೆ 9:11 (KANIRV)
Square Portrait Landscape 4K UHD
ಆ ಮಕ್ಕಳು ಒಬ್ಬ ತಂದೆಯ ಮಕ್ಕಳಾಗಿದ್ದರೂ ಅವರು ಇನ್ನು ಹುಟ್ಟದೆಯೂ, ಒಳ್ಳೆದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡುವ ಮೊದಲೇ “ಹಿರಿಯನು ಕಿರಿಯನಿಗೆ ಸೇವೆಮಾಡುವನೆಂಬುದಾಗಿ” ಆಕೆಗೆ ಹೇಳಲ್ಪಟ್ಟಿತು. ಇದರಿಂದ ದೇವರು ತನಗೆ ಮನಸ್ಸಿದ್ದವರನ್ನು ಆರಿಸಿಕೊಳ್ಳುತ್ತಾನೆಂಬ ಸಂಕಲ್ಪವು ಒಳ್ಳೆಯ ಕಾರ್ಯಗಳ ಮೇಲೆ ಆಧಾರಗೊಳ್ಳದೆ ಕರೆಯುವಾತನ ಚಿತ್ತದ ಮೇಲೆಯೇ ಆಧಾರಗೊಂಡಿದೆ.

ರೋಮಾಪುರದವರಿಗೆ 9:12 (KANIRV)
Square Portrait Landscape 4K UHD
ಆ ಮಕ್ಕಳು ಒಬ್ಬ ತಂದೆಯ ಮಕ್ಕಳಾಗಿದ್ದರೂ ಅವರು ಇನ್ನು ಹುಟ್ಟದೆಯೂ, ಒಳ್ಳೆದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡುವ ಮೊದಲೇ “ಹಿರಿಯನು ಕಿರಿಯನಿಗೆ ಸೇವೆಮಾಡುವನೆಂಬುದಾಗಿ” ಆಕೆಗೆ ಹೇಳಲ್ಪಟ್ಟಿತು. ಇದರಿಂದ ದೇವರು ತನಗೆ ಮನಸ್ಸಿದ್ದವರನ್ನು ಆರಿಸಿಕೊಳ್ಳುತ್ತಾನೆಂಬ ಸಂಕಲ್ಪವು ಒಳ್ಳೆಯ ಕಾರ್ಯಗಳ ಮೇಲೆ ಆಧಾರಗೊಳ್ಳದೆ ಕರೆಯುವಾತನ ಚಿತ್ತದ ಮೇಲೆಯೇ ಆಧಾರಗೊಂಡಿದೆ.

ರೋಮಾಪುರದವರಿಗೆ 9:13 (KANIRV)
Square Portrait Landscape 4K UHD
ಇದಕ್ಕನುಸಾರವಾಗಿ “ಯಾಕೋಬನನ್ನು ಪ್ರೀತಿಸಿದೆನು ಹಾಗೂ ಏಸಾವನನ್ನು ದ್ವೇಷಿಸಿದನು” ಎಂದು ಬರೆದದೆ.

ರೋಮಾಪುರದವರಿಗೆ 9:14 (KANIRV)
Square Portrait Landscape 4K UHD
ಹಾಗಾದರೆ ಏನು ಹೇಳೋಣ? ದೇವರಲ್ಲಿ ಅನ್ಯಾಯ ಉಂಟೋ? ಎಂದಿಗೂ ಇಲ್ಲ.

ರೋಮಾಪುರದವರಿಗೆ 9:15 (KANIRV)
Square Portrait Landscape 4K UHD
“ಯಾವನ ಮೇಲೆ ನನಗೆ ಕರುಣೆ ಉಂಟೋ ಅವನನ್ನು ಕರುಣಿಸುವೆನು, ಯಾವನ ಮೇಲೆ ನನ್ನ ಕನಿಕರವಿದೆಯೋ ಅವನಿಗೆ ಕನಿಕರ ತೋರಿಸುವೆನು” ಎಂದು ದೇವರು ಮೋಶೆಗೆ ಹೇಳಿರುತ್ತಾನೆ.

ರೋಮಾಪುರದವರಿಗೆ 9:16 (KANIRV)
Square Portrait Landscape 4K UHD
ಆದ್ದರಿಂದ ದೇವರ ದಯೆಯು ಮನುಷ್ಯರಿಗೆ ಅಪೇಕ್ಷಿಸುವುದರಿಂದಾಗಲಿ, ಪ್ರಯತ್ನಿಸುವುದರಿಂದಾಗಲಿ ದೊರೆಯದೆ ದೇವರು ಕರುಣಿಸುವುದರಿಂದಲೇ ದೊರೆಯುತ್ತದೆ.

ರೋಮಾಪುರದವರಿಗೆ 9:17 (KANIRV)
Square Portrait Landscape 4K UHD
ದೇವರು ಫರೋಹನನನ್ನು ಕುರಿತು “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತ ಸ್ಥಾನಕ್ಕೆ ತಂದಿದ್ದೇನೆಂದು ಹೇಳಿದನೆಂಬುದಾಗಿ” ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ.

ರೋಮಾಪುರದವರಿಗೆ 9:18 (KANIRV)
Square Portrait Landscape 4K UHD
ದೇವರು ಯಾರನ್ನು ಕರುಣಿಸಿದರೋ, ಯಾರನ್ನು ಕಠಿಣಪಡಿಸಿದರೋ ಅದೆಲ್ಲವೂ ಆತನ ಇಷ್ಟಾನುಸಾರವಾಗಿಯೇ ಇದೆ ಎಂಬುದು ಇದರಿಂದ ತೋರಿಬರುತ್ತದೆ.

ರೋಮಾಪುರದವರಿಗೆ 9:19 (KANIRV)
Square Portrait Landscape 4K UHD
“ದೇವರ ಚಿತ್ತವನ್ನು ಎದುರಿಸುವವರು ಇಲ್ಲದಿರುವಾಗ ಆತನು ತಪ್ಪು ಹುಡುಕುವುದು ಹೇಗೆ” ಎಂದು ನೀನು ನನ್ನನ್ನು ಕೇಳುವಿ.

ರೋಮಾಪುರದವರಿಗೆ 9:20 (KANIRV)
Square Portrait Landscape 4K UHD
ಎಲೋ ಮನುಷ್ಯನೇ ಹಾಗೆನ್ನಬೇಡ ದೇವರಿಗೆ ವಿರುದ್ಧವಾಗಿ ಮಾತನಾಡುವುದಕ್ಕೆ ನೀನು ಎಷ್ಟರವನು? ರೂಪಿಸಲ್ಪಟ್ಟದ್ದು ರೂಪಿಸಿದವನಿಗೆ, “ಏಕೆ ನನ್ನನ್ನು ಹೀಗೆ ರೂಪಿಸಿದೆ”, ಎಂದು ಕೇಳುವುದುಂಟೇ?

ರೋಮಾಪುರದವರಿಗೆ 9:21 (KANIRV)
Square Portrait Landscape 4K UHD
ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ, ಹೀನವಾದ ಬಳಕೆಗೆ ಮತ್ತೊಂದು ಪಾತ್ರೆಯನ್ನೂ ಒಂದೇ ಮಣ್ಣಿನ ಮುದ್ದೆಯಿಂದ ಮಾಡುವುದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?

ರೋಮಾಪುರದವರಿಗೆ 9:22 (KANIRV)
Square Portrait Landscape 4K UHD
ಆದರೆ ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ತಾಳ್ಮೆಯಿಂದ ಸಹಿಸಿಕೊಂಡಿದ್ದಾನೆ.

ರೋಮಾಪುರದವರಿಗೆ 9:23 (KANIRV)
Square Portrait Landscape 4K UHD
ಮತ್ತು ಮಹಿಮೆ ಹೊಂದುವುದಕ್ಕೆ ತಾನು ಮೊದಲೇ ಸಿದ್ಧಪಡಿಸಿರುವ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ.

ರೋಮಾಪುರದವರಿಗೆ 9:24 (KANIRV)
Square Portrait Landscape 4K UHD
ಆತನು ಕರುಣಿಸಿದ ನಮ್ಮನ್ನು ಯೆಹೂದ್ಯರೊಳಗಿಂದ ಮಾತ್ರ ಕರೆಯದೆ ಹೋಶೇಯನ ಗ್ರಂಥದ ವಚನದಲ್ಲಿ ತಾನು ಸೂಚಿಸಿರುವಂತೆ ಅನ್ಯಜನರೊಳಗಿಂದ ಸಹ ಕರೆದನು.

ರೋಮಾಪುರದವರಿಗೆ 9:25 (KANIRV)
Square Portrait Landscape 4K UHD
ಆ ವಚನವೇನಂದರೆ, “ನನ್ನ ಜನವಲ್ಲದವರನ್ನು ನನ್ನ ಜನರೆಂದು ನನಗೆ ಅಪ್ರಿಯವಾದವಳನ್ನು ಪ್ರಿಯಳೆಂದೂ ಹೇಳುವೆನು.

ರೋಮಾಪುರದವರಿಗೆ 9:26 (KANIRV)
Square Portrait Landscape 4K UHD
ಮತ್ತು ಯಾವ ಸ್ಥಳದಲ್ಲಿ ‘ನೀವು ನನ್ನ ಜನರಲ್ಲವೆಂದು’ ಅವರಿಗೆ ಹೇಳಲ್ಪಟ್ಟಿತೋ ಆ ಸ್ಥಳದಲ್ಲಿಯೇ ಅವರು ‘ಜೀವವುಳ್ಳ ದೇವರ ಮಕ್ಕಳು ಎನಿಸಿಕೊಳ್ಳುವರು’” ಎಂಬುದೇ.

ರೋಮಾಪುರದವರಿಗೆ 9:27 (KANIRV)
Square Portrait Landscape 4K UHD
ಇದಲ್ಲದೆ ಯೆಶಾಯನು ಇಸ್ರಾಯೇಲ್ ಜನರ ವಿಷಯದಲ್ಲಿ ಹೀಗೆಂದು ಘೋಷಿಸಿದ್ದಾನೆ: “ಇಸ್ರಾಯೇಲರ ಸಂಖ್ಯೆಯು ಸಮುದ್ರದ ಉಸುಬಿನಂತಿದ್ದರೂ ಅವರಲ್ಲಿ ಕೆಲವರು ಮಾತ್ರ ರಕ್ಷಿಸಲ್ಪಡುವರು” “ಕರ್ತನು ಭೂಮಿಯಲ್ಲಿ ತನ್ನ ವಚನವನ್ನು ಕ್ಷಣದಲ್ಲಿ ನೆರವೆರಿಸಿಮುಗಿಸುವನು” ಎಂದು ಕೂಗಿ ಹೇಳುತ್ತಾನೆ.

ರೋಮಾಪುರದವರಿಗೆ 9:28 (KANIRV)
Square Portrait Landscape 4K UHD
ಅದೇ ಅಭಿಪ್ರಾಯದಿಂದ ಯೆಶಾಯನು ಮತ್ತೊಂದು ವಚನದಲ್ಲಿ,

ರೋಮಾಪುರದವರಿಗೆ 9:29 (KANIRV)
Square Portrait Landscape 4K UHD
“ಸೇನಾಧೀಶ್ವರನಾದ ಕರ್ತನು ನಮಗೆ ಒಂದು ಸಂತಾನವನ್ನು ಉಳಿಸದೆ ಹೋಗಿದ್ದರೆ “ಸೊದೋಮಿನ ಗತಿಯೇ ನಮಗಾಗುತ್ತಿತ್ತು ಗೊಮೋರದ ದುರ್ದೆಸೆಯೇ ಸಂಭವಿಸುತ್ತಿತ್ತು” ಎಂದು ಮೊದಲೇ ತಿಳಿದುಕೊಂಡು ಹೇಳಿದ್ದಾರೆ.

ರೋಮಾಪುರದವರಿಗೆ 9:30 (KANIRV)
Square Portrait Landscape 4K UHD
ಹಾಗಾದರೆ ಏನು ಹೇಳೋಣ? ನೀತಿಯನ್ನು ಅನುಸರಿಸದ ಅನ್ಯಜನರಿಗೆ ನೀತಿಯು ಅಂದರೆ ನಂಬಿಕೆಯಿಂದುಂಟಾದ ನೀತಿಯು ದೊರಕಿತು.

ರೋಮಾಪುರದವರಿಗೆ 9:31 (KANIRV)
Square Portrait Landscape 4K UHD
ಆದರೆ ನೀತಿಯನ್ನು ಹಿಂಬಾಲಿಸಿದ್ದ ಇಸ್ರಾಯೇಲ್ಯರು ನೀತಿಯನ್ನು ದೊರಕಿಸುವ ಧರ್ಮವನ್ನು ಹಿಡಿಯಲಾರದೆ ಹೋದರೆಂದು ಹೇಳಬೇಕು.

ರೋಮಾಪುರದವರಿಗೆ 9:32 (KANIRV)
Square Portrait Landscape 4K UHD
ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಅನುಸರಿಸದೆ ನೇಮನಿಷ್ಠೆಗಳನ್ನು ಹಿಂಬಾಲಿಸಿದ್ದರಿಂದ,

ರೋಮಾಪುರದವರಿಗೆ 9:33 (KANIRV)
Square Portrait Landscape 4K UHD
ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು. ಧರ್ಮಶಾಸ್ತ್ರದಲ್ಲಿ ಹೀಗೆ ಬರೆಯಲ್ಪಟ್ಟಿದೆ, “ಇಗೋ ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ. ಆತನಲ್ಲಿ ನಂಬಿಕೆಯಿಡುವವನು ಆಶಾಭಂಗಪಡುವುದಿಲ್ಲ” ಎಂಬುದೇ.

Available Bible Translations

American Standard Version (ASV)
Romans 9 (ASV) »
King James Version (KJV)
Romans 9 (KJV) »
GOD’S WORD® (GW)
Romans 9 (GW) »
Berean Bible (BSB)
Romans 9 (BSB) »
World English Bible (WEB)
Romans 9 (WEB) »
French Bible (LSG)
Romains 9 (LSG) »
German Bible (LUTH1912)
Römer 9 (LUTH1912) »
Punjabi Bible (PANIRV)
ਰੋਮੀਆਂ 9 (PANIRV) »
Tamil Bible (TAMIRV)
ரோமர் 9 (TAMIRV) »
Portuguese Bible (BSL)
Romanos 9 (BSL) »
Vietnamese Bible (VIE)
Rô-ma 9 (VIE) »
Spanish Bible (RVA)
Romanos 9 (RVA) »
Italian Bible (RIV)
Romani 9 (RIV) »
Chinese Simplified (CUVS)
罗 马 书 9 (CUVS) »
Chinese Traditional (CUVT)
羅 馬 書 9 (CUVT) »
Albanian Bible (ALB)
Romakëve 9 (ALB) »
Swedish Bible (SV1917)
Romarbrevet 9 (SV1917) »
Russian Bible (RUSV)
Римлянам 9 (RUSV) »
Ukrainian Bible (UKR)
римлян 9 (UKR) »
Hungarian Bible (KAR)
Róma 9 (KAR) »
Bulgarian Bible (BULG)
Римляни 9 (BULG) »
Norwegian Bible (NORSK)
Romerne 9 (NORSK) »

ರೋಮಾಪುರದವರಿಗೆ (KANIRV) Chapter Selection

1 2 3 4 5 6 7 8 9 10 11 12 13 14 15 16

KANIRV Book Selection List