2 ಪೂರ್ವಕಾಲವೃತ್ತಾಂತ Chapter 30 KANIRV Bible Verse Images

2 ಪೂರ್ವಕಾಲವೃತ್ತಾಂತ 30 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 2 ಪೂರ್ವಕಾಲವೃತ್ತಾಂತ 30 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


2 ಪೂರ್ವಕಾಲವೃತ್ತಾಂತ 30:1 (KANIRV)
Square Portrait Landscape 4K UHD
ತರುವಾಯ ಹಿಜ್ಕೀಯನು, ಇಸ್ರಾಯೇಲ್ ದೇವರಾದ ಯೆಹೋವನ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬರಬೇಕೆಂದು, ಎಲ್ಲಾ ಇಸ್ರಾಯೇಲರಿಗೂ, ಯೆಹೂದ್ಯರಿಗೂ, ಎಫ್ರಾಯೀಮ್ಯರಿಗೂ, ಮನಸ್ಸೆಯವರಿಗೂ ದೂತರ ಮುಖಾಂತರವಾಗಿ ಮತ್ತು ಪತ್ರಗಳ ಮೂಲಕವಾಗಿ ತಿಳಿಯಪಡಿಸಿದನು.

2 ಪೂರ್ವಕಾಲವೃತ್ತಾಂತ 30:2 (KANIRV)
Square Portrait Landscape 4K UHD
ಎರಡನೆಯ ತಿಂಗಳಿನಲ್ಲಿ ಪಸ್ಕಹಬ್ಬವನ್ನು ಯೆರೂಸಲೇಮಿನಲ್ಲಿ ಆಚರಿಸಬೇಕೆಂದು ಅರಸನು, ಪದಾಧಿಕಾರಿಗಳು ಅಭಿಪ್ರಾಯಪಟ್ಟರು.

2 ಪೂರ್ವಕಾಲವೃತ್ತಾಂತ 30:3 (KANIRV)
Square Portrait Landscape 4K UHD
ಯಾಕೆಂದರೆ ಯಾಜಕರಲ್ಲಿ ಸಾಕಷ್ಟು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಒಟ್ಟಾಗಿ ಸೇರಿ ಬಂದಿರಲಿಲ್ಲವಾದುದರಿಂದ ಕೂಡಲೆ ಪಸ್ಕಹಬ್ಬವನ್ನು ಆಚರಿಸಲು ಸಾಧ್ಯವಾಗುವುದಿಲ್ಲವೆಂದು ಅರಸನಿಗೂ ಅವನ ಸರದಾರರಿಗೂ ಯೆರೂಸಲೇಮಿನ ಸರ್ವಸಂಘದವರಿಗೂ ತಿಳಿದುಕೊಂಡರು.

2 ಪೂರ್ವಕಾಲವೃತ್ತಾಂತ 30:4 (KANIRV)
Square Portrait Landscape 4K UHD
ಈ ಅಭಿಪ್ರಾಯವು ಅರಸನಿಗೂ ಸರ್ವಸಮೂಹಕ್ಕೂ ಸರಿಕಂಡದ್ದರಿಂದ

2 ಪೂರ್ವಕಾಲವೃತ್ತಾಂತ 30:5 (KANIRV)
Square Portrait Landscape 4K UHD
ಅವರು, “ಸರ್ವಜನರು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿಗೆ ಬರಬೇಕು” ಎಂಬುದಾಗಿ ಬೇರ್ಷೆಬದಿಂದ ದಾನ್ ವರೆಗೂ ವಾಸಮಾಡುತ್ತಿದ್ದ ಇಸ್ರಾಯೇಲರೊಳಗೆ ಡಂಗುರ ಹೊಡಿಸಬೇಕೆಂದು ನಿರ್ಣಯಿಸಿದರು. ಜನರಲ್ಲಿ ಹೆಚ್ಚು ಮಂದಿ ಆ ವರೆಗೂ ಧರ್ಮಶಾಸ್ತ್ರವಿಧಿಯ ಪ್ರಕಾರ ಪಸ್ಕಹಬ್ಬವನ್ನು ಆಚರಿಸಿರಲಿಲ್ಲ.

2 ಪೂರ್ವಕಾಲವೃತ್ತಾಂತ 30:6 (KANIRV)
Square Portrait Landscape 4K UHD
ಅರಸನ ಮತ್ತು ಅವನ ಪದಾಧಿಕಾರಿಗಳಿಂದ ಪತ್ರಗಳನ್ನು ತೆಗೆದುಕೊಂಡು ಹೋದ ದೂತರು ಇಸ್ರಾಯೇಲ್ ಮತ್ತು ಯೆಹೂದ ದೇಶಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಾಯೇಲರೇ, ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನು ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದಿರುವ ನಿಮ್ಮ ಕಡೆಗೆ ತಿರುಗಿಕೊಳ್ಳುವನು.

2 ಪೂರ್ವಕಾಲವೃತ್ತಾಂತ 30:7 (KANIRV)
Square Portrait Landscape 4K UHD
ನಿಮ್ಮ ಪೂರ್ವಿಕರು ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ವಿರೋಧವಾಗಿ ದ್ರೋಹಿಗಳಾಗಿದ್ದುದರಿಂದ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಅದಕ್ಕೆ ನೀವೇ ಸಾಕ್ಷಿಗಳು.

2 ಪೂರ್ವಕಾಲವೃತ್ತಾಂತ 30:8 (KANIRV)
Square Portrait Landscape 4K UHD
ಈಗ ನೀವು ನಿಮ್ಮ ಪೂರ್ವಿಕರಂತೆ ರಾಜಾಜ್ಞೆಗೆ ಮಣಿಯದವರಾಗಿರಬೇಡಿರಿ, ಯೆಹೋವನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಯೆಹೋವನು ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡಿರುವ ಪವಿತ್ರಾಲಯಕ್ಕೆ ಬಂದು ಆತನನ್ನು ಆರಾಧಿಸಿರಿ. ಆಗ ನಿಮ್ಮ ಮೇಲಿರುವ ಆತನ ಉಗ್ರಕೋಪವು ತೊಲಗಿಹೋಗುವುದು.

2 ಪೂರ್ವಕಾಲವೃತ್ತಾಂತ 30:9 (KANIRV)
Square Portrait Landscape 4K UHD
ನೀವು ಯೆಹೋವನ ಕಡೆಗೆ ತಿರುಗಿಕೊಳ್ಳವುದಾದರೆ ನಿಮ್ಮ ಸಹೋದರರೂ, ಮಕ್ಕಳೂ ತಮ್ಮನ್ನು ಸೆರೆ ಒಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ, ತಿರುಗಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಯೆಹೋವನು ದಯೆಯೂ, ಕನಿಕರವೂ ಉಳ್ಳವನಾಗಿದ್ದಾನೆ. ಆತನು ತನ್ನ ಕಡೆಗೆ ತಿರುಗಿಕೊಳ್ಳುವ ನಿಮ್ಮನ್ನು ಕಟಾಕ್ಷಿಸದೆ ಇರುವುದಿಲ್ಲ.”

2 ಪೂರ್ವಕಾಲವೃತ್ತಾಂತ 30:10 (KANIRV)
Square Portrait Landscape 4K UHD
ದೂತರು ಎಫ್ರಾಯೀಮ್, ಮನಸ್ಸೆ, ಜೆಬುಲೂನ್ ಪ್ರಾಂತ್ಯಗಳಲ್ಲಿ, ಪಟ್ಟಣದಿಂದ ಪಟ್ಟಣಕ್ಕೆ ಹೋದರು. ಜನರು ಅವರನ್ನು ಕಂಡು ನಕ್ಕು ಗೇಲಿಮಾಡಿದರು.

2 ಪೂರ್ವಕಾಲವೃತ್ತಾಂತ 30:11 (KANIRV)
Square Portrait Landscape 4K UHD
ಕೆಲವು ಮಂದಿ ಆಶೇರ್ಯರೂ, ಮನಸ್ಸೆಯವರೂ, ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.

2 ಪೂರ್ವಕಾಲವೃತ್ತಾಂತ 30:12 (KANIRV)
Square Portrait Landscape 4K UHD
ಯೆಹೂದ್ಯರಾದರೋ ದೇವರ ಕೃಪಾಹಸ್ತದಿಂದ ಪ್ರೇರಣೆಹೊಂದಿ ಏಕ ಮನಸ್ಸುಳ್ಳವರಾಗಿ, ಯೆಹೋವನ ವಾಕ್ಯಕ್ಕೆ ಅನುಸಾರವಾಗಿ ಅರಸನಿಂದಲೂ, ಪದಾಧಿಕಾರಿಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು.

2 ಪೂರ್ವಕಾಲವೃತ್ತಾಂತ 30:13 (KANIRV)
Square Portrait Landscape 4K UHD
ಹೀಗೆ, ಅನೇಕಾನೇಕ ಜನರು ಎರಡನೆಯ ತಿಂಗಳಿನಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿನಲ್ಲಿ ಸೇರಿಬಂದರು; ಆ ಜನಸಮೂಹವು ಮಹಾಸಮೂಹವಾಗಿತ್ತು.

2 ಪೂರ್ವಕಾಲವೃತ್ತಾಂತ 30:14 (KANIRV)
Square Portrait Landscape 4K UHD
ಅವರು ಯೆರೂಸಲೇಮಿನಲ್ಲಿದ್ದ ಯಜ್ಞವೇದಿಗಳನ್ನೂ ಎಲ್ಲಾ ಧೂಪವೇದಿಗಳನ್ನೂ ತೆಗೆದುಕೊಂಡು ಹೋಗಿ ಕಿದ್ರೋನ್ ಹಳ್ಳದಲ್ಲಿ ಬಿಸಾಡಿಬಿಟ್ಟರು.

2 ಪೂರ್ವಕಾಲವೃತ್ತಾಂತ 30:15 (KANIRV)
Square Portrait Landscape 4K UHD
ನಂತರ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ಕೊಯ್ದರು.ಆಗ ಯಾಜಕರೂ, ಲೇವಿಯರೂ ನಾಚಿಕೆಪಟ್ಟು, ತಮ್ಮನ್ನು ಶುದ್ಧಿಪಡಿಸಿಕೊಂಡು ಯೆಹೋವನ ಆಲಯದಲ್ಲಿ ಸರ್ವಾಂಗಹೋಮಗಳನ್ನ ಸಮರ್ಪಿಸಿದರು.

2 ಪೂರ್ವಕಾಲವೃತ್ತಾಂತ 30:16 (KANIRV)
Square Portrait Landscape 4K UHD
ಅವರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತು, ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಿಂದ ತಮಗೆ ನೇಮಕವಾದ ಸೇವೆಯನ್ನು ಮಾಡುತ್ತಿದ್ದರು. ಯಾಜಕರೂ ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಅದನ್ನು ಪ್ರೋಕ್ಷಿಸಿದರು.

2 ಪೂರ್ವಕಾಲವೃತ್ತಾಂತ 30:17 (KANIRV)
Square Portrait Landscape 4K UHD
ಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಇದ್ದುದರಿಂದ ಅಶುದ್ಧರಾದವರೆಲ್ಲರ, ಪಸ್ಕಹಬ್ಬದ ಯಜ್ಞಪಶುಗಳು ಯೆಹೋವನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.

2 ಪೂರ್ವಕಾಲವೃತ್ತಾಂತ 30:18 (KANIRV)
Square Portrait Landscape 4K UHD
ಜನರಲ್ಲಿ ಅನೇಕರು ಅಂದರೆ, ಹೆಚ್ಚಾಗಿ ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್, ಹಾಗು ಜೆಬುಲೂನ್ ಪ್ರಾಂತ್ಯಗಳವರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಿಂದ ಪಸ್ಕದ (ಹಬ್ಬ) ಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು, “ಯೆಹೋವನೇ, ದಯಾಪರನಾದ ದೇವರೇ, ಅವರೆಲ್ಲರಿಗೆ ಕ್ಷಮೆಯನ್ನು ಅನುಗ್ರಹಿಸು” ಎಂದು ವಿಜ್ಞಾಪನೆ ಮಾಡಿದನು.

2 ಪೂರ್ವಕಾಲವೃತ್ತಾಂತ 30:19 (KANIRV)
Square Portrait Landscape 4K UHD
ದೇವಾಲಯಕ್ಕೆ ಯಾತ್ರಿಕರಾಗಿ ಬಂದಿರುವವರಲ್ಲಿ ಇರಬೇಕಾದ ಪರಿಶುದ್ಧತ್ವವು ಅನೇಕರಲ್ಲಿ ಇಲ್ಲದಿದ್ದರೂ ಪೂರ್ವಿಕರ ದೇವರಾದ ಯೆಹೋವನನ್ನು ಹುಡುಕಬೇಕೆಂದು ಮನಸ್ಸುಮಾಡಿರುವವರಿಗೆಲ್ಲರಿಗೂ ಕ್ಷಮೆಯನ್ನು ಅನುಗ್ರಹಿಸು ಎಂದು ವಿಜ್ಞಾಪನೆ ಮಾಡಿದನು.

2 ಪೂರ್ವಕಾಲವೃತ್ತಾಂತ 30:20 (KANIRV)
Square Portrait Landscape 4K UHD
ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಲಾಲಿಸಿ ಜನರನ್ನು ಸ್ವಸ್ಥಗೊಳಿಸಿದನು.

2 ಪೂರ್ವಕಾಲವೃತ್ತಾಂತ 30:21 (KANIRV)
Square Portrait Landscape 4K UHD
ಯೆರೂಸಲೇಮಿನಲ್ಲಿ ಸೇರಿಬಂದಿದ್ದ ಇಸ್ರಾಯೇಲರು ಏಳು ದಿನಗಳವರೆಗೂ ಮಹಾ ಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುತ್ತಾ ಇದ್ದರು. ಲೇವಿಯರೂ, ಯಾಜಕರೂ ಮಹಾವಾದ್ಯಗಳೊಡನೆ ಯೆಹೋವನನ್ನು ಪ್ರತಿದಿನವೂ ಸ್ತುತಿ ಕೀರ್ತಿಸುತ್ತಾ ಇದ್ದರು.

2 ಪೂರ್ವಕಾಲವೃತ್ತಾಂತ 30:22 (KANIRV)
Square Portrait Landscape 4K UHD
ಹಿಜ್ಕೀಯನು ಯೆಹೋವನ ಸೇವೆಯಲ್ಲಿ ನಿಪುಣರಾದ ಎಲ್ಲಾ ಲೇವಿಯರೊಡನೆ ಪ್ರೀತಿಯಿಂದ ಮಾತನಾಡಿದನು. ನೇಮಕವಾದ ಏಳು ದಿನಗಳ ಹಬ್ಬದವರೆಗೂ ಜನರು ಸಮಾಧಾನ ಯಜ್ಞಗಳನ್ನು ಅರ್ಪಿಸುತ್ತಾ ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತಮ್ಮ ದೇವರೆಂದು ಅರಿಕೆಮಾಡಿಕೊಳ್ಳುತ್ತಾ ಔತಣಮಾಡಿದರು.

2 ಪೂರ್ವಕಾಲವೃತ್ತಾಂತ 30:23 (KANIRV)
Square Portrait Landscape 4K UHD
ಅಲ್ಲದೆ ಸಮೂಹದವರು ಇನ್ನೂ ಏಳು ದಿನಗಳ ಕಾಲ ಹಬ್ಬವನ್ನು ಆ ಆಚರಿಸಬೇಕೆಂದು ತೀರ್ಮಾನಿಸಿ ಇನ್ನೂ ಏಳು ದಿನಗಳ ಕಾಲ ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು

2 ಪೂರ್ವಕಾಲವೃತ್ತಾಂತ 30:24 (KANIRV)
Square Portrait Landscape 4K UHD
ಹೂದದ ಅರಸನಾದ ಹಿಜ್ಕೀಯನು ಹಿಂಡುಗಳಿಂದ ಸಾವಿರ ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ, ಪದಾಧಿಕಾರಿಗಳು ಸಾವಿರ ಹೋರಿಗಳನ್ನೂ, ಹತ್ತು ಸಾವಿರ ಕುರಿಗಳನ್ನೂ ಯಜ್ಞಕ್ಕಾಗಿ ದಾನಮಾಡಿದರು. ಯಾಜಕರಲ್ಲಿ ಬಹು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡರು.

2 ಪೂರ್ವಕಾಲವೃತ್ತಾಂತ 30:25 (KANIRV)
Square Portrait Landscape 4K UHD
ಯೆಹೂದ್ಯರ ಸರ್ವಸಮೂಹದವರೂ, ಯಾಜಕರು, ಲೇವಿಯರೂ, ಇಸ್ರಾಯೇಲ್ ಪ್ರಾಂತ್ಯಗಳಿಂದ ಸೇರಿಬಂದವರೆಲ್ಲರೂ ಹಾಗು ಇಸ್ರಾಯೇಲ್ ಯೆಹೂದ ಪ್ರಾಂತ್ಯಗಳಲ್ಲಿದ್ದ ಪ್ರವಾಸಿಗಳು ಈ ಉತ್ಸವದಲ್ಲಿ ಪಾಲುಗೊಂಡಿದ್ದರು.

2 ಪೂರ್ವಕಾಲವೃತ್ತಾಂತ 30:26 (KANIRV)
Square Portrait Landscape 4K UHD
ದಾವೀದನ ಮಗನೂ ಇಸ್ರಾಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದುದರಿಂದ ಯೆರೂಸಲೇಮಿನಲ್ಲಿ ಮಹಾಸಂತೋಷವುಂಟಾಯಿತು.

2 ಪೂರ್ವಕಾಲವೃತ್ತಾಂತ 30:27 (KANIRV)
Square Portrait Landscape 4K UHD
ಆಮೇಲೆ ಯಾಜಕರಾಗಿದ್ದ ಲೇವಿಯರು ಎದ್ದು ನಿಂತು ಜನರನ್ನು ಆಶೀರ್ವದಿಸಿದರು. ಅವರ ಪ್ರಾರ್ಥನೆಯ ಸ್ವರವು ದೇವರಿಗೆ ಕೇಳಿಸಿತು; ಅವರ ಪ್ರಾರ್ಥನೆಯು ಪರಲೋಕದಲ್ಲಿರುವ ಆತನ ಪರಿಶುದ್ಧ ನಿವಾಸಕ್ಕೆ ತಲುಪಿತು.

Available Bible Translations

American Standard Version (ASV)
2 Chronicles 30 (ASV) »
King James Version (KJV)
2 Chronicles 30 (KJV) »
GOD’S WORD® (GW)
2 Chronicles 30 (GW) »
Berean Bible (BSB)
2 Chronicles 30 (BSB) »
World English Bible (WEB)
2 Chronicles 30 (WEB) »
French Bible (LSG)
2 Chroniques 30 (LSG) »
German Bible (LUTH1912)
2 Chronik 30 (LUTH1912) »
Arabic Bible (AVD)
٢ أخبار 30 (AVD) »
Portuguese Bible (BSL)
2 Crônicas 30 (BSL) »
Vietnamese Bible (VIE)
2 Sử Ký 30 (VIE) »
Spanish Bible (RVA)
2 Crónicas 30 (RVA) »
Italian Bible (RIV)
2 Cronache 30 (RIV) »
Chinese Simplified (CUVS)
历 代 志 下 30 (CUVS) »
Chinese Traditional (CUVT)
歷 代 志 下 30 (CUVT) »
Albanian Bible (ALB)
2 Kronikave 30 (ALB) »
Swedish Bible (SV1917)
2 Krönikeboken 30 (SV1917) »
Ukrainian Bible (UKR)
2 хроніки 30 (UKR) »
Hungarian Bible (KAR)
2 Krónika 30 (KAR) »
Bulgarian Bible (BULG)
2 Летописи 30 (BULG) »
Japanese Bible (JPN)
歴代志下 30 (JPN) »
Norwegian Bible (NORSK)
2 Krønikebok 30 (NORSK) »

2 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List