ವಿಮೋಚನಕಾಂಡ Chapter 39 KANIRV Bible Verse Images

ವಿಮೋಚನಕಾಂಡ 39 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ವಿಮೋಚನಕಾಂಡ 39 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ವಿಮೋಚನಕಾಂಡ 39:1 (KANIRV)
Square Portrait Landscape 4K UHD
ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದೇವಮಂದಿರದ ಸೇವೆಗೆ ಅಲಂಕಾರವಾದ ವಸ್ತ್ರಗಳನ್ನೂ ಮತ್ತು ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನೂ ಮಾಡಿದರು.

ವಿಮೋಚನಕಾಂಡ 39:2 (KANIRV)
Square Portrait Landscape 4K UHD
ಮಹಾಯಾಜಕನ ಏಫೋದೆಂಬ ಕವಚವನ್ನು ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲೂ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ಮಾಡಿದರು.

ವಿಮೋಚನಕಾಂಡ 39:3 (KANIRV)
Square Portrait Landscape 4K UHD
ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದೊಡನೆಯೂ ಹತ್ತಿಯ ಬಟ್ಟೆಯೊಡನೆಯೂ ಕಸೂತಿ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸವನ್ನು ಮಾಡುವುದಕ್ಕಾಗಿ ಬಂಗಾರವನ್ನು ಬಡಿದು ಹಗುರವಾದ ತಗಡುಗಳನ್ನು ಮಾಡಿ ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು.

ವಿಮೋಚನಕಾಂಡ 39:4 (KANIRV)
Square Portrait Landscape 4K UHD
ಏಫೋದ್ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳನ್ನು ಮಾಡಿದರು; ಅದರ ಎರಡು ಅಂಚುಗಳು ಜೋಡಿಸಲ್ಪಟ್ಟಿದ್ದವು.

ವಿಮೋಚನಕಾಂಡ 39:5 (KANIRV)
Square Portrait Landscape 4K UHD
ಕವಚದ ಮೇಲಿರುವ ಕಸೂತಿ ನಡುಕಟ್ಟು ಕವಚಕ್ಕೆ ಏಕವಾಗಿದ್ದು ಅದರಂತೆಯೇ ನಯವಾಗಿ ಹೊಸೆದ ಹತ್ತಿಯ ಬಟ್ಟೆಯಿಂದಲು, ಚಿನ್ನದ ದಾರಗಳಿಂದಲು ಹಾಗೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಮಾಡಲ್ಪಟ್ಟಿತ್ತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.

ವಿಮೋಚನಕಾಂಡ 39:6 (KANIRV)
Square Portrait Landscape 4K UHD
ಮುದ್ರಾಕ್ಷವನ್ನು ಕೆತ್ತುವ ರೀತಿಯಲ್ಲಿ ಗೋಮೇಧಕರತ್ನಗಳಲ್ಲಿ ಇಸ್ರಾಯೇಲನ ಹನ್ನೆರಡು ಮಕ್ಕಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಹಚ್ಚಿದರು.

ವಿಮೋಚನಕಾಂಡ 39:7 (KANIRV)
Square Portrait Landscape 4K UHD
ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆ ರತ್ನಗಳನ್ನು ಇಸ್ರಾಯೇಲರ ಜ್ಞಾಪಕಾರ್ಥವಾಗಿ ಅವುಗಳನ್ನು ಏಫೋದ್ ಕವಚದ ಹೆಗಲಿನ ಮೇಲಿರುವ ಪಟ್ಟಿಗಳಲ್ಲಿ ಬಿಗಿಸಿದನು.

ವಿಮೋಚನಕಾಂಡ 39:8 (KANIRV)
Square Portrait Landscape 4K UHD
ಏಫೋದ್ ಕವಚದಂತೆಯೇ ಕಸೂತಿಯಿಂದಲೂ ಕೆಲಸದಿಂದ ಚಿನ್ನದ ದಾರಗಳಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ನಯವಾದ ನಾರಿನ ಬಟ್ಟೆಯಲ್ಲಿ ಎದೆಯಪದಕವನ್ನು ಮಾಡಿದನು.

ವಿಮೋಚನಕಾಂಡ 39:9 (KANIRV)
Square Portrait Landscape 4K UHD
ಅದು ಚಚ್ಚೌಕವಾಗಿತ್ತು. ಆ ಎದೆಯಪದಕವು ಎರಡು ಪದರುಗಳ್ಳುಳದ್ದಾಗಿತ್ತು; ಅದು ಒಂದು ಗೇಣು ಉದ್ದವೂ ಒಂದು ಗೇಣು ಅಗಲವೂ ಆಗಿತ್ತು.

ವಿಮೋಚನಕಾಂಡ 39:10 (KANIRV)
Square Portrait Landscape 4K UHD
ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಇರಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳು.

ವಿಮೋಚನಕಾಂಡ 39:11 (KANIRV)
Square Portrait Landscape 4K UHD
ಎರಡನೆಯ ಸಾಲಿನಲ್ಲಿ ಪಚ್ಚೆ, ನೀಲಮಣಿ ಮತ್ತು ವಜ್ರಗಳು.

ವಿಮೋಚನಕಾಂಡ 39:12 (KANIRV)
Square Portrait Landscape 4K UHD
ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಸುಗಂಧಿ ಮತ್ತು ಪದ್ಮರಾಗಗಳು.

ವಿಮೋಚನಕಾಂಡ 39:13 (KANIRV)
Square Portrait Landscape 4K UHD
ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಮತ್ತು ವೈಡೂರ್ಯಗಳು ಇದ್ದವು. ಈ ರತ್ನಗಳನ್ನು ಕುಂದಣಗಳಲ್ಲಿ ಇರಿಸಿದರು.

ವಿಮೋಚನಕಾಂಡ 39:14 (KANIRV)
Square Portrait Landscape 4K UHD
ಇಸ್ರಾಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು; ಮುದ್ರಾಕ್ಷಗಳಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರು ಕೆತ್ತಲ್ಪಟ್ಟಿತ್ತು.

ವಿಮೋಚನಕಾಂಡ 39:15 (KANIRV)
Square Portrait Landscape 4K UHD
ಎದೆಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕಬಂಗಾರದ ಸರಪಣಿಗಳನ್ನು ನೇಯ್ಗೆಯ ಕೆಲಸದಿಂದ ಮಾಡಿದರು.

ವಿಮೋಚನಕಾಂಡ 39:16 (KANIRV)
Square Portrait Landscape 4K UHD
ಎರಡು ಚಿನ್ನದ ಬಳೆಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿ ಆ ಉಂಗುರಗಳನ್ನು ಎದೆಪದಕದ ಎರಡು ಮೂಲೆಗಳಿಗೆ ಜೋಡಿಸಿದರು.

ವಿಮೋಚನಕಾಂಡ 39:17 (KANIRV)
Square Portrait Landscape 4K UHD
ಹೆಣಿಗೇಕೆಲಸದ ಆ ಎರಡು ಚಿನ್ನದ ಸರಪಣಿಗಳನ್ನು ಪದಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಜೋಡಿಸಿದರು.

ವಿಮೋಚನಕಾಂಡ 39:18 (KANIRV)
Square Portrait Landscape 4K UHD
ಹೆಣಿಗೇಕೆಲಸದ ಆ ಸರಪಣಿಗಳ ಅಂಚುಗಳನ್ನು ಏಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಬಳೆಗಳ ಮುಂಭಾಗಕ್ಕೆ ಜೋಡಿಸಿದರು.

ವಿಮೋಚನಕಾಂಡ 39:19 (KANIRV)
Square Portrait Landscape 4K UHD
ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಟ್ಟರು.

ವಿಮೋಚನಕಾಂಡ 39:20 (KANIRV)
Square Portrait Landscape 4K UHD
ಅವರು ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಏಫೋದ್ ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಿದರು.

ವಿಮೋಚನಕಾಂಡ 39:21 (KANIRV)
Square Portrait Landscape 4K UHD
ಎದೆಯಪದಕವು ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದರು.

ವಿಮೋಚನಕಾಂಡ 39:22 (KANIRV)
Square Portrait Landscape 4K UHD
ಬೆಚಲೇಲನು ಏಫೋದ್ ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು ನೀಲಿಬಣ್ಣದ ಬಟ್ಟೆಯಿಂದಲೇ ನೇಕಾರನ ಕೆಲಸದಿಂದ ಮಾಡಿದನು.

ವಿಮೋಚನಕಾಂಡ 39:23 (KANIRV)
Square Portrait Landscape 4K UHD
ತಲೆತೂರಿಸುವುದಕ್ಕೆ ಅದರಲ್ಲಿ ಕೊರಳು ಪಟ್ಟಿಯನ್ನು ಮಾಡಿ ಅದು ಹರಿಯದಂತೆ ಅದರ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿದನು.

ವಿಮೋಚನಕಾಂಡ 39:24 (KANIRV)
Square Portrait Landscape 4K UHD
ನಿಲುವಂಗಿಯ ಅಂಚಿನ ಸುತ್ತಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನು ಮಾಡಿದರು.

ವಿಮೋಚನಕಾಂಡ 39:25 (KANIRV)
Square Portrait Landscape 4K UHD
ಮತ್ತು ಚೊಕ್ಕ ಬಂಗಾರದಿಂದ ಗೆಜ್ಜೆಗಳನ್ನು ಮಾಡಿ ನಿಲುವಂಗಿಯ ಅಂಚಿನಲ್ಲಿ ದಾಳಿಂಬೆ ಚೆಂಡುಗಳ ನಡುವೆ ಇಟ್ಟರು.

ವಿಮೋಚನಕಾಂಡ 39:26 (KANIRV)
Square Portrait Landscape 4K UHD
ಚಿನ್ನದ ಗೆಜ್ಜೆಯೂ ದಾಳಿಂಬೆಯಂತಿರುವ ಚೆಂಡೂ ಒಂದಾದ ಮೇಲೆ ಒಂದು ದೇವರ ಸೇವೆಗಾಗಿ ಇರುವ ಆ ನಿಲುವಂಗಿಯ ಅಂಚಿನ ಸುತ್ತಲೂ ಇದ್ದವು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದನು.

ವಿಮೋಚನಕಾಂಡ 39:27 (KANIRV)
Square Portrait Landscape 4K UHD
ಅವರು ಆರೋನನಿಗೂ ಅವನ ಮಕ್ಕಳಿಗೂ ನಯವಾದ ನಾರಿನಿಂದ ನೇಕಾರರ ಕೆಲಸದ ರೀತಿಯಲ್ಲಿ ಮೇಲಂಗಿಗಳನ್ನೂ,

ವಿಮೋಚನಕಾಂಡ 39:28 (KANIRV)
Square Portrait Landscape 4K UHD
ನಯವಾದ ನಾರಿನಿಂದ ಮಹಾಯಾಜಕನ ಮುಂಡಾಸವನ್ನು, ಯಾಜಕರ ಅಲಂಕಾರವಾದ ಮುಂಡಾಸಗಳನ್ನು ಹಾಗೂ ಚಡ್ಡಿಗಳನ್ನು,

ವಿಮೋಚನಕಾಂಡ 39:29 (KANIRV)
Square Portrait Landscape 4K UHD
ಮತ್ತು ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದ ರೀತಿಯಲ್ಲಿ ನಡುಕಟ್ಟನ್ನೂ ಮಾಡಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.

ವಿಮೋಚನಕಾಂಡ 39:30 (KANIRV)
Square Portrait Landscape 4K UHD
ಅವರು ಚೊಕ್ಕ ಬಂಗಾರದಿಂದ ಪರಿಶುದ್ಧ ಕಿರೀಟಕ್ಕೆ ಬಾಸಿಂಗವನ್ನು ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ, ಯೆಹೋವನಿಗೆ ಮೀಸಲು ಎಂಬ ಲಿಪಿಯನ್ನು ಬರೆದರು.

ವಿಮೋಚನಕಾಂಡ 39:31 (KANIRV)
Square Portrait Landscape 4K UHD
ಅದನ್ನು ಮುಂಡಾಸಕ್ಕೆ ಜೋಡಿಸುವುದಕ್ಕಾಗಿ ನೀಲಿ ದಾರವನ್ನು ಅದಕ್ಕೆ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.

ವಿಮೋಚನಕಾಂಡ 39:32 (KANIRV)
Square Portrait Landscape 4K UHD
ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಅದನ್ನು ಮಾಡಿದರು.

ವಿಮೋಚನಕಾಂಡ 39:33 (KANIRV)
Square Portrait Landscape 4K UHD
ಆಗ ಅವರು ಆ ದೇವದರ್ಶನ ಗುಡಾರವನ್ನು ಮೋಶೆಯ ಬಳಿಗೆ ತೆಗೆದುಕೊಂಡು ಬಂದರು. ಗುಡಾರವನ್ನು, ಅದಕ್ಕೆ ಸಂಬಂಧಪಟ್ಟ ಉಪಕರಣಗಳೆಲ್ಲವನ್ನೂ ಅಂದರೆ ಅದರ ಕೊಂಡಿಗಳನ್ನು, ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು,

ವಿಮೋಚನಕಾಂಡ 39:34 (KANIRV)
Square Portrait Landscape 4K UHD
ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು, ಕಡಲಪ್ರಾಣಿಯ ತೊಗಲುಗಳಿಂದ ಮಾಡಿದ ಮೇಲ್ಹೊದಿಕೆಯನ್ನು ಹಾಗೂ ಗರ್ಭಗುಡಿಯನ್ನು ಮರೆಮಾಡುವ ಪರದೆಯನ್ನು,

ವಿಮೋಚನಕಾಂಡ 39:35 (KANIRV)
Square Portrait Landscape 4K UHD
ಆಜ್ಞಾಶಾಸನಗಳ ಮಂಜೂಷವನ್ನು, ಅದರ ಕೋಲುಗಳನ್ನು, ಕೃಪಾಸನವನ್ನು,

ವಿಮೋಚನಕಾಂಡ 39:36 (KANIRV)
Square Portrait Landscape 4K UHD
ಮೇಜನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,

ವಿಮೋಚನಕಾಂಡ 39:37 (KANIRV)
Square Portrait Landscape 4K UHD
ಚೊಕ್ಕ ಬಂಗಾರದ ದೀಪಸ್ತಂಭವನ್ನು, ಅದರ ಮೇಲಿಡಬೇಕಾದ ಹಣತೆಗಳನ್ನು, ಅದರ ಉಪಕರಣಗಳನ್ನು, ದೀಪಕ್ಕೆ ಬೇಕಾದ ಎಣ್ಣೆಯನ್ನು,

ವಿಮೋಚನಕಾಂಡ 39:38 (KANIRV)
Square Portrait Landscape 4K UHD
ಚಿನ್ನದ ಧೂಪವೇದಿಯನ್ನು, ಅಭಿಷೇಕತೈಲವನ್ನು, ಸುವಾಸನೆಯುಳ್ಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,

ವಿಮೋಚನಕಾಂಡ 39:39 (KANIRV)
Square Portrait Landscape 4K UHD
ತಾಮ್ರದ ಯಜ್ಞವೇದಿಯನ್ನು, ಅದರ ತಾಮ್ರದ ಜಾಲರಿಯನ್ನು, ಅದರ ಕೋಲುಗಳನ್ನು, ಉಪಕರಣಗಳನ್ನು,

ವಿಮೋಚನಕಾಂಡ 39:40 (KANIRV)
Square Portrait Landscape 4K UHD
ತೊಟ್ಟಿಯನ್ನು, ಅದರ ಪೀಠವನ್ನು, ಅಂಗಳದ ತೆರೆಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಯನ್ನು, ಅದರ ಹಗ್ಗಗಳನ್ನು, ಗೂಟಗಳನ್ನು, ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನು,

ವಿಮೋಚನಕಾಂಡ 39:41 (KANIRV)
Square Portrait Landscape 4K UHD
ದೇವಮಂದಿರದೊಳಗೆ ನಡೆಯುವ ದೇವರಕಾರ್ಯಗಳಿಗೆ ಅಲಂಕಾರ ವಸ್ತ್ರ ಅಂದರೆ ಆರೋನನಿಗೆ ಬೇಕಾದ ಪವಿತ್ರ ವಸ್ತ್ರಗಳನ್ನು ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳನ್ನು ತಂದರು.

ವಿಮೋಚನಕಾಂಡ 39:42 (KANIRV)
Square Portrait Landscape 4K UHD
ಯೆಹೋವನು ಮೋಶೆಗೆ ಆಜ್ಞಾಪಿಸಿದ್ದಂತೆಯೇ ಇಸ್ರಾಯೇಲರು ಆ ಕೆಲಸಗಳನ್ನೆಲ್ಲಾ ಮಾಡಿದ್ದರು.

ವಿಮೋಚನಕಾಂಡ 39:43 (KANIRV)
Square Portrait Landscape 4K UHD
ಅವರು ಮಾಡಿದ್ದ ಕೆಲಸವನ್ನು ಮೋಶೆಯು ಪರೀಕ್ಷಿಸಿ ನೋಡಲಾಗಿ ಯೆಹೋವನ ಅಪ್ಪಣೆಯಂತೆಯೇ ಅವರು ಎಲ್ಲವನ್ನು ಮಾಡಿದ್ದರಿಂದ ಮೋಶೆಯು ಅವರನ್ನು ಆಶೀರ್ವದಿಸಿದನು.

Available Bible Translations

American Standard Version
Exodus 39 (ASV) »
King James Version
Exodus 39 (KJV) »
GOD’S WORD® (GW)
Exodus 39 (GW) »
World English Bible
Exodus 39 (WEB) »
Louis Segond 1910
Exode 39 (LSG) »
Luther Bibel 1912
Exodus 39 (LUTH1912) »
इंडियन रिवाइज्ड वर्जन - हिंदी
निर्गमन 39 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਖ਼ਰੋਜ 39 (PANIRV) »
ভারতীয় সংশোধিত সংস্করণ - বাংলা
যাত্ৰা 39 (BENIRV) »
இந்தியன் ரீவைஸ்டு வேர்ஷன் - தமிழ்
யாத்திராகமம் 39 (TAMIRV) »
इंडियन रिवाइज्ड वर्जन - मराठी
निर्गम 39 (MARIRV) »
ఇండియన్ రేవిజ్డ్ వెర్షన్ - తెలుగు
నిర్గమకాండం 39 (TELIRV) »
ઇન્ડિયન રિવાયઝ્ડ વર્ઝન - ગુજરાતી
નિર્ગમન 39 (GUJIRV) »
الكتاب المقدس باللغة العربية، فان دايك
اَلْخُرُوجُ 39 (AVD) »
תנ ך עברי מודרני
שמות 39 (HEB) »
Bíblia Sagrada Português
Êxodo 39 (BSL) »
Kinh Thánh: Tiếng Việt
Xuất Hành 39 (VIE) »
Reina Valera Antigua
Éxodo 39 (RVA) »
La Sacra Bibbia
Esodo 39 (RIV) »
圣 经 简体中文和合本
出 埃 及 记 39 (CUVS) »
聖 經 繁體中文和合本
出 埃 及 記 39 (CUVT) »
Bibla e Shenjtë
Eksodi 39 (ALB) »
Svenska Bibeln 1917
2 Mosebok 39 (SV1917) »
Библия на русском
Исход 39 (RUSV) »
Українська Біблія
Вихід 39 (UKR) »
Szent Biblia - Magyar
2 Mózes 39 (KAR) »
Българска Библия
Изход 39 (BULG) »
Biblia Takatifu
Kutoka 39 (SWHULB) »
Kitaabka Quduuska Ah
Baxniintii 39 (SOM) »
De Heilige Schrift
Exodus 39 (NLD) »

ವಿಮೋಚನಕಾಂಡ (KANIRV) Chapter Selection

KANIRV Book Selection List