ವಿಮೋಚನಕಾಂಡ Chapter 35 KANIRV Bible Verse Images

ವಿಮೋಚನಕಾಂಡ 35 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ವಿಮೋಚನಕಾಂಡ 35 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ವಿಮೋಚನಕಾಂಡ 35:1 (KANIRV)
Square Portrait Landscape 4K UHD
ಮೋಶೆ ಇಸ್ರಾಯೇಲರ ಸಮೂಹವನ್ನೆಲ್ಲಾ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಹೀಗೆ ಅಪ್ಪಣೆ ಮಾಡಿದ್ದಾನೆ.

ವಿಮೋಚನಕಾಂಡ 35:2 (KANIRV)
Square Portrait Landscape 4K UHD
ಆರು ದಿನಗಳು ನೀವು ಕೆಲಸ ಮಾಡಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾಗಿರುವುದರಿಂದ ಅಂದು ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು; ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು;

ವಿಮೋಚನಕಾಂಡ 35:3 (KANIRV)
Square Portrait Landscape 4K UHD
ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು” ಹೇಳಿದನು.

ವಿಮೋಚನಕಾಂಡ 35:4 (KANIRV)
Square Portrait Landscape 4K UHD
ಮೋಶೆಯು ಇಸ್ರಾಯೇಲ್ಯರ ಸರ್ವಸಮೂಹಕ್ಕೆ ಹೀಗೆಂದನು: “ಯೆಹೋವನು ಆಜ್ಞಾಪಿಸಿದ್ದೇನೆಂದರೆ,

ವಿಮೋಚನಕಾಂಡ 35:5 (KANIRV)
Square Portrait Landscape 4K UHD
ನೀವು ನಿಮ್ಮ ನಿಮ್ಮೊಳಗೆ ಯೆಹೋವನಿಗಾಗಿ ಕಾಣಿಕೆಯನ್ನು ತೆಗೆದುಕೊಡಬೇಕು; ಒಳ್ಳೆಯ ಮನಸ್ಸಿರುವವರೆಲ್ಲರೂ ಕಾಣಿಕೆಯನ್ನು ತಂದುಕೊಡಬೇಕು. ಯೆಹೋವನಿಗೆ ತರಬೇಕಾದ ಆ ಕಾಣಿಕೆಯು ಎಂಥದಾಗಿರಬೇಕೆಂದರೆ; ಚಿನ್ನ, ಬೆಳ್ಳಿ, ತಾಮ್ರ ಎಂಬ ಲೋಹಗಳು,

ವಿಮೋಚನಕಾಂಡ 35:6 (KANIRV)
Square Portrait Landscape 4K UHD
ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಗಳು, ಉಣ್ಣೆಯ ಬಟ್ಟೆಗಳು,

ವಿಮೋಚನಕಾಂಡ 35:7 (KANIRV)
Square Portrait Landscape 4K UHD
ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, ಕಡಲಪ್ರಾಣಿಯ ತೊಗಲುಗಳು, ಜಾಲೀಮರವು, ದೀಪಕ್ಕೆ ಬೇಕಾದ ಎಣ್ಣೆಯು,

ವಿಮೋಚನಕಾಂಡ 35:8 (KANIRV)
Square Portrait Landscape 4K UHD
ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು,

ವಿಮೋಚನಕಾಂಡ 35:9 (KANIRV)
Square Portrait Landscape 4K UHD
ಏಫೋದ್ ಕವಚಕ್ಕೆ ಬೇಕಾಗಿರುವ ರತ್ನಗಳು ಹಾಗು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೇ.

ವಿಮೋಚನಕಾಂಡ 35:10 (KANIRV)
Square Portrait Landscape 4K UHD
“ನಿಮ್ಮಲ್ಲಿರುವ ಜ್ಞಾನಿಗಳಾದ ಶಿಲ್ಪಿಗಳು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು.

ವಿಮೋಚನಕಾಂಡ 35:11 (KANIRV)
Square Portrait Landscape 4K UHD
ಅವರು ಮಾಡಬೇಕಾದವುಗಳು ಯಾವುವೆಂದರೆ; ದೇವದರ್ಶನದ ಗುಡಾರ, ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು,

ವಿಮೋಚನಕಾಂಡ 35:12 (KANIRV)
Square Portrait Landscape 4K UHD
ಆಜ್ಞಾಶಾಸನಗಳ ಮಂಜೂಷ, ಅದನ್ನು ಹೊರುವ ಕಂಬಗಳು, ಕೃಪಾಸನ, ಅದನ್ನು ಮರೆಮಾಡುವ ಪರದೆ,

ವಿಮೋಚನಕಾಂಡ 35:13 (KANIRV)
Square Portrait Landscape 4K UHD
ಮೇಜು, ಅದರ ಕಂಬಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ನೈವೇದ್ಯದ ರೊಟ್ಟಿಗಳು,

ವಿಮೋಚನಕಾಂಡ 35:14 (KANIRV)
Square Portrait Landscape 4K UHD
ದೀಪಸ್ತಂಭ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ,

ವಿಮೋಚನಕಾಂಡ 35:15 (KANIRV)
Square Portrait Landscape 4K UHD
ಧೂಪವೇದಿ, ಅದರ ಕಂಬಗಳು, ಅಭಿಷೇಕ ತೈಲ, ಪರಿಮಳಧೂಪದ್ರವ್ಯ, ಗುಡಾರದ ಬಾಗಿಲಿನ ಪರದೆ,

ವಿಮೋಚನಕಾಂಡ 35:16 (KANIRV)
Square Portrait Landscape 4K UHD
ಯಜ್ಞವೇದಿ, ಅದರ ತಾಮ್ರದ ಜಾಳಿಗೆ, ಕಂಬಗಳು, ಉಪಕರಣಗಳು, ಬೋಗುಣಿ, ಅದರ ಪೀಠ,

ವಿಮೋಚನಕಾಂಡ 35:17 (KANIRV)
Square Portrait Landscape 4K UHD
ಅಂಗಳದ ತೆರೆಗಳು, ಕಂಬಗಳು, ಗದ್ದಿಗೆಕಲ್ಲುಗಳು, ಅಂಗಳದ ಬಾಗಿಲಿನ ಪರದೆ,

ವಿಮೋಚನಕಾಂಡ 35:18 (KANIRV)
Square Portrait Landscape 4K UHD
ಗುಡಾರದ ಗೂಟಗಳು, ಅಂಗಳದ ಗೂಟಗಳು, ಇವುಗಳ ಹಗ್ಗಗಳು,

ವಿಮೋಚನಕಾಂಡ 35:19 (KANIRV)
Square Portrait Landscape 4K UHD
ಪವಿತ್ರಸ್ಥಾನದ ಸೇವೆಗೆ ಬೇಕಾದ ಸುಂದರವಾದ ದೀಕ್ಷಾವಸ್ತ್ರಗಳು ಅಂದರೆ ಮಹಾಯಾಜಕನಾದ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು ಇವೇ” ಅಂದನು.

ವಿಮೋಚನಕಾಂಡ 35:20 (KANIRV)
Square Portrait Landscape 4K UHD
ಇಸ್ರಾಯೇಲರು ಮತ್ತು ಸಮೂಹದವರೆಲ್ಲರೂ ಮೋಶೆಯ ಎದುರಿನಿಂದ ಹೊರಟು ಹೋದರು.

ವಿಮೋಚನಕಾಂಡ 35:21 (KANIRV)
Square Portrait Landscape 4K UHD
ಯಾರನ್ನು ಹೃದಯವು ಪ್ರೇರೇಪಿಸಿತೋ, ಯಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಸಮಸ್ತ ಸೇವೆಗಳಿಗಾಗಿಯೂ, ಪವಿತ್ರ ವಸ್ತ್ರಗಳಿಗಾಗಿಯೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.

ವಿಮೋಚನಕಾಂಡ 35:22 (KANIRV)
Square Portrait Landscape 4K UHD
ಸಿದ್ಧಚಿತ್ತರಾದ ಗಂಡಸರೂ, ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.

ವಿಮೋಚನಕಾಂಡ 35:23 (KANIRV)
Square Portrait Landscape 4K UHD
ಯಾರಲ್ಲಿ ನೀಲಿ, ನೇರಳೆ ಹಾಗು ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಯು, ಉಣ್ಣೆ ಬಟ್ಟೆಯು, ಹದಮಾಡಿದ ಕೆಂಪುಬಣ್ಣದ ಟಗರಿನ ತೊಗಲುಗಳು ಹಾಗು ಕಡಲಪ್ರಾಣಿಯ ತೊಗಲುಗಳು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.

ವಿಮೋಚನಕಾಂಡ 35:24 (KANIRV)
Square Portrait Landscape 4K UHD
ಯಾರಲ್ಲಿ ಬೆಳ್ಳಿ ಇಲ್ಲವೇ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಯೆಹೋವನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು.

ವಿಮೋಚನಕಾಂಡ 35:25 (KANIRV)
Square Portrait Landscape 4K UHD
ನಿಪುಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲನ್ನೂ, ಹತ್ತಿಯ ನೂಲನ್ನೂ ನೇಯ್ದು ಆ ನೂಲನ್ನು ತಂದುಕೊಟ್ಟರು.

ವಿಮೋಚನಕಾಂಡ 35:26 (KANIRV)
Square Portrait Landscape 4K UHD
ಬುದ್ಧಿವಂತೆಯರಾದ ಬೇರೆ ಸ್ತ್ರೀಯರು ಆಡಿನ ಕೂದಲುಗಳನ್ನು ನೇಯ್ದು ತಂದುಕೊಟ್ಟರು.

ವಿಮೋಚನಕಾಂಡ 35:27 (KANIRV)
Square Portrait Landscape 4K UHD
ಅಧಿಪತಿಗಳು ಏಫೋದ್ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ಎದೆಪದಕದಲ್ಲಿ ಇಡಬೇಕಾದ ರತ್ನಗಳನ್ನು,

ವಿಮೋಚನಕಾಂಡ 35:28 (KANIRV)
Square Portrait Landscape 4K UHD
ದೀಪಕ್ಕೆ ಬೇಕಾದ ಎಣ್ಣೆಯನ್ನು ಹಾಗು ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನು ತಂದುಕೊಟ್ಟರು.

ವಿಮೋಚನಕಾಂಡ 35:29 (KANIRV)
Square Portrait Landscape 4K UHD
ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಕಾರ್ಯಗಳಿಗಾಗಿ ಆತನಿಗೆ ಕಾಣಿಕೆಗಳನ್ನು ತಂದುಕೊಡುವುದಕ್ಕೆ ಹೃದಯದಿಂದ ಪ್ರೇರೇಪಿತರಾಗಿ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ತಂದುಕೊಟ್ಟರು.

ವಿಮೋಚನಕಾಂಡ 35:30 (KANIRV)
Square Portrait Landscape 4K UHD
ಮೋಶೆಯು ಇಸ್ರಾಯೇಲ್ಯರಿಗೆ ಹೀಗೆಂದನು, “ನೋಡಿರಿ, ಯೆಹೋವನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಹೆಸರು ಹಿಡಿದು ಕರೆದಿದ್ದಾನೆ.

ವಿಮೋಚನಕಾಂಡ 35:31 (KANIRV)
Square Portrait Landscape 4K UHD
ಕಲಾತ್ಮಕವಾದ ವಿನ್ಯಾಸಗಳನ್ನು ಕಲ್ಪಿಸುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,

ವಿಮೋಚನಕಾಂಡ 35:32 (KANIRV)
Square Portrait Landscape 4K UHD
ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸವನ್ನು ಮಾಡುವುದಕ್ಕೂ,

ವಿಮೋಚನಕಾಂಡ 35:33 (KANIRV)
Square Portrait Landscape 4K UHD
ಅವನಿಗೆ ದೇವರಾತ್ಮವನ್ನು ಕೊಟ್ಟು ಅವನಿಗೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.

ವಿಮೋಚನಕಾಂಡ 35:34 (KANIRV)
Square Portrait Landscape 4K UHD
ಅದಲ್ಲದೆ ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೂ ಮತ್ತು ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನಿಗೂ ವರಕೊಟ್ಟಿದ್ದೇನೆ.

ವಿಮೋಚನಕಾಂಡ 35:35 (KANIRV)
Square Portrait Landscape 4K UHD
ಕಸೂತಿ ಕೆಲಸ ಕಲ್ಪಿಸುವವರು, ನೀಲಿ, ನೇರಳೆ ಕಡುಗೆಂಪು ವರ್ಣದ ದಾರದಿಂದಲೂ, ಹತ್ತಿಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು ಮಾಡುವ ಕೆಲಸಗಳನ್ನು ಕಸಿಮಾಡುವುದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.”

Available Bible Translations

American Standard Version (ASV)
Exodus 35 (ASV) »
King James Version (KJV)
Exodus 35 (KJV) »
GOD’S WORD® (GW)
Exodus 35 (GW) »
Berean Bible (BSB)
Exodus 35 (BSB) »
World English Bible (WEB)
Exodus 35 (WEB) »
French Bible (LSG)
Exode 35 (LSG) »
German Bible (LUTH1912)
Exodus 35 (LUTH1912) »
Punjabi Bible (PANIRV)
ਖ਼ਰੋਜ 35 (PANIRV) »
Hebrew Bible (HEB)
שמות 35 (HEB) »
Portuguese Bible (BSL)
Êxodo 35 (BSL) »
Vietnamese Bible (VIE)
Xuất Hành 35 (VIE) »
Spanish Bible (RVA)
Éxodo 35 (RVA) »
Italian Bible (RIV)
Esodo 35 (RIV) »
Chinese Simplified (CUVS)
出 埃 及 记 35 (CUVS) »
Chinese Traditional (CUVT)
出 埃 及 記 35 (CUVT) »
Albanian Bible (ALB)
Eksodi 35 (ALB) »
Swedish Bible (SV1917)
2 Mosebok 35 (SV1917) »
Russian Bible (RUSV)
Исход 35 (RUSV) »
Ukrainian Bible (UKR)
Вихід 35 (UKR) »
Hungarian Bible (KAR)
2 Mózes 35 (KAR) »
Bulgarian Bible (BULG)
Изход 35 (BULG) »
Norwegian Bible (NORSK)
2 Mosebok 35 (NORSK) »

ವಿಮೋಚನಕಾಂಡ (KANIRV) Chapter Selection

KANIRV Book Selection List