ಆದಿಕಾಂಡ Chapter 26 KANIRV Bible Verse Images

ಆದಿಕಾಂಡ 26 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಆದಿಕಾಂಡ 26 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಆದಿಕಾಂಡ 26:1 (KANIRV)
Square Portrait Landscape 4K UHD
ಅಬ್ರಹಾಮನ ಕಾಲದಲ್ಲಿ ಬಂದ ಮೊದಲನೆಯ ಬರಗಾಲವಲ್ಲದೆ ಇನ್ನೊಂದು ಬರಗಾಲವು ಕಾನಾನ್ ದೇಶಕ್ಕೆ ಬಂದಿತು. ಆಗ ಇಸಾಕನು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಗೆರಾರಿಗೆ ಹೋದನು.

ಆದಿಕಾಂಡ 26:2 (KANIRV)
Square Portrait Landscape 4K UHD
ಅಲ್ಲಿ ಯೆಹೋವನು ಇಸಾಕನಿಗೆ ದರ್ಶನಕೊಟ್ಟು, “ನೀನು ಐಗುಪ್ತ ದೇಶಕ್ಕೆ ಇಳಿದು ಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು.

ಆದಿಕಾಂಡ 26:3 (KANIRV)
Square Portrait Landscape 4K UHD
ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ, ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಹೀಗೆ ನಿನ್ನ ತಂದೆಯಾದ ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು,

ಆದಿಕಾಂಡ 26:4 (KANIRV)
Square Portrait Landscape 4K UHD
ನಿನ್ನ ಸಂತತಿಯವರನ್ನು ಆಕಾಶದಲ್ಲಿರುವ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವುದು.

ಆದಿಕಾಂಡ 26:5 (KANIRV)
Square Portrait Landscape 4K UHD
ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ ನನ್ನ ವಿಧಿಗಳನ್ನು, ನನ್ನ ಆಜ್ಞೆಗಳನ್ನು, ನನ್ನ ನೇಮಗಳನ್ನು, ನನ್ನ ಕಟ್ಟಳೆಗಳನ್ನು, ಕೈಗೊಂಡು ನಡೆದನು” ಎಂದನು.

ಆದಿಕಾಂಡ 26:6 (KANIRV)
Square Portrait Landscape 4K UHD
ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.

ಆದಿಕಾಂಡ 26:7 (KANIRV)
Square Portrait Landscape 4K UHD
ಆ ಸ್ಥಳದ ಜನರು ಅವನ ಹೆಂಡತಿಯನ್ನು ನೋಡಿ ಆಕೆಯನ್ನು ಕುರಿತು ವಿಚಾರಿಸಿದಾಗ ಅವನು ರೆಬೆಕ್ಕಳು ಸುಂದರಿಯಾಗಿರುವುದರಿಂದ ಈ ಸ್ಥಳದ ಜನರು ಈಕೆಯ ನಿಮಿತ್ತ ನನ್ನನ್ನು ಕೊಂದಾರು ಅಂದುಕೊಂಡು ಆಕೆಯನ್ನು ತನ್ನ ಹೆಂಡತಿ ಎಂದು ಹೇಳುವುದಕ್ಕೆ ಭಯಪಟ್ಟು ತಂಗಿಯಾಗಬೇಕು ಎಂದು ಹೇಳಿದನು.

ಆದಿಕಾಂಡ 26:8 (KANIRV)
Square Portrait Landscape 4K UHD
ಅವನು ಆ ಸ್ಥಳದಲ್ಲಿ ಬಹಳ ದಿನ ಇದ್ದ ಮೇಲೆ ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಿಕಿಯಿಂದ ನೋಡಿದಾಗ ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುವುದನ್ನು ಕಂಡನು.

ಆದಿಕಾಂಡ 26:9 (KANIRV)
Square Portrait Landscape 4K UHD
ಆಗ ಅಬೀಮೆಲೆಕನು ಇಸಾಕನನ್ನು ಕರೆಯಿಸಿ, “ನಿಶ್ಚಯವಾಗಿ ಈಕೆಯ ನಿನ್ನ ಹೆಂಡತಿಯಲ್ಲವೇ, ತಂಗಿ ಎಂದು ಯಾಕೆ ಹೇಳಿದೆ” ಎಂದು ಕೇಳಲು ಇಸಾಕನು, “ಜನರು ಈಕೆಯ ನಿಮಿತ್ತ ನನ್ನನ್ನು ಕೊಂದಾರೆಂದು ಹಾಗೆ ಹೇಳಿದೆನು” ಎಂದನು.

ಆದಿಕಾಂಡ 26:10 (KANIRV)
Square Portrait Landscape 4K UHD
ಅದಕ್ಕೆ ಅಬೀಮೆಲೆಕನು, “ನೀನು ನಮಗೆ ಹೀಗೆ ಯಾಕೆ ಮಾಡಿದೆ? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯೊಡನೆ ಸಂಗಮಿಸುವುದಕ್ಕೆ ಆಸ್ಪದವಾಗುತ್ತಿತ್ತು. ನಿನ್ನ ಮೂಲಕ ನಮಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲಾ?”

ಆದಿಕಾಂಡ 26:11 (KANIRV)
Square Portrait Landscape 4K UHD
ಎಂದು ಹೇಳಿ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಕೇಡುಮಾಡುವವನಿಗೆ ತಪ್ಪದೆ ಮರಣ ದಂಡನೆಯಾಗುವುದು” ಎಂದು ಆಜ್ಞೆ ಮಾಡಿದನು.

ಆದಿಕಾಂಡ 26:12 (KANIRV)
Square Portrait Landscape 4K UHD
ಇಸಾಕನು ಆ ದೇಶದಲ್ಲಿ ಬೀಜವನ್ನು ಬಿತ್ತಿ ಅದೇ ವರ್ಷದಲ್ಲಿ ನೂರರಷ್ಟು ಬೆಳೆಯನ್ನು ಕೊಯ್ದನು; ಯೆಹೋವನು ಅವನನ್ನು ಅಭಿವೃದ್ಧಿಪಡಿಸಿದನು;

ಆದಿಕಾಂಡ 26:13 (KANIRV)
Square Portrait Landscape 4K UHD
ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು.

ಆದಿಕಾಂಡ 26:14 (KANIRV)
Square Portrait Landscape 4K UHD
ಅವನಿಗೆ ದನಕುರಿಗಳೂ, ಸಂಪತ್ತೂ, ಸೇವಕರು ಹೇರಳವಾಗಿದ್ದುದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು.

ಆದಿಕಾಂಡ 26:15 (KANIRV)
Square Portrait Landscape 4K UHD
ಅವನ ತಂದೆಯಾದ ಅಬ್ರಹಾಮನ ಸೇವಕರು ಅಬ್ರಹಾಮನ ಕಾಲದಲ್ಲೇ ತೋಡಿದ್ದ ಬಾವಿಗಳನ್ನು ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು.

ಆದಿಕಾಂಡ 26:16 (KANIRV)
Square Portrait Landscape 4K UHD
ಹೀಗಿರಲಾಗಿ ಅಬೀಮೆಲೆಕನು ಇಸಾಕನಿಗೆ, “ನೀನು ನಮಗಿಂತ ಬಹು ಬಲಿಷ್ಠನಾಗಿದ್ದೀ;

ಆದಿಕಾಂಡ 26:17 (KANIRV)
Square Portrait Landscape 4K UHD
ಆದ್ದರಿಂದ ನಮ್ಮ ಬಳಿಯಿಂದ ಹೊರಟುಹೋಗಬೇಕು” ಎಂದು ಹೇಳಲು ಇಸಾಕನು ಅಲ್ಲಿಂದ ಹೋಗಿ ಗೆರಾರ್ ತಗ್ಗಿನ ಬಯಲಿನಲ್ಲಿ ಬಿಡಾರ ಮಾಡಿಕೊಂಡು ಅಲ್ಲಿ ವಾಸವಾಗಿದ್ದನು.

ಆದಿಕಾಂಡ 26:18 (KANIRV)
Square Portrait Landscape 4K UHD
ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತ ನಂತರ ಫಿಲಿಷ್ಟಿಯರು ಮುಚ್ಚಿ ಹಾಕಿದ್ದರಿಂದ ಇಸಾಕನು ಅವುಗಳನ್ನು ತಿರುಗಿ ಅಗೆಸಿ, ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು.

ಆದಿಕಾಂಡ 26:19 (KANIRV)
Square Portrait Landscape 4K UHD
ಇಸಾಕನ ಸೇವಕರು ತಗ್ಗಿನಲ್ಲಿ ಅಗೆಯುವಾಗ ಅವರಿಗೆ ಉಕ್ಕುವ ಒರತೆಯ ನೀರಿನ ಬಾವಿಯು ಸಿಕ್ಕಿತು.

ಆದಿಕಾಂಡ 26:20 (KANIRV)
Square Portrait Landscape 4K UHD
ಗೆರಾರಿನ ದನ ಕಾಯುವವರು ಬಂದು ಆ ನೀರು ತಮ್ಮದು ಎಂದು ಹೇಳಿ ಇಸಾಕನ ದನ ಕಾಯುವವರ ಸಂಗಡ ಜಗಳವಾಡಿದ್ದರಿಂದ ಇಸಾಕನು ಆ ಬಾವಿಗೆ “ಏಸೆಕ್” ಎಂದು ಹೆಸರಿಟ್ಟನು.

ಆದಿಕಾಂಡ 26:21 (KANIRV)
Square Portrait Landscape 4K UHD
ತರುವಾಯ ಅವನ ಜನರು ಬೇರೊಂದು ಬಾವಿಯನ್ನು ತೋಡಿದಾಗ ಆ ದೇಶದವರು ಅದಕ್ಕಾಗಿಯೂ ಜಗಳವಾಡಿದ್ದರಿಂದ ಅವನು ಅದಕ್ಕೆ “ಸಿಟ್ನಾ” ಎಂದು ಹೆಸರಿಟ್ಟನು.

ಆದಿಕಾಂಡ 26:22 (KANIRV)
Square Portrait Landscape 4K UHD
ಅವನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನೂ ತೋಡಿಸಿದಾಗ ಅದರ ವಿಷಯದಲ್ಲಿ ಯಾರೂ ಜಗಳವಾಡದೆ ಹೋದುದರಿಂದ ಅವನು, “ಈಗ ಯೆಹೋವನು ನಮಗೋಸ್ಕರ ಸ್ಥಳ ಮಾಡಿದ್ದರಿಂದ ಅಭಿವೃದ್ಧಿಯಾಗುವೆವು” ಎಂದು ಹೇಳಿ ಅದಕ್ಕೆ “ರೆಹೋಬೋತ್” ಎಂದು ಹೆಸರಿಟ್ಟನು.

ಆದಿಕಾಂಡ 26:23 (KANIRV)
Square Portrait Landscape 4K UHD
ಇಸಾಕನು ಅಲ್ಲಿಂದ ಹೊರಟು ಗಟ್ಟಾ ಹತ್ತಿ ಬೇರ್ಷೆಬಕ್ಕೆ ಬಂದನು.

ಆದಿಕಾಂಡ 26:24 (KANIRV)
Square Portrait Landscape 4K UHD
ಆ ರಾತ್ರಿ ಯೆಹೋವನು ಅವನಿಗೆ ಕಾಣಿಸಿಕೊಂಡು, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು; ನೀನು ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ಸೇವಕನಾದ ಅಬ್ರಹಾಮನ ನಿಮಿತ್ತ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು” ಎಂದು ಹೇಳಿದನು.

ಆದಿಕಾಂಡ 26:25 (KANIRV)
Square Portrait Landscape 4K UHD
ಇಸಾಕನು ಯಜ್ಞವೇದಿಯನ್ನು ಕಟ್ಟಿಸಿ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿ ಅಲ್ಲಿ ತನ್ನ ಗುಡಾರವನ್ನು ಹಾಕಿಸಿಕೊಂಡನು.

ಆದಿಕಾಂಡ 26:26 (KANIRV)
Square Portrait Landscape 4K UHD
ಅಲ್ಲಿಯೂ ಇಸಾಕನ ಸೇವಕರು ಬಾವಿಯನ್ನು ಅಗೆದರು. ಆ ಸಮಯದಲ್ಲಿ ಅಬೀಮೆಲೆಕನು ತನ್ನ ಮಂತ್ರಿಯಾದ ಅಹುಜ್ಜತನನ್ನೂ, ಸೇನಾಪತಿಯಾದ ಫೀಕೋಲನನ್ನೂ ಸಂಗಡ ಕರೆದುಕೊಂಡು ಗೆರಾರಿನಿಂದ ಇಸಾಕನ ಬಳಿಗೆ ಬರಲು ಇಸಾಕನು.

ಆದಿಕಾಂಡ 26:27 (KANIRV)
Square Portrait Landscape 4K UHD
ನೀವು, “ನನ್ನನ್ನು ದ್ವೇಷಿಸಿ ನಿಮ್ಮ ಬಳಿಯಿಂದ ಕಳುಹಿಸಿ ಬಿಟ್ಟಿರಲ್ಲಾ; ಈಗ ನನ್ನ ಬಳಿಗೆ ಯಾಕೆ ಬಂದಿರಿ” ಎಂದು ಅವರನ್ನು ಕೇಳಿದ್ದಕ್ಕೆ ಅವರು,

ಆದಿಕಾಂಡ 26:28 (KANIRV)
Square Portrait Landscape 4K UHD
“ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ ಕಂಡು ಬಂದುದರಿಂದ ನೀನೂ, ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾಗಿ ಒಡಂಬಡಿಕೆ ಮಾಡಿಕೊಳ್ಳೋಣವೆಂದು ಆಲೋಚಿಸಿದೆವು.

ಆದಿಕಾಂಡ 26:29 (KANIRV)
Square Portrait Landscape 4K UHD
ನಾವು ನಿನಗೆ ಯಾವ ಕೇಡನ್ನೂ ಮಾಡದೆ ಹಿತವನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದೆವಲ್ಲಾ. ಅದರಂತೆ ನೀನು ನಮಗೆ ಕೇಡನ್ನು ಮಾಡುವುದಿಲ್ಲವೆಂಬುದಾಗಿ ಪ್ರಮಾಣಮಾಡಬೇಕು. ನೀನು ಈಗ ಯೆಹೋವನ ದಯೆಯನ್ನು ಹೊಂದಿದವನಾಗಿದ್ದೀಯಲ್ಲವೇ” ಎಂದು ಹೇಳಿದರು.

ಆದಿಕಾಂಡ 26:30 (KANIRV)
Square Portrait Landscape 4K UHD
ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ಭೋಜನ ಉಪಚಾರಗಳನ್ನು ಮುಗಿಸಿಕೊಂಡರು.

ಆದಿಕಾಂಡ 26:31 (KANIRV)
Square Portrait Landscape 4K UHD
ಅವರು ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಒಡಂಬಡಿಕೆ ಮಾಡಿಕೊಂಡರು. ಇಸಾಕನು ಅವರನ್ನು ಕಳುಹಿಸಲು ಅವರು ಸಮಾಧಾನದಿಂದ ಹೊರಟುಹೋದರು.

ಆದಿಕಾಂಡ 26:32 (KANIRV)
Square Portrait Landscape 4K UHD
ಅದೇ ದಿನದಲ್ಲಿ ಇಸಾಕನ ಸೇವಕರು ಬಂದು, “ನಮಗೆ ನೀರು ಸಿಕ್ಕಿತು” ಎಂದು ಹೇಳಿ ತಾವು ತೋಡಿದ ಬಾವಿಯ ಸಂಗತಿಯನ್ನು ತಿಳಿಸಿದರು.

ಆದಿಕಾಂಡ 26:33 (KANIRV)
Square Portrait Landscape 4K UHD
ಅವನು ಆ ಬಾವಿಗೆ “ಷಿಬಾ” ಎಂದು ಹೆಸರಿಟ್ಟನು. ಆದುದರಿಂದ ಅಲ್ಲಿರುವ ಊರಿಗೆ ಇಂದಿನವರೆಗೂ “ಬೇರ್ಷೆಬ” ಎಂದು ಹೆಸರಾಯಿತು.

ಆದಿಕಾಂಡ 26:34 (KANIRV)
Square Portrait Landscape 4K UHD
ಏಸಾವನು ನಲವತ್ತು ವರ್ಷದವನಾದಾಗ ಹಿತ್ತಿಯನಾದ ಬೇರಿಯ ಮಗಳಾದ ಯೆಹೂದೀತಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆ ಮಾಡಿಕೊಂಡನು.

ಆದಿಕಾಂಡ 26:35 (KANIRV)
Square Portrait Landscape 4K UHD
ಇವರ ದೆಸೆಯಿಂದ ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಉಂಟಾಯಿತು.

Available Bible Translations

American Standard Version (ASV)
Genesis 26 (ASV) »
King James Version (KJV)
Genesis 26 (KJV) »
GOD’S WORD® (GW)
Genesis 26 (GW) »
Berean Bible (BSB)
Genesis 26 (BSB) »
World English Bible (WEB)
Genesis 26 (WEB) »
French Bible (LSG)
Genèse 26 (LSG) »
German Bible (LUTH1912)
Genesis 26 (LUTH1912) »
Bengali Bible (BENIRV)
আদি 26 (BENIRV) »
Hebrew Bible (HEB)
בראשית 26 (HEB) »
Portuguese Bible (BSL)
Gênesis 26 (BSL) »
Vietnamese Bible (VIE)
Sáng Thế 26 (VIE) »
Spanish Bible (RVA)
Génesis 26 (RVA) »
Italian Bible (RIV)
Genesi 26 (RIV) »
Chinese Simplified (CUVS)
创 世 纪 26 (CUVS) »
Chinese Traditional (CUVT)
創 世 記 26 (CUVT) »
Albanian Bible (ALB)
Zanafilla 26 (ALB) »
Swedish Bible (SV1917)
1 Mosebok 26 (SV1917) »
Russian Bible (RUSV)
Бытие 26 (RUSV) »
Ukrainian Bible (UKR)
Буття 26 (UKR) »
Hungarian Bible (KAR)
1 Mózes 26 (KAR) »
Bulgarian Bible (BULG)
Битие 26 (BULG) »
Japanese Bible (JPN)
創世記 26 (JPN) »
Norwegian Bible (NORSK)
1 Mosebok 26 (NORSK) »

ಆದಿಕಾಂಡ (KANIRV) Chapter Selection

KANIRV Book Selection List