ಆದಿಕಾಂಡ Chapter 41 KANIRV Bible Verse Images

ಆದಿಕಾಂಡ 41 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಆದಿಕಾಂಡ 41 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಆದಿಕಾಂಡ 41:1 (KANIRV)
Square Portrait Landscape 4K UHD
ಎರಡು ವರ್ಷಗಳು ಕಳೆದ ಮೇಲೆ ಫರೋಹನಿಗೆ ಕನಸುಬಿತ್ತು. ಆ ಕನಸಿನಲ್ಲಿ ಅವನು ನೈಲ್ ನದಿಯ ತೀರದಲ್ಲಿ ನಿಂತಿದ್ದನು.

ಆದಿಕಾಂಡ 41:2 (KANIRV)
Square Portrait Landscape 4K UHD
ಅಷ್ಟರಲ್ಲಿ ಲಕ್ಷಣವಾದ ಏಳು ಕೊಬ್ಬಿದ ಆಕಳುಗಳು ಆ ನೈಲ್ ನದಿಯೊಳಗಿಂದ ಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು.

ಆದಿಕಾಂಡ 41:3 (KANIRV)
Square Portrait Landscape 4K UHD
ಅವುಗಳ ಹಿಂದೆ ಅವಲಕ್ಷಣವಾದ ಹಾಗೂ ಬಡಕಲಾದ ಏಳು ಆಕಳುಗಳು ನೈಲ್ ನದಿಯೊಳಗಿಂದ ಬಂದು ಮೊದಲು ಕಾಣಿಸಿದ ಆಕಳುಗಳ ಹತ್ತಿರ ನದಿಯ ತೀರದಲ್ಲಿ ನಿಂತವು.

ಆದಿಕಾಂಡ 41:4 (KANIRV)
Square Portrait Landscape 4K UHD
ಅವಲಕ್ಷಣವಾದ ಈ ಬಡ ಏಳು ಆಕಳುಗಳು ಲಕ್ಷಣವಾದ ಆ ಕೊಬ್ಬಿದ ಆಕಳುಗಳನ್ನು ತಿಂದು ಬಿಟ್ಟವು. ಆಗ ಫರೋಹನಿಗೆ ಎಚ್ಚರವಾಯಿತು.

ಆದಿಕಾಂಡ 41:5 (KANIRV)
Square Portrait Landscape 4K UHD
ಅವನು ಮತ್ತೆ ನಿದ್ರೆಮಾಡಿದಾಗ ಮತ್ತೊಂದು ಕನಸು ಬಿತ್ತು. ಅದೇನೆಂದರೆ, ಒಳ್ಳೆಯ ಪುಷ್ಟಿಯುಳ್ಳ ಏಳು ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು.

ಆದಿಕಾಂಡ 41:6 (KANIRV)
Square Portrait Landscape 4K UHD
ಅವುಗಳ ಹಿಂದೆ ಮೂಡಣ ಗಾಳಿಯಿಂದ ಬತ್ತಿ ಒಣಗಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.

ಆದಿಕಾಂಡ 41:7 (KANIRV)
Square Portrait Landscape 4K UHD
ಆ ಬತ್ತಿ ಹೋಗಿದ್ದ ಈ ತೆನೆಗಳು ಆ ಏಳು ಪುಷ್ಟಿಯುಳ್ಳ ತೆನೆಗಳನ್ನು ನುಂಗಿಬಿಟ್ಟವು. ಆಗ ಫರೋಹನು ಎಚ್ಚೆತ್ತು, ಅದನ್ನು ಕನಸೆಂದು ತಿಳಿದುಕೊಂಡನು.

ಆದಿಕಾಂಡ 41:8 (KANIRV)
Square Portrait Landscape 4K UHD
ಬೆಳಿಗ್ಗೆ ಫರೋಹನು ಮನದಲ್ಲಿ ಕಳವಳಗೊಂಡು, ಐಗುಪ್ತದೇಶದಲ್ಲಿದ್ದ ಎಲ್ಲಾ ಜೋಯಿಸರನ್ನೂ, ವಿದ್ವಾಂಸರನ್ನೂ ಬರುವಂತೆ ಹೇಳಿಕಳುಹಿಸಿದನು. ಅವರಿಗೆ ತನ್ನ ಕನಸನ್ನು ತಿಳಿಸಲಾಗಿ, ಅದರ ಅರ್ಥವನ್ನು ಅವನಿಗೆ ಹೇಳ ಬಲ್ಲವರು ಅವರಲ್ಲಿ ಒಬ್ಬನೂ ಸಿಕ್ಕಲಿಲ್ಲ.

ಆದಿಕಾಂಡ 41:9 (KANIRV)
Square Portrait Landscape 4K UHD
ಹೀಗಿರುವಾಗ ಪಾನದಾಯಕರಲ್ಲಿ ಮುಖ್ಯಸ್ಥನು ಫರೋಹನಿಗೆ, “ಅರಸನೇ, ಈ ಹೊತ್ತು ನನ್ನ ತಪ್ಪುಗಳನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ.

ಆದಿಕಾಂಡ 41:10 (KANIRV)
Square Portrait Landscape 4K UHD
ಫರೋಹನು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು ನನ್ನನ್ನೂ, ಅಡಿಗೆ ಭಟ್ಟರಲ್ಲಿ ಮುಖ್ಯಸ್ಥನನ್ನೂ ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿ ಇಟ್ಟಾಗ,

ಆದಿಕಾಂಡ 41:11 (KANIRV)
Square Portrait Landscape 4K UHD
ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು. ಒಬ್ಬೊಬ್ಬನ ಕನಸಿಗೆ ಬೇರೆ ಬೇರೆ ಅರ್ಥವಿತ್ತು.

ಆದಿಕಾಂಡ 41:12 (KANIRV)
Square Portrait Landscape 4K UHD
ಅಲ್ಲಿ ನಮ್ಮ ಸಂಗಡ ಇಬ್ರಿಯನಾದ ಒಬ್ಬ ಪ್ರಾಯಸ್ಥನಿದ್ದನು. ಅವನು ಮೈಗಾವಲಿನವರ ಅಧಿಪತಿಯ ಸೇವಕನು. ನಾವು ಅವನಿಗೆ ನಮ್ಮ ಕನಸುಗಳನ್ನು ತಿಳಿಸಿದಾಗ ಅವನು ಅವುಗಳ ಅರ್ಥವನ್ನು ನಮಗೆ ತಿಳಿಸಿದನು. ನಮ್ಮ ನಮ್ಮ ಕನಸಿನ ಪ್ರಕಾರ ಅರ್ಥವನ್ನು ಹೇಳಿದನು.

ಆದಿಕಾಂಡ 41:13 (KANIRV)
Square Portrait Landscape 4K UHD
ಮಾತ್ರವಲ್ಲದೆ ಅವನು ನಮಗೆ ಹೇಳಿದ ಅರ್ಥಕ್ಕೆ ಸರಿಯಾಗಿ ಕಾರ್ಯವು ನಡೆಯಿತು. ಅವನು ಹೇಳಿದಂತೆಯೇ ನನ್ನ ಉದ್ಯೋಗವು ಪುನಃ ನನಗೆ ದೊರಕಿತು. ಅಡಿಗೆ ಭಟ್ಟರ ಮುಖ್ಯಸ್ಥನೋ ಗಲ್ಲಿಗೆ ಹಾಕಲ್ಪಟ್ಟನು” ಎಂದನು.

ಆದಿಕಾಂಡ 41:14 (KANIRV)
Square Portrait Landscape 4K UHD
ಫರೋಹನು ಇದನ್ನು ಕೇಳಿದಾಗ ಯೋಸೇಫನನ್ನು ಕರೆದುಕೊಂಡು ಬರಲು ಹೇಳಿಕಳುಹಿಸಿದನು. ಯೋಸೇಫನನು ಬೇಗನೆ ಸೆರೆಮನೆಯಿಂದ ಬಿಡುಗಡೆ ಮಾಡಿದರು. ಆತನು ಕ್ಷೌರಮಾಡಿಸಿಕೊಂಡು ಬಟ್ಟೆ ಬದಲಾಯಿಸಿಕೊಂಡು ಫರೋಹನ ಸನ್ನಿಧಿಗೆ ಬಂದನು.

ಆದಿಕಾಂಡ 41:15 (KANIRV)
Square Portrait Landscape 4K UHD
ಆಗ ಫರೋಹನು ಯೋಸೇಫನಿಗೆ, “ನಾನು ಒಂದು ಕನಸನ್ನು ಕಂಡಿದ್ದೇನೆ. ಅದರ ಅರ್ಥವನ್ನು ಹೇಳ ಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳ ಬಲ್ಲವನೆಂಬ ವರ್ತಮಾನವನ್ನು ಕೇಳಿದ್ದೇನೆ” ಎಂದು ಹೇಳಿದನು.

ಆದಿಕಾಂಡ 41:16 (KANIRV)
Square Portrait Landscape 4K UHD
ಅದಕ್ಕೆ ಯೋಸೇಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ. ಆದರೆ ದೇವರು ಫರೋಹನಿಗೆ ಶುಭಕರವಾದ ಉತ್ತರವನ್ನೂ ಕೊಡುವನು” ಎಂದು ಹೇಳಿದನು.

ಆದಿಕಾಂಡ 41:17 (KANIRV)
Square Portrait Landscape 4K UHD
ಆಗ ಫರೋಹನು ಯೋಸೇಫನಿಗೆ, “ನನ್ನ ಕನಸಿನೊಳಗೆ ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು.”

ಆದಿಕಾಂಡ 41:18 (KANIRV)
Square Portrait Landscape 4K UHD
ನೈಲ್ ನದಿಯೊಳಗಿಂದ ಲಕ್ಷಣವಾದ ಏಳು ಕೊಬ್ಬಿದ ಆಕಳುಗಳು ಬಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದವು.

ಆದಿಕಾಂಡ 41:19 (KANIRV)
Square Portrait Landscape 4K UHD
ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬಡಕಲಾದ ಆಕಳುಗಳು ಏರಿ ಬಂದವು. ಇಂಥ ಆಕಳುಗಳನ್ನು ನಾನು ಐಗುಪ್ತದೇಶದಲ್ಲಿ ಎಲ್ಲಿಯೂ ನೋಡಿರಲಿಲ್ಲ.

ಆದಿಕಾಂಡ 41:20 (KANIRV)
Square Portrait Landscape 4K UHD
ಅದಲ್ಲದೆ ಅವಲಕ್ಷಣವಾದ ಆ ಬಡ ಆಕಳುಗಳು ಮೊದಲು ಕಾಣಿಸಿದ ಆ ಏಳು ಕೊಬ್ಬಿದ ಆಕಳುಗಳನ್ನು ತಿಂದು ಬಿಟ್ಟವು.

ಆದಿಕಾಂಡ 41:21 (KANIRV)
Square Portrait Landscape 4K UHD
ಇವು ಅವುಗಳನ್ನು ತಿಂದ ಮೇಲೂ ಅವು ತಿಂದ ಹಾಗೆ ತೋರಿಬರಲಿಲ್ಲ. ಅವು ಮೊದಲಿದ್ದಂತೆ ಬಡವಾಗಿಯೇ ಇದ್ದವು. ಆಗ ನನಗೆ ಎಚ್ಚರವಾಯಿತು.

ಆದಿಕಾಂಡ 41:22 (KANIRV)
Square Portrait Landscape 4K UHD
“ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಏಳು ಒಳ್ಳೆ ಪುಷ್ಟಿಯುಳ್ಳ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿ ಬಂದವು.

ಆದಿಕಾಂಡ 41:23 (KANIRV)
Square Portrait Landscape 4K UHD
ಅವುಗಳ ಹಿಂದೆ ಮೂಡಣ ಗಾಳಿಯಿಂದ ಬತ್ತಿ ಒಣಗಿ ಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.

ಆದಿಕಾಂಡ 41:24 (KANIRV)
Square Portrait Landscape 4K UHD
ಬತ್ತಿ ಹೋಗಿದ್ದ ತೆನೆಗಳು ಆ ಏಳು ಒಳ್ಳೆ ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆನು. ಆದರೆ ಅವುಗಳ ಅರ್ಥವನ್ನು ವಿವರಿಸಿ ಹೇಳುವುದಕ್ಕೆ ಯಾರಿಂದಲೂ ಆಗಲಿಲ್ಲ” ಎಂದನು.

ಆದಿಕಾಂಡ 41:25 (KANIRV)
Square Portrait Landscape 4K UHD
ಯೋಸೇಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳು ಒಂದೇಯಾಗಿದೆ. ದೇವರು ತಾನು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾನೆ.

ಆದಿಕಾಂಡ 41:26 (KANIRV)
Square Portrait Landscape 4K UHD
ಆ ಏಳು ಒಳ್ಳೆ ಆಕಳುಗಳು ಏಳು ವರ್ಷಗಳು ಆ ಏಳು ಒಳ್ಳೆ ತೆನೆಗಳು ಏಳು ವರ್ಷಗಳು. ಎರಡು ಕನಸುಗಳ ಅರ್ಥ ಒಂದೇ.

ಆದಿಕಾಂಡ 41:27 (KANIRV)
Square Portrait Landscape 4K UHD
ಒಳ್ಳೆ ಆಕಳುಗಳ ಹಿಂದೆ ಬಂದ ಅವಲಕ್ಷಣವಾದ ಬಡ ಆಕಳುಗಳೂ ಮೂಡಣ ಗಾಳಿಯಿಂದ ಬತ್ತಿ ಹೋಗಿದ್ದ ಆ ಏಳು ತೆನೆಗಳೂ ಬರವುಂಟಾಗುವ ಏಳು ವರ್ಷಗಳನ್ನು ಸೂಚಿಸುತ್ತವೆ.

ಆದಿಕಾಂಡ 41:28 (KANIRV)
Square Portrait Landscape 4K UHD
ದೇವರು ತಾನು ಮಾಡಬೇಕೆಂದಿರುವುದನ್ನು ಫರೋಹನಿಗೆ ತಿಳಿಸಿದ್ದಾನೆ ಎಂಬುದಾಗಿ ತಿಳಿಸಿದನು.

ಆದಿಕಾಂಡ 41:29 (KANIRV)
Square Portrait Landscape 4K UHD
ಐಗುಪ್ತ ದೇಶದಲ್ಲೆಲ್ಲಾ ಬಹು ವಿಶೇಷವಾದ ಏಳು ಸುಭಿಕ್ಷ ವರ್ಷಗಳೂ ಬರುವವು.

ಆದಿಕಾಂಡ 41:30 (KANIRV)
Square Portrait Landscape 4K UHD
ಅವುಗಳ ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವವು. ಆಗ ಐಗುಪ್ತದವರು ಮೊದಲಿದ್ದ ಸುಭಿಕ್ಷವನ್ನು ಮರೆತುಬಿಡುವರು. ಆ ಬರದಿಂದ ದೇಶವು ಹಾಳಾಗಿ ಹೋಗುವುದು.

ಆದಿಕಾಂಡ 41:31 (KANIRV)
Square Portrait Landscape 4K UHD
ಮುಂದೆ ಬರುವ ಕ್ಷಾಮವು ಅತ್ಯಂತ ಘೋರವಾಗಿರುವುದರಿಂದ ಮೊದಲಿದ್ದ ಸಮೃದ್ಧಿಯ ಗುರುತೇ ಕಾಣಿಸದೆ ಹೋಗುವುದು.

ಆದಿಕಾಂಡ 41:32 (KANIRV)
Square Portrait Landscape 4K UHD
ಫರೋಹನಿಗೆ ಕನಸು ಎರಡು ರೀತಿಯಾಗಿ ಬಿದ್ದಿದ್ದರಿಂದ ದೇವರು ಈ ಕಾರ್ಯವನ್ನು ನಿಶ್ಚಯಿಸಿ ಇದನ್ನು ಬೇಗ ಮಾಡುವನು ಎಂಬುದಾಗಿ ತಿಳಿದುಕೊಳ್ಳಬೇಕು.

ಆದಿಕಾಂಡ 41:33 (KANIRV)
Square Portrait Landscape 4K UHD
“ಆದುದರಿಂದ ಫರೋಹನು ವಿವೇಕಿಯೂ, ಬುದ್ಧಿವಂತನೂ ಆಗಿರುವ ಪುರುಷನನ್ನು ಆರಿಸಿಕೊಂಡು ಅವನನ್ನು ಐಗುಪ್ತ ದೇಶಕ್ಕೆ ಅಧಿಕಾರಿಯಾಗಿ ನೇಮಿಸಬೇಕು, ಎಂದು ಹೇಳಿದನು.

ಆದಿಕಾಂಡ 41:34 (KANIRV)
Square Portrait Landscape 4K UHD
ಫರೋಹನು ಐಗುಪ್ತ ದೇಶದ ಎಲ್ಲಾ ಭಾಗಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿ ಅವರ ಕೈಯಿಂದ ಸುಭಿಕ್ಷವಾದ ಏಳು ವರ್ಷಗಳಲ್ಲಿ ದೇಶದ ಬೆಳೆಯೊಳಗೆ ಐದರಲ್ಲಿ ಒಂದು ಪಾಲನ್ನು ಕಂದಾಯವಾಗಿ ಎತ್ತಿಸಬೇಕು.

ಆದಿಕಾಂಡ 41:35 (KANIRV)
Square Portrait Landscape 4K UHD
ಅವರು ಮುಂದೆ ಬರುವ ಒಳ್ಳೆಯ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನು, ದವಸಧಾನ್ಯಗಳನ್ನೂ ಶೇಖರಿಸಿ ಫರೋಹನ ವಶದೊಳಗೆ ಪಟ್ಟಣಗಳಲ್ಲಿಟ್ಟು ಕಾಯಲಿ.

ಆದಿಕಾಂಡ 41:36 (KANIRV)
Square Portrait Landscape 4K UHD
ಆ ಆಹಾರ ಪದಾರ್ಥಗಳನ್ನು ಶೇಖರಿಸಿಕೊಳ್ಳುವುದರಿಂದ ಐಗುಪ್ತ ದೇಶದಲ್ಲಿ ಉಂಟಾಗುವ ಏಳು ವರ್ಷಗಳ ಬರಗಾಲದಲ್ಲಿ ಜನರು ಸಾಯುವುದಿಲ್ಲ” ಎಂದು ಹೇಳಿದನು.

ಆದಿಕಾಂಡ 41:37 (KANIRV)
Square Portrait Landscape 4K UHD
ಆ ಮಾತು ಫರೋಹನಿಗೂ ಅವನ ಸೇವಕರಿಗೂ ಒಳ್ಳೇದಾಗಿ ತೋರಿತು.

ಆದಿಕಾಂಡ 41:38 (KANIRV)
Square Portrait Landscape 4K UHD
ಫರೋಹನು ತನ್ನ ಸೇವಕರಿಗೆ, “ಇವನಲ್ಲಿ ದೇವರ ಆತ್ಮ ಉಂಟಲ್ಲಾ. ಇಂಥ ಯೋಗ್ಯನಾದ ಪುರುಷನು ನಮಗೆ ಸಿಕ್ಕಾನೋ?” ಎಂದನು.

ಆದಿಕಾಂಡ 41:39 (KANIRV)
Square Portrait Landscape 4K UHD
ಫರೋಹನು ಯೋಸೇಫನಿಗೆ, “ದೇವರು ಇದನ್ನೆಲ್ಲಾ ನಿನಗೆ ತಿಳಿಸಿರುವುದರಿಂದ ನಿನಗೆ ಸಮಾನನಾದ ಬುದ್ಧಿ, ವಿವೇಕವುಳ್ಳ ಪುರುಷನು ಯಾರೂ ಇಲ್ಲ.

ಆದಿಕಾಂಡ 41:40 (KANIRV)
Square Portrait Landscape 4K UHD
ನೀನೇ ಅರಮನೆಯಲ್ಲಿ ಸರ್ವಾಧಿಕಾರಿಯಾಗಿರಬೇಕು. ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರೂ ನಡೆದುಕೊಳ್ಳಬೇಕು. ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು” ಎಂದು ಹೇಳಿದನು.

ಆದಿಕಾಂಡ 41:41 (KANIRV)
Square Portrait Landscape 4K UHD
ಫರೋಹನು ಯೋಸೇಫನಿಗೆ, “ನೋಡು ಐಗುಪ್ತ ದೇಶದ ಮೇಲೆಲ್ಲಾ ನಿನ್ನನ್ನು ಅಧಿಕಾರಿಯನ್ನಾಗಿ ನೇಮಿಸಿದ್ದೇನೆ” ಎಂದು ಹೇಳಿ,

ಆದಿಕಾಂಡ 41:42 (KANIRV)
Square Portrait Landscape 4K UHD
ಫರೋಹನು ತನ್ನ ಕೈಯಿಂದ ಉಂಗುರವನ್ನು ತೆಗೆದು ಯೋಸೇಫನ ಬೆರಳಿಗೆ ತೊಡಿಸಿ ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರವನ್ನು ಹಾಕಿದನು.

ಆದಿಕಾಂಡ 41:43 (KANIRV)
Square Portrait Landscape 4K UHD
ತನಗಿದ್ದ ಎರಡನೇ ರಥದಲ್ಲಿ ಅವನನ್ನು ಕುಳ್ಳಿರಿಸಿ, “ಅವನ ಮುಂದೆ ಅಡ್ಡ ಬೀಳಿರಿ” ಎಂದು ಪ್ರಕಟಣೆ ಹೊರಡಿಸಿ ಅವನನ್ನು ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿ ಇಟ್ಟನು.

ಆದಿಕಾಂಡ 41:44 (KANIRV)
Square Portrait Landscape 4K UHD
ಅಲ್ಲದೆ ಫರೋಹನು ಯೋಸೇಫನಿಗೆ ಹೇಳಿದ್ದೇನೆಂದರೆ, “ನಾನು ಫರೋಹನು. ನಿನ್ನ ಅಪ್ಪಣೆಯಿಲ್ಲದೆ ಐಗುಪ್ತ ದೇಶದಲ್ಲೆಲ್ಲಾ ಒಬ್ಬನೂ ಕೈಯನ್ನಾಗಲಿ, ಕಾಲನ್ನಾಗಲಿ ಕದಲಿಸಬಾರದು” ಎಂದು ಹೇಳಿದನು.

ಆದಿಕಾಂಡ 41:45 (KANIRV)
Square Portrait Landscape 4K UHD
ಇದಲ್ಲದೆ ಫರೋಹನು ಯೋಸೇಫನಿಗೆ “ಸಾಫ್ನತ್ಪನ್ನೇಹ” ಎಂದು ಹೆಸರಿಟ್ಟನು. ತರುವಾಯ ಓನನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಮದುವೆಮಾಡಿಸಿದನು. ಯೋಸೇಫನು ಐಗುಪ್ತದೇಶದ ಮೇಲೆ ಅಧಿಕಾರಿಯಾಗಿ ದೇಶದಲ್ಲೆಲ್ಲಾ ಸಂಚರಿಸಿದನು.

ಆದಿಕಾಂಡ 41:46 (KANIRV)
Square Portrait Landscape 4K UHD
ಯೋಸೇಫನು ಐಗುಪ್ತ ದೇಶದ ಅರಸನಾದ ಫರೋಹನ ಸನ್ನಿಧಿಯಲ್ಲಿ ನಿಂತಾಗ ಮೂವತ್ತು ವರ್ಷದವನಾಗಿದ್ದನು. ಅವನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶದಲ್ಲೆಲ್ಲಾ ಸಂಚಾರಮಾಡಿದನು.

ಆದಿಕಾಂಡ 41:47 (KANIRV)
Square Portrait Landscape 4K UHD
ಸುಭಿಕ್ಷವಾದ ಏಳು ವರ್ಷಗಳಲ್ಲಿ ಭೂಮಿಯು ಹೇರಳವಾಗಿ ಫಲಕೊಟ್ಟಿತು.

ಆದಿಕಾಂಡ 41:48 (KANIRV)
Square Portrait Landscape 4K UHD
ಐಗುಪ್ತದೇಶದಲ್ಲಿ ಸುಭಿಕ್ಷವಾದ ಆ ಏಳು ವರ್ಷಗಳ ಬೆಳೆಯನ್ನು ಯೋಸೇಫನು ಕೂಡಿಸಿ ಪಟ್ಟಣಗಳಲ್ಲಿ ಶೇಖರಿಸಿ ಇಡುವ ವ್ಯವಸ್ಥೆಮಾಡಿದನು. ಒಂದೊಂದು ಪಟ್ಟಣದ ಸುತ್ತಲೂ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲಿಯೇ ಶೇಖರಿಸಿದ್ದನು.

ಆದಿಕಾಂಡ 41:49 (KANIRV)
Square Portrait Landscape 4K UHD
ಯೋಸೇಫನು ದವಸಧಾನ್ಯವನ್ನು ಸಮುದ್ರ ತೀರದ ಮರಳಿನಂತೆ ರಾಶಿರಾಶಿಯಾಗಿ ಶೇಖರಿಸಿ ಲೆಕ್ಕ ಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕ ಮಾಡುವುದಕ್ಕೆ ಆಗದೇ ಹೋಯಿತು.

ಆದಿಕಾಂಡ 41:50 (KANIRV)
Square Portrait Landscape 4K UHD
ಬರಗಾಲ ಬರುವುದಕ್ಕಿಂತ ಮೊದಲು ಯೋಸೇಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಇವರು ಓನ್ ಪಟ್ಟಣದ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯಲ್ಲಿ ಹುಟ್ಟಿದರು.

ಆದಿಕಾಂಡ 41:51 (KANIRV)
Square Portrait Landscape 4K UHD
ಚೊಚ್ಚಲು ಮಗನು ಹುಟ್ಟಿದಾಗ ಯೋಸೇಫನು, “ನಾನು ನನ್ನ ಎಲ್ಲಾ ಕಷ್ಟವನ್ನು, ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ಮಾಡಿದನು” ಎಂದು ಹೇಳಿ ಅವನಿಗೆ “ಮನಸ್ಸೆ” ಎಂದು ಹೆಸರಿಟ್ಟನು.

ಆದಿಕಾಂಡ 41:52 (KANIRV)
Square Portrait Landscape 4K UHD
ಎರಡನೆಯ ಮಗನು ಹುಟ್ಟಿದಾಗ, “ನನಗೆ ಸಂಕಟ ಬಂದ ದೇಶದಲ್ಲೇ ದೇವರು ಅಭಿವೃದ್ಧಿಯನ್ನು ದಯಪಾಲಿಸಿದ್ದಾನೆ” ಎಂದು ಹೇಳಿ ಆ ಮಗನಿಗೆ “ಎಫ್ರಾಯೀಮ್” ಎಂದು ಹೆಸರಿಟ್ಟನು.

ಆದಿಕಾಂಡ 41:53 (KANIRV)
Square Portrait Landscape 4K UHD
ಐಗುಪ್ತ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳು ಮುಗಿದ ತರುವಾಯ

ಆದಿಕಾಂಡ 41:54 (KANIRV)
Square Portrait Landscape 4K UHD
ಯೋಸೇಫನು ಹೇಳಿದ ಪ್ರಕಾರ ಕ್ಷಾಮದ ಏಳು ವರ್ಷಗಳು ಪ್ರಾರಂಭವಾಯಿತು. ಬರವು ಸುತ್ತಲಿರುವ ಎಲ್ಲಾ ದೇಶಗಳಲ್ಲಿಯೂ ಹಬ್ಬಿತು. ಐಗುಪ್ತ ದೇಶದಲ್ಲಿ ಮಾತ್ರ ಆಹಾರವಿತ್ತು.

ಆದಿಕಾಂಡ 41:55 (KANIRV)
Square Portrait Landscape 4K UHD
ಐಗುಪ್ತ ದೇಶದಲ್ಲಿ ಬರ ಬಂದಾಗ ಪ್ರಜೆಗಳು ಆಹಾರ ಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಅವನು ಅವರಿಗೆ, “ಯೋಸೇಫನ ಬಳಿಗೆ ಹೋಗಿರಿ, ಅವನು ಹೇಳಿದಂತೆ ಮಾಡಿರಿ” ಎಂದು ಹೇಳಿದನು.

ಆದಿಕಾಂಡ 41:56 (KANIRV)
Square Portrait Landscape 4K UHD
ಬರವು ಭೂಮಿಯ ಮೇಲೆಲ್ಲಾ ಹರಡಿಕೊಂಡಿದಾಗ ಯೋಸೇಫನು ಕಣಜಗಳನ್ನೆಲ್ಲಾ ತೆಗೆದು ಐಗುಪ್ತರಿಗೆ ಧಾನ್ಯವನ್ನು ಮಾರಿದನು. ಐಗುಪ್ತ ದೇಶದಲ್ಲಿ ಬರವು ಬಹುಘೋರವಾಗಿತ್ತು.

ಆದಿಕಾಂಡ 41:57 (KANIRV)
Square Portrait Landscape 4K UHD
ಇದಲ್ಲದೆ ಭೂಮಿಯಲ್ಲೆಲ್ಲಾ ಬರವು ಬಹುಘೋರವಾಗಿದುದರಿಂದ ಎಲ್ಲಾ ದೇಶದವರೂ ಧಾನ್ಯವನ್ನು ಕೊಂಡುಕೊಳ್ಳುವುದಕ್ಕಾಗಿ ಐಗುಪ್ತಕ್ಕೆ ಯೋಸೇಫನ ಬಳಿಗೆ ಬಂದರು.

Available Bible Translations

American Standard Version (ASV)
Genesis 41 (ASV) »
King James Version (KJV)
Genesis 41 (KJV) »
GOD’S WORD® (GW)
Genesis 41 (GW) »
Berean Bible (BSB)
Genesis 41 (BSB) »
World English Bible (WEB)
Genesis 41 (WEB) »
French Bible (LSG)
Genèse 41 (LSG) »
German Bible (LUTH1912)
Genesis 41 (LUTH1912) »
Bengali Bible (BENIRV)
আদি 41 (BENIRV) »
Hebrew Bible (HEB)
בראשית 41 (HEB) »
Portuguese Bible (BSL)
Gênesis 41 (BSL) »
Vietnamese Bible (VIE)
Sáng Thế 41 (VIE) »
Spanish Bible (RVA)
Génesis 41 (RVA) »
Italian Bible (RIV)
Genesi 41 (RIV) »
Chinese Simplified (CUVS)
创 世 纪 41 (CUVS) »
Chinese Traditional (CUVT)
創 世 記 41 (CUVT) »
Albanian Bible (ALB)
Zanafilla 41 (ALB) »
Swedish Bible (SV1917)
1 Mosebok 41 (SV1917) »
Russian Bible (RUSV)
Бытие 41 (RUSV) »
Ukrainian Bible (UKR)
Буття 41 (UKR) »
Hungarian Bible (KAR)
1 Mózes 41 (KAR) »
Bulgarian Bible (BULG)
Битие 41 (BULG) »
Japanese Bible (JPN)
創世記 41 (JPN) »
Norwegian Bible (NORSK)
1 Mosebok 41 (NORSK) »

ಆದಿಕಾಂಡ (KANIRV) Chapter Selection

KANIRV Book Selection List