ಮಾರ್ಕನು Chapter 11 KANIRV Bible Verse Images

ಮಾರ್ಕನು 11 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಮಾರ್ಕನು 11 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಮಾರ್ಕನು 11:1 (KANIRV)
Square Portrait Landscape 4K UHD
ಅವರು ಯೆರೂಸಲೇಮಿಗೆ ಸಮೀಪಿಸಿ ಬೆತ್ಫಗೆ ಹಾಗೂ ಬೇಥಾನ್ಯದ ಬಳಿಯಲ್ಲಿರುವ ಎಣ್ಣೆಮರಗಳ ಗುಡ್ಡಕ್ಕೆ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು,

ಮಾರ್ಕನು 11:2 (KANIRV)
Square Portrait Landscape 4K UHD
“ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಅದರೊಳಗೆ ಸೇರುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ; ಇದುವರೆಗೂ ಅದರ ಮೇಲೆ ಯಾರೂ ಸವಾರಿ ಮಾಡಿಲ್ಲ; ಅದನ್ನು ಬಿಚ್ಚಿ ಇಲ್ಲಿಗೆ ತನ್ನಿರಿ.

ಮಾರ್ಕನು 11:3 (KANIRV)
Square Portrait Landscape 4K UHD
ಯಾರಾದರೂ ನಿಮ್ಮನ್ನು, ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತನಿಗೆ ಅಗತ್ಯವಾಗಿದೆ’ ಅನ್ನಿರಿ, ಅವರು ಬೇಗನೆ ಅದನ್ನು ಕಳುಹಿಸಿಕೊಡುವರು” ಎಂದು ಹೇಳಿ ಕಳುಹಿಸಿದನು.

ಮಾರ್ಕನು 11:4 (KANIRV)
Square Portrait Landscape 4K UHD
ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಕತ್ತೆಮರಿಯನ್ನು ಕಟ್ಟಿರುವುದನ್ನು ಕಂಡು ಅದನ್ನು ಬಿಚ್ಚಿದರು.

ಮಾರ್ಕನು 11:5 (KANIRV)
Square Portrait Landscape 4K UHD
ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದರು.

ಮಾರ್ಕನು 11:6 (KANIRV)
Square Portrait Landscape 4K UHD
ಅದಕ್ಕೆ ಯೇಸು ಹೇಳಿದಂತೆಯೇ ಅವರು ಹೇಳಿದರು ಆಗ ಜನರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟರು.

ಮಾರ್ಕನು 11:7 (KANIRV)
Square Portrait Landscape 4K UHD
ಶಿಷ್ಯರು ಆ ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಲು ಆತನು ಅದನ್ನು ಹತ್ತಿ ಕುಳಿತುಕೊಂಡನು.

ಮಾರ್ಕನು 11:8 (KANIRV)
Square Portrait Landscape 4K UHD
ಆಗ ಅನೇಕರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಳೆಯ ರೆಂಬೆಗಳನ್ನು ಕಡಿದು, ತಂದು ಹಾಸಿದರು.

ಮಾರ್ಕನು 11:9 (KANIRV)
Square Portrait Landscape 4K UHD
ಯೇಸುವಿನ ಹಿಂದೆ ಹಾಗೂ ಮುಂದೆ ಹೋಗುತ್ತಿದ್ದವರು: “ಹೊಸನ್ನ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ;

ಮಾರ್ಕನು 11:10 (KANIRV)
Square Portrait Landscape 4K UHD
ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆ, ಅದಕ್ಕೆ ಆಶೀರ್ವಾದವುಂಟಾಗಲಿ; ಮೇಲಣ ಲೋಕಗಳಲ್ಲಿ ಹೊಸನ್ನ” ಎಂದು ಆರ್ಭಟಿಸಿದರು.

ಮಾರ್ಕನು 11:11 (KANIRV)
Square Portrait Landscape 4K UHD
ತರುವಾಯ ಯೇಸು ಯೆರೂಸಲೇಮನ್ನು ಸೇರಿ ದೇವಾಲಯದೊಳಗೆ ಹೋಗಿ ಸುತ್ತಲೂ ನೋಡಿದನು, ಅಷ್ಟರಲ್ಲಿ ಸಂಜೆಯಾದದ್ದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಬೇಥಾನ್ಯಕ್ಕೆ ಹೊರಟು ಹೋದನು.

ಮಾರ್ಕನು 11:12 (KANIRV)
Square Portrait Landscape 4K UHD
ಮರುದಿನ ಅವರು ಬೇಥಾನ್ಯವನ್ನು ಬಿಟ್ಟು ಬರುತ್ತಿರುವಾಗ ಆತನಿಗೆ ಹಸಿವಾಯಿತು.

ಮಾರ್ಕನು 11:13 (KANIRV)
Square Portrait Landscape 4K UHD
ಎಲೆಗಳಿದ್ದ ಅಂಜೂರದ ಮರವನ್ನು ದೂರದಿಂದ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ.

ಮಾರ್ಕನು 11:14 (KANIRV)
Square Portrait Landscape 4K UHD
ಆಗ ಯೇಸು ಆ ಮರಕ್ಕೆ, “ಇನ್ನೆಂದಿಗೂ ಒಬ್ಬರೂ ನಿನ್ನಲ್ಲಿ ಹಣ್ಣನ್ನು ತಿನ್ನದಿರಲಿ” ಎಂದು ಹೇಳಿದನು. ಆತನ ಶಿಷ್ಯರು ಅದನ್ನು ಕೇಳಿಸಿಕೊಂಡರು.

ಮಾರ್ಕನು 11:15 (KANIRV)
Square Portrait Landscape 4K UHD
ಅವರು ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಡಿಸಿಬಿಡುವುದಕ್ಕೆ ತೊಡಗಿದನು; ನಾಣ್ಯಗಳನ್ನು ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿಹಾಕಿದನು; ಪಾರಿವಾಳಗಳನ್ನು ಮಾರುವವರ ಮಣೆಗಳನ್ನು ಉರುಳಿಸಿದನು;

ಮಾರ್ಕನು 11:16 (KANIRV)
Square Portrait Landscape 4K UHD
ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ.

ಮಾರ್ಕನು 11:17 (KANIRV)
Square Portrait Landscape 4K UHD
ಮತ್ತು ಆತನು ಉಪದೇಶಮಾಡಿ, “‘ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲಾ? ಆದರೆ‘ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ’” ಎಂದು ಹೇಳಿದನು.

ಮಾರ್ಕನು 11:18 (KANIRV)
Square Portrait Landscape 4K UHD
ಅದನ್ನು ಮುಖ್ಯಯಾಜಕರೂ, ಶಾಸ್ತ್ರಿಗಳೂ ಕೇಳಿ ಅವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಕಾದು ನೋಡುತ್ತಿದ್ದರು; ಏಕೆಂದರೆ ಜನರೆಲ್ಲರೂ ಆತನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಆತನಿಗೆ ಹೆದರುತ್ತಿದ್ದರು.

ಮಾರ್ಕನು 11:19 (KANIRV)
Square Portrait Landscape 4K UHD
ಸಂಜೆಯಾದಾಗ ಯೇಸುವೂ, ಆತನ ಶಿಷ್ಯರೂ ಪಟ್ಟಣವನ್ನು ಬಿಟ್ಟು ಹೊರಗೆ ಹೋಗುತ್ತಿದ್ದರು.

ಮಾರ್ಕನು 11:20 (KANIRV)
Square Portrait Landscape 4K UHD
ಬೆಳಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.

ಮಾರ್ಕನು 11:21 (KANIRV)
Square Portrait Landscape 4K UHD
ಆಗ ಪೇತ್ರನು ಹಿಂದಿನ ದಿನದ ಸಂಗತಿಯನ್ನು ನೆನಪಿಸಿಕೊಂಡು ಆತನಿಗೆ, “ಗುರುವೇ, ಇಗೋ, ನೀನು ಶಾಪ ಕೊಟ್ಟ ಅಂಜೂರದ ಮರವು ಒಣಗಿಹೋಗಿದೆ” ಎಂದು ಹೇಳಿದ್ದಕ್ಕೆ

ಮಾರ್ಕನು 11:22 (KANIRV)
Square Portrait Landscape 4K UHD
ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ.

ಮಾರ್ಕನು 11:23 (KANIRV)
Square Portrait Landscape 4K UHD
ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು.

ಮಾರ್ಕನು 11:24 (KANIRV)
Square Portrait Landscape 4K UHD
ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದು ನಿಮಗೆ ಹೇಳುತ್ತೇನೆ.

ಮಾರ್ಕನು 11:25 (KANIRV)
Square Portrait Landscape 4K UHD
ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ; ಆಗ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವನು” ಅಂದನು.

ಮಾರ್ಕನು 11:26 (KANIRV)
Square Portrait Landscape 4K UHD
ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

ಮಾರ್ಕನು 11:27 (KANIRV)
Square Portrait Landscape 4K UHD
ಅವರು ಪುನಃ ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯದ ಆವರಣದಲ್ಲಿ ನಡೆದಾಡುತ್ತಿರಲಾಗಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ ಆತನ ಬಳಿಗೆ ಬಂದು,

ಮಾರ್ಕನು 11:28 (KANIRV)
Square Portrait Landscape 4K UHD
“ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಇದನ್ನು ಮಾಡುವುದಕ್ಕೆ ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಆತನನ್ನು ಕೇಳಿದರು.

ಮಾರ್ಕನು 11:29 (KANIRV)
Square Portrait Landscape 4K UHD
ಯೇಸು ಅವರಿಗೆ, “ನಾನೂ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ, ನನಗೆ ಉತ್ತರ ಹೇಳಿದರೆ ನಾನೂ ಸಹ ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.

ಮಾರ್ಕನು 11:30 (KANIRV)
Square Portrait Landscape 4K UHD
ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಉತ್ತರಕೊಡಿರಿ ಅಂದನು.

ಮಾರ್ಕನು 11:31 (KANIRV)
Square Portrait Landscape 4K UHD
ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ’ ಅಂದಾನು;

ಮಾರ್ಕನು 11:32 (KANIRV)
Square Portrait Landscape 4K UHD
‘ಮನುಷ್ಯರಿಂದ ಬಂದಿತು’” ಎಂದು ಹೇಳಿದರೆ ಏನಾಗುವುದೋ ಎಂಬುದಾಗಿ ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಳ್ಳುತ್ತಿದ್ದರು. ಯೋಹಾನನು ನಿಜವಾದ ಪ್ರವಾದಿಯೆಂದು ಜನರೆಲ್ಲರೂ ಅನುಮಾನವಿಲ್ಲದೆ ತಿಳಿದುಕೊಂಡಿದ್ದರಿಂದ ಇವರಿಗೆ ಜನರ ಭಯವಿತ್ತು.

ಮಾರ್ಕನು 11:33 (KANIRV)
Square Portrait Landscape 4K UHD
ಹೀಗಿರಲಾಗಿ ಅವರು, “ನಮಗೆ ಗೊತ್ತಿಲ್ಲ” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು ಅವರಿಗೆ, “ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ” ಅಂದನು.

Available Bible Translations

American Standard Version (ASV)
Mark 11 (ASV) »
King James Version (KJV)
Mark 11 (KJV) »
GOD’S WORD® (GW)
Mark 11 (GW) »
Berean Bible (BSB)
Mark 11 (BSB) »
World English Bible (WEB)
Mark 11 (WEB) »
French Bible (LSG)
Marc 11 (LSG) »
German Bible (LUTH1912)
Markus 11 (LUTH1912) »
Punjabi Bible (PANIRV)
ਮਰਕੁਸ 11 (PANIRV) »
Bengali Bible (BENIRV)
মার্ক 11 (BENIRV) »
Marathi Bible (MARIRV)
मार्क 11 (MARIRV) »
Gujarati Bible (GUJIRV)
માર્ક 11 (GUJIRV) »
Arabic Bible (AVD)
مَرْقُس 11 (AVD) »
Portuguese Bible (BSL)
Marcos 11 (BSL) »
Vietnamese Bible (VIE)
Mác 11 (VIE) »
Spanish Bible (RVA)
Marcos 11 (RVA) »
Italian Bible (RIV)
Marco 11 (RIV) »
Chinese Simplified (CUVS)
马 可 福 音 11 (CUVS) »
Chinese Traditional (CUVT)
馬 可 福 音 11 (CUVT) »
Albanian Bible (ALB)
Marku 11 (ALB) »
Swedish Bible (SV1917)
Markus 11 (SV1917) »
Russian Bible (RUSV)
Марка 11 (RUSV) »
Ukrainian Bible (UKR)
Марка 11 (UKR) »
Hungarian Bible (KAR)
Márk 11 (KAR) »
Bulgarian Bible (BULG)
Марко 11 (BULG) »
Norwegian Bible (NORSK)
Markus 11 (NORSK) »

ಮಾರ್ಕನು (KANIRV) Chapter Selection

1 2 3 4 5 6 7 8 9 10 11 12 13 14 15 16

KANIRV Book Selection List