ಅರಣ್ಯಕಾಂಡ Chapter 26 KANIRV Bible Verse Images

ಅರಣ್ಯಕಾಂಡ 26 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಅರಣ್ಯಕಾಂಡ 26 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಅರಣ್ಯಕಾಂಡ 26:1 (KANIRV)
Square Portrait Landscape 4K UHD
ಆ ಘೋರವಾದ ವ್ಯಾಧಿ ನಿಂತ ಮೇಲೆ ಯೆಹೋವನು ಮೋಶೆಗೂ ಮತ್ತು ಆರೋನನ ಮಗನೂ, ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡ ಮಾತನಾಡಿ,

ಅರಣ್ಯಕಾಂಡ 26:2 (KANIRV)
Square Portrait Landscape 4K UHD
“ನೀವು ಇಸ್ರಾಯೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸುಳ್ಳವರನ್ನು ಅಂದರೆ ಯುದ್ಧಕ್ಕೆ ಹೊರಡತಕ್ಕವರನ್ನು ಗೋತ್ರಗೋತ್ರಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು.

ಅರಣ್ಯಕಾಂಡ 26:3 (KANIRV)
Square Portrait Landscape 4K UHD
ಆಗ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಮೋವಾಬ್ಯರ ಬಯಲುಗಳಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಹತ್ತಿರ ಅವರ ಸಂಗಡ ಮಾತನಾಡಿ,

ಅರಣ್ಯಕಾಂಡ 26:4 (KANIRV)
Square Portrait Landscape 4K UHD
“ಯೆಹೋವನು ಮೋಶೆಗೆ ಅಜ್ಞಾಪಿಸಿದಂತೆ ಐಗುಪ್ತ ದೇಶದಿಂದ ಹೊರಟ್ಟಿದ್ದ ಮತ್ತು ಮಹಾಯಾಜಕನಾದ ಎಲ್ಲಾಜಾರನೂ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸುಳ್ಳವರನ್ನು ಲೆಕ್ಕಿಸಿರಿ” ಎಂದನು.

ಅರಣ್ಯಕಾಂಡ 26:5 (KANIRV)
Square Portrait Landscape 4K UHD
ಇಸ್ರಾಯೇಲನ ಚೊಚ್ಚಲು ಮಗನಾದ ರೂಬೇನನಿಂದುಂಟಾದ ಕುಟುಂಬಗಳು ಯಾವುವೆಂದರೆ: ಹನೋಕನ ವಂಶಸ್ಥರಾದ ಹನೋಕ್ಯರು, ಪಲ್ಲೂವಿನ ವಂಶಸ್ಥರಾದ ಪಲ್ಲೂವಿನವರು,

ಅರಣ್ಯಕಾಂಡ 26:6 (KANIRV)
Square Portrait Landscape 4K UHD
ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರು, ಕರ್ಮೀಯ ವಂಶಸ್ಥರಾದ ಕರ್ಮೀಯರು ಇವರೇ.

ಅರಣ್ಯಕಾಂಡ 26:7 (KANIRV)
Square Portrait Landscape 4K UHD
ಇವರೇ ರೂಬೇನ್ಯರ ಕುಟುಂಬದವರು, ಇವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 43,730 ಮಂದಿ.

ಅರಣ್ಯಕಾಂಡ 26:8 (KANIRV)
Square Portrait Landscape 4K UHD
ಪಲ್ಲೂವಿನ ಮಗನು ಎಲೀಯಾಬ್.

ಅರಣ್ಯಕಾಂಡ 26:9 (KANIRV)
Square Portrait Landscape 4K UHD
ಎಲೀಯಾಬನ ಮಕ್ಕಳು: ನೆಮೂವೇಲ್, ದಾತಾನ್, ಅಬೀರಾಮ್ ಎಂಬುವವರೇ. ಕೋರಹನ ಗುಂಪಿನವರು ಯೆಹೋವನಿಗೆ ವಿರುದ್ಧವಾಗಿ ವಿವಾದಿಸಿದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ವಿವಾದಿಸಿದ ಆಲೋಚನಾಕರ್ತರಾದ ದಾತಾನ್ ಮತ್ತು ಅಬೀರಾಮರು ಇವರೇ.

ಅರಣ್ಯಕಾಂಡ 26:10 (KANIRV)
Square Portrait Landscape 4K UHD
ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನನ್ನೂ ನುಂಗಿಬಿಟ್ಟಿತು ಮತ್ತು ಬೆಂಕಿಯು ಆ ಗುಂಪಿನವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರಾಯೇಲರಿಗೆ ಎಚ್ಚರಿಕೆಯನ್ನು ಉಂಟುಮಾಡಿತು.

ಅರಣ್ಯಕಾಂಡ 26:11 (KANIRV)
Square Portrait Landscape 4K UHD
ಆ ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.

ಅರಣ್ಯಕಾಂಡ 26:12 (KANIRV)
Square Portrait Landscape 4K UHD
ಸಿಮೆಯೋನ್ ಕುಲದ ಕುಟುಂಬಗಳು ಯಾವುವೆಂದರೆ: ನೆಮೂವೇಲನ ವಂಶಸ್ಥರಾದ ನೆಮೂವೇಲ್ಯರು, ಯಾಮೀನನ ವಂಶಸ್ಥರಾದ ಯಾಮೀನ್ಯರು, ಯಾಕೀನನ ವಂಶಸ್ಥರಾದ ಯಾಕೀನ್ಯರು,

ಅರಣ್ಯಕಾಂಡ 26:13 (KANIRV)
Square Portrait Landscape 4K UHD
ಜೆರಹನ ವಂಶಸ್ಥರಾದ ಜೆರಹಿಯರು, ಸೌಲನ ವಂಶಸ್ಥರಾದ ಸೌಲ್ಯರು ಇವರೇ.

ಅರಣ್ಯಕಾಂಡ 26:14 (KANIRV)
Square Portrait Landscape 4K UHD
ಸಿಮೆಯೋನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 22,200 ಮಂದಿ.

ಅರಣ್ಯಕಾಂಡ 26:15 (KANIRV)
Square Portrait Landscape 4K UHD
ಗಾದ್ ಕುಲದ ಕುಟುಂಬಗಳು ಯಾವುವೆಂದರೆ: ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯ ವಂಶಸ್ಥರಾದ ಹಗ್ಗೀಯರು, ಶೂನೀಯ ವಂಶಸ್ಥರಾದ ಶೂನೀಯರು,

ಅರಣ್ಯಕಾಂಡ 26:16 (KANIRV)
Square Portrait Landscape 4K UHD
ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,

ಅರಣ್ಯಕಾಂಡ 26:17 (KANIRV)
Square Portrait Landscape 4K UHD
ಅರೋದನ ವಂಶಸ್ಥರಾದ ಅರೋದ್ಯರು, ಅರೇಲೀಯ ವಂಶಸ್ಥರಾದ ಅರೇಲೀಯರು ಇವರೇ.

ಅರಣ್ಯಕಾಂಡ 26:18 (KANIRV)
Square Portrait Landscape 4K UHD
ಗಾದ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 40,500 ಮಂದಿ.

ಅರಣ್ಯಕಾಂಡ 26:19 (KANIRV)
Square Portrait Landscape 4K UHD
ಯೆಹೂದನ ಮಕ್ಕಳಲ್ಲಿ ಏರ್ ಮತ್ತು ಓನಾನರು ಕಾನಾನ್ ದೇಶದಲ್ಲೇ ಸತ್ತರು.

ಅರಣ್ಯಕಾಂಡ 26:20 (KANIRV)
Square Portrait Landscape 4K UHD
ಯೆಹೂದನ ಕುಲದಲ್ಲಿ ಉಳಿದ ಕುಟುಂಬಗಳು ಯಾವುವೆಂದರೆ: ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಹನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.

ಅರಣ್ಯಕಾಂಡ 26:21 (KANIRV)
Square Portrait Landscape 4K UHD
ಪೆರೆಚನಿಂದುಂಟಾದ ಕುಟುಂಬಗಳು: ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರೂ ಹಾಮೂಲನ ವಂಶಸ್ಥರಾದ ಹಾಮೂಲ್ಯರೂ.

ಅರಣ್ಯಕಾಂಡ 26:22 (KANIRV)
Square Portrait Landscape 4K UHD
ಯೆಹೂದ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 76,500 ಮಂದಿ.

ಅರಣ್ಯಕಾಂಡ 26:23 (KANIRV)
Square Portrait Landscape 4K UHD
ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ: ತೋಲನ ವಂಶಸ್ಥರಾದ ತೋಲಾಯರು, ಪುವ್ವನ ವಂಶಸ್ಥರಾದ ಪೂನ್ಯರು,

ಅರಣ್ಯಕಾಂಡ 26:24 (KANIRV)
Square Portrait Landscape 4K UHD
ಯಾಶೂಬನ ವಂಶಸ್ಥರಾದ ಯಾಶೂಬ್ಯರು, ಶಿಮ್ರೋನನ ವಂಶಸ್ಥರಾದ ಶಿಮ್ರೋನ್ಯರು ಇವರೇ.

ಅರಣ್ಯಕಾಂಡ 26:25 (KANIRV)
Square Portrait Landscape 4K UHD
ಇಸ್ಸಾಕಾರ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 64,300 ಮಂದಿ.

ಅರಣ್ಯಕಾಂಡ 26:26 (KANIRV)
Square Portrait Landscape 4K UHD
ಜೆಬುಲೂನ್ ಕುಲದ ಕುಟುಂಬಗಳು ಯಾವುವೆಂದರೆ: ಸೆರೆದನ ವಂಶಸ್ಥರಾದ ಸೆರೆದ್ಯರು, ಏಲೋನನ ವಂಶಸ್ಥರಾದ ಏಲೋನ್ಯರು, ಯಹಲೇಲನ ವಂಶಸ್ಥರಾದ ಯಹಲೇಲ್ಯರು.

ಅರಣ್ಯಕಾಂಡ 26:27 (KANIRV)
Square Portrait Landscape 4K UHD
ಜೆಬುಲೂನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 60,500 ಮಂದಿ.

ಅರಣ್ಯಕಾಂಡ 26:28 (KANIRV)
Square Portrait Landscape 4K UHD
ಕುಟುಂಬಗಳ ಪ್ರಕಾರ ಯೋಸೇಫನ ಮಕ್ಕಳು ಮನಸ್ಸೆ ಮತ್ತು ಎಫ್ರಾಯೀಮ್.

ಅರಣ್ಯಕಾಂಡ 26:29 (KANIRV)
Square Portrait Landscape 4K UHD
ಮನಸ್ಸೆ ಕುಲದ ಕುಟುಂಬಗಳು ಯಾವುವೆಂದರೆ: ಮಾಕೀರನ ವಂಶಸ್ಥರಾದ ಮಾಕೀರ್ಯರು, ಮಾಕೀರನ ಮಗನಾದ ಗಿಲ್ಯಾದನ ವಂಶಸ್ಥರಾದ ಗಿಲ್ಯಾದ್ಯರು ಇವರೇ.

ಅರಣ್ಯಕಾಂಡ 26:30 (KANIRV)
Square Portrait Landscape 4K UHD
ಗಿಲ್ಯಾದನ ವಂಶದವರು ಯಾರೆಂದರೆ: ಈಯೆಜೆರನ ವಂಶಸ್ಥರಾದ ಈಯೆಜೆರ್ಯರು, ಹೇಲೆಕನ ವಂಶಸ್ಥರಾದ ಹೇಲೆಕ್ಯರು,

ಅರಣ್ಯಕಾಂಡ 26:31 (KANIRV)
Square Portrait Landscape 4K UHD
ಅಸ್ರೀಯೇಲನ ವಂಶಸ್ಥರಾದ ಅಸ್ರೀಯೇಲ್ಯರು, ಶೆಕೆಮನ ವಂಶಸ್ಥರಾದ ಶೆಕೆಮ್ಯರು,

ಅರಣ್ಯಕಾಂಡ 26:32 (KANIRV)
Square Portrait Landscape 4K UHD
ಶೆಮೀದಾಯನ ವಂಶಸ್ಥರಾದ ಶೆಮೀದಾಯರು, ಹೇಫೆರನ ವಂಶಸ್ಥರಾದ ಹೇಫೆರ್ಯರು ಇವರೇ.

ಅರಣ್ಯಕಾಂಡ 26:33 (KANIRV)
Square Portrait Landscape 4K UHD
ಹೇಫೆರನ ಮಗನಾದ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡುಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣುಮಕ್ಕಳು: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬುವವರೇ.

ಅರಣ್ಯಕಾಂಡ 26:34 (KANIRV)
Square Portrait Landscape 4K UHD
ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 52,700 ಮಂದಿ.

ಅರಣ್ಯಕಾಂಡ 26:35 (KANIRV)
Square Portrait Landscape 4K UHD
ಎಫ್ರಾಯೀಮ್ ಕುಲದ ಕುಟುಂಬಗಳು ಯಾವುವೆಂದರೆ: ಶೂತೆಲಹನ ವಂಶಸ್ಥರಾದ ಶೂತೆಲಹ್ಯರು, ಬೆಕೆರನ ವಂಶಸ್ಥರಾದ ಬೆಕೆರ್ಯರು, ತಹನನ ವಂಶಸ್ಥರಾದ ತಹನಿಯರು,

ಅರಣ್ಯಕಾಂಡ 26:36 (KANIRV)
Square Portrait Landscape 4K UHD
ಶೂತೆಲಹನ ಮಗನಾದ ಏರಾನನ ವಂಶಸ್ಥರಾದ ಏರಾನ್ಯರು ಇವರೇ.

ಅರಣ್ಯಕಾಂಡ 26:37 (KANIRV)
Square Portrait Landscape 4K UHD
ಎಫ್ರಾಯೀಮ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 32,500 ಮಂದಿ. ಇದೇ ಯೋಸೇಫ್ ವಂಶದ ಕುಟುಂಬಗಳ ವಿವರ.

ಅರಣ್ಯಕಾಂಡ 26:38 (KANIRV)
Square Portrait Landscape 4K UHD
ಬೆನ್ಯಾಮೀನ್ ಕುಲದ ಕುಟುಂಬಗಳು ಯಾವುವೆಂದರೆ: ಬೆಲಗನ ವಂಶಸ್ಥರಾದ ಬೆಲಗ್ಯರು, ಅಷ್ಬೇಲನ ವಂಶಸ್ಥರಾದ ಅಷ್ಬೇಲ್ಯರು, ಅಹೀರಾಮನ ವಂಶಸ್ಥರಾದ ಅಹೀರಾಮ್ಯರು,

ಅರಣ್ಯಕಾಂಡ 26:39 (KANIRV)
Square Portrait Landscape 4K UHD
ಶೂಫಾಮನ ವಂಶಸ್ಥರಾದ ಶೂಫಾಮ್ಯರು, ಹೊಫಾಮನ ವಂಶಸ್ಥರಾದ ಹೊಫಾಮ್ಯರು ಇವರೇ.

ಅರಣ್ಯಕಾಂಡ 26:40 (KANIRV)
Square Portrait Landscape 4K UHD
ಬೆಲಗನಿಗೆ ಅರ್ದ್, ನಾಮಾನ್ ಎಂಬ ಇಬ್ಬರು ಮಕ್ಕಳಿದ್ದರು. ಅರ್ದನ ವಂಶದವರು ಅರ್ದ್ಯರು, ನಾಮಾನನ ವಂಶದವರು ನಾಮಾನ್ಯರು.

ಅರಣ್ಯಕಾಂಡ 26:41 (KANIRV)
Square Portrait Landscape 4K UHD
ಬೆನ್ಯಾಮೀನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 45,600 ಮಂದಿ.

ಅರಣ್ಯಕಾಂಡ 26:42 (KANIRV)
Square Portrait Landscape 4K UHD
ದಾನ್ ಕುಲದ ಕುಟುಂಬಗಳು ಯಾವುವೆಂದರೆ: ಶೂಹಾಮನ ವಂಶಸ್ಥರಾದ ಶೂಹಾಮ್ಯರು.

ಅರಣ್ಯಕಾಂಡ 26:43 (KANIRV)
Square Portrait Landscape 4K UHD
ಶೂಹಾಮ್ಯರ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 64,400 ಮಂದಿ.

ಅರಣ್ಯಕಾಂಡ 26:44 (KANIRV)
Square Portrait Landscape 4K UHD
ಆಶೇರ್ ಕುಲದ ಕುಟುಂಬಗಳು: ಇಮ್ನಾಹನ ವಂಶಸ್ಥರಾದ ಇಮ್ನಾಹ್ಯರು, ಇಷ್ವೀಯ ವಂಶಸ್ಥರಾದ ಇಷ್ವೀಯರು, ಬೆರೀಯನ ವಂಶಸ್ಥರಾದ ಬೆರೀಯರು.

ಅರಣ್ಯಕಾಂಡ 26:45 (KANIRV)
Square Portrait Landscape 4K UHD
ಬೆರೀಯನ ಮಕ್ಕಳಿಂದುಂಟಾದ ಕುಟುಂಬಗಳು: ಹೇಬೆರನ ವಂಶಸ್ಥರಾದ ಹೇಬೆರ್ಯರು, ಮಲ್ಕೀಯೇಲನ ವಂಶಸ್ಥರಾದ ಮಲ್ಕೀಯೇಲ್ಯರು.

ಅರಣ್ಯಕಾಂಡ 26:46 (KANIRV)
Square Portrait Landscape 4K UHD
ಆಶೇರನಿಗೆ ಸೆರಹಳೆಂಬ ಮಗಳು ಸಹ ಇದ್ದಳು.

ಅರಣ್ಯಕಾಂಡ 26:47 (KANIRV)
Square Portrait Landscape 4K UHD
ಆಶೇರ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರು 53,400 ಮಂದಿ.

ಅರಣ್ಯಕಾಂಡ 26:48 (KANIRV)
Square Portrait Landscape 4K UHD
ನಫ್ತಾಲಿ ಕುಲದ ಕುಟುಂಬಗಳು: ಯಹಚೇಲನ ವಂಶಸ್ಥರಾದ ಯಹಚೇಲ್ಯರು, ಗೂನೀಯ ವಂಶಸ್ಥರಾದ ಗೂನೀಯರು,

ಅರಣ್ಯಕಾಂಡ 26:49 (KANIRV)
Square Portrait Landscape 4K UHD
ಯೇಚೆರನ ವಂಶಸ್ಥರಾದ ಯೇಚೆರ್ಯರು, ಶಿಲ್ಲೇಮನ ವಂಶಸ್ಥರಾದ ಶಿಲ್ಲೇಮ್ಯರು.

ಅರಣ್ಯಕಾಂಡ 26:50 (KANIRV)
Square Portrait Landscape 4K UHD
ನಫ್ತಾಲಿ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 45,400 ಮಂದಿ.

ಅರಣ್ಯಕಾಂಡ 26:51 (KANIRV)
Square Portrait Landscape 4K UHD
ಇಸ್ರಾಯೇಲರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 6,01,730.

ಅರಣ್ಯಕಾಂಡ 26:52 (KANIRV)
Square Portrait Landscape 4K UHD
ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ,

ಅರಣ್ಯಕಾಂಡ 26:53 (KANIRV)
Square Portrait Landscape 4K UHD
“ನೀವು ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ದೇಶವನ್ನು ಸ್ವದೇಶವಾಗುವಂತೆ ಹಂಚಿಕೊಡಬೇಕು.

ಅರಣ್ಯಕಾಂಡ 26:54 (KANIRV)
Square Portrait Landscape 4K UHD
ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ, ಕಡಿಮೆ ಮಂದಿಯುಳ್ಳ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವತ್ತಾಗಿ ಕೊಡಬೇಕು.

ಅರಣ್ಯಕಾಂಡ 26:55 (KANIRV)
Square Portrait Landscape 4K UHD
ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವತ್ತನ್ನು ಗೊತ್ತು ಮಾಡಬೇಕು.

ಅರಣ್ಯಕಾಂಡ 26:56 (KANIRV)
Square Portrait Landscape 4K UHD
ಹೆಚ್ಚು ಮಂದಿಯುಳ್ಳ ಕುಲಕ್ಕಾಗಲಿ, ಕಡಿಮೆಯಾದ ಕುಲಕ್ಕಾಗಲಿ ಚೀಟು ಬಂದ ಪ್ರಕಾರವೇ ಸ್ವತ್ತನ್ನು ಗೊತ್ತುಮಾಡಬೇಕು.”

ಅರಣ್ಯಕಾಂಡ 26:57 (KANIRV)
Square Portrait Landscape 4K UHD
ಲೇವಿಯರೊಳಗೆ ಲೆಕ್ಕಿಸಲ್ಪಟ್ಟ ಕುಟುಂಬಗಳು: ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೆಹಾತನ ವಂಶದವರಾದ ಕೆಹಾತ್ಯರು, ಮೆರಾರೀಯ ವಂಶದವರಾದ ಮೆರಾರೀಯರು.

ಅರಣ್ಯಕಾಂಡ 26:58 (KANIRV)
Square Portrait Landscape 4K UHD
ಲೇವಿ ಕುಲದವರ ಕುಟುಂಬಗಳು: ಲಿಬ್ನೀಯರ ಕುಟುಂಬ, ಹೆಬ್ರೋನ್ಯರ ಕುಟುಂಬ, ಮಹ್ಲೀಯರ ಕುಟುಂಬ, ಮೂಷೀಯರ ಕುಟುಂಬ, ಕೋರಹಿಯರ ಕುಟುಂಬ ಇವುಗಳೇ. ಕೆಹಾತನು ಅಮ್ರಾಮನನ್ನು ಪಡೆದನು.

ಅರಣ್ಯಕಾಂಡ 26:59 (KANIRV)
Square Portrait Landscape 4K UHD
ಅಮ್ರಾಮನ ಹೆಂಡತಿ ಯಾರೆಂದರೆ: ಐಗುಪ್ತ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದಳು. ಈಕೆಯಲ್ಲಿ ಅಮ್ರಾಮನಿಂದ ಆರೋನನೂ, ಮೋಶೆಯೂ ಮತ್ತು ಇವರ ಅಕ್ಕ ಮಿರ್ಯಾಮಳೂ ಹುಟ್ಟಿದರು.

ಅರಣ್ಯಕಾಂಡ 26:60 (KANIRV)
Square Portrait Landscape 4K UHD
ಆರೋನನಿಂದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬುವವರು ಹುಟ್ಟಿದರು.

ಅರಣ್ಯಕಾಂಡ 26:61 (KANIRV)
Square Portrait Landscape 4K UHD
ನಾದಾಬ್ ಮತ್ತು ಅಬೀಹೂ ಎಂಬಿಬ್ಬರು ಯೆಹೋವನ ಸನ್ನಿಧಿಯಲ್ಲಿ ಆತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದ್ದರಿಂದ ಸತ್ತುಹೋದರು.

ಅರಣ್ಯಕಾಂಡ 26:62 (KANIRV)
Square Portrait Landscape 4K UHD
ಬೇರೆ ಇಸ್ರಾಯೇಲರಿಗೆ ಸ್ವತ್ತು ದೊರಕಿದಂತೆ ಲೇವಿಯರಿಗೆ ಸ್ವತ್ತು ದೊರೆಯದೆ ಹೋದುದರಿಂದ ಅವರು ಇಸ್ರಾಯೇಲರೊಡನೆ ಲೆಕ್ಕಿಸಲ್ಪಡಲಿಲ್ಲ ಲೇವಿಯರೊಳಗೆ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಗಂಡಸರನ್ನು ಲೆಕ್ಕಿಸಲಾಗಿ ಅವರ ಸಂಖ್ಯೆ - 23,000 ಮಂದಿ.

ಅರಣ್ಯಕಾಂಡ 26:63 (KANIRV)
Square Portrait Landscape 4K UHD
ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಮೋಶೆಯೂ ಮತ್ತು ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲರ ಜನಸಂಖ್ಯೆಯನ್ನು ಲೆಕ್ಕಿಸಿದರು.

ಅರಣ್ಯಕಾಂಡ 26:64 (KANIRV)
Square Portrait Landscape 4K UHD
ಮೋಶೆಯೂ ಮತ್ತು ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲರ ಸಂಖ್ಯೆಯಲ್ಲಿ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿ ಇರಲಿಲ್ಲ.

ಅರಣ್ಯಕಾಂಡ 26:65 (KANIRV)
Square Portrait Landscape 4K UHD
ಅವರೆಲ್ಲರೂ ಅರಣ್ಯದಲ್ಲಿಯೇ ಸಾಯುವರೆಂದು ಯೆಹೋವನು ಅವರ ವಿಷಯದಲ್ಲಿ ಹೇಳಿದ್ದನು. ಆದುದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ.

Available Bible Translations

American Standard Version (ASV)
Numbers 26 (ASV) »
King James Version (KJV)
Numbers 26 (KJV) »
GOD’S WORD® (GW)
Numbers 26 (GW) »
Berean Bible (BSB)
Numbers 26 (BSB) »
World English Bible (WEB)
Numbers 26 (WEB) »
French Bible (LSG)
Nombres 26 (LSG) »
German Bible (LUTH1912)
Numeri 26 (LUTH1912) »
Punjabi Bible (PANIRV)
ਗਿਣਤੀ 26 (PANIRV) »
Bengali Bible (BENIRV)
গননা 26 (BENIRV) »
Marathi Bible (MARIRV)
गणना 26 (MARIRV) »
Gujarati Bible (GUJIRV)
ગણના 26 (GUJIRV) »
Hebrew Bible (HEB)
במדבר 26 (HEB) »
Portuguese Bible (BSL)
Números 26 (BSL) »
Vietnamese Bible (VIE)
Dân Số 26 (VIE) »
Spanish Bible (RVA)
Números 26 (RVA) »
Italian Bible (RIV)
Numeri 26 (RIV) »
Chinese Simplified (CUVS)
民 数 记 26 (CUVS) »
Chinese Traditional (CUVT)
民 數 記 26 (CUVT) »
Albanian Bible (ALB)
Numrat 26 (ALB) »
Swedish Bible (SV1917)
4 Mosebok 26 (SV1917) »
Russian Bible (RUSV)
Числа 26 (RUSV) »
Ukrainian Bible (UKR)
Числа 26 (UKR) »
Hungarian Bible (KAR)
4 Mózes 26 (KAR) »
Bulgarian Bible (BULG)
Числа 26 (BULG) »
Japanese Bible (JPN)
民数記 26 (JPN) »
Norwegian Bible (NORSK)
4 Mosebok 26 (NORSK) »

ಅರಣ್ಯಕಾಂಡ (KANIRV) Chapter Selection

KANIRV Book Selection List