ಅರಣ್ಯಕಾಂಡ Chapter 34 KANIRV Bible Verse Images

ಅರಣ್ಯಕಾಂಡ 34 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಅರಣ್ಯಕಾಂಡ 34 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಅರಣ್ಯಕಾಂಡ 34:1 (KANIRV)
Square Portrait Landscape 4K UHD
ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

ಅರಣ್ಯಕಾಂಡ 34:2 (KANIRV)
Square Portrait Landscape 4K UHD
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಸಮಸ್ತ ಕಾನಾನ್ ದೇಶವೇ ನಿಮಗೆ ಸ್ವದೇಶವಾಗಿ ದೊರಕುವುದು.

ಅರಣ್ಯಕಾಂಡ 34:3 (KANIRV)
Square Portrait Landscape 4K UHD
ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು.

ಅರಣ್ಯಕಾಂಡ 34:4 (KANIRV)
Square Portrait Landscape 4K UHD
ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರಬೇಕು. ಅದರ ಮೂಲೆ ಕಾದೇಶ್ ಬರ್ನೇಯದ ದಕ್ಷಿಣದ ಕಡೆಯಲ್ಲಿರುವುದು. ಅಲ್ಲಿಂದ ಅದು ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು.

ಅರಣ್ಯಕಾಂಡ 34:5 (KANIRV)
Square Portrait Landscape 4K UHD
ಅಚ್ಮೋನಿನಿಂದ ಐಗುಪ್ತ ದೇಶದ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು.

ಅರಣ್ಯಕಾಂಡ 34:6 (KANIRV)
Square Portrait Landscape 4K UHD
ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ದೇಶದ ಮೇರೆಯಾಗಿರುವುದು.

ಅರಣ್ಯಕಾಂಡ 34:7 (KANIRV)
Square Portrait Landscape 4K UHD
ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ,

ಅರಣ್ಯಕಾಂಡ 34:8 (KANIRV)
Square Portrait Landscape 4K UHD
ಹೋರ್ ಪರ್ವತದಿಂದ ಹಮಾತಿನವರೆಗೂ ಮತ್ತು ಅಲ್ಲಿಂದ ಚೆದಾದಿನ ಹತ್ತಿರಕ್ಕೆ ಇರುವುದು.

ಅರಣ್ಯಕಾಂಡ 34:9 (KANIRV)
Square Portrait Landscape 4K UHD
ಆ ಮೇಲೆ ಅದು ಜಿಫ್ರೋನಿಗೆ ಹೋಗಿ ಹಚರೇನಾನಿನ ಬಳಿಯಲ್ಲಿ ಮುಗಿಯಬೇಕು. ಇದು ನಿಮ್ಮ ಉತ್ತರ ದಿಕ್ಕಿನ ಮೇರೆಯಾಗಿರುವುದು.

ಅರಣ್ಯಕಾಂಡ 34:10 (KANIRV)
Square Portrait Landscape 4K UHD
ಪೂರ್ವದಿಕ್ಕಿನ ಮೇರೆಗಾಗಿ ಹಚರೇನಾನಿನಿಂದ ಶೆಫಾಮಿಗೆ ಗುರುತು ಹಾಕಬೇಕು.

ಅರಣ್ಯಕಾಂಡ 34:11 (KANIRV)
Square Portrait Landscape 4K UHD
ಶೆಫಾಮಿನಿಂದ ಅಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಬರಬೇಕು. ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವದಲ್ಲಿರುವ ಬೆಟ್ಟಗಳಿಗೆ ಹೋಗಬೇಕು.

ಅರಣ್ಯಕಾಂಡ 34:12 (KANIRV)
Square Portrait Landscape 4K UHD
ಅಲ್ಲಿಂದ ಅದು ಯೊರ್ದನ್ ನದಿಗೆ ಇಳಿದು ಅದನ್ನು ಅನುಸರಿಸಿ ಲವಣಸಮುದ್ರದ ಬಳಿಯಲ್ಲಿ ಮುಗಿಯಬೇಕು. ಇವೇ ನಿಮ್ಮ ದೇಶದ ಮೇರೆಗಳು’” ಎಂದನು.

ಅರಣ್ಯಕಾಂಡ 34:13 (KANIRV)
Square Portrait Landscape 4K UHD
ಅದಕ್ಕನುಸಾರವಾಗಿ ಮೋಶೆಯು ಇಸ್ರಾಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಯೆಹೋವನು ಆಜ್ಞಾಪಿಸಿದ ದೇಶವು ಇದೇ. ಒಂಭತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು.

ಅರಣ್ಯಕಾಂಡ 34:14 (KANIRV)
Square Portrait Landscape 4K UHD
ರೂಬೇನ್ಯರ ಮಕ್ಕಳ ಗೋತ್ರವೂ, ಗಾದ್ಯರ ಮಕ್ಕಳ ಗೋತ್ರವೂ, ಮನಸ್ಸೆ ಕುಲದವರಲ್ಲಿ ಅರ್ಧಗೋತ್ರವೂ ತಮ್ಮ ಪೂರ್ವಿಕರ ಗೋತ್ರಗಳ ಪ್ರಕಾರವಾಗಿ ತಮ್ಮ ಸ್ವತ್ತನ್ನು ಹೊಂದಿದ್ದಾರೆ.

ಅರಣ್ಯಕಾಂಡ 34:15 (KANIRV)
Square Portrait Landscape 4K UHD
ಎರಡುವರೆ ಗೋತ್ರಗಳು ತಮ್ಮ ಸ್ವತ್ತನ್ನು ಯೊರ್ದನ್ ನದಿಯ ಆಚೆ ಯೆರಿಕೋ ಪಟ್ಟಣದ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ.”

ಅರಣ್ಯಕಾಂಡ 34:16 (KANIRV)
Square Portrait Landscape 4K UHD
ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,

ಅರಣ್ಯಕಾಂಡ 34:17 (KANIRV)
Square Portrait Landscape 4K UHD
“ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಯಾವುವೆಂದರೆ: ಮಹಾಯಾಜಕನಾದ ಎಲ್ಲಾಜಾರನು ಮತ್ತು ನೂನನ ಮಗನಾದ ಯೆಹೋಶುವನೂ.

ಅರಣ್ಯಕಾಂಡ 34:18 (KANIRV)
Square Portrait Landscape 4K UHD
ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲಾಧಿಪತಿಯೂ ಇವರೇ. ಇವರು ಕಾನಾನ್ ದೇಶದಲ್ಲಿ ತಮ್ಮ ತಮ್ಮ ಸ್ವತ್ತುಗಳನ್ನು ಹಂಚಿಕೊಡಬೇಕು.

ಅರಣ್ಯಕಾಂಡ 34:19 (KANIRV)
Square Portrait Landscape 4K UHD
ನೀವು ಆಯಾ ಕುಲಗಳಿಂದ ನೇಮಿಸಬೇಕಾದವರು ಯಾರೆಂದರೆ: ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,

ಅರಣ್ಯಕಾಂಡ 34:20 (KANIRV)
Square Portrait Landscape 4K UHD
ಸಿಮೆಯೋನ್ ಕುಲದಿಂದ ಅಮ್ಮಿಹೂದನ ಮಗ ಶೆಮೂವೇಲ್,

ಅರಣ್ಯಕಾಂಡ 34:21 (KANIRV)
Square Portrait Landscape 4K UHD
ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್,

ಅರಣ್ಯಕಾಂಡ 34:22 (KANIRV)
Square Portrait Landscape 4K UHD
ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ಕುಲಾಧಿಪತಿ,

ಅರಣ್ಯಕಾಂಡ 34:23 (KANIRV)
Square Portrait Landscape 4K UHD
ಯೋಸೇಫನ ವಂಶದವರಲ್ಲಿ: ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ಕುಲಾಧಿಪತಿ,

ಅರಣ್ಯಕಾಂಡ 34:24 (KANIRV)
Square Portrait Landscape 4K UHD
ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ಕುಲಾಧಿಪತಿ,

ಅರಣ್ಯಕಾಂಡ 34:25 (KANIRV)
Square Portrait Landscape 4K UHD
ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫಾನ್ ಕುಲಾಧಿಪತಿ,

ಅರಣ್ಯಕಾಂಡ 34:26 (KANIRV)
Square Portrait Landscape 4K UHD
ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟೀಯೇಲ್ ಕುಲಾಧಿಪತಿ,

ಅರಣ್ಯಕಾಂಡ 34:27 (KANIRV)
Square Portrait Landscape 4K UHD
ಆಶೇರ್ ಕುಲದಿಂದ ಶೆಲೋಮಮೀಯ ಮಗ ಅಹೀಹೂದ್ ಕುಲಾಧಿಪತಿ,

ಅರಣ್ಯಕಾಂಡ 34:28 (KANIRV)
Square Portrait Landscape 4K UHD
ನಫ್ತಾಲಿ ಕುಲದಿಂದ ಅಮ್ಮಿಹೂದನ ಮಗ ಪೆದಹೇಲ್ ಕುಲಾಧಿಪತಿ ಇವರೇ.”

ಅರಣ್ಯಕಾಂಡ 34:29 (KANIRV)
Square Portrait Landscape 4K UHD
ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಅವರವರ ಸ್ವತ್ತುಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.

Available Bible Translations

American Standard Version (ASV)
Numbers 34 (ASV) »
King James Version (KJV)
Numbers 34 (KJV) »
GOD’S WORD® (GW)
Numbers 34 (GW) »
Berean Bible (BSB)
Numbers 34 (BSB) »
World English Bible (WEB)
Numbers 34 (WEB) »
French Bible (LSG)
Nombres 34 (LSG) »
German Bible (LUTH1912)
Numeri 34 (LUTH1912) »
Punjabi Bible (PANIRV)
ਗਿਣਤੀ 34 (PANIRV) »
Bengali Bible (BENIRV)
গননা 34 (BENIRV) »
Marathi Bible (MARIRV)
गणना 34 (MARIRV) »
Gujarati Bible (GUJIRV)
ગણના 34 (GUJIRV) »
Hebrew Bible (HEB)
במדבר 34 (HEB) »
Portuguese Bible (BSL)
Números 34 (BSL) »
Vietnamese Bible (VIE)
Dân Số 34 (VIE) »
Spanish Bible (RVA)
Números 34 (RVA) »
Italian Bible (RIV)
Numeri 34 (RIV) »
Chinese Simplified (CUVS)
民 数 记 34 (CUVS) »
Chinese Traditional (CUVT)
民 數 記 34 (CUVT) »
Albanian Bible (ALB)
Numrat 34 (ALB) »
Swedish Bible (SV1917)
4 Mosebok 34 (SV1917) »
Russian Bible (RUSV)
Числа 34 (RUSV) »
Ukrainian Bible (UKR)
Числа 34 (UKR) »
Hungarian Bible (KAR)
4 Mózes 34 (KAR) »
Bulgarian Bible (BULG)
Числа 34 (BULG) »
Japanese Bible (JPN)
民数記 34 (JPN) »
Norwegian Bible (NORSK)
4 Mosebok 34 (NORSK) »

ಅರಣ್ಯಕಾಂಡ (KANIRV) Chapter Selection

KANIRV Book Selection List