ಅರಣ್ಯಕಾಂಡ Chapter 13 KANIRV Bible Verse Images

ಅರಣ್ಯಕಾಂಡ 13 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಅರಣ್ಯಕಾಂಡ 13 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಅರಣ್ಯಕಾಂಡ 13:1 (KANIRV)
Square Portrait Landscape 4K UHD
ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

ಅರಣ್ಯಕಾಂಡ 13:2 (KANIRV)
Square Portrait Landscape 4K UHD
“ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ನೀನು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳುಹಿಸಬೇಕು” ಎಂದು ಆಜ್ಞಾಪಿಸಿದನು.

ಅರಣ್ಯಕಾಂಡ 13:3 (KANIRV)
Square Portrait Landscape 4K UHD
ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಅರಣ್ಯದಿಂದ ಇಸ್ರಾಯೇಲರ ಮುಖ್ಯಸ್ಥರನ್ನು ಕಳುಹಿಸಿದನು.

ಅರಣ್ಯಕಾಂಡ 13:4 (KANIRV)
Square Portrait Landscape 4K UHD
ಅವರ ಹೆಸರುಗಳು ಯಾವುವೆಂದರೆ: ರೂಬೇನ್ ಕುಲದ ಜಕ್ಕೂರನ ಮಗನಾದ ಶಮ್ಮೂವ,

ಅರಣ್ಯಕಾಂಡ 13:5 (KANIRV)
Square Portrait Landscape 4K UHD
ಸಿಮೆಯೋನ್ ಕುಲದ ಹೋರಿಯನ ಮಗನಾದ ಶಾಫಾಟ್,

ಅರಣ್ಯಕಾಂಡ 13:6 (KANIRV)
Square Portrait Landscape 4K UHD
ಯೆಹೂದ ಕುಲದ ಯೆಫುನ್ನೆಯನ ಮಗನಾದ ಕಾಲೇಬ್,

ಅರಣ್ಯಕಾಂಡ 13:7 (KANIRV)
Square Portrait Landscape 4K UHD
ಇಸ್ಸಾಕಾರ್ ಕುಲದ ಯೋಸೇಫನ ಮಗನಾದ ಇಗಾಲ್,

ಅರಣ್ಯಕಾಂಡ 13:8 (KANIRV)
Square Portrait Landscape 4K UHD
ಎಫ್ರಾಯೀಮ್ ಕುಲದ ನೂನನ ಮಗನಾದ ಹೋಶೇಯ,

ಅರಣ್ಯಕಾಂಡ 13:9 (KANIRV)
Square Portrait Landscape 4K UHD
ಬೆನ್ಯಾಮೀನ್ ಕುಲದ ರಾಫೂವನ ಮಗನಾದ ಪಲ್ಟೀ,

ಅರಣ್ಯಕಾಂಡ 13:10 (KANIRV)
Square Portrait Landscape 4K UHD
ಜೆಬುಲೂನ್ ಕುಲದ ಸೋದೀಯನ ಮಗನಾದ ಗದ್ದೀಯೇಲ್,

ಅರಣ್ಯಕಾಂಡ 13:11 (KANIRV)
Square Portrait Landscape 4K UHD
ಯೋಸೇಫ್ ಅಂದರೆ ಮನಸ್ಸೆ ಕುಲದ ಸೂಸೀಯನ ಮಗನಾದ ಗದ್ದೀ,

ಅರಣ್ಯಕಾಂಡ 13:12 (KANIRV)
Square Portrait Landscape 4K UHD
ದಾನ್ ಕುಲದ ಗೆಮಲ್ಲೀಯನ ಮಗನಾದ ಅಮ್ಮೀಯೇಲ್,

ಅರಣ್ಯಕಾಂಡ 13:13 (KANIRV)
Square Portrait Landscape 4K UHD
ಆಶೇರ್ ಕುಲದ ಮೀಕಾಯೇಲನ ಮಗನಾದ ಸೆತೂರ್,

ಅರಣ್ಯಕಾಂಡ 13:14 (KANIRV)
Square Portrait Landscape 4K UHD
ನಫ್ತಾಲಿ ಕುಲದ ವಾಪೆಸೀಯನ ಮಗನಾದ ನಹಬೀ,

ಅರಣ್ಯಕಾಂಡ 13:15 (KANIRV)
Square Portrait Landscape 4K UHD
ಗಾದ್ ಕುಲದ ಮಾಕೀಯನ ಮಗನಾದ ಗೆಯೂವೇಲ್.

ಅರಣ್ಯಕಾಂಡ 13:16 (KANIRV)
Square Portrait Landscape 4K UHD
ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.

ಅರಣ್ಯಕಾಂಡ 13:17 (KANIRV)
Square Portrait Landscape 4K UHD
ಕಾನಾನ್ ದೇಶದಲ್ಲಿ ಸಂಚರಿಸಿ ನೋಡುವುದಕ್ಕೆ ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದ ಮಾರ್ಗವಾಗಿ ಬೆಟ್ಟದ ಸೀಮೆಗೆ ಹತ್ತಿಹೋಗಿ ಆ ದೇಶದ ಸಂಗತಿಯನ್ನೆಲ್ಲಾ ನೋಡಿ ತಿಳಿದುಕೊಳ್ಳಬೇಕು.

ಅರಣ್ಯಕಾಂಡ 13:18 (KANIRV)
Square Portrait Landscape 4K UHD
ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಜನರೋ ಅಥವಾ ಸ್ವಲ್ಪ ಜನರೋ,

ಅರಣ್ಯಕಾಂಡ 13:19 (KANIRV)
Square Portrait Landscape 4K UHD
ಅವರ ದೇಶವು ಒಳ್ಳೆಯದೋ ಅಥವಾ ಕೆಟ್ಟದ್ದೋ? ಅವರ ಪಟ್ಟಣಗಳು ಪಾಳೆಯಗಳೋ ಅಥವಾ ಕೋಟೆಗಳೋ?

ಅರಣ್ಯಕಾಂಡ 13:20 (KANIRV)
Square Portrait Landscape 4K UHD
ಭೂಮಿಯು ಸಾರವಾದುದೋ ಅಥವಾ ನಿಸ್ಸಾರವಾದುದೋ, ಮರಗಳುಳ್ಳದ್ದೋ ಅಥವಾ ಬಯಲುಪ್ರದೇಶವೋ ಎಂದು ನೋಡಿ ತಿಳಿದುಕೊಳ್ಳಬೇಕು. ಅದಲ್ಲದೆ ನೀವು ಧೈರ್ಯವುಳ್ಳವರಾಗಿದ್ದು ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಬೇಕು” ಎಂದು ಹೇಳಿದನು. ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.

ಅರಣ್ಯಕಾಂಡ 13:21 (KANIRV)
Square Portrait Landscape 4K UHD
ಅವರು ಬೆಟ್ಟವನ್ನು ಹತ್ತಿ ಚಿನ್ ಅರಣ್ಯದಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನ ವರೆಗೆ ಆ ದೇಶವನ್ನು ಸಂಚರಿಸಿ ನೋಡಿದರು.

ಅರಣ್ಯಕಾಂಡ 13:22 (KANIRV)
Square Portrait Landscape 4K UHD
ಅವರು ಬೆಟ್ಟವನ್ನು ಹತ್ತಿ ಕಾನಾನ್ ದೇಶದ ದಕ್ಷಿಣ ಪ್ರಾಂತ್ಯವನ್ನು ದಾಟಿ ಹೆಬ್ರೋನಿಗೆ ಬಂದರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಐಗುಪ್ತ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷ ಮೊದಲು ನಿರ್ಮಿಸಲಾಗಿತ್ತು.

ಅರಣ್ಯಕಾಂಡ 13:23 (KANIRV)
Square Portrait Landscape 4K UHD
ಅವರು ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಾಲತೆಯಿಂದ ಒಂದೇ ಗೊಂಚಲುಳ್ಳ ಕೊಂಬೆಯನ್ನು ಕೊಯ್ದರು; ಇಬ್ಬರು ಅದನ್ನು ಅಡ್ಡಕೋಲಿನಿಂದ ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಮತ್ತು ಅಂಜೂರದ ಹಣ್ಣುಗಳನ್ನೂ ತಂದರು.

ಅರಣ್ಯಕಾಂಡ 13:24 (KANIRV)
Square Portrait Landscape 4K UHD
ಇಸ್ರಾಯೇಲರು ಅಲ್ಲಿ ಆ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದಲೇ ಆ ಸ್ಥಳಕ್ಕೆ “ಎಷ್ಕೋಲ್” ಎಂದು ಹೆಸರು ಉಂಟಾಯಿತು.

ಅರಣ್ಯಕಾಂಡ 13:25 (KANIRV)
Square Portrait Landscape 4K UHD
ಅವರು ನಲ್ವತ್ತು ದಿನಗಳು ಆ ದೇಶವನ್ನು ಸಂಚರಿಸಿ ನೋಡಿದರು.

ಅರಣ್ಯಕಾಂಡ 13:26 (KANIRV)
Square Portrait Landscape 4K UHD
ಆ ಮೇಲೆ ಪಾರಾನ್ ಅರಣ್ಯದಲ್ಲಿದ್ದ ಮೋಶೆ, ಆರೋನರು ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಕಾದೇಶಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ದೇಶದ ಹಣ್ಣುಗಳನ್ನು ತೋರಿಸಿದರು.

ಅರಣ್ಯಕಾಂಡ 13:27 (KANIRV)
Square Portrait Landscape 4K UHD
ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು; ಅದು ನಿಜವಾಗಿಯೂ ಹಾಲೂ ಮತ್ತು ಜೇನೂ ಹರಿಯುವ ದೇಶವೇ; ಅಲ್ಲಿನ ಹಣ್ಣುಗಳು ಇಂಥವು.

ಅರಣ್ಯಕಾಂಡ 13:28 (KANIRV)
Square Portrait Landscape 4K UHD
ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು: ಅವರಿರುವ ಪಟ್ಟಣಗಳು ದೊಡ್ಡದಾಗಿಯೂ, ಕೋಟೆ ಕೊತ್ತಲುಗಳುಳ್ಳದ್ದಾಗಿಯೂ ಇದೆ. ಅದಲ್ಲದೆ ಅಲ್ಲಿ ಉನ್ನತ ಪುರುಷರನ್ನು ನೋಡಿದೆವು.

ಅರಣ್ಯಕಾಂಡ 13:29 (KANIRV)
Square Portrait Landscape 4K UHD
ದಕ್ಷಿಣ ಸೀಮೆಯಲ್ಲಿ ಅಮಾಲೇಕ್ಯರು, ಬೆಟ್ಟದ ಸೀಮೆಯಲ್ಲಿ ಹಿತ್ತಿಯರು, ಯೆಬೂಸಿಯರು, ಅಮೋರಿಯರು ಸಮುದ್ರತೀರದಲ್ಲಿ ಮತ್ತು ಯೊರ್ದನ್ ಹೊಳೆಯ ಬಳಿಯಲ್ಲಿ ಕಾನಾನ್ಯರೂ ವಾಸವಾಗಿದ್ದಾರೆ” ಎಂದು ತಿಳಿಸಿದರು.

ಅರಣ್ಯಕಾಂಡ 13:30 (KANIRV)
Square Portrait Landscape 4K UHD
ಇಸ್ರಾಯೇಲರು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿದರು. ಕಾಲೇಬನು ಅವರನ್ನು ಸುಮ್ಮನಿರಿಸಿ, “ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಾವು ಶಕ್ತರಾಗಿದ್ದೇವೆ” ಎಂದು ಹೇಳಿದನು.

ಅರಣ್ಯಕಾಂಡ 13:31 (KANIRV)
Square Portrait Landscape 4K UHD
ಆದರೆ ಅವನ ಜೊತೆಯಲ್ಲಿ ಹೋದವರು, “ಆ ಜನರು ನಮಗಿಂತ ಬಲಿಷ್ಠರು; ಅವರನ್ನು ಜಯಿಸಲು ನಮಗೆ ಶಕ್ತಿಸಾಲುವುದಿಲ್ಲ” ಎಂದು ಹೇಳಿದರು.

ಅರಣ್ಯಕಾಂಡ 13:32 (KANIRV)
Square Portrait Landscape 4K UHD
ಅದಲ್ಲದೆ ಇವರು ತಾವು ಸಂಚರಿಸಿ ನೋಡಿದ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿದ ದೇಶವು ತನ್ನಲ್ಲಿ ವಾಸಿಸುವವರನ್ನು ನುಂಗಿಬಿಡುತ್ತದೆ. ಅದಲ್ಲದೆ ನಾವು ಅದರಲ್ಲಿ ನೋಡಿದ ಜನರೆಲ್ಲರೂ ಬಹಳ ಎತ್ತರವಾದವರು.

ಅರಣ್ಯಕಾಂಡ 13:33 (KANIRV)
Square Portrait Landscape 4K UHD
ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಉನ್ನತ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳಂತೆ ಇದ್ದೇವೆ ಎಂದು ತಿಳಿದುಕೊಂಡೆವು. ಅವರಿಗೂ ನಾವು ಹಾಗೆಯೇ ಕಾಣಿಸಿದೆವು” ಎಂದು ಹೇಳಿದರು.

Available Bible Translations

American Standard Version (ASV)
Numbers 13 (ASV) »
King James Version (KJV)
Numbers 13 (KJV) »
GOD’S WORD® (GW)
Numbers 13 (GW) »
Berean Bible (BSB)
Numbers 13 (BSB) »
World English Bible (WEB)
Numbers 13 (WEB) »
French Bible (LSG)
Nombres 13 (LSG) »
German Bible (LUTH1912)
Numeri 13 (LUTH1912) »
Punjabi Bible (PANIRV)
ਗਿਣਤੀ 13 (PANIRV) »
Bengali Bible (BENIRV)
গননা 13 (BENIRV) »
Marathi Bible (MARIRV)
गणना 13 (MARIRV) »
Gujarati Bible (GUJIRV)
ગણના 13 (GUJIRV) »
Hebrew Bible (HEB)
במדבר 13 (HEB) »
Portuguese Bible (BSL)
Números 13 (BSL) »
Vietnamese Bible (VIE)
Dân Số 13 (VIE) »
Spanish Bible (RVA)
Números 13 (RVA) »
Italian Bible (RIV)
Numeri 13 (RIV) »
Chinese Simplified (CUVS)
民 数 记 13 (CUVS) »
Chinese Traditional (CUVT)
民 數 記 13 (CUVT) »
Albanian Bible (ALB)
Numrat 13 (ALB) »
Swedish Bible (SV1917)
4 Mosebok 13 (SV1917) »
Russian Bible (RUSV)
Числа 13 (RUSV) »
Ukrainian Bible (UKR)
Числа 13 (UKR) »
Hungarian Bible (KAR)
4 Mózes 13 (KAR) »
Bulgarian Bible (BULG)
Числа 13 (BULG) »
Japanese Bible (JPN)
民数記 13 (JPN) »
Norwegian Bible (NORSK)
4 Mosebok 13 (NORSK) »

ಅರಣ್ಯಕಾಂಡ (KANIRV) Chapter Selection

KANIRV Book Selection List