ಪ್ರಲಾಪಗಳು Chapter 3 KANIRV Bible Verse Images

ಪ್ರಲಾಪಗಳು 3 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಪ್ರಲಾಪಗಳು 3 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಪ್ರಲಾಪಗಳು 3:1 (KANIRV)
Square Portrait Landscape 4K UHD
ಯೆಹೋವನ ರೌದ್ರದಂಡದ ಪೆಟ್ಟನ್ನು ತಿಂದವನು ನಾನೇ.

ಪ್ರಲಾಪಗಳು 3:2 (KANIRV)
Square Portrait Landscape 4K UHD
ಆತನೇ ನನ್ನನ್ನು ಕರೆದುಕೊಂಡು ಹೋಗಿ ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಯಮಾಡಿದ್ದಾನೆ.

ಪ್ರಲಾಪಗಳು 3:3 (KANIRV)
Square Portrait Landscape 4K UHD
ನಿಶ್ಚಯವಾಗಿ ಆತನು ನನಗೆ ವಿರುದ್ಧವಾಗಿದ್ದಾನೆ. ದಿನವೆಲ್ಲಾ ನನ್ನ ಮೇಲೆ ಕೈಮಾಡುತ್ತಾ ಬಂದಿದ್ದಾನೆ.

ಪ್ರಲಾಪಗಳು 3:4 (KANIRV)
Square Portrait Landscape 4K UHD
ನನ್ನ ಮಾಂಸಚರ್ಮಗಳನ್ನು ಕ್ಷೀಣಿಸುವಂತೆ ಮಾಡಿ, ನನ್ನ ಎಲುಬುಗಳನ್ನು ಮುರಿದಿದ್ದಾನೆ;

ಪ್ರಲಾಪಗಳು 3:5 (KANIRV)
Square Portrait Landscape 4K UHD
ನನ್ನ ಸುತ್ತಲು ಶ್ರಮಸಂಕಟಗಳ ದಿಬ್ಬಗಳನ್ನು ಹಾಕಿದ್ದಾನೆ.

ಪ್ರಲಾಪಗಳು 3:6 (KANIRV)
Square Portrait Landscape 4K UHD
ಕಾರ್ಗತ್ತಲಲ್ಲಿ ನನ್ನನ್ನು ಇರಿಸಿದ್ದಾನೆ; ಬಹುಕಾಲದ ಹಿಂದೆ ಸತ್ತವರ ಹಾಗೆ ನಾನು ಇದ್ದೇನೆ.

ಪ್ರಲಾಪಗಳು 3:7 (KANIRV)
Square Portrait Landscape 4K UHD
ನಾನು ತಪ್ಪಿಸಿಕೊಂಡು ಹೋಗದಂತೆ ನನ್ನ ಸುತ್ತಲು ಗೋಡೆಯನ್ನು ಕಟ್ಟಿ, ನನಗೆ ಭಾರವಾದ ಬೇಡಿಯನ್ನು ಹಾಕಿದ್ದಾನೆ.

ಪ್ರಲಾಪಗಳು 3:8 (KANIRV)
Square Portrait Landscape 4K UHD
ಇದಲ್ಲದೆ ನಾನು ಮೊರೆಯಿಟ್ಟು ಕೂಗಿಕೊಂಡರೂ ನನ್ನ ಬಿನ್ನಹಕ್ಕೆ ಕಿವಿಗೊಡುತ್ತಿಲ್ಲ.

ಪ್ರಲಾಪಗಳು 3:9 (KANIRV)
Square Portrait Landscape 4K UHD
ನನ್ನ ದಾರಿಗಳಿಗೆ ಅಡ್ಡವಾಗಿ ಕೆತ್ತನೆಯ ಕಲ್ಲಿನ ಗೋಡೆಗಳನ್ನು ಹಾಕಿ, ಹಾದಿಗಳನ್ನು ಸುತ್ತುವರಿಯುವಂತೆ ಮಾಡಿದ್ದಾನೆ.

ಪ್ರಲಾಪಗಳು 3:10 (KANIRV)
Square Portrait Landscape 4K UHD
ಆತನು ನನಗೆ ಹೊಂಚುಹಾಕುತ್ತಿರುವ ಕರಡಿಯಂತಿದ್ದಾನೆ, ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿರುವ ಸಿಂಹದ ಹಾಗಿದ್ದಾನೆ.

ಪ್ರಲಾಪಗಳು 3:11 (KANIRV)
Square Portrait Landscape 4K UHD
ನಾನು ನಡೆದ ದಾರಿಗಳಿಂದ ನನ್ನನ್ನು ತಪ್ಪಿಸಿದ್ದಾನೆ. ಆತನು ನನ್ನನ್ನು ದಿಕ್ಕಿಲ್ಲದವನಂತೆ ಮಾಡಿದ್ದಾನೆ.

ಪ್ರಲಾಪಗಳು 3:12 (KANIRV)
Square Portrait Landscape 4K UHD
ತನ್ನ ಬಿಲ್ಲನ್ನು ಬೊಗ್ಗಿಸಿ ಬಾಣಕ್ಕೆ ನನ್ನನ್ನು ಗುರಿಮಾಡಿಕೊಂಡಿದ್ದಾನೆ.

ಪ್ರಲಾಪಗಳು 3:13 (KANIRV)
Square Portrait Landscape 4K UHD
ತನ್ನ ಬತ್ತಳಿಕೆಯ ಅಂಬುಗಳಿಂದ ನನ್ನ ಅಂತರಂಗಗಳನ್ನು ಇರಿದಿದ್ದಾನೆ.

ಪ್ರಲಾಪಗಳು 3:14 (KANIRV)
Square Portrait Landscape 4K UHD
ನಾನು ಸ್ವಜನರೆಲ್ಲರಿಗೂ ಹಾಸ್ಯಾಸ್ಪದನಾಗಿ, ಹಗಲೆಲ್ಲಾ ಅವರ ಗೇಲಿಯ ಮಾತು ಮತ್ತು ಹಾಡುಗಳಿಗೆ ಗುರಿಯಾಗಿದ್ದೇನೆ.

ಪ್ರಲಾಪಗಳು 3:15 (KANIRV)
Square Portrait Landscape 4K UHD
ಆತನು ನನಗೆ ಕಹಿಯಾದ ಆಹಾರವನ್ನು ಕೊಟ್ಟು, ವಿಷ ಪಾನವನ್ನು ಕುಡಿಯಮಾಡಿದ್ದಾನೆ.

ಪ್ರಲಾಪಗಳು 3:16 (KANIRV)
Square Portrait Landscape 4K UHD
ನಾನು ಗರಸು ಕಲ್ಲುಚೂರುಗಳನ್ನು ಅಗೆಯುವಂತೆ ಮಾಡಿ ನನ್ನ ಹಲ್ಲುಗಳನ್ನು ಮುರಿದುಬಿಟ್ಟು, ನನ್ನನ್ನು ಬೂದಿಯಲ್ಲಿ ತಳ್ಳಿದ್ದಾನೆ.

ಪ್ರಲಾಪಗಳು 3:17 (KANIRV)
Square Portrait Landscape 4K UHD
ನನ್ನನ್ನು ತಳ್ಳಿಹಾಕಿ ಸಮಾಧಾನಕ್ಕೆ ದೂರಮಾಡಿದ್ದಾನೆ; ನಾನು ಸಂತೋಷವನ್ನು ಮರೆಯುವಂತೆ ಮಾಡಿದ್ದಾನೆ.

ಪ್ರಲಾಪಗಳು 3:18 (KANIRV)
Square Portrait Landscape 4K UHD
“ಅಯ್ಯೋ, ನನ್ನ ಶಕ್ತಿಯೆಲ್ಲಾ ಹಾಳಾಯಿತು, ಯೆಹೋವನು ನನಗೆ ದಯಪಾಲಿಸಿದ ನಿರೀಕ್ಷೆಯೂ ವ್ಯರ್ಥವಾಯಿತು” ಅಂದುಕೊಂಡೆನು.

ಪ್ರಲಾಪಗಳು 3:19 (KANIRV)
Square Portrait Landscape 4K UHD
ನಾನು ಅಲೆದು ಕಷ್ಟಪಟ್ಟದ್ದನ್ನು ನೆನಪಿಗೆ ತಂದುಕೋ, ಕಹಿಯಾದ ನನ್ನ ಆಹಾರಪಾನಗಳನ್ನು ಜ್ಞಾಪಕಮಾಡಿಕೋ.

ಪ್ರಲಾಪಗಳು 3:20 (KANIRV)
Square Portrait Landscape 4K UHD
ನನ್ನ ಆತ್ಮವು ಇವುಗಳನ್ನು ನಿತ್ಯವೂ ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಗ್ಗಿದೆ.

ಪ್ರಲಾಪಗಳು 3:21 (KANIRV)
Square Portrait Landscape 4K UHD
ಹೀಗಿರಲು ನಾನು ನಿನ್ನ ಕರುಣೆಯನ್ನು ನೆನಪಿಗೆ ತಂದುಕೊಳ್ಳುತ್ತೇನೆ, ಅದರಿಂದ ನನಗೆ ನಿರೀಕ್ಷೆಯುಂಟಾಗುತ್ತದೆ!

ಪ್ರಲಾಪಗಳು 3:22 (KANIRV)
Square Portrait Landscape 4K UHD
ನಾನು ಉಳಿದಿರುವುದು ಒಡಂಬಡಿಕೆಗೆ ಬದ್ಧವಾಗಿರುವ ಆತನ ನಂಬಿಗಸ್ತಿಕೆಯಿಂದಲೇ; ಯೆಹೋವನ ಕೃಪಾವರಗಳ ಕಾರ್ಯಗಳು ನಿಂತುಹೋಗವು.

ಪ್ರಲಾಪಗಳು 3:23 (KANIRV)
Square Portrait Landscape 4K UHD
ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ನಂಬಿಗಸ್ತಿಕೆಯು ದೊಡ್ಡದು!

ಪ್ರಲಾಪಗಳು 3:24 (KANIRV)
Square Portrait Landscape 4K UHD
“ಯೆಹೋವನೇ ನನ್ನ ಪಾಲು, ಆದಕಾರಣ ಆತನನ್ನು ನಿರೀಕ್ಷಿಸುವೆನು” ಎಂದು ನನ್ನ ಅಂತರಾತ್ಮವು ಅಂದುಕೊಳ್ಳುತ್ತದೆ.

ಪ್ರಲಾಪಗಳು 3:25 (KANIRV)
Square Portrait Landscape 4K UHD
ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಮತ್ತು ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ.

ಪ್ರಲಾಪಗಳು 3:26 (KANIRV)
Square Portrait Landscape 4K UHD
ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವುದು ಒಳ್ಳೇಯದು.

ಪ್ರಲಾಪಗಳು 3:27 (KANIRV)
Square Portrait Landscape 4K UHD
ಯೌವನದಲ್ಲಿ ನೊಗಹೊರುವುದು ಮನುಷ್ಯನಿಗೆ ಹಿತಕರ.

ಪ್ರಲಾಪಗಳು 3:28 (KANIRV)
Square Portrait Landscape 4K UHD
ನನ್ನ ಮೇಲೆ ಇದನ್ನು ಹೊರಿಸಿದವನು ಯೆಹೋವನೇ ಎಂದು ಅವನು ಒಂಟಿಗನಾಗಿ ಕುಳಿತು ಮೌನವಾಗಿರಲಿ.

ಪ್ರಲಾಪಗಳು 3:29 (KANIRV)
Square Portrait Landscape 4K UHD
ಒಂದು ವೇಳೆ ಯೆಹೋವನಿಂದ ಸುಗತಿಯಾದೀತೆಂಬ ನಿರೀಕ್ಷೆಯಿಂದ ತನ್ನ ಮುಖವನ್ನು ಕೊಳಕಿನ ಮೇಲೆ ಹಾಕಲಿ.

ಪ್ರಲಾಪಗಳು 3:30 (KANIRV)
Square Portrait Landscape 4K UHD
ಹೊಡೆಯುವವನಿಗೆ ತನ್ನ ಕೆನ್ನೆಯನ್ನು ಕೊಟ್ಟು ಅವಮಾನವನ್ನು ಹೊಟ್ಟೆತುಂಬಾ ತಿನ್ನಲಿ.

ಪ್ರಲಾಪಗಳು 3:31 (KANIRV)
Square Portrait Landscape 4K UHD
ಕರ್ತನು ನಿರಂತರಕ್ಕೂ ಕೈ ಬಿಡುವವನಲ್ಲ.

ಪ್ರಲಾಪಗಳು 3:32 (KANIRV)
Square Portrait Landscape 4K UHD
ಆತನು ವ್ಯಥೆಗೊಳಿಸಿದರೇನು, ತನ್ನ ಕೃಪಾತಿಶಯದಿಂದ ಕನಿಕರಿಸುವನು.

ಪ್ರಲಾಪಗಳು 3:33 (KANIRV)
Square Portrait Landscape 4K UHD
ನರಜನ್ಮದವರನ್ನು ಬಾಧಿಸಿ, ವ್ಯಥೆಗೊಳಿಸುವುದು ಆತನಿಗೆ ಇಷ್ಟವಿಲ್ಲ.

ಪ್ರಲಾಪಗಳು 3:34 (KANIRV)
Square Portrait Landscape 4K UHD
ಲೋಕದ ಸೆರೆಯವರನ್ನೆಲ್ಲಾ ತನ್ನ ಕಾಲುಗಳ ಕೆಳಗೆ ತುಳಿದುಬಿಡುವುದೂ,

ಪ್ರಲಾಪಗಳು 3:35 (KANIRV)
Square Portrait Landscape 4K UHD
ಪರಾತ್ಪರನಾದ ದೇವರ ಸನ್ನಿಧಿಯಲ್ಲಿ ನ್ಯಾಯವನ್ನು ತಪ್ಪಿಸುವುದೂ,

ಪ್ರಲಾಪಗಳು 3:36 (KANIRV)
Square Portrait Landscape 4K UHD
ವ್ಯಾಜ್ಯವನ್ನು ಅನ್ಯಾಯವಾಗಿ ತೀರಿಸುವುದೂ, ಇವುಗಳನ್ನು ಕರ್ತನು ಲಕ್ಷ್ಯಕ್ಕೆ ತಾರನೇ?

ಪ್ರಲಾಪಗಳು 3:37 (KANIRV)
Square Portrait Landscape 4K UHD
ಕರ್ತನ ಅಪ್ಪಣೆಯಿಲ್ಲದೆ ಯಾರ ಮಾತು ಸಾರ್ಥಕವಾದೀತು?

ಪ್ರಲಾಪಗಳು 3:38 (KANIRV)
Square Portrait Landscape 4K UHD
ಪರಾತ್ಪರನಾದ ದೇವರ ಬಾಯಿಯ ಮಾತಿನಿಂದಲೇ ಮೇಲು ಮತ್ತು ಕೇಡುಗಳು ಸಂಭವಿಸುತ್ತವಲ್ಲಾ.

ಪ್ರಲಾಪಗಳು 3:39 (KANIRV)
Square Portrait Landscape 4K UHD
ಮನುಷ್ಯನಿಗೆ ಜೀವ ವರವಿರಲು ತನ್ನ ಪಾಪದ ಶಿಕ್ಷೆಗಾಗಿ ಗುಣುಗುಟ್ಟುವುದೇಕೆ?

ಪ್ರಲಾಪಗಳು 3:40 (KANIRV)
Square Portrait Landscape 4K UHD
ನಮ್ಮ ನಡತೆಯನ್ನು ಶೋಧಿಸಿ, ಪರೀಕ್ಷಿಸಿಕೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳೋಣ.

ಪ್ರಲಾಪಗಳು 3:41 (KANIRV)
Square Portrait Landscape 4K UHD
ಪರಲೋಕದಲ್ಲಿರುವ ದೇವರ ಕಡೆಗೆ ನಮ್ಮ ಕೈಗಳೊಡನೆ ಮನಸ್ಸನ್ನೂ ತಿರುಗಿಸಿ ಸ್ತುತಿಸೋಣ.

ಪ್ರಲಾಪಗಳು 3:42 (KANIRV)
Square Portrait Landscape 4K UHD
“ನಾವು ಅವಿಧೇಯರಾಗಿ ದ್ರೋಹಮಾಡಿದ್ದೇವೆ; ನೀನು ಕ್ಷಮಿಸಲಿಲ್ಲ.

ಪ್ರಲಾಪಗಳು 3:43 (KANIRV)
Square Portrait Landscape 4K UHD
ನೀನು ರೋಷವನ್ನು ಹೊದ್ದುಕೊಂಡು ನಮ್ಮನ್ನು ಹಿಂದಟ್ಟಿದ್ದೀ; ಕನಿಕರಿಸದೆ ಕೊಂದು ಹಾಕಿದ್ದೀ.

ಪ್ರಲಾಪಗಳು 3:44 (KANIRV)
Square Portrait Landscape 4K UHD
ನಮ್ಮ ಪ್ರಾರ್ಥನೆಯು ನಿನಗೆ ಮುಟ್ಟಬಾರದೆಂದು ಮೋಡವನ್ನು ಮರೆಮಾಡಿಕೊಂಡಿದ್ದೀ.

ಪ್ರಲಾಪಗಳು 3:45 (KANIRV)
Square Portrait Landscape 4K UHD
ನಮ್ಮನ್ನು ಜನಾಂಗಗಳ ಮಧ್ಯದಲ್ಲಿ ಕಸವನ್ನಾಗಿಯೂ ಮತ್ತು ಹೊಲಸನ್ನಾಗಿಯೂ ಹಾಕಿಬಿಟ್ಟಿದ್ದೀ.

ಪ್ರಲಾಪಗಳು 3:46 (KANIRV)
Square Portrait Landscape 4K UHD
ನಮ್ಮ ಶತ್ರುಗಳೆಲ್ಲಾ ನಮ್ಮನ್ನು ನೋಡಿ ಹಾಸ್ಯಮಾಡುತ್ತಾರೆ.

ಪ್ರಲಾಪಗಳು 3:47 (KANIRV)
Square Portrait Landscape 4K UHD
ಭಯವೂ, ಗುಂಡಿಯೂ, ಸಂಹಾರವೂ ಮತ್ತು ಭಂಗವೂ ನಮಗೆ ಕಾದಿವೆ.”

ಪ್ರಲಾಪಗಳು 3:48 (KANIRV)
Square Portrait Landscape 4K UHD
ಸ್ವಜನರು ನಾಶವಾದ ಕಾರಣ ನನ್ನ ಕಣ್ಣೀರು ಹೊಳೆಹೊಳೆಯಾಗಿ ಹರಿಯುವುದು.

ಪ್ರಲಾಪಗಳು 3:49 (KANIRV)
Square Portrait Landscape 4K UHD
ಯೆಹೋವನು ಆಕಾಶದಿಂದ ಕಟಾಕ್ಷಿಸಿ ನೋಡುವ ತನಕ

ಪ್ರಲಾಪಗಳು 3:50 (KANIRV)
Square Portrait Landscape 4K UHD
ನನ್ನ ಕಣ್ಣುಗಳು ನಿರಂತರವಾಗಿ ಅಶ್ರುಧಾರೆ ಸುರಿಸುವುದನ್ನು, ಎಂದಿಗೂ ಬಿಡದು.

ಪ್ರಲಾಪಗಳು 3:51 (KANIRV)
Square Portrait Landscape 4K UHD
ನನ್ನ ಪಟ್ಟಣದ ಕನ್ಯೆಯರಿಗಾಗಿ ಅಳುತ್ತಿರುವ ನಾನು ಕಣ್ಣುರಿಯಿಂದ ಪೀಡಿತನಾಗಿದ್ದೇನೆ.

ಪ್ರಲಾಪಗಳು 3:52 (KANIRV)
Square Portrait Landscape 4K UHD
ನಿಷ್ಕಾರಣವಾಗಿ ನನ್ನ ವೈರಿಗಳು ಪಕ್ಷಿಯನ್ನೋ ಎಂಬಂತೆ ನನ್ನನ್ನು ಆತುರದಿಂದ ಹಿಂದಟ್ಟಿದರು.

ಪ್ರಲಾಪಗಳು 3:53 (KANIRV)
Square Portrait Landscape 4K UHD
ನನ್ನನ್ನು ನೆಲಮಾಳಿಗೆಯಲ್ಲಿ ಇಳಿಸಿ ಕಲ್ಲುಮುಚ್ಚಿ ನನ್ನ ಪ್ರಾಣವನ್ನು ತೆಗೆದುಬಿಟ್ಟರು

ಪ್ರಲಾಪಗಳು 3:54 (KANIRV)
Square Portrait Landscape 4K UHD
ಪ್ರವಾಹವು ನನ್ನನ್ನು ಮುಣುಗಿಸಿತು; ಆಗ ಸತ್ತೆನು ಅಂದುಕೊಂಡೆನು.

ಪ್ರಲಾಪಗಳು 3:55 (KANIRV)
Square Portrait Landscape 4K UHD
ಯೆಹೋವನೇ, ಅಗಾಧವಾದ ನೆಲಮಾಳಿಗೆಯಲ್ಲಿ ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.

ಪ್ರಲಾಪಗಳು 3:56 (KANIRV)
Square Portrait Landscape 4K UHD
ನೀನು ನನ್ನ ಧ್ವನಿಯನ್ನು ಕೇಳಿದಿ; ನನ್ನ ನಿಟ್ಟುಸಿರಿಗೂ ಮತ್ತು ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ!

ಪ್ರಲಾಪಗಳು 3:57 (KANIRV)
Square Portrait Landscape 4K UHD
ನಾನು ನಿನ್ನನ್ನು ಕೂಗಿಕೊಂಡಾಗ ನನ್ನ ಸಮೀಪಕ್ಕೆ ಬಂದು “ಭಯಪಡಬೇಡ” ಎಂದು ಅಭಯವಚನ ನೀಡಿದೆ.

ಪ್ರಲಾಪಗಳು 3:58 (KANIRV)
Square Portrait Landscape 4K UHD
ಕರ್ತನೇ, ನೀನು ನನ್ನ ವ್ಯಾಜ್ಯಗಳನ್ನು ನಡಿಸಿ, ನನ್ನ ಪ್ರಾಣವನ್ನು ಉಳಿಸಿದ್ದೀ.

ಪ್ರಲಾಪಗಳು 3:59 (KANIRV)
Square Portrait Landscape 4K UHD
ಯೆಹೋವನೇ, ನನಗಾದ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯತೀರಿಸು.

ಪ್ರಲಾಪಗಳು 3:60 (KANIRV)
Square Portrait Landscape 4K UHD
ನನ್ನ ವೈರಿಗಳು ನನ್ನ ಮೇಲೆ ತೀರಿಸಿದ ಹಗೆಯನ್ನೂ ಮತ್ತು ಕಲ್ಪಿಸಿಕೊಂಡ ಯುಕ್ತಿಗಳನ್ನೂ ನೋಡಿದ್ದೀಯಲ್ಲಾ.

ಪ್ರಲಾಪಗಳು 3:61 (KANIRV)
Square Portrait Landscape 4K UHD
ಯೆಹೋವನೇ, ಅವರು ನನಗೆ ವಿರುದ್ಧವಾಗಿ ಮಾಡಿದ ದೂಷಣೆಯೂ, ನನ್ನ ಹಾನಿಗಾಗಿ ಕಲ್ಪಿಸಿದ ಕುಯುಕ್ತಿಗಳೂ,

ಪ್ರಲಾಪಗಳು 3:62 (KANIRV)
Square Portrait Landscape 4K UHD
ನಿತ್ಯ ನಡಿಸುತ್ತಿರುವ ತಂತ್ರೋಪಾಯವೂ ಮತ್ತು ನನ್ನ ಎದುರಾಳಿಗಳ ನಿಂದೆಯೂ ನಿನ್ನ ಕಿವಿಗೆ ಬಿದ್ದಿವೆಯಷ್ಟೆ.

ಪ್ರಲಾಪಗಳು 3:63 (KANIRV)
Square Portrait Landscape 4K UHD
ಅವರು ಕುಳಿತುಕೊಳ್ಳಲಿ, ಏಳಲಿ ನೋಡುತ್ತಲೇ ಇರು; ನಾನು ಅವರ ಗೇಲಿಯ ಹಾಡಿಗೆ ಗುರಿಯಾಗಿದ್ದೇನೆ.

ಪ್ರಲಾಪಗಳು 3:64 (KANIRV)
Square Portrait Landscape 4K UHD
ಯೆಹೋವನೇ, ಅವರ ದುಷ್ಕೃತ್ಯಗಳಿಗೆ ಸರಿಯಾದ ಪ್ರತಿಫಲವನ್ನು ನೀನು ಅವರಿಗೆ ಕೊಡುವಿ;

ಪ್ರಲಾಪಗಳು 3:65 (KANIRV)
Square Portrait Landscape 4K UHD
ಅವರ ಮನಸ್ಸಿನಲ್ಲಿ ಭಯಹುಟ್ಟಿಸುವಿ, ನಿನ್ನ ಶಾಪವು ಅವರ ಮೇಲಿರಲಿ!

ಪ್ರಲಾಪಗಳು 3:66 (KANIRV)
Square Portrait Landscape 4K UHD
ನೀನು ಕೋಪಗೊಂಡು ಅವರನ್ನು ಹಿಂದಟ್ಟಿ ಅವರು ನಿನ್ನ ಕೈಕೆಲಸವಾಗಿರುವ ಆಕಾಶದ ಕೆಳಗೆ ಉಳಿಯದಂತೆ ಅಳಿಸಿಬಿಡುವಿ.

Available Bible Translations

American Standard Version (ASV)
Lamentations 3 (ASV) »
King James Version (KJV)
Lamentations 3 (KJV) »
GOD’S WORD® (GW)
Lamentations 3 (GW) »
Berean Bible (BSB)
Lamentations 3 (BSB) »
World English Bible (WEB)
Lamentations 3 (WEB) »
French Bible (LSG)
Lamentations 3 (LSG) »
German Bible (LUTH1912)
Klagelieder 3 (LUTH1912) »
Punjabi Bible (PANIRV)
ਵਿਰਲਾਪ 3 (PANIRV) »
Bengali Bible (BENIRV)
বিলাপ 3 (BENIRV) »
Hebrew Bible (HEB)
איכה 3 (HEB) »
Portuguese Bible (BSL)
Lamentações 3 (BSL) »
Vietnamese Bible (VIE)
Ai Ca 3 (VIE) »
Spanish Bible (RVA)
Lamentaciones 3 (RVA) »
Italian Bible (RIV)
Lamentazioni 3 (RIV) »
Chinese Simplified (CUVS)
耶 利 米 哀 歌 3 (CUVS) »
Chinese Traditional (CUVT)
耶 利 米 哀 歌 3 (CUVT) »
Albanian Bible (ALB)
Vajtimet 3 (ALB) »
Swedish Bible (SV1917)
Klagovisorna 3 (SV1917) »
Hungarian Bible (KAR)
Jeremiás siralmai 3 (KAR) »
Japanese Bible (JPN)
哀歌 3 (JPN) »
Norwegian Bible (NORSK)
Klagesangene 3 (NORSK) »

ಪ್ರಲಾಪಗಳು (KANIRV) Chapter Selection

1 2 3 4 5

KANIRV Book Selection List