ಮತ್ತಾಯನು Chapter 24 KANIRV Bible Verse Images

ಮತ್ತಾಯನು 24 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಮತ್ತಾಯನು 24 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಮತ್ತಾಯನು 24:1 (KANIRV)
Square Portrait Landscape 4K UHD
ತರುವಾಯ ಯೇಸು ದೇವಾಲಯದಿಂದ ಹೊರಟು ಹೋಗುತ್ತಿರಲು ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕೆ ಆತನ ಹತ್ತಿರಕ್ಕೆ ಬಂದರು.

ಮತ್ತಾಯನು 24:2 (KANIRV)
Square Portrait Landscape 4K UHD
ಆದರೆ ಅದಕ್ಕೆ ಉತ್ತರವಾಗಿ ಆತನು ಅವರಿಗೆ, “ಇವುಗಳನ್ನೆಲ್ಲಾ ನೋಡುತ್ತೀರಲ್ಲವೇ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ, ಎಲ್ಲಾ ಕೆಡವಲ್ಪಡುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅಂದನು.

ಮತ್ತಾಯನು 24:3 (KANIRV)
Square Portrait Landscape 4K UHD
ಬಳಿಕ ಆತನು ಎಣ್ಣೆಯ ಮರಗಳ ಗುಡ್ಡದ ಮೇಲೆ ಕುಳಿತಿದ್ದಾಗ ಶಿಷ್ಯರು ಆತನ ಬಳಿಗೆ ಪ್ರತ್ಯೇಕವಾಗಿ ಬಂದು, “ಇವೆಲ್ಲವೂ ಯಾವಾಗ ಸಂಭವಿಸುವುದು? ನಿನ್ನ ಬರೋಣಕ್ಕೂ ಲೋಕದ ಸಮಾಪ್ತಿಗೂ ಸೂಚನೆಯೇನು?” ನಮಗೆ ಹೇಳು ಅನ್ನಲು

ಮತ್ತಾಯನು 24:4 (KANIRV)
Square Portrait Landscape 4K UHD
ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನೆಂದರೆ, “ಯಾರೊಬ್ಬರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ.

ಮತ್ತಾಯನು 24:5 (KANIRV)
Square Portrait Landscape 4K UHD
ಏಕೆಂದರೆ, ನನ್ನ ಹೆಸರಿನಲ್ಲಿ ಅನೇಕರು ಬಂದು, ‘ನಾನು ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.

ಮತ್ತಾಯನು 24:6 (KANIRV)
Square Portrait Landscape 4K UHD
ಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.

ಮತ್ತಾಯನು 24:7 (KANIRV)
Square Portrait Landscape 4K UHD
ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು;

ಮತ್ತಾಯನು 24:8 (KANIRV)
Square Portrait Landscape 4K UHD
ಇವೆಲ್ಲಾ (ನೂತನ ಕಾಲವು ಹುಟ್ಟುವ) ಪ್ರಸವವೇದನೆಯ ಪ್ರಾರಂಭ.

ಮತ್ತಾಯನು 24:9 (KANIRV)
Square Portrait Landscape 4K UHD
“ಆಗ ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ದ್ವೇಷಿಸುವರು.

ಮತ್ತಾಯನು 24:10 (KANIRV)
Square Portrait Landscape 4K UHD
ಆಗ ಅನೇಕರು ಎಡವಿ ಹಿಂಜರಿದು ಒಬ್ಬರನ್ನೊಬ್ಬರು ಹಿಡಿದುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು.

ಮತ್ತಾಯನು 24:11 (KANIRV)
Square Portrait Landscape 4K UHD
ಬಹು ಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು.

ಮತ್ತಾಯನು 24:12 (KANIRV)
Square Portrait Landscape 4K UHD
ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿ ಹೋಗುವುದು.

ಮತ್ತಾಯನು 24:13 (KANIRV)
Square Portrait Landscape 4K UHD
ಆದರೆ ಕಡೆಯವರೆಗೂ ತಾಳುವವನು ರಕ್ಷಣೆ ಹೊಂದುವನು.

ಮತ್ತಾಯನು 24:14 (KANIRV)
Square Portrait Landscape 4K UHD
ಇದಲ್ಲದೆರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಆಗ ಅಂತ್ಯವು ಬರುವುದು.

ಮತ್ತಾಯನು 24:15 (KANIRV)
Square Portrait Landscape 4K UHD
“ಪ್ರವಾದಿಯಾದ ದಾನಿಯೇಲನು ಹೇಳಿದ ಹಾಗೆವಿನಾಶಕಾರಕ, ವಿಕಾರ ವಸ್ತು ಪವಿತ್ರ ಸ್ಥಾನದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ)

ಮತ್ತಾಯನು 24:16 (KANIRV)
Square Portrait Landscape 4K UHD
ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ;

ಮತ್ತಾಯನು 24:17 (KANIRV)
Square Portrait Landscape 4K UHD
ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿರುವುದನ್ನು ತೆಗೆದುಕೊಳ್ಳುವುದಕ್ಕೆ ಹೋಗದಿರಲಿ,

ಮತ್ತಾಯನು 24:18 (KANIRV)
Square Portrait Landscape 4K UHD
ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂತಿರುಗಿ ಹೋಗದಿರಲಿ.

ಮತ್ತಾಯನು 24:19 (KANIRV)
Square Portrait Landscape 4K UHD
ಆದರೆ ಆ ದಿನದಲ್ಲಿ ಬಸುರಿಯರಿಗೂ, ಬಾಣಂತಿಯರಾಗಿರುವ ಹೆಂಗಸರಿಗೂ ಅಯ್ಯೋ ಕಷ್ಟ.

ಮತ್ತಾಯನು 24:20 (KANIRV)
Square Portrait Landscape 4K UHD
ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥಿಸಿರಿ.

ಮತ್ತಾಯನು 24:21 (KANIRV)
Square Portrait Landscape 4K UHD
ಏಕೆಂದರೆ ಲೋಕದ ಅರಂಭದಿಂದ ಇಂದಿನವರೆಗೂ ಆಗದಿರುವಂಥದ್ದು, ಇನ್ನು ಮೇಲೆಯೂ ಆಗದಿರುವಂತಹ ಮಹಾ ಸಂಕಟವು ಅಂದು ಉಂಟಾಗುವುದು.

ಮತ್ತಾಯನು 24:22 (KANIRV)
Square Portrait Landscape 4K UHD
ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಬ್ಬ ನರಪ್ರಾಣಿಯಾದರೂ ಉಳಿಯನು; ಆದರೆ ತಾನು ಆರಿಸಿಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.

ಮತ್ತಾಯನು 24:23 (KANIRV)
Square Portrait Landscape 4K UHD
ಆಗ ಯಾರಾದರು ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ’ ಎಂದು ಹೇಳಿದರೆ ನಂಬಬೇಡಿರಿ.

ಮತ್ತಾಯನು 24:24 (KANIRV)
Square Portrait Landscape 4K UHD
ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಸಹ ಮೋಸಗೊಳಿಸುವುದಕ್ಕೋಸ್ಕರ ಮಹಾ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.

ಮತ್ತಾಯನು 24:25 (KANIRV)
Square Portrait Landscape 4K UHD
ನೋಡಿರಿ, ನಾನು ಮುಂಚಿತವಾಗಿಯೇ ನಿಮಗೆ ಇದನ್ನು ಹೇಳುತ್ತಿದ್ದೇನೆ.

ಮತ್ತಾಯನು 24:26 (KANIRV)
Square Portrait Landscape 4K UHD
ಆದಕಾರಣ ಯಾರಾದರು ನಿಮಗೆ, ‘ಅಗೋ ಕ್ರಿಸ್ತನು ಅಡವಿಯಲ್ಲಿ ಇದ್ದಾನೆಂದು’ ಹೇಳಿದರೆ ಅಡವಿಗೆ ಹೊರಟುಹೋಗಬೇಡಿರಿ; ‘ಇಗೋ ಒಳಕೋಣೆಗಳಲ್ಲಿದ್ದಾನೆಂದು’ ಹೇಳಿದರೆ ನಂಬಬೇಡಿರಿ.

ಮತ್ತಾಯನು 24:27 (KANIRV)
Square Portrait Landscape 4K UHD
ಹೇಗೆ ಮಿಂಚು ಪೂರ್ವದಲ್ಲಿ ಹುಟ್ಟಿ ಪಶ್ಚಿಮದ ವರೆಗೂ ಹೊಳೆಯುತ್ತದೋ ಹಾಗೆಯೇ ಮನುಷ್ಯಕುಮಾರನ ಬರುವಿಕೆಯೂ ಆಗುವುದು.

ಮತ್ತಾಯನು 24:28 (KANIRV)
Square Portrait Landscape 4K UHD
ಹೆಣ ಬಿದ್ದಲ್ಲಿ ಹದ್ದುಗಳು ಬಂದು ಸೇರಿಕೊಳ್ಳುವವು.

ಮತ್ತಾಯನು 24:29 (KANIRV)
Square Portrait Landscape 4K UHD
“ಆ ದಿನಗಳ ಸಂಕಟವು ಮುಗಿದಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು.

ಮತ್ತಾಯನು 24:30 (KANIRV)
Square Portrait Landscape 4K UHD
ಆಗಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವವು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ, ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವುದನ್ನು ಕಾಣುವರು.

ಮತ್ತಾಯನು 24:31 (KANIRV)
Square Portrait Landscape 4K UHD
ಆತನು ತನ್ನ ದೂತರನ್ನು ತುತ್ತೂರಿಯ ಮಹಾ ಶಬ್ದದೊಂದಿಗೆ ಕಳುಹಿಸುವನು. ಅವರು ಆತನು ಆರಿಸಿಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ನಾಲ್ಕು ದಿಕ್ಕುಗಳಿಂದ ಒಟ್ಟುಗೂಡಿಸುವರು.

ಮತ್ತಾಯನು 24:32 (KANIRV)
Square Portrait Landscape 4K UHD
“ಅಂಜೂರ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನು ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ತಿಳಿದುಕೊಳ್ಳುತ್ತೀರಲ್ಲಾ.

ಮತ್ತಾಯನು 24:33 (KANIRV)
Square Portrait Landscape 4K UHD
ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗಆ ದಿನವು ಹತ್ತಿರವಿದೆ, ಹೊಸ್ತಿಲಲ್ಲೇ ಇದೆ ಎಂದು ತಿಳಿದುಕೊಳ್ಳಿರಿ.

ಮತ್ತಾಯನು 24:34 (KANIRV)
Square Portrait Landscape 4K UHD
ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಮತ್ತಾಯನು 24:35 (KANIRV)
Square Portrait Landscape 4K UHD
ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ವಾಕ್ಯಗಳೋ ಅಳಿದುಹೋಗುವುದೇ ಇಲ್ಲ.

ಮತ್ತಾಯನು 24:36 (KANIRV)
Square Portrait Landscape 4K UHD
“ಇದಲ್ಲದೆ ಆ ದಿನವನ್ನು ಕುರಿತು ಆ ಗಳಿಗೆಯನ್ನು ಕುರಿತು, ನನ್ನ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ಕೂಡ ತಿಳಿಯದು, ಮಗನಿಗೂ ತಿಳಿಯದು,

ಮತ್ತಾಯನು 24:37 (KANIRV)
Square Portrait Landscape 4K UHD
ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಬರೋಣವು ಇರುವುದು.

ಮತ್ತಾಯನು 24:38 (KANIRV)
Square Portrait Landscape 4K UHD
ಹೇಗೆಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆಮಾಡಿಕೊಳ್ಳುತ್ತಾ, ಮದುವೆಮಾಡಿಕೊಡುತ್ತಾ ಇದ್ದರು.

ಮತ್ತಾಯನು 24:39 (KANIRV)
Square Portrait Landscape 4K UHD
ಪ್ರಳಯದ ನೀರು ಬಂದು ಎಲ್ಲರನ್ನು ಕೊಚ್ಚಿಕೊಂಡು ಹೋಗುವ ತನಕ ಅವರು ಏನೂ ತಿಳಿಯದೆ ಇದ್ದರಲ್ಲಾ. ಅದರಂತೆಯೇ ಮನುಷ್ಯಕುಮಾರನು ಬರುವ ಕಾಲದಲ್ಲಿಯೂ ಇರುವುದು.

ಮತ್ತಾಯನು 24:40 (KANIRV)
Square Portrait Landscape 4K UHD
ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಕೈ ಬಿಡಲ್ಪಡುವನು.

ಮತ್ತಾಯನು 24:41 (KANIRV)
Square Portrait Landscape 4K UHD
ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕುಳಿತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಇನ್ನೊಬ್ಬಳು ಕೈ ಬಿಡಲ್ಪಡುವಳು.

ಮತ್ತಾಯನು 24:42 (KANIRV)
Square Portrait Landscape 4K UHD
“ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲದಿರುವುದರಿಂದ ಎಚ್ಚರವಾಗಿರಿ.

ಮತ್ತಾಯನು 24:43 (KANIRV)
Square Portrait Landscape 4K UHD
ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ತನ್ನ ಮನೆಗೆ ಕನ್ನಾ ಹಾಕಗೊಡಿಸದೇ ಕಾಯುತ್ತಿದ್ದನೆಂದು ತಿಳಿದುಕೊಳ್ಳಿರಿ.

ಮತ್ತಾಯನು 24:44 (KANIRV)
Square Portrait Landscape 4K UHD
ಆದಕಾರಣ ನೀವು ಸಹ ಸಿದ್ಧವಾಗಿರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.

ಮತ್ತಾಯನು 24:45 (KANIRV)
Square Portrait Landscape 4K UHD
ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡುವುದಕ್ಕಾಗಿ ಅವರ ಮೇಲಿರಿಸಿದ ನಂಬಿಗಸ್ತನೂ, ವಿವೇಕಿಯೂ ಆದಂಥ ಆಳು ಯಾರು?

ಮತ್ತಾಯನು 24:46 (KANIRV)
Square Portrait Landscape 4K UHD
ಯಜಮಾನನು ಬರುವಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಧನ್ಯನು.

ಮತ್ತಾಯನು 24:47 (KANIRV)
Square Portrait Landscape 4K UHD
ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲ್ವಿಚಾರಕನನ್ನಾಗಿ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.

ಮತ್ತಾಯನು 24:48 (KANIRV)
Square Portrait Landscape 4K UHD
ಆದರೆ ಆ ದುಷ್ಟ ಆಳು, ‘ನನ್ನ ಯಜಮಾನನು ಬರುವುದಕ್ಕೆ ತಡ ಮಾಡುತ್ತಾನೆ’ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು

ಮತ್ತಾಯನು 24:49 (KANIRV)
Square Portrait Landscape 4K UHD
ತನ್ನ ಜೊತೆ ಆಳುಗಳನ್ನು ಹೊಡೆಯುವುದಕ್ಕೂ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸಿದಾದರೆ,

ಮತ್ತಾಯನು 24:50 (KANIRV)
Square Portrait Landscape 4K UHD
ಅವನು ನೆನಸದ ದಿನದಲ್ಲಿಯೂ, ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ದಂಡಿಸಿ

ಮತ್ತಾಯನು 24:51 (KANIRV)
Square Portrait Landscape 4K UHD
ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೂ ಮಾಡುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.

Available Bible Translations

American Standard Version (ASV)
Matthew 24 (ASV) »
King James Version (KJV)
Matthew 24 (KJV) »
GOD’S WORD® (GW)
Matthew 24 (GW) »
Berean Bible (BSB)
Matthew 24 (BSB) »
World English Bible (WEB)
Matthew 24 (WEB) »
French Bible (LSG)
Matthieu 24 (LSG) »
German Bible (LUTH1912)
Matthäus 24 (LUTH1912) »
Punjabi Bible (PANIRV)
ਮੱਤੀ 24 (PANIRV) »
Bengali Bible (BENIRV)
মথি 24 (BENIRV) »
Marathi Bible (MARIRV)
मत्तय 24 (MARIRV) »
Gujarati Bible (GUJIRV)
માથ્થી 24 (GUJIRV) »
Arabic Bible (AVD)
مَتَّى 24 (AVD) »
Portuguese Bible (BSL)
Mateus 24 (BSL) »
Vietnamese Bible (VIE)
Ma-thi-ơ 24 (VIE) »
Spanish Bible (RVA)
Mateo 24 (RVA) »
Italian Bible (RIV)
Matteo 24 (RIV) »
Chinese Simplified (CUVS)
马 太 福 音 24 (CUVS) »
Chinese Traditional (CUVT)
馬 太 福 音 24 (CUVT) »
Albanian Bible (ALB)
Mateu 24 (ALB) »
Swedish Bible (SV1917)
Matteus 24 (SV1917) »
Russian Bible (RUSV)
Матфея 24 (RUSV) »
Ukrainian Bible (UKR)
Матвія 24 (UKR) »
Hungarian Bible (KAR)
Máté 24 (KAR) »
Bulgarian Bible (BULG)
Матей 24 (BULG) »
Norwegian Bible (NORSK)
Matteus 24 (NORSK) »

ಮತ್ತಾಯನು (KANIRV) Chapter Selection

KANIRV Book Selection List