ಯೋಬನು Chapter 36 KANIRV Bible Verse Images

ಯೋಬನು 36 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಯೋಬನು 36 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಯೋಬನು 36:1 (KANIRV)
Square Portrait Landscape 4K UHD
ಆಮೇಲೆ ಎಲೀಹು ಮತ್ತೆ ಹೀಗೆಂದನು,

ಯೋಬನು 36:2 (KANIRV)
Square Portrait Landscape 4K UHD
“ಸ್ವಲ್ಪ ತಾಳು, ನಾನು ತಿಳಿಸುತ್ತೇನೆ, ದೇವರ ಪರವಾಗಿ ಹೇಳತಕ್ಕ ಮಾತುಗಳು ಇನ್ನೂ ಕೆಲವು ಉಂಟು.

ಯೋಬನು 36:3 (KANIRV)
Square Portrait Landscape 4K UHD
ದೂರದಿಂದ ಸಂಪಾದಿಸಿದ ನನ್ನ ತಿಳಿವಳಿಕೆಯ ಪ್ರಕಾರ, ನನ್ನ ಸೃಷ್ಟಿಕರ್ತನನ್ನು ಧರ್ಮಸ್ವರೂಪನೆಂದು ಹೊಗಳುವೆನು.

ಯೋಬನು 36:4 (KANIRV)
Square Portrait Landscape 4K UHD
ನನ್ನ ಮಾತುಗಳು ಸುಳ್ಳಲ್ಲವೆಂಬುದು ನಿಶ್ಚಯ, ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.

ಯೋಬನು 36:5 (KANIRV)
Square Portrait Landscape 4K UHD
ಇಗೋ, ದೇವರು ಮಹಾಶಕ್ತನಾಗಿದ್ದರೂ ಯಾರನ್ನೂ ತಿರಸ್ಕರಿಸುವುದಿಲ್ಲ, ಆತನ ಬುದ್ಧಿ ಸಾಮರ್ಥ್ಯವು ಅಪಾರವಾಗಿದೆ.

ಯೋಬನು 36:6 (KANIRV)
Square Portrait Landscape 4K UHD
ಆತನು ದುಷ್ಟರ ಪ್ರಾಣವನ್ನು ಉಳಿಸುವುದಿಲ್ಲ, ಗತಿಹೀನರ ನ್ಯಾಯವನ್ನು ಸ್ಥಾಪಿಸುವನು.

ಯೋಬನು 36:7 (KANIRV)
Square Portrait Landscape 4K UHD
ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ, ಅರಸರೊಂದಿಗೆ ಸಿಂಹಾಸನದ ಮೇಲೆ ಶಾಶ್ವತವಾಗಿ ಕುಳಿತುಕೊಳ್ಳುವ, ಉನ್ನತಪದವಿಗೆ ಅವರನ್ನು ತರುವನು.

ಯೋಬನು 36:8 (KANIRV)
Square Portrait Landscape 4K UHD
ಅವರು ಒಂದು ವೇಳೆ ಬಂಧನಕ್ಕೆ ಸಿಕ್ಕಿಕೊಂಡು, ಬಾಧೆಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟಿದ್ದರೆ,

ಯೋಬನು 36:9 (KANIRV)
Square Portrait Landscape 4K UHD
ಆತನು ಅವರ ದುಷ್ಕೃತ್ಯವನ್ನೂ, ಸೊಕ್ಕಿನ ದ್ರೋಹಗಳನ್ನೂ ಅವರಿಗೆ ತೋರಿಸುವನು.

ಯೋಬನು 36:10 (KANIRV)
Square Portrait Landscape 4K UHD
ಇದಲ್ಲದೆ ಶಿಕ್ಷಣವನ್ನು ಕೇಳುವಂತೆ ಅವರ ಕಿವಿಗಳನ್ನು ತೆರೆದು, ಅಧರ್ಮವನ್ನು ಬಿಟ್ಟುಬಿಡಬೇಕೆಂದು ಅವರಿಗೆ ಆಜ್ಞಾಪಿಸುವನು.

ಯೋಬನು 36:11 (KANIRV)
Square Portrait Landscape 4K UHD
ಅವರು ಅದನ್ನು ಕೇಳಿ ಆತನನ್ನು ಸೇವಿಸಿದರೆ, ತಮ್ಮ ದಿನಗಳನ್ನು ಸುಖದಲ್ಲಿಯೂ, ವರ್ಷಗಳನ್ನು ಸಂತೋಷದಲ್ಲಿಯೂ ಕಳೆಯುವರು.

ಯೋಬನು 36:12 (KANIRV)
Square Portrait Landscape 4K UHD
ಕೇಳದಿದ್ದರೆ ದೈವಾಸ್ತ್ರದಿಂದ ಅಳಿದುಹೋಗುವರು, ಜ್ಞಾನಹೀನರಾಗಿಯೇ ಪ್ರಾಣಬಿಡುವರು.

ಯೋಬನು 36:13 (KANIRV)
Square Portrait Landscape 4K UHD
ದೇವರನ್ನು ಹೃದಯದಲ್ಲಿ ನಂಬದಿರುವವರು ಸಿಟ್ಟುಗೊಂಡಿರುವರು, ಆತನು ಅವರನ್ನು ಬಂಧಿಸುವಾಗಲೂ ಆತನಿಗೆ ಮೊರೆಯಿಡುವುದಿಲ್ಲ.

ಯೋಬನು 36:14 (KANIRV)
Square Portrait Landscape 4K UHD
ಯೌವನದಲ್ಲೇ ಸಾಯುವರು. ಅವರ ಜೀವವು ಪುರಷಗಾಮಿಗಳ ಜೀವದಂತೆ ಕ್ಷಯಿಸುವುದು.

ಯೋಬನು 36:15 (KANIRV)
Square Portrait Landscape 4K UHD
ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು, ಅವರು ಅನುಭವಿಸುವ ಹಿಂಸೆಯಿಂದಲೇ ಅವರ ಕಿವಿಯನ್ನು ತೆರೆಯುವನು.

ಯೋಬನು 36:16 (KANIRV)
Square Portrait Landscape 4K UHD
ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ, ಇಕ್ಕಟ್ಟಿಲ್ಲದ ವಿಶಾಲ ಸ್ಥಳಕ್ಕೆ ಬರಮಾಡಬೇಕೆಂದೂ, ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬುದು ಆತನ ಉದ್ದೇಶವಾಗಿದೆ.

ಯೋಬನು 36:17 (KANIRV)
Square Portrait Landscape 4K UHD
ನೀನಾದರೋ ದುಷ್ಟನಿರ್ಣಯಗಳಿಂದ ತುಂಬಿದವನಾಗಿ, ನ್ಯಾಯವಿಚಾರಣೆಗೂ, ನ್ಯಾಯತೀರ್ಪಿಗೂ ಒಳಗಾಗಿದ್ದಿ.

ಯೋಬನು 36:18 (KANIRV)
Square Portrait Landscape 4K UHD
ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕದಂತೆ ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ!

ಯೋಬನು 36:19 (KANIRV)
Square Portrait Landscape 4K UHD
ಕಷ್ಟಾನುಭವವಿಲ್ಲದೆ ನಿನ್ನ ಐಶ್ವರ್ಯವೂ, ಧನಸಾಮರ್ಥ್ಯವೂ ನಿನಗೆ ಈಡಾಗುವುದೇ?

ಯೋಬನು 36:20 (KANIRV)
Square Portrait Landscape 4K UHD
ಜನಾಂಗಗಳು ತಟ್ಟನೆ ನಿರ್ಮೂಲವಾಗುವಾಗ ಅವರ ವಿರುದ್ಧ ಪಾಪಮಾಡದಂತೆ, ರಾತ್ರಿಯನ್ನು ಬಯಸಬೇಡ.

ಯೋಬನು 36:21 (KANIRV)
Square Portrait Landscape 4K UHD
ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಡಬೇಡ. ಕಷ್ಟವನ್ನು ಅನುಭವಿಸಲೊಲ್ಲದೆ ಅಧರ್ಮವನ್ನೇ ಆರಿಸಿಕೊಂಡಿದ್ದಿ.

ಯೋಬನು 36:22 (KANIRV)
Square Portrait Landscape 4K UHD
ಇಗೋ, ದೇವರು ತನ್ನ ಶಕ್ತಿಯಿಂದ ಉನ್ನತ ಕಾರ್ಯಗಳನ್ನು ನಡೆಸುವನು, ಆತನಂತಹ ಉಪದೇಶಕನು ಯಾರು?

ಯೋಬನು 36:23 (KANIRV)
Square Portrait Landscape 4K UHD
ಆತನ ಮಾರ್ಗವನ್ನು ಆತನಿಗೆ ಯಾರು ನೇಮಿಸಿದರು? ‘ನೀನು ಅನ್ಯಾಯವನ್ನು ನಡೆಸಿದಿ’ ಎಂದು ಯಾರು ಹೇಳಬಲ್ಲರು?

ಯೋಬನು 36:24 (KANIRV)
Square Portrait Landscape 4K UHD
ಮನುಷ್ಯರು ಕೀರ್ತಿಸುವ, ಆತನ ಕೆಲಸವನ್ನು ಹೊಗಳಲು ಮರೆಯಬೇಡ.

ಯೋಬನು 36:25 (KANIRV)
Square Portrait Landscape 4K UHD
ಎಲ್ಲಾ ಮನುಷ್ಯರೂ ಅದನ್ನು ಕಂಡಿದ್ದಾರೆ; ಆದರೆ ನರನು ದೂರದಿಂದ ನೋಡುತ್ತಾನಷ್ಟೆ.

ಯೋಬನು 36:26 (KANIRV)
Square Portrait Landscape 4K UHD
ಆಹಾ, ದೇವರು ಮಹೋನ್ನತನಾಗಿದ್ದಾನೆ, ನಾವು ಆತನನ್ನು ಅರಿಯಲಾರೆವು; ಆತನ ವರ್ಷಗಳು ಅಸಂಖ್ಯಾತವಾಗಿವೆ.

ಯೋಬನು 36:27 (KANIRV)
Square Portrait Landscape 4K UHD
ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು.

ಯೋಬನು 36:28 (KANIRV)
Square Portrait Landscape 4K UHD
ಮೋಡಗಳು ಅದನ್ನು ಸುರಿಸಿ ಸಮೃದ್ಧಿಯಾಗಿ ಜನರ ಮೇಲೆ ಚಿಮುಕಿಸುವುದು.

ಯೋಬನು 36:29 (KANIRV)
Square Portrait Landscape 4K UHD
ಆಹಾ, ಮೇಘಗಳ ಹರಡುವಿಕೆಯನ್ನೂ, ಆತನ ಗುಡಾರದಲ್ಲಿನ ಗರ್ಜನೆಗಳನ್ನೂ ಯಾರು ಗ್ರಹಿಸಬಲ್ಲರು?

ಯೋಬನು 36:30 (KANIRV)
Square Portrait Landscape 4K UHD
ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು, ಅದನ್ನು ಜಲಸಮೂಹಗಳಿಂದ ಮುಚ್ಚಿಕೊಳ್ಳುವನು.

ಯೋಬನು 36:31 (KANIRV)
Square Portrait Landscape 4K UHD
ಮೋಡಗಳ ಮುಖಾಂತರವಾಗಿಯೇ ಜನಾಂಗಗಳಿಗೆ ನ್ಯಾಯವನ್ನು ವಿಧಿಸಿ, ಆಹಾರವನ್ನು ಧಾರಾಳವಾಗಿ ದಯಪಾಲಿಸುವನಷ್ಟೆ.

ಯೋಬನು 36:32 (KANIRV)
Square Portrait Landscape 4K UHD
ಕೈತುಂಬಾ ಸಿಡಿಲನ್ನು ಹಿಡಿದು ನೀನು ವೈರಿಯನ್ನು ಹೊಡೆದು ಗುರಿಮುಟ್ಟುಲು ಬಿಡುವನು.

ಯೋಬನು 36:33 (KANIRV)
Square Portrait Landscape 4K UHD
ಅದರ ಆರ್ಭಟವು ಆತನ ವಿಷಯವಾಗಿ ಪ್ರಕಟಿಸುವುದು, ದನಕರುಗಳೂ ಸಹ ಆತನ ಆಗಮನವನ್ನು ತಿಳಿಯುವವು.”

Available Bible Translations

American Standard Version (ASV)
Job 36 (ASV) »
King James Version (KJV)
Job 36 (KJV) »
GOD’S WORD® (GW)
Job 36 (GW) »
Berean Bible (BSB)
Job 36 (BSB) »
World English Bible (WEB)
Job 36 (WEB) »
French Bible (LSG)
Job 36 (LSG) »
German Bible (LUTH1912)
Hiob 36 (LUTH1912) »
Punjabi Bible (PANIRV)
ਅੱਯੂਬ 36 (PANIRV) »
Bengali Bible (BENIRV)
ইয়োব 36 (BENIRV) »
Tamil Bible (TAMIRV)
யோபு 36 (TAMIRV) »
Marathi Bible (MARIRV)
ईयोब 36 (MARIRV) »
Telugu Bible (TELIRV)
యోబు 36 (TELIRV) »
Gujarati Bible (GUJIRV)
અયૂબ 36 (GUJIRV) »
Hebrew Bible (HEB)
איוב 36 (HEB) »
Portuguese Bible (BSL)
Jó 36 (BSL) »
Vietnamese Bible (VIE)
Gióp 36 (VIE) »
Spanish Bible (RVA)
Job 36 (RVA) »
Italian Bible (RIV)
Giobbe 36 (RIV) »
Chinese Simplified (CUVS)
约 伯 记 36 (CUVS) »
Chinese Traditional (CUVT)
約 伯 記 36 (CUVT) »
Albanian Bible (ALB)
Jobi 36 (ALB) »
Swedish Bible (SV1917)
Job 36 (SV1917) »
Russian Bible (RUSV)
Иов 36 (RUSV) »
Ukrainian Bible (UKR)
Йов 36 (UKR) »
Hungarian Bible (KAR)
Jób 36 (KAR) »
Bulgarian Bible (BULG)
Йов 36 (BULG) »
Japanese Bible (JPN)
ヨブ記 36 (JPN) »
Norwegian Bible (NORSK)
Job 36 (NORSK) »

ಯೋಬನು (KANIRV) Chapter Selection

KANIRV Book Selection List