ಯೋಬನು Chapter 3 KANIRV Bible Verse Images

ಯೋಬನು 3 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಯೋಬನು 3 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಯೋಬನು 3:1 (KANIRV)
Square Portrait Landscape 4K UHD
ಆ ಮೇಲೆ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ,

ಯೋಬನು 3:2 (KANIRV)
Square Portrait Landscape 4K UHD
ಯೋಬನು ಇಂತೆಂದನು,

ಯೋಬನು 3:3 (KANIRV)
Square Portrait Landscape 4K UHD
“ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ, ‘ಗರ್ಭದಲ್ಲಿ ಪುರುಷಾಂಕುರವಾಯಿತು’ ಎಂದು ನುಡಿದ ರಾತ್ರಿಯು ನಾಶವಾಗಲಿ

ಯೋಬನು 3:4 (KANIRV)
Square Portrait Landscape 4K UHD
ಆ ದಿನವು ಕತ್ತಲೆಯಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.

ಯೋಬನು 3:5 (KANIRV)
Square Portrait Landscape 4K UHD
ಕತ್ತಲೆಯೂ, ಘೋರಾಂಧಕಾರವೂ ಅದನ್ನು ವಶಮಾಡಿಕೊಳ್ಳಲಿ. ಮೋಡವು ಅದನ್ನು ಕವಿಯಲಿ, ಹಗಲನ್ನು ಮುಚ್ಚಿಕೊಳ್ಳುವ ಮೊಬ್ಬು ಅದನ್ನು ಹೆದರಿಸಲಿ.

ಯೋಬನು 3:6 (KANIRV)
Square Portrait Landscape 4K UHD
ಕಾರ್ಗತ್ತಲು ಆ ರಾತ್ರಿಯನ್ನು ಹಿಡಿದುಕೊಳ್ಳಲಿ, ಅದು ಮಾಸಗಳ ಲೆಕ್ಕದಲ್ಲಿ ಸೇರದೆ ಸಂವತ್ಸರದ ದಿನಗಳಲ್ಲಿ ಹರ್ಷಿಸದೆ ಇರಲಿ.

ಯೋಬನು 3:7 (KANIRV)
Square Portrait Landscape 4K UHD
ಆಹಾ, ರಾತ್ರಿಯು ಬಂಜೆಯಾಗಿ ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ.

ಯೋಬನು 3:8 (KANIRV)
Square Portrait Landscape 4K UHD
ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ, ದಿನಗಳನ್ನು ಶಪಿಸುವುದರಲ್ಲಿಯೂ ಜಾಣರಾದ (ಮಾಂತ್ರಿಕರು) ಅದಕ್ಕೆ ಶಾಪಕೊಡಲಿ.

ಯೋಬನು 3:9 (KANIRV)
Square Portrait Landscape 4K UHD
ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ಮಿಣುಕದೆ ಹೋಗಲಿ. ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ. ಅರುಣೋದಯವೆಂಬ ರೆಪ್ಪೆ ತೆರೆಯುವುದನ್ನು ಅದು ಕಾಣದಿರಲಿ.

ಯೋಬನು 3:10 (KANIRV)
Square Portrait Landscape 4K UHD
ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ, ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲವಲ್ಲಾ.

ಯೋಬನು 3:11 (KANIRV)
Square Portrait Landscape 4K UHD
ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ. ಗರ್ಭದಿಂದ ಬಂದಾಗಲೇ ಏಕೆ ಪ್ರಾಣಬಿಡಲಿಲ್ಲ?

ಯೋಬನು 3:12 (KANIRV)
Square Portrait Landscape 4K UHD
ತಾಯಿಯ ಮಡಿಲು ನನ್ನನ್ನು ಹೊತ್ತದ್ದೇಕೆ? ತಾಯಿಯ ಮೊಲೆಗಳು ನನಗೆ ಕುಡಿಯ ಕೊಟ್ಟದ್ದೇಕೆ?

ಯೋಬನು 3:13 (KANIRV)
Square Portrait Landscape 4K UHD
ಆಗಲೇ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ, ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆನು.

ಯೋಬನು 3:14 (KANIRV)
Square Portrait Landscape 4K UHD
ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮ್ಮ ಸಮಾಧಿಗಾಗಿ ಕಟ್ಟಿಸಿಕೊಂಡ ಅರಸರೊಂದಿಗೂ, ಮಂತ್ರಿಗಳೊಡನೆಯೂ ನಾನಿರುತ್ತಿದ್ದೆ.

ಯೋಬನು 3:15 (KANIRV)
Square Portrait Landscape 4K UHD
ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡಲೂ ವಿಶ್ರಮಿಸಿಕೊಳ್ಳುತ್ತಿದ್ದೆನು.

ಯೋಬನು 3:16 (KANIRV)
Square Portrait Landscape 4K UHD
ಒಂದು ವೇಳೆ ನಾನು ಗರ್ಭಸ್ರಾವವಾಗಿ ಬಿದ್ದು, ಹೂಳಿಟ್ಟ ಪಿಂಡದಂತೆ, ಬೆಳಕನ್ನೇ ಕಾಣದೆ ಸತ್ತುಹೋದ ಕೂಸುಗಳಂತೆ ಜನ್ಮವಿಲ್ಲದವನಾಗಿ ಇರುತ್ತಿದ್ದೆನು.

ಯೋಬನು 3:17 (KANIRV)
Square Portrait Landscape 4K UHD
ಅಲ್ಲಿ ದುಷ್ಟರ ಆಗ್ರಹವು ಅಣಗಿ ಹೋಗುವುದು, ದಣಿದವರು ದಣಿವಾರಿಸಿಕೊಳ್ಳುವರು.

ಯೋಬನು 3:18 (KANIRV)
Square Portrait Landscape 4K UHD
ಸೆರೆಯಾದವರು ಬಾಧಿಸುವ ಅಧಿಕಾರಿಯ ಧ್ವನಿಯನ್ನೇ ಕೇಳದೆ, ಗುಂಪುಗುಂಪಾಗಿ ವಿಶ್ರಮಿಸಿಕೊಳ್ಳುವರು.

ಯೋಬನು 3:19 (KANIRV)
Square Portrait Landscape 4K UHD
ಅಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲಾ. ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.

ಯೋಬನು 3:20 (KANIRV)
Square Portrait Landscape 4K UHD
ಕಷ್ಟದಲ್ಲಿರುವವನಿಗೆ ಬೆಳಕನ್ನು, ಮನನೊಂದವರಿಗೆ ಜೀವವನ್ನು ಕೊಡುವುದೇಕೆ?

ಯೋಬನು 3:21 (KANIRV)
Square Portrait Landscape 4K UHD
ಅವರು ನಿಕ್ಷೇಪಕ್ಕಾಗಿ ಅಗೆಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.

ಯೋಬನು 3:22 (KANIRV)
Square Portrait Landscape 4K UHD
ಸಮಾಧಿಗೆ ಸೇರುವಾಗ ಬಹಳವಾಗಿ ಹರ್ಷಿಸಿ ಉಲ್ಲಾಸಪಡುತ್ತಾರೆ.

ಯೋಬನು 3:23 (KANIRV)
Square Portrait Landscape 4K UHD
ದೇವರು ನನ್ನ ಸುತ್ತಲೂ ಬೇಲಿ ಹಾಕಿ, ದಾರಿಕಟ್ಟಿದ ಮೇಲೆ ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ?

ಯೋಬನು 3:24 (KANIRV)
Square Portrait Landscape 4K UHD
ನಿಟ್ಟುಸಿರೇ ನನ್ನೆದುರಿಗೆ ಬರುವ ಆಹಾರವಾಗಿದೆ. ನನ್ನ ನರಳಾಟವು ಜಲಧಾರೆಯಂತಿದೆ.

ಯೋಬನು 3:25 (KANIRV)
Square Portrait Landscape 4K UHD
ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವುದು. ನಾನು ಯಾವುದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವುದು.

ಯೋಬನು 3:26 (KANIRV)
Square Portrait Landscape 4K UHD
ನನಗೆ ಯಾವ ಶಾಂತಿಯೂ, ವಿಶ್ರಾಂತಿಯೂ, ಉಪಶಮನವೂ ಇರುವುದಿಲ್ಲ, ಯಾವಾಗಲೂ ಕಳವಳವೇ.”

Available Bible Translations

American Standard Version (ASV)
Job 3 (ASV) »
King James Version (KJV)
Job 3 (KJV) »
GOD’S WORD® (GW)
Job 3 (GW) »
Berean Bible (BSB)
Job 3 (BSB) »
World English Bible (WEB)
Job 3 (WEB) »
French Bible (LSG)
Job 3 (LSG) »
German Bible (LUTH1912)
Hiob 3 (LUTH1912) »
Punjabi Bible (PANIRV)
ਅੱਯੂਬ 3 (PANIRV) »
Bengali Bible (BENIRV)
ইয়োব 3 (BENIRV) »
Tamil Bible (TAMIRV)
யோபு 3 (TAMIRV) »
Marathi Bible (MARIRV)
ईयोब 3 (MARIRV) »
Telugu Bible (TELIRV)
యోబు 3 (TELIRV) »
Gujarati Bible (GUJIRV)
અયૂબ 3 (GUJIRV) »
Hebrew Bible (HEB)
איוב 3 (HEB) »
Portuguese Bible (BSL)
Jó 3 (BSL) »
Vietnamese Bible (VIE)
Gióp 3 (VIE) »
Spanish Bible (RVA)
Job 3 (RVA) »
Italian Bible (RIV)
Giobbe 3 (RIV) »
Chinese Simplified (CUVS)
约 伯 记 3 (CUVS) »
Chinese Traditional (CUVT)
約 伯 記 3 (CUVT) »
Albanian Bible (ALB)
Jobi 3 (ALB) »
Swedish Bible (SV1917)
Job 3 (SV1917) »
Russian Bible (RUSV)
Иов 3 (RUSV) »
Ukrainian Bible (UKR)
Йов 3 (UKR) »
Hungarian Bible (KAR)
Jób 3 (KAR) »
Bulgarian Bible (BULG)
Йов 3 (BULG) »
Japanese Bible (JPN)
ヨブ記 3 (JPN) »
Norwegian Bible (NORSK)
Job 3 (NORSK) »

ಯೋಬನು (KANIRV) Chapter Selection

KANIRV Book Selection List