ಯೋಬನು Chapter 40 KANIRV Bible Verse Images

ಯೋಬನು 40 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಯೋಬನು 40 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಯೋಬನು 40:1 (KANIRV)
Square Portrait Landscape 4K UHD
ಇದಲ್ಲದೆ ಯೆಹೋವನು ಯೋಬನಿಗೆ,

ಯೋಬನು 40:2 (KANIRV)
Square Portrait Landscape 4K UHD
“ತರ್ಕಮಾಡುವವನು ಸರ್ವಶಕ್ತನಾದ ದೇವರ ಸಂಗಡಲೂ ವ್ಯಾಜ್ಯವಾಡುವನೋ? ದೇವರೊಂದಿಗೆ ವಿವಾದಮಾಡುವವನು ಇದಕ್ಕೆಲ್ಲಾ ಉತ್ತರಕೊಡಲಿ” ಎಂದು ಹೇಳಿದನು.

ಯೋಬನು 40:3 (KANIRV)
Square Portrait Landscape 4K UHD
ಆಗ ಯೋಬನು ಯೆಹೋವನಿಗೆ ಉತ್ತರವಾಗಿ,

ಯೋಬನು 40:4 (KANIRV)
Square Portrait Landscape 4K UHD
“ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವೆನು.

ಯೋಬನು 40:5 (KANIRV)
Square Portrait Landscape 4K UHD
ಒಂದು ಸಾರಿ ಮಾತನಾಡಿದ್ದೇನೆ, ಪ್ರತಿವಾದ ಮಾಡಲಾರೆನು; ಎರಡು ಸಲ ಹೌದು, ಇನ್ನೇನೂ ನುಡಿಯಲಾರೆನು” ಎಂದು ಹೇಳಿದನು.

ಯೋಬನು 40:6 (KANIRV)
Square Portrait Landscape 4K UHD
ಆ ಮೇಲೆ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,

ಯೋಬನು 40:7 (KANIRV)
Square Portrait Landscape 4K UHD
“ಶೂರನಂತೆ ನಡುಕಟ್ಟಿಕೋ! ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.

ಯೋಬನು 40:8 (KANIRV)
Square Portrait Landscape 4K UHD
ನನ್ನ ನೀತಿಯನ್ನು ಖಂಡಿಸಿಬಿಡುವಿಯಾ? ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವೆಯೋ?

ಯೋಬನು 40:9 (KANIRV)
Square Portrait Landscape 4K UHD
ನಿನ್ನ ಕೈಯೂ, ದೇವರ ಕೈಯೂ ಸಮವೋ? ದೇವರ ಧ್ವನಿಯಂತೆ ಗುಡುಗಬಲ್ಲಿಯಾ?

ಯೋಬನು 40:10 (KANIRV)
Square Portrait Landscape 4K UHD
ನಿನ್ನನ್ನು ನೀನೇ ಮಹಿಮೆ ಘನತೆಗಳಿಂದ ಭೂಷಿಸಿಕೊಂಡು ಪ್ರಭಾವ ಮಹತ್ವಗಳನ್ನು ಧರಿಸಿಕೋ.

ಯೋಬನು 40:11 (KANIRV)
Square Portrait Landscape 4K UHD
ತುಂಬಿ ತುಳುಕುವ ನಿನ್ನ ಕೋಪವನ್ನು ಎರಚಿ, ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಅವನನ್ನು ತಗ್ಗಿಸು.

ಯೋಬನು 40:12 (KANIRV)
Square Portrait Landscape 4K UHD
ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಕುಗ್ಗಿಸಿ, ದುಷ್ಟರನ್ನು ತಟ್ಟನೆ ಕೆಡವಿಬಿಡು.

ಯೋಬನು 40:13 (KANIRV)
Square Portrait Landscape 4K UHD
ಅವರನ್ನು ಒಟ್ಟಿಗೆ ಧೂಳಿನಲ್ಲಿ ಅಡಗಿಸಿ, ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು.

ಯೋಬನು 40:14 (KANIRV)
Square Portrait Landscape 4K UHD
ಹೀಗಾದರೆ ನಿನ್ನ ಬಲಭುಜವು ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ನಿನ್ನನ್ನು ಹೊಗಳುವೆನು.

ಯೋಬನು 40:15 (KANIRV)
Square Portrait Landscape 4K UHD
ನಿನ್ನಂತೆ ನನ್ನ ಸೃಷ್ಟಿಯಾಗಿರುವ ನೀರಾನೆಯನ್ನು ನೋಡು; ಎತ್ತಿನ ಹಾಗೆ ಹುಲ್ಲನ್ನು ಮೇಯುವುದು.

ಯೋಬನು 40:16 (KANIRV)
Square Portrait Landscape 4K UHD
ಇಗೋ, ಅದರ ಬಲವು ಸೊಂಟದಲ್ಲಿಯೂ, ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ.

ಯೋಬನು 40:17 (KANIRV)
Square Portrait Landscape 4K UHD
ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವುದು; ಅದರ ತೊಡೆಯ ನರಗಳು ಹೆಣೆದುಕೊಂಡಿವೆ.

ಯೋಬನು 40:18 (KANIRV)
Square Portrait Landscape 4K UHD
ಅದರ ಮೂಳೆಗಳು ತಾಮ್ರದ ನಳಗಳಂತೆಯೂ, ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ ಇರುವವು.

ಯೋಬನು 40:19 (KANIRV)
Square Portrait Landscape 4K UHD
ಅದು ದೇವರ ಸೃಷ್ಟಿಗಳಲ್ಲಿ ಮುಖ್ಯವಾದದ್ದು. ಅದನ್ನು ನಿರ್ಮಿಸಿದವನು ಅದಕ್ಕೆ ಕೋರೆ ಹಲ್ಲೆಂಬ ಶಸ್ತ್ರವನ್ನೂ ಒದಗಿಸಿದ್ದಾನೆ.

ಯೋಬನು 40:20 (KANIRV)
Square Portrait Landscape 4K UHD
ಗುಡ್ಡಗಳು ಅದಕ್ಕೆ ಮೇವನ್ನು ಕೊಡುವವು; ಕಾಡುಮೃಗಗಳೆಲ್ಲಾ ಅಲ್ಲಿ ಆಡುತ್ತಿರುವವು;

ಯೋಬನು 40:21 (KANIRV)
Square Portrait Landscape 4K UHD
ತಾವರೆಯ ಗಿಡಗಳ ಕೆಳಗೂ, ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ಮಲಗಿಕೊಳ್ಳುವುದು.

ಯೋಬನು 40:22 (KANIRV)
Square Portrait Landscape 4K UHD
ತಾವರೆ ಗಿಡಗಳು ತಮ್ಮ ನೆರಳನ್ನು ಅದರ ಮೇಲೆ ಹರಡುವವು, ನದಿಯ ನೀರವಂಜಿಗಳು ಅದನ್ನು ಸುತ್ತಿಕೊಂಡಿರುವವು.

ಯೋಬನು 40:23 (KANIRV)
Square Portrait Landscape 4K UHD
ಓಹೋ, ಹೊಳೆಯು ಉಕ್ಕಿ ಬಂದರೂ ಅದು ಹೆದರುವುದಿಲ್ಲ. ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.

ಯೋಬನು 40:24 (KANIRV)
Square Portrait Landscape 4K UHD
ಯಾರಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ? ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ?” ಎಂದನು.

Available Bible Translations

American Standard Version (ASV)
Job 40 (ASV) »
King James Version (KJV)
Job 40 (KJV) »
GOD’S WORD® (GW)
Job 40 (GW) »
Berean Bible (BSB)
Job 40 (BSB) »
World English Bible (WEB)
Job 40 (WEB) »
French Bible (LSG)
Job 40 (LSG) »
German Bible (LUTH1912)
Hiob 40 (LUTH1912) »
Punjabi Bible (PANIRV)
ਅੱਯੂਬ 40 (PANIRV) »
Bengali Bible (BENIRV)
ইয়োব 40 (BENIRV) »
Tamil Bible (TAMIRV)
யோபு 40 (TAMIRV) »
Marathi Bible (MARIRV)
ईयोब 40 (MARIRV) »
Telugu Bible (TELIRV)
యోబు 40 (TELIRV) »
Gujarati Bible (GUJIRV)
અયૂબ 40 (GUJIRV) »
Hebrew Bible (HEB)
איוב 40 (HEB) »
Portuguese Bible (BSL)
Jó 40 (BSL) »
Vietnamese Bible (VIE)
Gióp 40 (VIE) »
Spanish Bible (RVA)
Job 40 (RVA) »
Italian Bible (RIV)
Giobbe 40 (RIV) »
Chinese Simplified (CUVS)
约 伯 记 40 (CUVS) »
Chinese Traditional (CUVT)
約 伯 記 40 (CUVT) »
Albanian Bible (ALB)
Jobi 40 (ALB) »
Swedish Bible (SV1917)
Job 40 (SV1917) »
Russian Bible (RUSV)
Иов 40 (RUSV) »
Ukrainian Bible (UKR)
Йов 40 (UKR) »
Hungarian Bible (KAR)
Jób 40 (KAR) »
Bulgarian Bible (BULG)
Йов 40 (BULG) »
Japanese Bible (JPN)
ヨブ記 40 (JPN) »
Norwegian Bible (NORSK)
Job 40 (NORSK) »

ಯೋಬನು (KANIRV) Chapter Selection

KANIRV Book Selection List