ಯೋಬನು Chapter 41 KANIRV Bible Verse Images

ಯೋಬನು 41 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಯೋಬನು 41 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಯೋಬನು 41:1 (KANIRV)
Square Portrait Landscape 4K UHD
ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ? ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ?

ಯೋಬನು 41:2 (KANIRV)
Square Portrait Landscape 4K UHD
ಅದರ ಮೂಗಿಗೆ ಗಾಳವನ್ನು ಇಡುವೆಯೋ? ಅದರ ದವಡೆಗೆ ಮುಳ್ಳನ್ನು ಚುಚ್ಚುವಿಯೋ?

ಯೋಬನು 41:3 (KANIRV)
Square Portrait Landscape 4K UHD
ಅದು ನಿನ್ನ ಬಳಿ ವಿಜ್ಞಾಪಿಸುವುದೋ? ನಿನ್ನ ಸಂಗಡ ಸವಿಮಾತನಾಡೀತೇ?

ಯೋಬನು 41:4 (KANIRV)
Square Portrait Landscape 4K UHD
ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೋ?

ಯೋಬನು 41:5 (KANIRV)
Square Portrait Landscape 4K UHD
ಅದನ್ನು ಪಕ್ಷಿಯಂತೆ ಆಡಿಸುವೆಯಾ? ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವೆಯಾ?

ಯೋಬನು 41:6 (KANIRV)
Square Portrait Landscape 4K UHD
ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? ವರ್ತಕರಿಗೆ ಹಂಚಿ ಮಾರುವರೋ?

ಯೋಬನು 41:7 (KANIRV)
Square Portrait Landscape 4K UHD
ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ ಅಥವಾ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲೆಯಾ?

ಯೋಬನು 41:8 (KANIRV)
Square Portrait Landscape 4K UHD
ಅದರ ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ.

ಯೋಬನು 41:9 (KANIRV)
Square Portrait Landscape 4K UHD
ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ! ಹಿಡಿಯಲು ಬಂದವನು ನೋಡಿದ ಮಾತ್ರಕ್ಕೆ ಬಿದ್ದು ಹೋಗುವನು.

ಯೋಬನು 41:10 (KANIRV)
Square Portrait Landscape 4K UHD
ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?

ಯೋಬನು 41:11 (KANIRV)
Square Portrait Landscape 4K UHD
ನಾನು ಸಾಲ ತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು? ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ.

ಯೋಬನು 41:12 (KANIRV)
Square Portrait Landscape 4K UHD
ನಾನು ಅದರ ಅಂಗಗಳನ್ನೂ ಶಕ್ತಿವಿಧಾನವನ್ನೂ ಸೊಗಸಾದ ಜೋಡಣೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು.

ಯೋಬನು 41:13 (KANIRV)
Square Portrait Landscape 4K UHD
ಅದರ ಹೊರಕವಚವನ್ನು ಯಾರು ತೆಗೆಯುವರು? ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು?

ಯೋಬನು 41:14 (KANIRV)
Square Portrait Landscape 4K UHD
ಮುಖದ ಕದಗಳನ್ನು ಯಾರು ತೆರೆದಾರು? ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ.

ಯೋಬನು 41:15 (KANIRV)
Square Portrait Landscape 4K UHD
ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿದೆ. ಅವು ಬಿಗಿದು ಮುದ್ರಿಸಲ್ಪಟ್ಟಿವೆ.

ಯೋಬನು 41:16 (KANIRV)
Square Portrait Landscape 4K UHD
ಗಾಳಿಯು ಕೂಡ ನುಗ್ಗದಂತೆ ಅವು ಒಂದಕ್ಕೊಂದು ಹೊಂದಿಕೊಂಡಿವೆ.

ಯೋಬನು 41:17 (KANIRV)
Square Portrait Landscape 4K UHD
ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ.

ಯೋಬನು 41:18 (KANIRV)
Square Portrait Landscape 4K UHD
ಅದರ ಸೀನಿನ ತುಂತುರುಗಳು ತಳತಳಿಸುವವು, ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ.

ಯೋಬನು 41:19 (KANIRV)
Square Portrait Landscape 4K UHD
ಬಾಯೊಳಗಿಂದ ಕೊಳ್ಳಿಗಳು ಹೊರಡುವವು, ಬೆಂಕಿಕಿಡಿಗಳು ಹಾರುವವು.

ಯೋಬನು 41:20 (KANIRV)
Square Portrait Landscape 4K UHD
ಆಪುಹುಲ್ಲಿಗೆ ಬೆಂಕಿಯಿಟ್ಟು ಊದಿ ಕಾಯಿಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಮೂಗಿನೊಳಗಿಂದ ಹೊಗೆ ಹಾಯುವುದು.

ಯೋಬನು 41:21 (KANIRV)
Square Portrait Landscape 4K UHD
ಅದರ ಉಸಿರೇ ಇದ್ದಲನ್ನು ಹೊತ್ತಿಸುವುದು, ಜ್ವಾಲೆಯು ಬಾಯಿಂದೇಳುವುದು.

ಯೋಬನು 41:22 (KANIRV)
Square Portrait Landscape 4K UHD
ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವುದು.

ಯೋಬನು 41:23 (KANIRV)
Square Portrait Landscape 4K UHD
ಅದರ ಮಾಂಸದ ಖಂಡಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ.

ಯೋಬನು 41:24 (KANIRV)
Square Portrait Landscape 4K UHD
ಅದರ ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.

ಯೋಬನು 41:25 (KANIRV)
Square Portrait Landscape 4K UHD
ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.

ಯೋಬನು 41:26 (KANIRV)
Square Portrait Landscape 4K UHD
ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು; ಬಾಣ ಭರ್ಜಿ ಈಟಿ ಇವುಗಳೂ ವ್ಯರ್ಥವೇ.

ಯೋಬನು 41:27 (KANIRV)
Square Portrait Landscape 4K UHD
ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ ತಾಮ್ರವನ್ನು ಕೊಳೆತ ಮರವನ್ನಾಗಿಯೂ ಭಾವಿಸುವುದು.

ಯೋಬನು 41:28 (KANIRV)
Square Portrait Landscape 4K UHD
ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು.

ಯೋಬನು 41:29 (KANIRV)
Square Portrait Landscape 4K UHD
ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವುದು; ಬಿರ್ರನೆ ಬರುವ ಈಟಿಗೆ ನಗುವುದು.

ಯೋಬನು 41:30 (KANIRV)
Square Portrait Landscape 4K UHD
ಅದರ ಕೆಳಭಾಗವು ಚೂಪಾದ ಬೋಕಿಗಳಾಗಿದೆ, ಅದು ಕೆಸರಿನ ಮೇಲೆ ಹಲಗೆಯ ಹಾಗೆ ನೀಡಿಕೊಂಡಿರುವುದು.

ಯೋಬನು 41:31 (KANIRV)
Square Portrait Landscape 4K UHD
ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು; ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವುದು.

ಯೋಬನು 41:32 (KANIRV)
Square Portrait Landscape 4K UHD
ಸಾಗರಕ್ಕೆ ನರೆ ಬಂತೋ ಎಂಬಂತೆ ತಾನು ಬಂದ ದಾರಿಯನ್ನು ಶುಭ್ರಗೊಳಿಸುವುದು.

ಯೋಬನು 41:33 (KANIRV)
Square Portrait Landscape 4K UHD
ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ, ಭಯವಿಲ್ಲದೆ ಇರುವುದಕ್ಕಾಗಿ ಸೃಷ್ಟಿಸಲ್ಪಟ್ಟಿದೆ.

ಯೋಬನು 41:34 (KANIRV)
Square Portrait Landscape 4K UHD
ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವುದು, ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವುದು.

Available Bible Translations

American Standard Version (ASV)
Job 41 (ASV) »
King James Version (KJV)
Job 41 (KJV) »
GOD’S WORD® (GW)
Job 41 (GW) »
Berean Bible (BSB)
Job 41 (BSB) »
World English Bible (WEB)
Job 41 (WEB) »
French Bible (LSG)
Job 41 (LSG) »
German Bible (LUTH1912)
Hiob 41 (LUTH1912) »
Punjabi Bible (PANIRV)
ਅੱਯੂਬ 41 (PANIRV) »
Bengali Bible (BENIRV)
ইয়োব 41 (BENIRV) »
Tamil Bible (TAMIRV)
யோபு 41 (TAMIRV) »
Marathi Bible (MARIRV)
ईयोब 41 (MARIRV) »
Telugu Bible (TELIRV)
యోబు 41 (TELIRV) »
Gujarati Bible (GUJIRV)
અયૂબ 41 (GUJIRV) »
Hebrew Bible (HEB)
איוב 41 (HEB) »
Portuguese Bible (BSL)
Jó 41 (BSL) »
Vietnamese Bible (VIE)
Gióp 41 (VIE) »
Spanish Bible (RVA)
Job 41 (RVA) »
Italian Bible (RIV)
Giobbe 41 (RIV) »
Chinese Simplified (CUVS)
约 伯 记 41 (CUVS) »
Chinese Traditional (CUVT)
約 伯 記 41 (CUVT) »
Albanian Bible (ALB)
Jobi 41 (ALB) »
Swedish Bible (SV1917)
Job 41 (SV1917) »
Russian Bible (RUSV)
Иов 41 (RUSV) »
Ukrainian Bible (UKR)
Йов 41 (UKR) »
Hungarian Bible (KAR)
Jób 41 (KAR) »
Bulgarian Bible (BULG)
Йов 41 (BULG) »
Japanese Bible (JPN)
ヨブ記 41 (JPN) »
Norwegian Bible (NORSK)
Job 41 (NORSK) »

ಯೋಬನು (KANIRV) Chapter Selection

KANIRV Book Selection List