1 ಪೂರ್ವಕಾಲವೃತ್ತಾಂತ Chapter 17 KANIRV Bible Verse Images

1 ಪೂರ್ವಕಾಲವೃತ್ತಾಂತ 17 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಪೂರ್ವಕಾಲವೃತ್ತಾಂತ 17 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಪೂರ್ವಕಾಲವೃತ್ತಾಂತ 17:1 (KANIRV)
Square Portrait Landscape 4K UHD
ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದಾಗ ಒಂದು ದಿನ ಅವನು ಪ್ರವಾದಿಯಾದ ನಾತಾನನನ್ನು ಬರಲು ಹೇಳಿ, “ನೋಡು, ನಾನು ದೇವದಾರುಮರದ ಅರಮನೆಯಲ್ಲಿ ವಾಸವಾಗಿದ್ದೇನೆ. ಯೆಹೋವನ ಒಡಂಬಡಿಕೆ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ” ಎಂದು ಹೇಳಿದನು.

1 ಪೂರ್ವಕಾಲವೃತ್ತಾಂತ 17:2 (KANIRV)
Square Portrait Landscape 4K UHD
ನಾತಾನನು ದಾವೀದನಿಗೆ, “ನಿನಗೆ ಮನಸ್ಸಿದ್ದಂತೆ ಮಾಡು, ದೇವರು ನಿನ್ನ ಸಂಗಡ ಇರುತ್ತಾನೆ” ಎಂದನು.

1 ಪೂರ್ವಕಾಲವೃತ್ತಾಂತ 17:3 (KANIRV)
Square Portrait Landscape 4K UHD
ಅದೇ ರಾತ್ರಿಯಲ್ಲಿ ದೇವರು ನಾತಾನನಿಗೆ ಆಜ್ಞಾಪಿಸಿದ್ದೇನೆಂದರೆ,

1 ಪೂರ್ವಕಾಲವೃತ್ತಾಂತ 17:4 (KANIRV)
Square Portrait Landscape 4K UHD
“ಹೋಗಿ ನನ್ನ ಸೇವಕನಾದ ದಾವೀದನಿಗೆ, ‘ನೀನು ನನಗೆ ಆಲಯವನ್ನು ಕಟ್ಟಬಾರದು.

1 ಪೂರ್ವಕಾಲವೃತ್ತಾಂತ 17:5 (KANIRV)
Square Portrait Landscape 4K UHD
ನಾನು ಇಸ್ರಾಯೇಲರನ್ನು ಐಗುಪ್ತದೇಶದಿಂದ ಬರಮಾಡಿದಂದಿನಿಂದ ಇಂದಿನ ವರೆಗೂ ಮನೆಯಲ್ಲಿ ವಾಸಮಾಡಲಿಲ್ಲ. ಗುಡಾರಗಳಲ್ಲಿ ವಾಸಿಸುತ್ತಾ ಇದ್ದೆನು.

1 ಪೂರ್ವಕಾಲವೃತ್ತಾಂತ 17:6 (KANIRV)
Square Portrait Landscape 4K UHD
ನಾನು ಇಸ್ರಾಯೇಲರ ಮಧ್ಯದಲ್ಲಿ ಸಂಚರಿಸುತ್ತಿದ್ದಾಗೆಲ್ಲಾ ನನ್ನ ಜನರಾದ ಇಸ್ರಾಯೇಲರನ್ನು ಪಾಲಿಸುವುದಕ್ಕೋಸ್ಕರ ನನ್ನಿಂದ ನೇಮಿಸಲ್ಪಟ್ಟ ಯಾವ ನ್ಯಾಯಸ್ಥಾಪಕನ್ನಾದರೂ ನೀವು ನನಗೋಸ್ಕರ ದೇವದಾರುಮರದ ಮನೆಯನ್ನು ಏಕೆ ಕಟ್ಟಲಿಲ್ಲ ಎಂದು ಕೇಳಿದೆನೋ ಎಂಬುದಾಗಿ ಯೆಹೋವನು ಅನ್ನುತ್ತಾನೆ’” ಎಂದು ಹೇಳು ಎಂದನು.

1 ಪೂರ್ವಕಾಲವೃತ್ತಾಂತ 17:7 (KANIRV)
Square Portrait Landscape 4K UHD
ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, “ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ಕರೆದುಕೊಂಡು ಬಂದು ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ನಾಯಕನನ್ನಾಗಿ ನೇಮಿಸಿದೆನು.

1 ಪೂರ್ವಕಾಲವೃತ್ತಾಂತ 17:8 (KANIRV)
Square Portrait Landscape 4K UHD
ನೀನು ಹೋದಲ್ಲೆಲ್ಲಾ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ಪ್ರಸಿದ್ಧಪಡಿಸುವೆನು.

1 ಪೂರ್ವಕಾಲವೃತ್ತಾಂತ 17:9 (KANIRV)
Square Portrait Landscape 4K UHD
ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಅಲ್ಲಿ ವಾಸಮಾಡುವರು.

1 ಪೂರ್ವಕಾಲವೃತ್ತಾಂತ 17:10 (KANIRV)
Square Portrait Landscape 4K UHD
ಪೂರ್ವಕಾಲದಲ್ಲೂ, ನಾನು ನನ್ನ ಜನರಾದ ಇಸ್ರಾಯೇಲರಿಗಾಗಿ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದೀಚೆಗೆ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವುದಿಲ್ಲ. ನಿನ್ನ ಶತ್ರುಗಳನ್ನು ನಿನಗೆ ಅಧೀನಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನು ಎಂದು ಮಾತುಕೊಡುತ್ತೇನೆ.

1 ಪೂರ್ವಕಾಲವೃತ್ತಾಂತ 17:11 (KANIRV)
Square Portrait Landscape 4K UHD
ನಿನ್ನ ಆಯುಷ್ಕಾಲವು ಮುಗಿದು ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅಭಿವೃದ್ಧಿಪಡಿಸಿ, ಅವನ ರಾಜ್ಯವನ್ನು ಸ್ಥಿರಪಡಿಸುವೆನು.

1 ಪೂರ್ವಕಾಲವೃತ್ತಾಂತ 17:12 (KANIRV)
Square Portrait Landscape 4K UHD
ಅವನು ನನಗಾಗಿ ಒಂದು ಮನೆಯನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.

1 ಪೂರ್ವಕಾಲವೃತ್ತಾಂತ 17:13 (KANIRV)
Square Portrait Landscape 4K UHD
ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ನನ್ನ ಕೃಪೆಯನ್ನು ನಿನಗಿಂತ ಮುಂಚೆ ಇದ್ದವನಿಂದ ತೆಗೆದು ಹಾಕಿದ ಹಾಗೆ ಅವನಿಂದ ತೆಗೆಯುವುದಿಲ್ಲ.

1 ಪೂರ್ವಕಾಲವೃತ್ತಾಂತ 17:14 (KANIRV)
Square Portrait Landscape 4K UHD
ಅವನನ್ನು ನನ್ನ ಮನೆಯಲ್ಲಿಯೂ, ನನ್ನ ರಾಜ್ಯದಲ್ಲಿಯೂ ಸದಾ ಸ್ಥಿರಗೊಳಿಸುವೆನು. ಅವನ ಸಿಂಹಾಸನವು ಶಾಶ್ವತವಾಗಿರುವುದು” ಎಂಬುದೇ.

1 ಪೂರ್ವಕಾಲವೃತ್ತಾಂತ 17:15 (KANIRV)
Square Portrait Landscape 4K UHD
ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು.

1 ಪೂರ್ವಕಾಲವೃತ್ತಾಂತ 17:16 (KANIRV)
Square Portrait Landscape 4K UHD
ಆಗ ಅರಸನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತುಕೊಂಡು ಹೇಳಿದ್ದೇನೆಂದರೆ, “ದೇವರೇ, ಯೆಹೋವನೇ, ನನ್ನಂಥವನಿಗೆ ಈ ಪದವಿಯನ್ನು ಅನುಗ್ರಹಿಸಿದ್ದಿ, ನಾನೆಷ್ಟರವನು? ನನ್ನ ಮನೆ ಎಷ್ಟರದು?

1 ಪೂರ್ವಕಾಲವೃತ್ತಾಂತ 17:17 (KANIRV)
Square Portrait Landscape 4K UHD
ದೇವರೇ, ಇದು ಸಾಲದೆಂದೆಣಿಸಿ, ನಿನ್ನ ಸೇವಕನ ಮುಂಬರುವ ಸಂತಾನದ ವಿಷಯವಾಗಿಯೂ ನನಗೆ ವಾಗ್ದಾನಮಾಡಿರುವೆ. ದೇವರೇ, ಯೆಹೋವನೇ, ನಾನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ನೀನು ನನ್ನನ್ನು ಕಟಾಕ್ಷಿಸಿದ್ದೀ.

1 ಪೂರ್ವಕಾಲವೃತ್ತಾಂತ 17:18 (KANIRV)
Square Portrait Landscape 4K UHD
ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ. ಅವನು ತನಗುಂಟಾದ ಘನತೆಯನ್ನು ಕುರಿತು ಇನ್ನೇನು ಹೇಳಾನು.

1 ಪೂರ್ವಕಾಲವೃತ್ತಾಂತ 17:19 (KANIRV)
Square Portrait Landscape 4K UHD
ಯೆಹೋವನೇ, ನಿನ್ನ ಸೇವಕನ ಮೇಲಿಗಾಗಿಯೂ, ನಿನ್ನ ಚಿತ್ತಾನುಸಾರವಾಗಿಯೂ ಈ ಎಲ್ಲಾ ಮಹತ್ಕಾರ್ಯಗಳನ್ನು ನಡೆಸಿ, ನಿನ್ನ ಸತ್ಯ ಮಹತ್ವವನ್ನು ತೋರ್ಪಡಿಸಿರುವೆ.

1 ಪೂರ್ವಕಾಲವೃತ್ತಾಂತ 17:20 (KANIRV)
Square Portrait Landscape 4K UHD
ಯೆಹೋವನೇ, ನಿನಗೆ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿನ್ನ ಹೊರತು ಬೇರೆ ದೇವರೇ ಇಲ್ಲವೆಂಬುದು ನಿಶ್ಚಯ.

1 ಪೂರ್ವಕಾಲವೃತ್ತಾಂತ 17:21 (KANIRV)
Square Portrait Landscape 4K UHD
ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಭೂಲೋಕದಲ್ಲಿ ಯಾವುದಿರುತ್ತದೆ? ದೇವರಾದ ನೀನೇ ಚಿತ್ತೈಯಿಸಿ, ಅದನ್ನು ವಿಮೋಚಿಸಿ, ಸ್ವಪ್ರಜೆಯಾಗಿ ಮಾಡಿಕೊಂಡಿ. ಭಯಂಕರವಾದ ಮಹತ್ಕಾರ್ಯಗಳಿಂದ ನಿನ್ನ ಹೆಸರನ್ನು ಪ್ರಸಿದ್ಧಿಪಡಿಸಿದಿ. ನೀನು ಐಗುಪ್ತರ ಕೈಯೊಳಗಿಂದ ತಪ್ಪಿಸಿ ರಕ್ಷಿಸಿದ ನಿನ್ನ ಪ್ರಜೆಯ ಎದುರಿನಿಂದ ಅನ್ಯಜನಾಂಗಗಳನ್ನು ಹೊರಡಿಸಿಬಿಟ್ಟಿ.

1 ಪೂರ್ವಕಾಲವೃತ್ತಾಂತ 17:22 (KANIRV)
Square Portrait Landscape 4K UHD
ಇಸ್ರಾಯೇಲರು ಸದಾಕಾಲವು ನಿನ್ನ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದ್ದೀ. ಯೆಹೋವನೇ, ನೀನು ಅವರಿಗೆ ದೇವರಾಗಿದ್ದಿ.

1 ಪೂರ್ವಕಾಲವೃತ್ತಾಂತ 17:23 (KANIRV)
Square Portrait Landscape 4K UHD
ಯೆಹೋವನೇ, ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನೂ ಕುರಿತು ಮಾಡಿದ ವಾಗ್ದಾನವನ್ನು ಶಾಶ್ವತಪಡಿಸಿ ನೆರವೇರಿಸು. ಅದು ಸದಾ ಸ್ಥಿರವಾಗಿರಲಿ.

1 ಪೂರ್ವಕಾಲವೃತ್ತಾಂತ 17:24 (KANIRV)
Square Portrait Landscape 4K UHD
ಜನರು ‘ಸೇನಾಧೀಶ್ವರನಾದ ಯೆಹೋವನು ಇಸ್ರಾಯೇಲ್ ದೇವರೂ, ಶರಣನೂ ಆಗಿದ್ದಾನೆ. ತನ್ನ ಸೇವಕನಾದ ದಾವೀದನ ಮನೆಯನ್ನು ತನ್ನ ಸನ್ನಿಧಿಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳುತ್ತಾನೆ’ ಎಂದು ನಿನ್ನ ನಾಮವನ್ನು ಕೊಂಡಾಡಲಿ.

1 ಪೂರ್ವಕಾಲವೃತ್ತಾಂತ 17:25 (KANIRV)
Square Portrait Landscape 4K UHD
ನನ್ನ ದೇವರೇ, ನೀನು ನಿನ್ನ ಸೇವಕನಿಗೆ, ‘ನಾನು ನಿನಗೊಂದು ಮನೆಯನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು.

1 ಪೂರ್ವಕಾಲವೃತ್ತಾಂತ 17:26 (KANIRV)
Square Portrait Landscape 4K UHD
ಯೆಹೋವನೇ, ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ನನ್ನ ದೇವರಾಗಿರುತ್ತೀ.

1 ಪೂರ್ವಕಾಲವೃತ್ತಾಂತ 17:27 (KANIRV)
Square Portrait Landscape 4K UHD
ಈಗ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸಿ, ಅದನ್ನು ಸದಾಕಾಲವೂ ನಿನ್ನ ಆಶ್ರಯದಲ್ಲಿಟ್ಟುಕೊಳ್ಳಬೇಕೆಂದು ಮನಸ್ಸು ಮಾಡಿದ್ದೀ. ಯೆಹೋವನೇ, ನೀನು ಅದನ್ನು ಆಶೀರ್ವದಿಸಿದ್ದೀ. ಅದು ನಿತ್ಯವೂ ಸೌಭಾಗ್ಯದಿಂದಿರುವುದು” ಎಂದು ಪ್ರಾರ್ಥಿಸಿದನು.

Available Bible Translations

American Standard Version (ASV)
1 Chronicles 17 (ASV) »
King James Version (KJV)
1 Chronicles 17 (KJV) »
GOD’S WORD® (GW)
1 Chronicles 17 (GW) »
Berean Bible (BSB)
1 Chronicles 17 (BSB) »
World English Bible (WEB)
1 Chronicles 17 (WEB) »
French Bible (LSG)
1 Chroniques 17 (LSG) »
German Bible (LUTH1912)
1 Chronik 17 (LUTH1912) »
Arabic Bible (AVD)
١ أخبار 17 (AVD) »
Portuguese Bible (BSL)
1 Crônicas 17 (BSL) »
Vietnamese Bible (VIE)
1 Sử Ký 17 (VIE) »
Spanish Bible (RVA)
1 Crónicas 17 (RVA) »
Italian Bible (RIV)
1 Cronache 17 (RIV) »
Chinese Simplified (CUVS)
历 代 志 上 17 (CUVS) »
Chinese Traditional (CUVT)
歷 代 志 上 17 (CUVT) »
Albanian Bible (ALB)
1 Kronikave 17 (ALB) »
Swedish Bible (SV1917)
1 Krönikeboken 17 (SV1917) »
Ukrainian Bible (UKR)
1 хроніки 17 (UKR) »
Hungarian Bible (KAR)
1 Krónika 17 (KAR) »
Bulgarian Bible (BULG)
1 Летописи 17 (BULG) »
Japanese Bible (JPN)
歴代志上 17 (JPN) »
Norwegian Bible (NORSK)
1 Krønikebok 17 (NORSK) »

1 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List