ಕೀರ್ತನೆಗಳು Chapter 38 KANIRV Bible Verse Images

ಕೀರ್ತನೆಗಳು 38 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 38 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 38:1 (KANIRV)
Square Portrait Landscape 4K UHD
ದಾವೀದನ ಕೀರ್ತನೆ; ಜ್ಞಾಪಕಾರ್ಥ ನೈವೇದ್ಯಸಮರ್ಪಣೆಯಲ್ಲಿ ಹಾಡತಕ್ಕದ್ದು. ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ.

ಕೀರ್ತನೆಗಳು 38:2 (KANIRV)
Square Portrait Landscape 4K UHD
ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ; ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ.

ಕೀರ್ತನೆಗಳು 38:3 (KANIRV)
Square Portrait Landscape 4K UHD
ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ; ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ.

ಕೀರ್ತನೆಗಳು 38:4 (KANIRV)
Square Portrait Landscape 4K UHD
ನನ್ನ ಅಪರಾಧಗಳು ನನ್ನನ್ನು ಮುಳುಗಿಸಿಬಿಟ್ಟಿವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತಿವೆ.

ಕೀರ್ತನೆಗಳು 38:5 (KANIRV)
Square Portrait Landscape 4K UHD
ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು, ಕೀವು ಸೋರಿ ದುರ್ವಾಸನೆಯಿಂದ ನಾರುತ್ತಿದೆ.

ಕೀರ್ತನೆಗಳು 38:6 (KANIRV)
Square Portrait Landscape 4K UHD
ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.

ಕೀರ್ತನೆಗಳು 38:7 (KANIRV)
Square Portrait Landscape 4K UHD
ನನ್ನ ಸೊಂಟಕ್ಕೆ ಉರಿಬಡಿದಂತಿದೆ; ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ.

ಕೀರ್ತನೆಗಳು 38:8 (KANIRV)
Square Portrait Landscape 4K UHD
ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.

ಕೀರ್ತನೆಗಳು 38:9 (KANIRV)
Square Portrait Landscape 4K UHD
ಕರ್ತನೇ, ನನ್ನ ಅಪೇಕ್ಷೆ ನಿನಗೆ ಗೊತ್ತುಂಟು; ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.

ಕೀರ್ತನೆಗಳು 38:10 (KANIRV)
Square Portrait Landscape 4K UHD
ನನ್ನ ಹೃದಯವು ಬಡಿದುಕೊಳ್ಳುತ್ತಿದೆ; ನನ್ನ ಚೈತನ್ಯವು ಕುಗ್ಗಿಹೋಯಿತು; ನನ್ನ ಕಣ್ಣುಗಳೂ ಮೊಬ್ಬಾಗಿ ಹೋದವು.

ಕೀರ್ತನೆಗಳು 38:11 (KANIRV)
Square Portrait Landscape 4K UHD
ನನ್ನ ಆಪ್ತಸ್ನೇಹಿತರು ಮತ್ತು ಜೊತೆಗಾರರು, ನನ್ನ ರೋಗವನ್ನು ನೋಡಿ ಓರೆಯಾಗಿ ಹೋಗುತ್ತಾರೆ; ನನ್ನ ಬಂಧುಗಳು ದೂರ ನಿಲ್ಲುತ್ತಾರೆ.

ಕೀರ್ತನೆಗಳು 38:12 (KANIRV)
Square Portrait Landscape 4K UHD
ನನ್ನ ಪ್ರಾಣವನ್ನು ತೆಗೆಯಬೇಕೆನ್ನುವವರು ನನಗೆ ಉರುಲುಗಳನ್ನು ಒಡ್ಡಿದ್ದಾರೆ; ನನ್ನ ವಿಪತ್ತನ್ನು ಕೋರುವವರು ನನಗೆ ನಾಶನವನ್ನೇ ನಿಶ್ಚಯಿಸಿಕೊಂಡು, ಯಾವಾಗಲೂ ಮೋಸವನ್ನು ಕಲ್ಪಿಸುತ್ತಿದ್ದಾರೆ.

ಕೀರ್ತನೆಗಳು 38:13 (KANIRV)
Square Portrait Landscape 4K UHD
ನಾನಂತೂ ಕಿವುಡನಂತೆ ಕೇಳದವನಾಗಿದ್ದೇನೆ; ಮೂಕನಂತೆ ಬಾಯಿ ತೆರೆಯುವುದೇ ಇಲ್ಲ.

ಕೀರ್ತನೆಗಳು 38:14 (KANIRV)
Square Portrait Landscape 4K UHD
ನಾನು ಕಿವಿ ಕೇಳಿಸದವನಂತೆಯೂ, ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.

ಕೀರ್ತನೆಗಳು 38:15 (KANIRV)
Square Portrait Landscape 4K UHD
ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು.

ಕೀರ್ತನೆಗಳು 38:16 (KANIRV)
Square Portrait Landscape 4K UHD
“ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; ನಾನು ಜಾರಿಬಿದ್ದರೆ ಹಿಗ್ಗಬಾರದು” ಅಂದುಕೊಂಡೆನು.

ಕೀರ್ತನೆಗಳು 38:17 (KANIRV)
Square Portrait Landscape 4K UHD
ನನಗೆ ಆಪತ್ತೇ ಸಿದ್ಧವಾಗಿದೆ; ಯಾವಾಗಲೂ ನನಗೆ ಸಂಕಟವಿದೆ.

ಕೀರ್ತನೆಗಳು 38:18 (KANIRV)
Square Portrait Landscape 4K UHD
ನಾನು ಅಪರಾಧಿಯೇ ಎಂದು ಒಪ್ಪಿಕೊಳ್ಳುತ್ತೇನೆ; ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನವುಂಟಾಯಿತು.

ಕೀರ್ತನೆಗಳು 38:19 (KANIRV)
Square Portrait Landscape 4K UHD
ನನ್ನ ಶತ್ರುಗಳು ಚುರುಕಾದವರೂ, ಬಲಿಷ್ಠರೂ ಆಗಿದ್ದಾರೆ; ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹು ಜನ.

ಕೀರ್ತನೆಗಳು 38:20 (KANIRV)
Square Portrait Landscape 4K UHD
ನಾನು ಒಳ್ಳೆಯದನ್ನು ಅನುಸರಿಸುವುದರಿಂದ, ನನ್ನ ಎದುರಾಳಿಗಳು ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನೇ ಸಲ್ಲಿಸುವರು.

ಕೀರ್ತನೆಗಳು 38:21 (KANIRV)
Square Portrait Landscape 4K UHD
ಯೆಹೋವನೇ, ಕೈ ಬಿಡಬೇಡ; ನನ್ನ ದೇವರೇ, ದೂರವಾಗಿರಬೇಡ.

ಕೀರ್ತನೆಗಳು 38:22 (KANIRV)
Square Portrait Landscape 4K UHD
ನನ್ನ ಕರ್ತನೇ, ನನ್ನ ರಕ್ಷಕನೇ, ಬೇಗ ಬಂದು ಸಹಾಯಮಾಡು.

Available Bible Translations

American Standard Version (ASV)
Psalms 38 (ASV) »
King James Version (KJV)
Psalms 38 (KJV) »
GOD’S WORD® (GW)
Psalms 38 (GW) »
Berean Bible (BSB)
Psalms 38 (BSB) »
World English Bible (WEB)
Psalms 38 (WEB) »
French Bible (LSG)
Psaumes 38 (LSG) »
German Bible (LUTH1912)
Psalm 38 (LUTH1912) »
Punjabi Bible (PANIRV)
ਜ਼ਬੂਰ 38 (PANIRV) »
Hebrew Bible (HEB)
תהלים 38 (HEB) »
Portuguese Bible (BSL)
Salmos 38 (BSL) »
Vietnamese Bible (VIE)
Thánh Thi 38 (VIE) »
Spanish Bible (RVA)
Salmos 38 (RVA) »
Italian Bible (RIV)
Salmi 38 (RIV) »
Chinese Simplified (CUVS)
诗 篇 38 (CUVS) »
Chinese Traditional (CUVT)
詩 篇 38 (CUVT) »
Albanian Bible (ALB)
Psalmet 38 (ALB) »
Swedish Bible (SV1917)
Psaltaren 38 (SV1917) »
Russian Bible (RUSV)
Псалтирь 38 (RUSV) »
Ukrainian Bible (UKR)
Псалми 38 (UKR) »
Hungarian Bible (KAR)
Zsoltárok 38 (KAR) »
Bulgarian Bible (BULG)
Псалми 38 (BULG) »
Japanese Bible (JPN)
詩篇 38 (JPN) »
Norwegian Bible (NORSK)
Salmene 38 (NORSK) »

KANIRV Book Selection List