ಕೀರ್ತನೆಗಳು Chapter 107 KANIRV Bible Verse Images

ಕೀರ್ತನೆಗಳು 107 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 107 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 107:1 (KANIRV)
Square Portrait Landscape 4K UHD
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.

ಕೀರ್ತನೆಗಳು 107:2 (KANIRV)
Square Portrait Landscape 4K UHD
ಯೆಹೋವನ ವಿಮುಕ್ತರು ಅಂದರೆ ಆತನು ಶತ್ರುಗಳಿಂದ ಬಿಡಿಸಿ,

ಕೀರ್ತನೆಗಳು 107:3 (KANIRV)
Square Portrait Landscape 4K UHD
ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣಗಳಲ್ಲಿಯೂ, ಸಮುದ್ರದ ಕಡೆಯಲ್ಲಿಯೂ ಇರುವ ದೇಶಗಳಿಂದ ಕೂಡಿಸಿದವರೆಲ್ಲರೂ ಸ್ತುತಿಮಾಡಲಿ.

ಕೀರ್ತನೆಗಳು 107:4 (KANIRV)
Square Portrait Landscape 4K UHD
ಅವರು ಅರಣ್ಯದಲ್ಲಿಯೂ, ಮರಳುಗಾಡಿನಲ್ಲಿಯೂ, ದಾರಿತಪ್ಪಿ ಅಲೆಯುವವರಾಗಿ, ಜನವಿರುವ ಊರನ್ನು ಕಾಣದೆ,

ಕೀರ್ತನೆಗಳು 107:5 (KANIRV)
Square Portrait Landscape 4K UHD
ಹಸಿವೆ, ನೀರಡಿಕೆಗಳಿಂದ ಬಲಗುಂದಿದವರಾಗಿದ್ದರು.

ಕೀರ್ತನೆಗಳು 107:6 (KANIRV)
Square Portrait Landscape 4K UHD
ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಬಿಡಿಸಿದನು.

ಕೀರ್ತನೆಗಳು 107:7 (KANIRV)
Square Portrait Landscape 4K UHD
ಜನವಿರುವ ಊರನ್ನು ಸೇರುವಂತೆ, ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿದನು.

ಕೀರ್ತನೆಗಳು 107:8 (KANIRV)
Square Portrait Landscape 4K UHD
ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.

ಕೀರ್ತನೆಗಳು 107:9 (KANIRV)
Square Portrait Landscape 4K UHD
ಆತನು ಬಾಯಾರಿದವರ ಆಶೆಯನ್ನು ಪೂರೈಸಿ, ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸುತ್ತಾನೆ.

ಕೀರ್ತನೆಗಳು 107:10 (KANIRV)
Square Portrait Landscape 4K UHD
ಕತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ, ಬೇಡಿಗಳಿಂದ ಬಂಧಿಸಲ್ಪಟ್ಟು, ನೋವಿನಿಂದ ಬಿದ್ದುಕೊಂಡಿದ್ದರು.

ಕೀರ್ತನೆಗಳು 107:11 (KANIRV)
Square Portrait Landscape 4K UHD
ಅವರು ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ನಿಂತು, ಪರಾತ್ಪರನಾದ ದೇವರ ಸಂಕಲ್ಪವನ್ನು ನಿರಾಕರಿಸಿದ್ದರಿಂದ,

ಕೀರ್ತನೆಗಳು 107:12 (KANIRV)
Square Portrait Landscape 4K UHD
ಆತನು ಅವರನ್ನು ಕಷ್ಟಗಳಿಂದ ಕುಗ್ಗಿಸಿದನು; ನಿರಾಶ್ರಯರಾಗಿ ಬಿದ್ದುಹೋದರು.

ಕೀರ್ತನೆಗಳು 107:13 (KANIRV)
Square Portrait Landscape 4K UHD
ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು.

ಕೀರ್ತನೆಗಳು 107:14 (KANIRV)
Square Portrait Landscape 4K UHD
ಆತನು ಅವರ ಬಂಧನಗಳನ್ನು ತೆಗೆದುಹಾಕಿ, ಕತ್ತಲೆಯಿಂದಲೂ, ಘೋರಾಂಧಕಾರದಿಂದಲೂ ಅವರನ್ನು ಹೊರತಂದನು.

ಕೀರ್ತನೆಗಳು 107:15 (KANIRV)
Square Portrait Landscape 4K UHD
ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.

ಕೀರ್ತನೆಗಳು 107:16 (KANIRV)
Square Portrait Landscape 4K UHD
ಆತನು ತಾಮ್ರದ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಟ್ಟಿದ್ದಾನೆ.

ಕೀರ್ತನೆಗಳು 107:17 (KANIRV)
Square Portrait Landscape 4K UHD
ಮೂರ್ಖರು ಅಪರಾಧ, ದುರಾಚಾರಗಳ ದೆಸೆಯಿಂದ ಬಾಧೆಗೊಳಗಾದರು.

ಕೀರ್ತನೆಗಳು 107:18 (KANIRV)
Square Portrait Landscape 4K UHD
ಎಲ್ಲಾ ಆಹಾರಕ್ಕೂ ಅಸಹ್ಯಪಟ್ಟು ಮರಣದ್ವಾರಕ್ಕೆ ಸಮೀಪವಾದರು.

ಕೀರ್ತನೆಗಳು 107:19 (KANIRV)
Square Portrait Landscape 4K UHD
ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ತಪ್ಪಿಸಿದನು.

ಕೀರ್ತನೆಗಳು 107:20 (KANIRV)
Square Portrait Landscape 4K UHD
ಆತನು ದೂತನನ್ನೋ ಎಂಬಂತೆ ತನ್ನ ವಾಕ್ಯವನ್ನು ಕಳುಹಿಸಿ, ಅವರನ್ನು ಗುಣಪಡಿಸಿದನು; ಸಮಾಧಿಗೆ ಸೇರದಂತೆ ಮಾಡಿದನು.

ಕೀರ್ತನೆಗಳು 107:21 (KANIRV)
Square Portrait Landscape 4K UHD
ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ.

ಕೀರ್ತನೆಗಳು 107:22 (KANIRV)
Square Portrait Landscape 4K UHD
ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸಿ, ಉತ್ಸಾಹಧ್ವನಿಮಾಡುತ್ತಾ ಆತನ ಮಹತ್ಕಾರ್ಯಗಳನ್ನು ವರ್ಣಿಸಲಿ.

ಕೀರ್ತನೆಗಳು 107:23 (KANIRV)
Square Portrait Landscape 4K UHD
ಹಡಗು ಹತ್ತಿ ಸಮುದ್ರ ಪ್ರಯಾಣ ಮಾಡುತ್ತಾ, ಮಹಾಜಲರಾಶಿಯಲ್ಲಿ ತಮ್ಮ ಉದ್ಯೋಗವನ್ನು ನಡೆಸುವವರು,

ಕೀರ್ತನೆಗಳು 107:24 (KANIRV)
Square Portrait Landscape 4K UHD
ಯೆಹೋವನ ಮಹತ್ಕಾರ್ಯಗಳನ್ನೂ, ಅಗಾಧಜಲದಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ.

ಕೀರ್ತನೆಗಳು 107:25 (KANIRV)
Square Portrait Landscape 4K UHD
ಆತನು ಅಪ್ಪಣೆಕೊಡಲು ಬಿರುಗಾಳಿಯುಂಟಾಗಿ, ಅದರಲ್ಲಿ ತೆರೆಗಳನ್ನು ಎಬ್ಬಿಸಿತು.

ಕೀರ್ತನೆಗಳು 107:26 (KANIRV)
Square Portrait Landscape 4K UHD
ಜನರು ಆಕಾಶಕ್ಕೆ ಏರುತ್ತಲೂ, ಅಗಾಧಕ್ಕೆ ಇಳಿಯುತ್ತಲೂ ಕಂಗೆಟ್ಟು ಕರಗಿಹೋದರು.

ಕೀರ್ತನೆಗಳು 107:27 (KANIRV)
Square Portrait Landscape 4K UHD
ಅವರು ದಿಕ್ಕುತೋರದವರಾಗಿ ಸುತ್ತುತ್ತಾ, ಕುಡುಕರಂತೆ ಹೊಯ್ದಾಡುತ್ತಿದ್ದರು.

ಕೀರ್ತನೆಗಳು 107:28 (KANIRV)
Square Portrait Landscape 4K UHD
ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಹೊರತಂದನು.

ಕೀರ್ತನೆಗಳು 107:29 (KANIRV)
Square Portrait Landscape 4K UHD
ಆತನು ಬಿರುಗಾಳಿಯನ್ನು ಶಾಂತಪಡಿಸಿದನು; ತೆರೆಗಳು ನಿಂತವು.

ಕೀರ್ತನೆಗಳು 107:30 (KANIRV)
Square Portrait Landscape 4K UHD
ಸಮುದ್ರವು ಶಾಂತವಾದುದರಿಂದ, ಹಡಗಿನವರು ಸಂತೋಷಪಟ್ಟರು, ಅವರು ಮುಟ್ಟಬೇಕಾದ ರೇವಿಗೆ ಆತನು ಅವರನ್ನು ಸೇರಿಸಿದನು.

ಕೀರ್ತನೆಗಳು 107:31 (KANIRV)
Square Portrait Landscape 4K UHD
ಅವರು ಯೆಹೋವನ ಕೃಪೆಗೋಸ್ಕರವೂ ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ.

ಕೀರ್ತನೆಗಳು 107:32 (KANIRV)
Square Portrait Landscape 4K UHD
ನೆರೆದ ಸಭೆಯಲ್ಲಿ ಆತನನ್ನು ಕೀರ್ತಿಸಲಿ; ಹಿರಿಯರ ಸಮೂಹದಲ್ಲಿ ಕೊಂಡಾಡಲಿ.

ಕೀರ್ತನೆಗಳು 107:33 (KANIRV)
Square Portrait Landscape 4K UHD
ಆತನು ನಿವಾಸಿಗಳ ದುಷ್ಟತನಕ್ಕಾಗಿ ನದಿಗಳನ್ನು ಅರಣ್ಯವಾಗುವಂತೆಯೂ,

ಕೀರ್ತನೆಗಳು 107:34 (KANIRV)
Square Portrait Landscape 4K UHD
ನೀರಿನ ಬುಗ್ಗೆಗಳನ್ನು ಒಣನೆಲವಾಗುವಂತೆಯೂ, ಫಲಭೂಮಿಯನ್ನು ಉಪ್ಪು ನೆಲವಾಗುವಂತೆಯೂ ಮಾಡಿದನು.

ಕೀರ್ತನೆಗಳು 107:35 (KANIRV)
Square Portrait Landscape 4K UHD
ಅರಣ್ಯವನ್ನು ಕೆರೆಯಾಗಿಯೂ, ಒಣನೆಲವನ್ನು ಬುಗ್ಗೆಗಳಾಗಿಯೂ ಮಾಡಿ,

ಕೀರ್ತನೆಗಳು 107:36 (KANIRV)
Square Portrait Landscape 4K UHD
ಅಲ್ಲಿ ಹಸಿದವರನ್ನು ನೆಲೆಗೊಳಿಸಿದನು; ಅವರು ನೆಲೆಯಾಗಿ ವಾಸಿಸಲು ಪಟ್ಟಣವನ್ನು ಕಟ್ಟಿಕೊಂಡು,

ಕೀರ್ತನೆಗಳು 107:37 (KANIRV)
Square Portrait Landscape 4K UHD
ಹೊಲಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಟ್ಟು, ಆದಾಯವನ್ನು ಕೂಡಿಸಿಕೊಂಡರು.

ಕೀರ್ತನೆಗಳು 107:38 (KANIRV)
Square Portrait Landscape 4K UHD
ಆತನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚಿದರು. ಅವರಿಗೆ ದನಕರುಗಳೇನೂ ಕಡಿಮೆ ಇರಲಿಲ್ಲ.

ಕೀರ್ತನೆಗಳು 107:39 (KANIRV)
Square Portrait Landscape 4K UHD
ಅವರು ಕೇಡು ತೊಂದರೆಗಳಿಂದಲೂ, ಸಂಕಟದಿಂದಲೂ ಕುಗ್ಗಿಹೋಗಿ ಸ್ವಲ್ಪ ಜನರಾದರು.

ಕೀರ್ತನೆಗಳು 107:40 (KANIRV)
Square Portrait Landscape 4K UHD
ಪ್ರಭುಗಳಿಗೆ ಅಪಮಾನವನ್ನು ಉಂಟುಮಾಡಿ, ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವವನು.

ಕೀರ್ತನೆಗಳು 107:41 (KANIRV)
Square Portrait Landscape 4K UHD
ಕಷ್ಟದಲ್ಲಿದ್ದ ದೀನರನ್ನು ಉನ್ನತಸ್ಥಿತಿಗೆ ಏರಿಸಿ, ಅವರ ಕುಟುಂಬಗಳನ್ನು ಕುರಿಹಿಂಡಿನಂತೆ ಹೆಚ್ಚಿಸಿದನು.

ಕೀರ್ತನೆಗಳು 107:42 (KANIRV)
Square Portrait Landscape 4K UHD
ಯಥಾರ್ಥರು ಇದನ್ನು ನೋಡಿ ಹಿಗ್ಗುವರು; ಕೆಡುಕುಬಾಯಿ ಮುಚ್ಚಿಹೋಗುವುದು.

ಕೀರ್ತನೆಗಳು 107:43 (KANIRV)
Square Portrait Landscape 4K UHD
ಜ್ಞಾನಿಗಳು ಈ ಸಂಗತಿಗಳನ್ನು ಗಮನಿಸಿ, ಯೆಹೋವನ ಕೃಪಾಕಾರ್ಯಗಳನ್ನು ಗ್ರಹಿಸಿಕೊಳ್ಳಲಿ.

Available Bible Translations

American Standard Version
Psalms 107 (ASV) »
King James Version
Psalms 107 (KJV) »
GOD’S WORD® (GW)
Psalms 107 (GW) »
World English Bible
Psalms 107 (WEB) »
Louis Segond 1910
Psaumes 107 (LSG) »
Luther Bibel 1912
Psalm 107 (LUTH1912) »
इंडियन रिवाइज्ड वर्जन - हिंदी
भजन संहिता 107 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਬੂਰ 107 (PANIRV) »
ভারতীয় সংশোধিত সংস্করণ - বাংলা
গীতমালা 107 (BENIRV) »
இந்தியன் ரீவைஸ்டு வேர்ஷன் - தமிழ்
சங்கீதங்கள் 107 (TAMIRV) »
इंडियन रिवाइज्ड वर्जन - मराठी
स्तोत्रसंहिता 107 (MARIRV) »
ఇండియన్ రేవిజ్డ్ వెర్షన్ - తెలుగు
కీర్తన 107 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતશાસ્ત્ર 107 (GUJIRV) »
الكتاب المقدس باللغة العربية، فان دايك
اَلْمَزَامِيرُ 107 (AVD) »
תנ ך עברי מודרני
תהלים 107 (HEB) »
Bíblia Sagrada Português
Salmos 107 (BSL) »
Kinh Thánh: Tiếng Việt
Thánh Thi 107 (VIE) »
Reina Valera Antigua
Salmos 107 (RVA) »
La Sacra Bibbia
Salmi 107 (RIV) »
圣 经 简体中文和合本
诗 篇 107 (CUVS) »
聖 經 繁體中文和合本
詩 篇 107 (CUVT) »
Bibla e Shenjtë
Psalmet 107 (ALB) »
Svenska Bibeln 1917
Psaltaren 107 (SV1917) »
Библия на русском
Псалтирь 107 (RUSV) »
Українська Біблія
Псалми 107 (UKR) »
Szent Biblia - Magyar
Zsoltárok 107 (KAR) »
Българска Библия
Псалми 107 (BULG) »
聖書 日本語
詩篇 107 (JPN) »
Kitaabka Quduuska Ah
Sabuurradii 107 (SOM) »
De Heilige Schrift
Psalmen 107 (NLD) »
Dansk Bibel 1871
Salme 107 (DA1871) »

KANIRV Book Selection List