ಕೀರ್ತನೆಗಳು Chapter 118 KANIRV Bible Verse Images

ಕೀರ್ತನೆಗಳು 118 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 118 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 118:1 (KANIRV)
Square Portrait Landscape 4K UHD
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿದೆ.

ಕೀರ್ತನೆಗಳು 118:2 (KANIRV)
Square Portrait Landscape 4K UHD
ಇಸ್ರಾಯೇಲರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

ಕೀರ್ತನೆಗಳು 118:3 (KANIRV)
Square Portrait Landscape 4K UHD
ಆರೋನನ ಮನೆತನದವರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

ಕೀರ್ತನೆಗಳು 118:4 (KANIRV)
Square Portrait Landscape 4K UHD
ಯೆಹೋವನ ಭಕ್ತರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

ಕೀರ್ತನೆಗಳು 118:5 (KANIRV)
Square Portrait Landscape 4K UHD
ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿ, ನನ್ನನ್ನು ವಿಶಾಲವಾದ ಸ್ಥಳದಲ್ಲಿ ನೆಲೆಸುವಂತೆ ಮಾಡಿದನು.

ಕೀರ್ತನೆಗಳು 118:6 (KANIRV)
Square Portrait Landscape 4K UHD
ಯೆಹೋವನು ನನ್ನ ಕಡೆ ಇದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?

ಕೀರ್ತನೆಗಳು 118:7 (KANIRV)
Square Portrait Landscape 4K UHD
ಯೆಹೋವನು ನನಗೆ ಇದ್ದಾನೆ; ಆತನೇ ನನಗೆ ಸಹಾಯಕನು; ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು.

ಕೀರ್ತನೆಗಳು 118:8 (KANIRV)
Square Portrait Landscape 4K UHD
ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ, ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

ಕೀರ್ತನೆಗಳು 118:9 (KANIRV)
Square Portrait Landscape 4K UHD
ಪ್ರಭುಗಳಲ್ಲಿ ಭರವಸವಿಡುವುದಕ್ಕಿಂತ, ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

ಕೀರ್ತನೆಗಳು 118:10 (KANIRV)
Square Portrait Landscape 4K UHD
ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು; ಯೆಹೋವನ ಬಲದಿಂದ ಅವರನ್ನು ಸಂಹರಿಸುವೆನು.

ಕೀರ್ತನೆಗಳು 118:11 (KANIRV)
Square Portrait Landscape 4K UHD
ಅವರು ನನ್ನನ್ನು ಸುತ್ತಲೂ ಮುತ್ತಿದರು; ಯೆಹೋವನ ಹೆಸರಿನ ಬಲದಿಂದ ಅವರನ್ನು ಸಂಹರಿಸುವೆನು.

ಕೀರ್ತನೆಗಳು 118:12 (KANIRV)
Square Portrait Landscape 4K UHD
ಅವರು ಜೇನು ನೊಣಗಳಂತೆ ನನ್ನನ್ನು ಕವಿದರೂ; ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು. ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.

ಕೀರ್ತನೆಗಳು 118:13 (KANIRV)
Square Portrait Landscape 4K UHD
ವೈರಿಯೇ, ನನ್ನನ್ನು ಬೀಳುವಂತೆ ಮಾಡಿದಿ; ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

ಕೀರ್ತನೆಗಳು 118:14 (KANIRV)
Square Portrait Landscape 4K UHD
ನನ್ನ ಬಲವು, ಕೀರ್ತನೆಯು ಯೆಹೋವನೇ; ಆತನಿಂದ ನನಗೆ ರಕ್ಷಣೆಯುಂಟಾಯಿತು.

ಕೀರ್ತನೆಗಳು 118:15 (KANIRV)
Square Portrait Landscape 4K UHD
ಉತ್ಸಾಹಧ್ವನಿಯು, ಜಯಘೋಷವು ನೀತಿವಂತರ ಗುಡಾರಗಳಲ್ಲಿವೆ; ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

ಕೀರ್ತನೆಗಳು 118:16 (KANIRV)
Square Portrait Landscape 4K UHD
ಯೆಹೋವನ ಬಲಗೈ ಉನ್ನತವಾಗಿದೆ; ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

ಕೀರ್ತನೆಗಳು 118:17 (KANIRV)
Square Portrait Landscape 4K UHD
ನಾನು ಸಾಯುವುದಿಲ್ಲ; ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು.

ಕೀರ್ತನೆಗಳು 118:18 (KANIRV)
Square Portrait Landscape 4K UHD
ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಆದರೆ ಮರಣಕ್ಕೆ ಒಪ್ಪಿಸಲಿಲ್ಲ.

ಕೀರ್ತನೆಗಳು 118:19 (KANIRV)
Square Portrait Landscape 4K UHD
ನೀತಿದ್ವಾರಗಳನ್ನು ತೆರೆಯಿರಿ; ನಾನು ಒಳಗೆ ಪ್ರವೇಶಿಸಿ ಯೆಹೋವನನ್ನು ಕೊಂಡಾಡುವೆನು.

ಕೀರ್ತನೆಗಳು 118:20 (KANIRV)
Square Portrait Landscape 4K UHD
ಇದು ಯೆಹೋವನ ಮಂದಿರದ್ವಾರವು; ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ.

ಕೀರ್ತನೆಗಳು 118:21 (KANIRV)
Square Portrait Landscape 4K UHD
ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ, ನಿನ್ನನ್ನು ಕೊಂಡಾಡುತ್ತೇನೆ.

ಕೀರ್ತನೆಗಳು 118:22 (KANIRV)
Square Portrait Landscape 4K UHD
ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ, ಮುಖ್ಯವಾದ ಮೂಲೆಗಲ್ಲಾಯಿತು;

ಕೀರ್ತನೆಗಳು 118:23 (KANIRV)
Square Portrait Landscape 4K UHD
ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.

ಕೀರ್ತನೆಗಳು 118:24 (KANIRV)
Square Portrait Landscape 4K UHD
ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ.

ಕೀರ್ತನೆಗಳು 118:25 (KANIRV)
Square Portrait Landscape 4K UHD
ಯೆಹೋವನೇ, ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.

ಕೀರ್ತನೆಗಳು 118:26 (KANIRV)
Square Portrait Landscape 4K UHD
ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ; ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ.

ಕೀರ್ತನೆಗಳು 118:27 (KANIRV)
Square Portrait Landscape 4K UHD
ಯೆಹೋವನೇ ದೇವರು; ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ. ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿ ಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ.

ಕೀರ್ತನೆಗಳು 118:28 (KANIRV)
Square Portrait Landscape 4K UHD
ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ; ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ.

ಕೀರ್ತನೆಗಳು 118:29 (KANIRV)
Square Portrait Landscape 4K UHD
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾದದ್ದು.

Available Bible Translations

American Standard Version (ASV)
Psalms 118 (ASV) »
King James Version (KJV)
Psalms 118 (KJV) »
GOD’S WORD® (GW)
Psalms 118 (GW) »
Berean Bible (BSB)
Psalms 118 (BSB) »
World English Bible (WEB)
Psalms 118 (WEB) »
French Bible (LSG)
Psaumes 118 (LSG) »
German Bible (LUTH1912)
Psalm 118 (LUTH1912) »
Punjabi Bible (PANIRV)
ਜ਼ਬੂਰ 118 (PANIRV) »
Hebrew Bible (HEB)
תהלים 118 (HEB) »
Portuguese Bible (BSL)
Salmos 118 (BSL) »
Vietnamese Bible (VIE)
Thánh Thi 118 (VIE) »
Spanish Bible (RVA)
Salmos 118 (RVA) »
Italian Bible (RIV)
Salmi 118 (RIV) »
Chinese Simplified (CUVS)
诗 篇 118 (CUVS) »
Chinese Traditional (CUVT)
詩 篇 118 (CUVT) »
Albanian Bible (ALB)
Psalmet 118 (ALB) »
Swedish Bible (SV1917)
Psaltaren 118 (SV1917) »
Ukrainian Bible (UKR)
Псалми 118 (UKR) »
Hungarian Bible (KAR)
Zsoltárok 118 (KAR) »
Bulgarian Bible (BULG)
Псалми 118 (BULG) »
Japanese Bible (JPN)
詩篇 118 (JPN) »
Norwegian Bible (NORSK)
Salmene 118 (NORSK) »

KANIRV Book Selection List