ಕೀರ್ತನೆಗಳು Chapter 106 KANIRV Bible Verse Images

ಕೀರ್ತನೆಗಳು 106 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 106 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 106:1 (KANIRV)
Square Portrait Landscape 4K UHD
ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.

ಕೀರ್ತನೆಗಳು 106:2 (KANIRV)
Square Portrait Landscape 4K UHD
ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು?

ಕೀರ್ತನೆಗಳು 106:3 (KANIRV)
Square Portrait Landscape 4K UHD
ಯಾವಾಗಲೂ ನ್ಯಾಯವನ್ನು ಕಾಪಾಡುವವರೂ, ನೀತಿಯನ್ನು ಪಾಲಿಸುವವರೂ ಧನ್ಯರು.

ಕೀರ್ತನೆಗಳು 106:4 (KANIRV)
Square Portrait Landscape 4K UHD
ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು, ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ,

ಕೀರ್ತನೆಗಳು 106:5 (KANIRV)
Square Portrait Landscape 4K UHD
ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ, ನಾನೂ ಅವರೊಂದಿಗೆ ಸಂತೋಷಿಸುವೆನು; ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು.

ಕೀರ್ತನೆಗಳು 106:6 (KANIRV)
Square Portrait Landscape 4K UHD
ನಮ್ಮ ಪೂರ್ವಿಕರಂತೆ ನಾವೂ ಪಾಪಿಗಳು; ಅಪರಾಧಮಾಡಿದೆವು; ದುಷ್ಟತನವನ್ನು ನಡೆಸಿದೆವು.

ಕೀರ್ತನೆಗಳು 106:7 (KANIRV)
Square Portrait Landscape 4K UHD
ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತಕ್ರಿಯೆಗಳನ್ನು ಲಕ್ಷಿಸಲಿಲ್ಲ; ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. ಅವರು ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿಬಿದ್ದರು.

ಕೀರ್ತನೆಗಳು 106:8 (KANIRV)
Square Portrait Landscape 4K UHD
ಆದರೂ ಆತನು ತನ್ನ ಹೆಸರಿನ ನಿಮಿತ್ತವಾಗಿಯೂ, ತನ್ನ ಶೌರ್ಯವನ್ನು ಪ್ರಕಟಿಸುವುದಕ್ಕಾಗಿಯೂ ಅವರನ್ನು ರಕ್ಷಿಸಿದನು.

ಕೀರ್ತನೆಗಳು 106:9 (KANIRV)
Square Portrait Landscape 4K UHD
ಆತನು ಗದರಿಸಲು ಕೆಂಪು ಸಮುದ್ರವು ಒಣಗಿಹೋಯಿತು; ಅಡವಿಯನ್ನೋ ಎಂಬಂತೆ ಸಾಗರವನ್ನು ದಾಟಿಸಿದನು.

ಕೀರ್ತನೆಗಳು 106:10 (KANIRV)
Square Portrait Landscape 4K UHD
ಹಗೆಗಳ ಕೈಯಿಂದ ಅವರನ್ನು ತಪ್ಪಿಸಿದನು; ವೈರಿಯ ಹಸ್ತದಿಂದ ಬಿಡಿಸಿದನು.

ಕೀರ್ತನೆಗಳು 106:11 (KANIRV)
Square Portrait Landscape 4K UHD
ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; ಒಬ್ಬನೂ ಉಳಿಯಲಿಲ್ಲ.

ಕೀರ್ತನೆಗಳು 106:12 (KANIRV)
Square Portrait Landscape 4K UHD
ಆಗ ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು.

ಕೀರ್ತನೆಗಳು 106:13 (KANIRV)
Square Portrait Landscape 4K UHD
ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು, ಆತನ ನಡೆಸುವಿಕೆಗೆ ಕಾದಿರದೆ,

ಕೀರ್ತನೆಗಳು 106:14 (KANIRV)
Square Portrait Landscape 4K UHD
ಅರಣ್ಯದಲ್ಲಿ ಅತಿ ಆಶೆಗೊಂಡವರಾಗಿ, ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು.

ಕೀರ್ತನೆಗಳು 106:15 (KANIRV)
Square Portrait Landscape 4K UHD
ಆತನು ಅವರ ಆಶೆಯನ್ನು ಪೂರೈಸಿದರೂ, ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು.

ಕೀರ್ತನೆಗಳು 106:16 (KANIRV)
Square Portrait Landscape 4K UHD
ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವನು ಪ್ರತಿಷ್ಠಿಸಿದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಡಲು,

ಕೀರ್ತನೆಗಳು 106:17 (KANIRV)
Square Portrait Landscape 4K UHD
ಭೂಮಿಯು ಬಾಯ್ದೆರೆದು ದಾತಾನನನ್ನು ನುಂಗಿಬಿಟ್ಟಿತು; ಅಬಿರಾಮನ ಕಡೆಯವರನ್ನು ಮುಚ್ಚಿಬಿಟ್ಟಿತು.

ಕೀರ್ತನೆಗಳು 106:18 (KANIRV)
Square Portrait Landscape 4K UHD
ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು.

ಕೀರ್ತನೆಗಳು 106:19 (KANIRV)
Square Portrait Landscape 4K UHD
ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು.

ಕೀರ್ತನೆಗಳು 106:20 (KANIRV)
Square Portrait Landscape 4K UHD
ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು.

ಕೀರ್ತನೆಗಳು 106:21 (KANIRV)
Square Portrait Landscape 4K UHD
ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ,

ಕೀರ್ತನೆಗಳು 106:22 (KANIRV)
Square Portrait Landscape 4K UHD
ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು.

ಕೀರ್ತನೆಗಳು 106:23 (KANIRV)
Square Portrait Landscape 4K UHD
ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.

ಕೀರ್ತನೆಗಳು 106:24 (KANIRV)
Square Portrait Landscape 4K UHD
ಅವರು ಆ ರಮಣೀಯ ದೇಶವನ್ನು ತಿರಸ್ಕರಿಸಿದರು, ಆತನ ಮಾತನ್ನು ನಂಬಲಿಲ್ಲ.

ಕೀರ್ತನೆಗಳು 106:25 (KANIRV)
Square Portrait Landscape 4K UHD
ತಮ್ಮ ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ, ಯೆಹೋವನ ಮಾತಿಗೆ ಕಿವಿಗೊಡಲಿಲ್ಲ.

ಕೀರ್ತನೆಗಳು 106:26 (KANIRV)
Square Portrait Landscape 4K UHD
ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ,

ಕೀರ್ತನೆಗಳು 106:27 (KANIRV)
Square Portrait Landscape 4K UHD
ಅವರ ಸಂತಾನವನ್ನು ದೇಶಾಂತರಗಳಲ್ಲಿ ಚದುರಿಸಿ, ಅನ್ಯಜನಾಂಗಗಳ ನಡುವೆ ನಾಶಮಾಡುವೆನೆಂದೂ ಕೈಯೆತ್ತಿದನು.

ಕೀರ್ತನೆಗಳು 106:28 (KANIRV)
Square Portrait Landscape 4K UHD
ಅವರು ತಮ್ಮನ್ನು ಬಾಳ್ ಪೆಗೋರನ ಸೇವೆಗೆ ಒಪ್ಪಿಸಿ, ಮೂರ್ತಿಗಳಿಗೆ ಯಜ್ಞ ಮಾಡಿದ್ದನ್ನು ಊಟಮಾಡಿದರು.

ಕೀರ್ತನೆಗಳು 106:29 (KANIRV)
Square Portrait Landscape 4K UHD
ಈ ತಮ್ಮ ಕ್ರಿಯೆಗಳಿಂದ ಆತನನ್ನು ಕೆಣಕಿದರು; ಅವರಲ್ಲಿ ವ್ಯಾಧಿಯುಂಟಾಯಿತು.

ಕೀರ್ತನೆಗಳು 106:30 (KANIRV)
Square Portrait Landscape 4K UHD
ಫೀನೆಹಾಸನು ಎದ್ದು ಅವರನ್ನು ದಂಡಿಸಲು, ಆ ವ್ಯಾಧಿಯು ನಿಂತುಹೋಯಿತು.

ಕೀರ್ತನೆಗಳು 106:31 (KANIRV)
Square Portrait Landscape 4K UHD
ಅವನು ಮಾಡಿದ್ದು ತಲಾತಲಾಂತರಕ್ಕೂ ನೀತಿಯೆಂದು ಎಣಿಸಲ್ಪಟ್ಟಿತು.

ಕೀರ್ತನೆಗಳು 106:32 (KANIRV)
Square Portrait Landscape 4K UHD
ಅವರು ಮೆರೀಬ ಪ್ರವಾಹದ ಸಮೀಪದಲ್ಲಿ ಆತನನ್ನು ರೇಗಿಸಿದರು. ಅವರ ದೆಸೆಯಿಂದ ಮೋಶೆಗೆ ಕೇಡು ಉಂಟಾಯಿತು.

ಕೀರ್ತನೆಗಳು 106:33 (KANIRV)
Square Portrait Landscape 4K UHD
ಅವರು ದೇವರಾತ್ಮನಿಗೆ ವಿರುದ್ಧವಾಗಿ ನಿಂತಿದ್ದರಿಂದ, ಮೋಶೆ ದುಡುಕಿ ಮಾತನಾಡಿದನು.

ಕೀರ್ತನೆಗಳು 106:34 (KANIRV)
Square Portrait Landscape 4K UHD
ಅನ್ಯ ಜನಾಂಗದವರನ್ನು ಸಂಹರಿಸಬೇಕೆಂಬ, ಯೆಹೋವನ ಆಜ್ಞೆಗೆ ಅವಿಧೇಯರಾಗಿ,

ಕೀರ್ತನೆಗಳು 106:35 (KANIRV)
Square Portrait Landscape 4K UHD
ಅವರೊಡನೆ ಕೂಡಿಕೊಂಡು, ಅವರ ದುರಾಚಾರಗಳನ್ನು ಕಲಿತುಕೊಂಡರು.

ಕೀರ್ತನೆಗಳು 106:36 (KANIRV)
Square Portrait Landscape 4K UHD
ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು.

ಕೀರ್ತನೆಗಳು 106:37 (KANIRV)
Square Portrait Landscape 4K UHD
ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು.

ಕೀರ್ತನೆಗಳು 106:38 (KANIRV)
Square Portrait Landscape 4K UHD
ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ, ತಮ್ಮ ಮಕ್ಕಳ ನಿರಪರಾಧ ರಕ್ತವನ್ನು ಸುರಿಸಿದರು; ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು.

ಕೀರ್ತನೆಗಳು 106:39 (KANIRV)
Square Portrait Landscape 4K UHD
ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. ದುರಾಚಾರಗಳಿಂದ ದೇವದ್ರೋಹಿಗಳಾದರು.

ಕೀರ್ತನೆಗಳು 106:40 (KANIRV)
Square Portrait Landscape 4K UHD
ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ,

ಕೀರ್ತನೆಗಳು 106:41 (KANIRV)
Square Portrait Landscape 4K UHD
ಅವರನ್ನು ಅನ್ಯಜನಾಂಗಗಳ ಕೈಗೆ ಒಪ್ಪಿಸಿದನು. ವೈರಿಗಳು ಅವರ ಮೇಲೆ ಅಧಿಕಾರ ನಡೆಸಿದರು;

ಕೀರ್ತನೆಗಳು 106:42 (KANIRV)
Square Portrait Landscape 4K UHD
ಶತ್ರುಗಳು ಅವರನ್ನು ಕುಗ್ಗಿಸಿದರು; ಅವರ ಕೈಕೆಳಗೆ ತಗ್ಗಿಹೋದರು.

ಕೀರ್ತನೆಗಳು 106:43 (KANIRV)
Square Portrait Landscape 4K UHD
ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು.

ಕೀರ್ತನೆಗಳು 106:44 (KANIRV)
Square Portrait Landscape 4K UHD
ಆದರೆ ಆತನು ಕಷ್ಟದಲ್ಲಿದ್ದ, ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು.

ಕೀರ್ತನೆಗಳು 106:45 (KANIRV)
Square Portrait Landscape 4K UHD
ತನ್ನ ಒಡಂಬಡಿಕೆಯನ್ನು ನೆನಪುಮಾಡಿಕೊಂಡು, ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು.

ಕೀರ್ತನೆಗಳು 106:46 (KANIRV)
Square Portrait Landscape 4K UHD
ಸೆರೆಯೊಯ್ದವರ ದಯೆಗೆ ಅವರು ಪಾತ್ರರಾಗುವಂತೆ ಮಾಡಿದನು.

ಕೀರ್ತನೆಗಳು 106:47 (KANIRV)
Square Portrait Landscape 4K UHD
ಯೆಹೋವನೇ, ನಮ್ಮ ದೇವರೇ, ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು.

ಕೀರ್ತನೆಗಳು 106:48 (KANIRV)
Square Portrait Landscape 4K UHD
ಇಸ್ರಾಯೇಲ್ ದೇವರಾದ ಯೆಹೋವನಿಗೆ, ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ “ಆಮೆನ್” ಎನ್ನಲಿ. ಯೆಹೋವನಿಗೆ ಸ್ತೋತ್ರ!

Available Bible Translations

American Standard Version (ASV)
Psalms 106 (ASV) »
King James Version (KJV)
Psalms 106 (KJV) »
GOD’S WORD® (GW)
Psalms 106 (GW) »
Berean Bible (BSB)
Psalms 106 (BSB) »
World English Bible (WEB)
Psalms 106 (WEB) »
French Bible (LSG)
Psaumes 106 (LSG) »
German Bible (LUTH1912)
Psalm 106 (LUTH1912) »
Punjabi Bible (PANIRV)
ਜ਼ਬੂਰ 106 (PANIRV) »
Hebrew Bible (HEB)
תהלים 106 (HEB) »
Portuguese Bible (BSL)
Salmos 106 (BSL) »
Vietnamese Bible (VIE)
Thánh Thi 106 (VIE) »
Spanish Bible (RVA)
Salmos 106 (RVA) »
Italian Bible (RIV)
Salmi 106 (RIV) »
Chinese Simplified (CUVS)
诗 篇 106 (CUVS) »
Chinese Traditional (CUVT)
詩 篇 106 (CUVT) »
Albanian Bible (ALB)
Psalmet 106 (ALB) »
Swedish Bible (SV1917)
Psaltaren 106 (SV1917) »
Ukrainian Bible (UKR)
Псалми 106 (UKR) »
Hungarian Bible (KAR)
Zsoltárok 106 (KAR) »
Bulgarian Bible (BULG)
Псалми 106 (BULG) »
Japanese Bible (JPN)
詩篇 106 (JPN) »
Norwegian Bible (NORSK)
Salmene 106 (NORSK) »

KANIRV Book Selection List