ಕೀರ್ತನೆಗಳು Chapter 37 KANIRV Bible Verse Images

ಕೀರ್ತನೆಗಳು 37 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಕೀರ್ತನೆಗಳು 37 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಕೀರ್ತನೆಗಳು 37:1 (KANIRV)
Square Portrait Landscape 4K UHD
ದಾವೀದನ ಕೀರ್ತನೆ. ಕೆಟ್ಟ ನಡತೆಯುಳ್ಳವರನ್ನು ನೋಡಿ ತಳಮಳಗೊಳ್ಳಬೇಡ; ದುರಾಚಾರಿಗಳನ್ನು ನೋಡಿ ಅಸೂಯೆಪಡಬೇಡ.

ಕೀರ್ತನೆಗಳು 37:2 (KANIRV)
Square Portrait Landscape 4K UHD
ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಹಸಿರು ಸಸಿಯಂತೆ ಬಾಡಿಹೋಗುವರು.

ಕೀರ್ತನೆಗಳು 37:3 (KANIRV)
Square Portrait Landscape 4K UHD
ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.

ಕೀರ್ತನೆಗಳು 37:4 (KANIRV)
Square Portrait Landscape 4K UHD
ನೀನು ಯೆಹೋವನಲ್ಲಿ ಸಂತೋಷಿಸು; ಆಗ ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.

ಕೀರ್ತನೆಗಳು 37:5 (KANIRV)
Square Portrait Landscape 4K UHD
ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.

ಕೀರ್ತನೆಗಳು 37:6 (KANIRV)
Square Portrait Landscape 4K UHD
ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ, ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು.

ಕೀರ್ತನೆಗಳು 37:7 (KANIRV)
Square Portrait Landscape 4K UHD
ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.

ಕೀರ್ತನೆಗಳು 37:8 (KANIRV)
Square Portrait Landscape 4K UHD
ಕೋಪವನ್ನು ಅಡಗಿಸಿಕೋ; ರೋಷವನ್ನು ಬಿಡು. ತಳಮಳಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.

ಕೀರ್ತನೆಗಳು 37:9 (KANIRV)
Square Portrait Landscape 4K UHD
ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.

ಕೀರ್ತನೆಗಳು 37:10 (KANIRV)
Square Portrait Landscape 4K UHD
ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ನಿರ್ನಾಮವಾಗಿ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವುದೇ ಇಲ್ಲ.

ಕೀರ್ತನೆಗಳು 37:11 (KANIRV)
Square Portrait Landscape 4K UHD
ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.

ಕೀರ್ತನೆಗಳು 37:12 (KANIRV)
Square Portrait Landscape 4K UHD
ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ.

ಕೀರ್ತನೆಗಳು 37:13 (KANIRV)
Square Portrait Landscape 4K UHD
ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ.

ಕೀರ್ತನೆಗಳು 37:14 (KANIRV)
Square Portrait Landscape 4K UHD
ದುಷ್ಟರು ದೀನದರಿದ್ರರನ್ನು ಕಡಿದುಬಿಡಬೇಕೆಂದು ಕತ್ತಿಯನ್ನು ಹಿರಿದಿದ್ದಾರೆ; ಯಥಾರ್ಥರನ್ನು ಕೊಂದು ಹಾಕಬೇಕೆಂದು ಬಿಲ್ಲನ್ನು ಎತ್ತಿದ್ದಾರೆ.

ಕೀರ್ತನೆಗಳು 37:15 (KANIRV)
Square Portrait Landscape 4K UHD
ಆದರೆ ಅವರ ಕತ್ತಿ ಅವರ ಎದೆಯನ್ನೇ ಇರಿದುಬಿಡುವುದು; ಅವರ ಬಿಲ್ಲುಗಳು ಸಿಡಿದು ಮುರಿದುಹೋಗುವವು;

ಕೀರ್ತನೆಗಳು 37:16 (KANIRV)
Square Portrait Landscape 4K UHD
ದುಷ್ಟರ ಮಹಾಸಮೃದ್ಧಿಗಿಂತಲೂ ನೀತಿವಂತನ ಬಡತನವೇ ಲೇಸು.

ಕೀರ್ತನೆಗಳು 37:17 (KANIRV)
Square Portrait Landscape 4K UHD
ದುಷ್ಟರ ತೋಳುಗಳು ಮುರಿದುಹೋಗುವವು; ನೀತಿವಂತರನ್ನು ಯೆಹೋವನೇ ಉದ್ಧರಿಸುವನು.

ಕೀರ್ತನೆಗಳು 37:18 (KANIRV)
Square Portrait Landscape 4K UHD
ಯೆಹೋವನು ನಿರ್ದೋಷಿಗಳ ಜೀವಮಾನವನ್ನು ಲಕ್ಷಿಸುತ್ತಾನೆ; ಅವರ ಸ್ವತ್ತು ಶಾಶ್ವತವಾಗಿ ನಿಲ್ಲುವುದು.

ಕೀರ್ತನೆಗಳು 37:19 (KANIRV)
Square Portrait Landscape 4K UHD
ಅವರಿಗೆ ವಿಪತ್ಕಾಲದಲ್ಲಿಯೂ ಅಪಮಾನವಾಗುವುದಿಲ್ಲ; ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.

ಕೀರ್ತನೆಗಳು 37:20 (KANIRV)
Square Portrait Landscape 4K UHD
ದುಷ್ಟರೋ ನಾಶವಾಗಿ ಹೋಗುವರು; ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು. ಅವರು ಹಬೆಯಂತೆ ತೋರಿ ಅಡಗಿಹೋಗುವರು.

ಕೀರ್ತನೆಗಳು 37:21 (KANIRV)
Square Portrait Landscape 4K UHD
ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು.

ಕೀರ್ತನೆಗಳು 37:22 (KANIRV)
Square Portrait Landscape 4K UHD
ಯೆಹೋವನ ಆಶೀರ್ವಾದವು ಯಾರಿಗಿರುವುದೋ ಅವರು ದೇಶವನ್ನು ಅನುಭವಿಸುವರು; ಆತನ ಶಾಪವು ಯಾರಿಗಿರುವುದೋ ಅವರು ತೆಗೆದುಹಾಕಲ್ಪಡುವರು.

ಕೀರ್ತನೆಗಳು 37:23 (KANIRV)
Square Portrait Landscape 4K UHD
ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ.

ಕೀರ್ತನೆಗಳು 37:24 (KANIRV)
Square Portrait Landscape 4K UHD
ಅವನು ಕೆಳಗೆ ಬಿದ್ದರೂ ಏಳದೆ ಹೋಗುವುದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.

ಕೀರ್ತನೆಗಳು 37:25 (KANIRV)
Square Portrait Landscape 4K UHD
ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವುದನ್ನಾಗಲಿ, ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವುದನ್ನಾಗಲಿ ನೋಡಲಿಲ್ಲ.

ಕೀರ್ತನೆಗಳು 37:26 (KANIRV)
Square Portrait Landscape 4K UHD
ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ; ಅವನ ಸಂತತಿಯವರು ಆಶೀರ್ವಾದ ಹೊಂದುವರು.

ಕೀರ್ತನೆಗಳು 37:27 (KANIRV)
Square Portrait Landscape 4K UHD
ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ ದೇಶದಲ್ಲಿ ವಾಸವಾಗಿರುವಿ.

ಕೀರ್ತನೆಗಳು 37:28 (KANIRV)
Square Portrait Landscape 4K UHD
ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. ದುಷ್ಟರ ಸಂತತಿ ತೆಗೆದುಹಾಕಲ್ಪಡುವುದು.

ಕೀರ್ತನೆಗಳು 37:29 (KANIRV)
Square Portrait Landscape 4K UHD
ನೀತಿವಂತರೋ ದೇಶವನ್ನು ಅನುಭವಿಸುವವರಾಗಿ, ಅದರಲ್ಲಿ ಶಾಶ್ವತವಾಗಿ ವಾಸಿಸುವರು.

ಕೀರ್ತನೆಗಳು 37:30 (KANIRV)
Square Portrait Landscape 4K UHD
ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ, ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ.

ಕೀರ್ತನೆಗಳು 37:31 (KANIRV)
Square Portrait Landscape 4K UHD
ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವುದು; ಅವನು ಜಾರುವುದೇ ಇಲ್ಲ.

ಕೀರ್ತನೆಗಳು 37:32 (KANIRV)
Square Portrait Landscape 4K UHD
ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ.

ಕೀರ್ತನೆಗಳು 37:33 (KANIRV)
Square Portrait Landscape 4K UHD
ಆದರೆ ಯೆಹೋವನು ಅವನನ್ನು ಅವರ ಕೈಗೆ ಸಿಕ್ಕಗೊಡಿಸುವುದಿಲ್ಲ; ಅವನನ್ನು ನ್ಯಾಯವಿಚಾರಣೆಯಲ್ಲಿ ಅಪರಾಧಿಯೆಂದು ಎಣಿಸುವುದಿಲ್ಲ.

ಕೀರ್ತನೆಗಳು 37:34 (KANIRV)
Square Portrait Landscape 4K UHD
ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವುದನ್ನು ನೀನು ನೋಡುವಿ.

ಕೀರ್ತನೆಗಳು 37:35 (KANIRV)
Square Portrait Landscape 4K UHD
ದುಷ್ಟನು ಭೀಕರನಾಗಿ ಸ್ವಸ್ಥಳದಲ್ಲಿ ಹಸಿರಾಗಿ ಬೆಳೆದ ಮರದಂತೆ ವಿಸ್ತರಿಸಿಕೊಂಡಿರುವುದನ್ನು ನೋಡಿದ್ದೆನು.

ಕೀರ್ತನೆಗಳು 37:36 (KANIRV)
Square Portrait Landscape 4K UHD
ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ, ಅವನು ಇಲ್ಲದೆ ಹೋಗಿದ್ದನು, ಅವನನ್ನು ಹುಡುಕಿದರೂ ಸಿಕ್ಕಲಿಲ್ಲ.

ಕೀರ್ತನೆಗಳು 37:37 (KANIRV)
Square Portrait Landscape 4K UHD
ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವುದು.

ಕೀರ್ತನೆಗಳು 37:38 (KANIRV)
Square Portrait Landscape 4K UHD
ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರ ಸಂತಾನವು ತೆಗೆದುಹಾಕಲ್ಪಡುವುದು.

ಕೀರ್ತನೆಗಳು 37:39 (KANIRV)
Square Portrait Landscape 4K UHD
ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ.

ಕೀರ್ತನೆಗಳು 37:40 (KANIRV)
Square Portrait Landscape 4K UHD
ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡುವನು; ಅವರು ಆತನ ಆಶ್ರಿತರಾದುದರಿಂದ, ಆತನು ಅವರನ್ನು ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.

Available Bible Translations

American Standard Version (ASV)
Psalms 37 (ASV) »
King James Version (KJV)
Psalms 37 (KJV) »
GOD’S WORD® (GW)
Psalms 37 (GW) »
Berean Bible (BSB)
Psalms 37 (BSB) »
World English Bible (WEB)
Psalms 37 (WEB) »
French Bible (LSG)
Psaumes 37 (LSG) »
German Bible (LUTH1912)
Psalm 37 (LUTH1912) »
Punjabi Bible (PANIRV)
ਜ਼ਬੂਰ 37 (PANIRV) »
Hebrew Bible (HEB)
תהלים 37 (HEB) »
Portuguese Bible (BSL)
Salmos 37 (BSL) »
Vietnamese Bible (VIE)
Thánh Thi 37 (VIE) »
Spanish Bible (RVA)
Salmos 37 (RVA) »
Italian Bible (RIV)
Salmi 37 (RIV) »
Chinese Simplified (CUVS)
诗 篇 37 (CUVS) »
Chinese Traditional (CUVT)
詩 篇 37 (CUVT) »
Albanian Bible (ALB)
Psalmet 37 (ALB) »
Swedish Bible (SV1917)
Psaltaren 37 (SV1917) »
Russian Bible (RUSV)
Псалтирь 37 (RUSV) »
Ukrainian Bible (UKR)
Псалми 37 (UKR) »
Hungarian Bible (KAR)
Zsoltárok 37 (KAR) »
Bulgarian Bible (BULG)
Псалми 37 (BULG) »
Japanese Bible (JPN)
詩篇 37 (JPN) »
Norwegian Bible (NORSK)
Salmene 37 (NORSK) »

KANIRV Book Selection List