ಜ್ಞಾನೋಕ್ತಿಗಳು Chapter 7 KANIRV Bible Verse Images

ಜ್ಞಾನೋಕ್ತಿಗಳು 7 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 7 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 7:1 (KANIRV)
Square Portrait Landscape 4K UHD
ಕಂದಾ, ನನ್ನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೋ, ನನ್ನ ಆಜ್ಞೆಗಳನ್ನು ನಿಧಿಯಂತೆ ಕಾಪಾಡಿಕೋ.

ಜ್ಞಾನೋಕ್ತಿಗಳು 7:2 (KANIRV)
Square Portrait Landscape 4K UHD
ನನ್ನ ಉಪದೇಶವನ್ನು ಕಣ್ಣುಗುಡ್ಡೆಯಂತೆ ಪಾಲಿಸು, ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು.

ಜ್ಞಾನೋಕ್ತಿಗಳು 7:3 (KANIRV)
Square Portrait Landscape 4K UHD
ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಧರಿಸಿಕೋ, ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆದುಕೋ.

ಜ್ಞಾನೋಕ್ತಿಗಳು 7:4 (KANIRV)
Square Portrait Landscape 4K UHD
ಜ್ಞಾನವನ್ನು, “ನೀನು ನನ್ನ ಅಕ್ಕಾ” ಎಂದು ಹೇಳು, ವಿವೇಕವನ್ನು, “ಪ್ರಿಯೇ” ಎಂದು ಕರೆ.

ಜ್ಞಾನೋಕ್ತಿಗಳು 7:5 (KANIRV)
Square Portrait Landscape 4K UHD
ಅವು ಜಾರಳಿಂದ ಮತ್ತು ಸವಿಮಾತನಾಡುವ ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು.

ಜ್ಞಾನೋಕ್ತಿಗಳು 7:6 (KANIRV)
Square Portrait Landscape 4K UHD
ನಾನು ನನ್ನ ಮನೆಯ ಕಿಟಕಿಯ ಜಾಲರಿಯಿಂದ ಇಣಿಕಿ ನೋಡಲು

ಜ್ಞಾನೋಕ್ತಿಗಳು 7:7 (KANIRV)
Square Portrait Landscape 4K UHD
ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು.

ಜ್ಞಾನೋಕ್ತಿಗಳು 7:8 (KANIRV)
Square Portrait Landscape 4K UHD
ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ,

ಜ್ಞಾನೋಕ್ತಿಗಳು 7:9 (KANIRV)
Square Portrait Landscape 4K UHD
ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು.

ಜ್ಞಾನೋಕ್ತಿಗಳು 7:10 (KANIRV)
Square Portrait Landscape 4K UHD
ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.

ಜ್ಞಾನೋಕ್ತಿಗಳು 7:11 (KANIRV)
Square Portrait Landscape 4K UHD
ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ;

ಜ್ಞಾನೋಕ್ತಿಗಳು 7:12 (KANIRV)
Square Portrait Landscape 4K UHD
ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚು ಹಾಕುವಳು.

ಜ್ಞಾನೋಕ್ತಿಗಳು 7:13 (KANIRV)
Square Portrait Landscape 4K UHD
ಅವನನ್ನು ಹಿಡಿದು, ಮುದ್ದಾಡಿ ನಾಚಿಕೆಗೆಟ್ಟವಳಾಗಿ,

ಜ್ಞಾನೋಕ್ತಿಗಳು 7:14 (KANIRV)
Square Portrait Landscape 4K UHD
“ಎಲೈ, ಈ ದಿನ ನನ್ನ ಹರಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನ ಯಜ್ಞಶೇಷವು ನನ್ನಲ್ಲಿದೆ,

ಜ್ಞಾನೋಕ್ತಿಗಳು 7:15 (KANIRV)
Square Portrait Landscape 4K UHD
ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆನು, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು.

ಜ್ಞಾನೋಕ್ತಿಗಳು 7:16 (KANIRV)
Square Portrait Landscape 4K UHD
ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ, ಐಗುಪ್ತದೇಶದ ನೂಲಿನ ವಿಚಿತ್ರ ವಸ್ತ್ರಗಳನ್ನೂ ಹಾಸಿದ್ದೇನೆ.

ಜ್ಞಾನೋಕ್ತಿಗಳು 7:17 (KANIRV)
Square Portrait Landscape 4K UHD
ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ ಇವುಗಳ ಚೂರ್ಣಗಳಿಂದ ಸುವಾಸನೆಗೊಳಿಸಿದ್ದೇನೆ.

ಜ್ಞಾನೋಕ್ತಿಗಳು 7:18 (KANIRV)
Square Portrait Landscape 4K UHD
ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ.

ಜ್ಞಾನೋಕ್ತಿಗಳು 7:19 (KANIRV)
Square Portrait Landscape 4K UHD
ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ.

ಜ್ಞಾನೋಕ್ತಿಗಳು 7:20 (KANIRV)
Square Portrait Landscape 4K UHD
ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು” ಎಂದು ಹೇಳುವಳು.

ಜ್ಞಾನೋಕ್ತಿಗಳು 7:21 (KANIRV)
Square Portrait Landscape 4K UHD
ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ.

ಜ್ಞಾನೋಕ್ತಿಗಳು 7:22 (KANIRV)
Square Portrait Landscape 4K UHD
ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ, ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ,

ಜ್ಞಾನೋಕ್ತಿಗಳು 7:23 (KANIRV)
Square Portrait Landscape 4K UHD
ಪಕ್ಷಿಯು ಬಲೆಯ ಕಡೆಗೆ ಓಡುವಂತೆಯೂ, ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ, ಬಾಣವು ತನ್ನ ಕಾಳಿಜವನ್ನು ತಿವಿಯುವ ಮೇರೆಗೂ, ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.

ಜ್ಞಾನೋಕ್ತಿಗಳು 7:24 (KANIRV)
Square Portrait Landscape 4K UHD
ಈಗ, ಮಕ್ಕಳೇ, ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.

ಜ್ಞಾನೋಕ್ತಿಗಳು 7:25 (KANIRV)
Square Portrait Landscape 4K UHD
ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿಯೂ ಅವಳ ಮಾರ್ಗದಲ್ಲಿ ನಡೆಯಬೇಡ.

ಜ್ಞಾನೋಕ್ತಿಗಳು 7:26 (KANIRV)
Square Portrait Landscape 4K UHD
ಅವಳಿಂದ ಗಾಯಪಟ್ಟು ಬಿದ್ದವರು ಬಹು ಜನರು, ಹತರಾದವರೋ ಲೆಕ್ಕವೇ ಇಲ್ಲ.

ಜ್ಞಾನೋಕ್ತಿಗಳು 7:27 (KANIRV)
Square Portrait Landscape 4K UHD
ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ.

Available Bible Translations

American Standard Version (ASV)
Proverbs 7 (ASV) »
King James Version (KJV)
Proverbs 7 (KJV) »
GOD’S WORD® (GW)
Proverbs 7 (GW) »
Berean Bible (BSB)
Proverbs 7 (BSB) »
World English Bible (WEB)
Proverbs 7 (WEB) »
French Bible (LSG)
Proverbes 7 (LSG) »
German Bible (LUTH1912)
Sprüche 7 (LUTH1912) »
Telugu Bible (TELIRV)
సామెత 7 (TELIRV) »
Hebrew Bible (HEB)
משלי 7 (HEB) »
Portuguese Bible (BSL)
Provérbios 7 (BSL) »
Vietnamese Bible (VIE)
Châm Ngôn 7 (VIE) »
Spanish Bible (RVA)
Proverbios 7 (RVA) »
Italian Bible (RIV)
Proverbi 7 (RIV) »
Chinese Simplified (CUVS)
箴 言 7 (CUVS) »
Chinese Traditional (CUVT)
箴 言 7 (CUVT) »
Albanian Bible (ALB)
Fjalët e urta 7 (ALB) »
Swedish Bible (SV1917)
Ordspråksboken 7 (SV1917) »
Russian Bible (RUSV)
Притчи 7 (RUSV) »
Hungarian Bible (KAR)
Példabeszédek 7 (KAR) »
Bulgarian Bible (BULG)
Притчи 7 (BULG) »
Japanese Bible (JPN)
箴言 7 (JPN) »
Norwegian Bible (NORSK)
Salomos Ordspråk 7 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List