ಜ್ಞಾನೋಕ್ತಿಗಳು Chapter 3 KANIRV Bible Verse Images

ಜ್ಞಾನೋಕ್ತಿಗಳು 3 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 3 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 3:1 (KANIRV)
Square Portrait Landscape 4K UHD
ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಳ್ಳು.

ಜ್ಞಾನೋಕ್ತಿಗಳು 3:2 (KANIRV)
Square Portrait Landscape 4K UHD
ಅವು ನಿನ್ನ ದಿನಗಳನ್ನು ಹೆಚ್ಚಿಸಿ, ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ, ನಿನಗೆ ಸುಕ್ಷೇಮವನ್ನು ಉಂಟುಮಾಡುವವು.

ಜ್ಞಾನೋಕ್ತಿಗಳು 3:3 (KANIRV)
Square Portrait Landscape 4K UHD
ಪ್ರೀತಿ, ಸತ್ಯತೆಗಳು ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ.

ಜ್ಞಾನೋಕ್ತಿಗಳು 3:4 (KANIRV)
Square Portrait Landscape 4K UHD
ಇದರಿಂದ ನೀನು ದೇವರ ಮತ್ತು ಮನುಷ್ಯರ ದಯೆಯನ್ನೂ, ಸಮ್ಮತಿಯನ್ನೂ ಪಡೆದುಕೊಳ್ಳುವಿ.

ಜ್ಞಾನೋಕ್ತಿಗಳು 3:5 (KANIRV)
Square Portrait Landscape 4K UHD
ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.

ಜ್ಞಾನೋಕ್ತಿಗಳು 3:6 (KANIRV)
Square Portrait Landscape 4K UHD
ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.

ಜ್ಞಾನೋಕ್ತಿಗಳು 3:7 (KANIRV)
Square Portrait Landscape 4K UHD
ನೀನೇ ಬುದ್ಧಿವಂತನು ಎಂದೆಣಿಸದೆ, ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.

ಜ್ಞಾನೋಕ್ತಿಗಳು 3:8 (KANIRV)
Square Portrait Landscape 4K UHD
ಇದರಿಂದ ನಿನ್ನ ದೇಹಕ್ಕೆ ಆರೋಗ್ಯವೂ, ಎಲುಬುಗಳಿಗೆ ಸಾರವೂ ಉಂಟಾಗುವವು.

ಜ್ಞಾನೋಕ್ತಿಗಳು 3:9 (KANIRV)
Square Portrait Landscape 4K UHD
ನಿನ್ನ ಆದಾಯದಿಂದಲೂ, ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು.

ಜ್ಞಾನೋಕ್ತಿಗಳು 3:10 (KANIRV)
Square Portrait Landscape 4K UHD
ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿ ತುಳುಕುವುದು.

ಜ್ಞಾನೋಕ್ತಿಗಳು 3:11 (KANIRV)
Square Portrait Landscape 4K UHD
ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.

ಜ್ಞಾನೋಕ್ತಿಗಳು 3:12 (KANIRV)
Square Portrait Landscape 4K UHD
ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.

ಜ್ಞಾನೋಕ್ತಿಗಳು 3:13 (KANIRV)
Square Portrait Landscape 4K UHD
ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು.

ಜ್ಞಾನೋಕ್ತಿಗಳು 3:14 (KANIRV)
Square Portrait Landscape 4K UHD
ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ, ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ.

ಜ್ಞಾನೋಕ್ತಿಗಳು 3:15 (KANIRV)
Square Portrait Landscape 4K UHD
ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.

ಜ್ಞಾನೋಕ್ತಿಗಳು 3:16 (KANIRV)
Square Portrait Landscape 4K UHD
ಜ್ಞಾನವೆಂಬಾಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ, ಎಡಗೈಯಲ್ಲಿ ಧನವೂ, ಘನತೆಯೂ ಉಂಟು.

ಜ್ಞಾನೋಕ್ತಿಗಳು 3:17 (KANIRV)
Square Portrait Landscape 4K UHD
ಆಕೆಯ ದಾರಿಗಳು ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ.

ಜ್ಞಾನೋಕ್ತಿಗಳು 3:18 (KANIRV)
Square Portrait Landscape 4K UHD
ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವವೃಕ್ಷವಾಗಿದೆ. ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.

ಜ್ಞಾನೋಕ್ತಿಗಳು 3:19 (KANIRV)
Square Portrait Landscape 4K UHD
ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ, ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.

ಜ್ಞಾನೋಕ್ತಿಗಳು 3:20 (KANIRV)
Square Portrait Landscape 4K UHD
ಭೂಮಿಯ ಕೆಳಗಿನ ಸಾಗರವು ಒಡೆದದ್ದಕ್ಕೂ, ಆಕಾಶವು ಇಬ್ಬನಿಯನ್ನು ಸುರಿಸುವುದಕ್ಕೂ ಆತನ ತಿಳಿವಳಿಕೆಯೇ ಸಾಧನ.

ಜ್ಞಾನೋಕ್ತಿಗಳು 3:21 (KANIRV)
Square Portrait Landscape 4K UHD
ನನ್ನ ಮಗನೇ, ಸುಜ್ಞಾನವನ್ನೂ ಮತ್ತು ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ.

ಜ್ಞಾನೋಕ್ತಿಗಳು 3:22 (KANIRV)
Square Portrait Landscape 4K UHD
ಅವು ನಿನಗೆ ಜೀವವೂ, ನಿನ್ನ ಕೊರಳಿಗೆ ಭೂಷಣವೂ ಆಗಿರುವವು.

ಜ್ಞಾನೋಕ್ತಿಗಳು 3:23 (KANIRV)
Square Portrait Landscape 4K UHD
ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ.

ಜ್ಞಾನೋಕ್ತಿಗಳು 3:24 (KANIRV)
Square Portrait Landscape 4K UHD
ನೀನು ಮಲಗುವಾಗ ಹೆದರಿಕೆ ಇರುವುದಿಲ್ಲ, ಮಲಗಿದ ಮೇಲೆ ಸುಖವಾಗಿ ನಿದ್ರೆಮಾಡುವಿ.

ಜ್ಞಾನೋಕ್ತಿಗಳು 3:25 (KANIRV)
Square Portrait Landscape 4K UHD
ಪಕ್ಕನೆ ಬರುವ ಅಪಾಯಕ್ಕಾಗಲಿ ಅಥವಾ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವುದೇ ಇಲ್ಲ.

ಜ್ಞಾನೋಕ್ತಿಗಳು 3:26 (KANIRV)
Square Portrait Landscape 4K UHD
ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು, ನಿನ್ನ ಕಾಲು ಮೋಸದ ಬಲೆಗೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು.

ಜ್ಞಾನೋಕ್ತಿಗಳು 3:27 (KANIRV)
Square Portrait Landscape 4K UHD
ಉಪಕಾರಮಾಡುವುದಕ್ಕೆ ನಿನ್ನಿಂದ ಸಾಧ್ಯವಾಗುವಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.

ಜ್ಞಾನೋಕ್ತಿಗಳು 3:28 (KANIRV)
Square Portrait Landscape 4K UHD
ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎಂದು ಹೇಳಬೇಡ.

ಜ್ಞಾನೋಕ್ತಿಗಳು 3:29 (KANIRV)
Square Portrait Landscape 4K UHD
ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ?

ಜ್ಞಾನೋಕ್ತಿಗಳು 3:30 (KANIRV)
Square Portrait Landscape 4K UHD
ನಿನಗೆ ಅಪಕಾರ ಮಾಡದವನ ಸಂಗಡ ಸುಮ್ಮನೆ ಜಗಳವಾಡಬೇಡ.

ಜ್ಞಾನೋಕ್ತಿಗಳು 3:31 (KANIRV)
Square Portrait Landscape 4K UHD
ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ.

ಜ್ಞಾನೋಕ್ತಿಗಳು 3:32 (KANIRV)
Square Portrait Landscape 4K UHD
ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವುದು.

ಜ್ಞಾನೋಕ್ತಿಗಳು 3:33 (KANIRV)
Square Portrait Landscape 4K UHD
ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು.

ಜ್ಞಾನೋಕ್ತಿಗಳು 3:34 (KANIRV)
Square Portrait Landscape 4K UHD
ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುವನು.

ಜ್ಞಾನೋಕ್ತಿಗಳು 3:35 (KANIRV)
Square Portrait Landscape 4K UHD
ಜ್ಞಾನವಂತರು ಸನ್ಮಾನಕ್ಕೆ ಬಾಧ್ಯರಾಗುವರು, ಜ್ಞಾನಹೀನರಿಗಾಗುವ ಬಹುಮಾನವು ಅವಮಾನವೇ.

Available Bible Translations

American Standard Version (ASV)
Proverbs 3 (ASV) »
King James Version (KJV)
Proverbs 3 (KJV) »
GOD’S WORD® (GW)
Proverbs 3 (GW) »
Berean Bible (BSB)
Proverbs 3 (BSB) »
World English Bible (WEB)
Proverbs 3 (WEB) »
French Bible (LSG)
Proverbes 3 (LSG) »
German Bible (LUTH1912)
Sprüche 3 (LUTH1912) »
Telugu Bible (TELIRV)
సామెత 3 (TELIRV) »
Hebrew Bible (HEB)
משלי 3 (HEB) »
Portuguese Bible (BSL)
Provérbios 3 (BSL) »
Vietnamese Bible (VIE)
Châm Ngôn 3 (VIE) »
Spanish Bible (RVA)
Proverbios 3 (RVA) »
Italian Bible (RIV)
Proverbi 3 (RIV) »
Chinese Simplified (CUVS)
箴 言 3 (CUVS) »
Chinese Traditional (CUVT)
箴 言 3 (CUVT) »
Albanian Bible (ALB)
Fjalët e urta 3 (ALB) »
Swedish Bible (SV1917)
Ordspråksboken 3 (SV1917) »
Russian Bible (RUSV)
Притчи 3 (RUSV) »
Hungarian Bible (KAR)
Példabeszédek 3 (KAR) »
Bulgarian Bible (BULG)
Притчи 3 (BULG) »
Japanese Bible (JPN)
箴言 3 (JPN) »
Norwegian Bible (NORSK)
Salomos Ordspråk 3 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List