ಜ್ಞಾನೋಕ್ತಿಗಳು Chapter 14 KANIRV Bible Verse Images

ಜ್ಞಾನೋಕ್ತಿಗಳು 14 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 14 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 14:1 (KANIRV)
Square Portrait Landscape 4K UHD
ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು.

ಜ್ಞಾನೋಕ್ತಿಗಳು 14:2 (KANIRV)
Square Portrait Landscape 4K UHD
ಸರಳಮಾರ್ಗಿಯು ಯೆಹೋವನಿಗೆ ಭಯಪಡುವನು, ವಕ್ರಮಾರ್ಗಿಯು ಆತನನ್ನು ಅಸಡ್ಡೆಮಾಡುವನು.

ಜ್ಞಾನೋಕ್ತಿಗಳು 14:3 (KANIRV)
Square Portrait Landscape 4K UHD
ಮೂರ್ಖನ ಮಾತುಗಳು ಅವನ ಬೆನ್ನಿಗೆ ಬೆತ್ತ, ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು.

ಜ್ಞಾನೋಕ್ತಿಗಳು 14:4 (KANIRV)
Square Portrait Landscape 4K UHD
ಎತ್ತುಗಳಿಲ್ಲದಿರುವಾಗ ಗೋದಲಿಯು ಶುದ್ಧ, ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ವೃದ್ಧಿಯಾಗುವುದು.

ಜ್ಞಾನೋಕ್ತಿಗಳು 14:5 (KANIRV)
Square Portrait Landscape 4K UHD
ಸತ್ಯಸಾಕ್ಷಿಯು ಸುಳ್ಳಾಡನು, ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.

ಜ್ಞಾನೋಕ್ತಿಗಳು 14:6 (KANIRV)
Square Portrait Landscape 4K UHD
ಧರ್ಮನಿಂದಕನಲ್ಲಿ ಹುಡುಕಿದರೂ ಜ್ಞಾನವು ಸಿಕ್ಕದು, ವಿವೇಕಿಗೆ ತಿಳಿವಳಿಕೆಯು ಸುಲಭವಾಗಿ ದೊರೆಯುವುದು.

ಜ್ಞಾನೋಕ್ತಿಗಳು 14:7 (KANIRV)
Square Portrait Landscape 4K UHD
ನೀನು ಜ್ಞಾನಹೀನನ ಬಳಿಗೆ ಹೋದರೆ ಅವನ ತುಟಿಗಳಲ್ಲಿ ಯಾವ ತಿಳಿವಳಿಕೆಯನ್ನೂ ಕಾಣಲಾರೆ.

ಜ್ಞಾನೋಕ್ತಿಗಳು 14:8 (KANIRV)
Square Portrait Landscape 4K UHD
ಸನ್ಮಾರ್ಗವನ್ನು ಗ್ರಹಿಸಿಕೊಳ್ಳುವುದೇ ಜಾಣನ ಜ್ಞಾನ, ಮೂಢರ ಮೂರ್ಖತನ ಮೋಸಕರ.

ಜ್ಞಾನೋಕ್ತಿಗಳು 14:9 (KANIRV)
Square Portrait Landscape 4K UHD
ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವುದು, ಯಥಾರ್ಥವಂತರಲ್ಲಿ (ದೇವರ) ದಯೆಯಿರುವುದು.

ಜ್ಞಾನೋಕ್ತಿಗಳು 14:10 (KANIRV)
Square Portrait Landscape 4K UHD
ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ.

ಜ್ಞಾನೋಕ್ತಿಗಳು 14:11 (KANIRV)
Square Portrait Landscape 4K UHD
ದುಷ್ಟರ ಮನೆಗೆ ನಾಶನ, ಶಿಷ್ಟರ ಗುಡಾರಕ್ಕೆ ಏಳಿಗೆ.

ಜ್ಞಾನೋಕ್ತಿಗಳು 14:12 (KANIRV)
Square Portrait Landscape 4K UHD
ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.

ಜ್ಞಾನೋಕ್ತಿಗಳು 14:13 (KANIRV)
Square Portrait Landscape 4K UHD
ನಗುವವನಿಗೂ ಮನೋವ್ಯಥೆಯುಂಟು, ಉಲ್ಲಾಸದ ಅಂತ್ಯವು ವ್ಯಾಕುಲವೇ.

ಜ್ಞಾನೋಕ್ತಿಗಳು 14:14 (KANIRV)
Square Portrait Landscape 4K UHD
ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು, ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು.

ಜ್ಞಾನೋಕ್ತಿಗಳು 14:15 (KANIRV)
Square Portrait Landscape 4K UHD
ಮೂಢನು ಯಾವ ಮಾತನ್ನಾದರೂ ನಂಬುವನು, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.

ಜ್ಞಾನೋಕ್ತಿಗಳು 14:16 (KANIRV)
Square Portrait Landscape 4K UHD
ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು, ಜ್ಞಾನಹೀನನು ಸೊಕ್ಕಿನಿಂದ ಭಯವನ್ನು ಲಕ್ಷಿಸನು.

ಜ್ಞಾನೋಕ್ತಿಗಳು 14:17 (KANIRV)
Square Portrait Landscape 4K UHD
ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು.

ಜ್ಞಾನೋಕ್ತಿಗಳು 14:18 (KANIRV)
Square Portrait Landscape 4K UHD
ಮೂರ್ಖರಿಗೆ ಮೂರ್ಖತನವೇ ಸ್ವತ್ತು, ಜಾಣರಿಗೆ ಜ್ಞಾನವೇ ಕಿರೀಟ.

ಜ್ಞಾನೋಕ್ತಿಗಳು 14:19 (KANIRV)
Square Portrait Landscape 4K UHD
ಕೆಟ್ಟವರು ಒಳ್ಳೆಯವರಿಗೆ ಬಾಗುವರು, ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು.

ಜ್ಞಾನೋಕ್ತಿಗಳು 14:20 (KANIRV)
Square Portrait Landscape 4K UHD
ಬಡವನು ನೆರೆಯವನಿಗೂ ಅಸಹ್ಯ, ಧನವಂತನಿಗೆ ಬಹು ಜನ ಮಿತ್ರರು.

ಜ್ಞಾನೋಕ್ತಿಗಳು 14:21 (KANIRV)
Square Portrait Landscape 4K UHD
ನೆರೆಯವನನ್ನು ತಿರಸ್ಕರಿಸುವವನು ದೋಷಿ, ದರಿದ್ರನನ್ನು ಕನಿಕರಿಸುವವನು ಧನ್ಯನು.

ಜ್ಞಾನೋಕ್ತಿಗಳು 14:22 (KANIRV)
Square Portrait Landscape 4K UHD
ಕುಯುಕ್ತಿಯುಳ್ಳವರು ದಾರಿತಪ್ಪಿದವರೇ ಸರಿ, ಒಳ್ಳೆಯದನ್ನು ಕಲ್ಪಿಸುವವರು ಪ್ರೀತಿಸತ್ಯತೆಗಳಿಗೆ ಪಾತ್ರರು.

ಜ್ಞಾನೋಕ್ತಿಗಳು 14:23 (KANIRV)
Square Portrait Landscape 4K UHD
ಶ್ರಮೆಯಿಂದ ಸಮೃದ್ಧಿ, ಹರಟೆಯಿಂದ ಕೊರತೆ.

ಜ್ಞಾನೋಕ್ತಿಗಳು 14:24 (KANIRV)
Square Portrait Landscape 4K UHD
ಜ್ಞಾನಿಗಳ ಜ್ಞಾನಕಿರೀಟವೇ ಅವರ ಶ್ರೇಷ್ಠ ಸಂಪತ್ತು, ಜ್ಞಾನಹೀನರ ಮೂರ್ಖತನವು ಬರೀ ಮೂರ್ಖತನವೇ.

ಜ್ಞಾನೋಕ್ತಿಗಳು 14:25 (KANIRV)
Square Portrait Landscape 4K UHD
ಸತ್ಯಸಾಕ್ಷಿಯು ಪ್ರಾಣರಕ್ಷಕ, ಸುಳ್ಳುಸಾಕ್ಷಿಯು ವಂಚಕ.

ಜ್ಞಾನೋಕ್ತಿಗಳು 14:26 (KANIRV)
Square Portrait Landscape 4K UHD
ಯೆಹೋವನಿಗೆ ಭಯಪಡುವುದರಿಂದ ಕೇವಲ ನಿರ್ಭಯ, ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವುದು.

ಜ್ಞಾನೋಕ್ತಿಗಳು 14:27 (KANIRV)
Square Portrait Landscape 4K UHD
ಯೆಹೋವನ ಭಯ ಜೀವದ ಬುಗ್ಗೆ, ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನವಾಗಿದೆ.

ಜ್ಞಾನೋಕ್ತಿಗಳು 14:28 (KANIRV)
Square Portrait Landscape 4K UHD
ಪ್ರಜೆಗಳ ವೃದ್ಧಿ ರಾಜನ ಮಹಿಮೆ, ಪ್ರಜೆಗಳ ನಾಶ ಪ್ರಭುವಿಗೆ ಭಯ.

ಜ್ಞಾನೋಕ್ತಿಗಳು 14:29 (KANIRV)
Square Portrait Landscape 4K UHD
ದೀರ್ಘಶಾಂತನು ಕೇವಲ ಬುದ್ಧಿವಂತನು, ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು.

ಜ್ಞಾನೋಕ್ತಿಗಳು 14:30 (KANIRV)
Square Portrait Landscape 4K UHD
ಶಾಂತಗುಣವು ದೇಹಕ್ಕೆ ಜೀವಾಧಾರವು, ಕ್ರೋಧವು ಎಲುಬಿಗೆ ಕ್ಷಯವು.

ಜ್ಞಾನೋಕ್ತಿಗಳು 14:31 (KANIRV)
Square Portrait Landscape 4K UHD
ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು, ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು.

ಜ್ಞಾನೋಕ್ತಿಗಳು 14:32 (KANIRV)
Square Portrait Landscape 4K UHD
ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು, ಶಿಷ್ಟನು ಮರಣಕಾಲದಲ್ಲಿಯೂ ಆಶ್ರಯಹೊಂದುವನು.

ಜ್ಞಾನೋಕ್ತಿಗಳು 14:33 (KANIRV)
Square Portrait Landscape 4K UHD
ವಿವೇಕಿಯ ಹೃದಯ ಜ್ಞಾನಾಶ್ರಯ, ಜ್ಞಾನಹೀನನ ಹೃದಯದಲ್ಲಿ ಅದು ಕಾಣದು.

ಜ್ಞಾನೋಕ್ತಿಗಳು 14:34 (KANIRV)
Square Portrait Landscape 4K UHD
ಪ್ರಜೆಗೆ ಧರ್ಮವು ಉನ್ನತಿ, ಅಧರ್ಮವು ಅವಮಾನ.

ಜ್ಞಾನೋಕ್ತಿಗಳು 14:35 (KANIRV)
Square Portrait Landscape 4K UHD
ಜಾಣನಾದ ಸೇವಕನಿಗೆ ರಾಜನ ಕೃಪೆ, ಮಾನಗೇಡಿಗೆ ರಾಜನ ರೌದ್ರ.

Available Bible Translations

American Standard Version (ASV)
Proverbs 14 (ASV) »
King James Version (KJV)
Proverbs 14 (KJV) »
GOD’S WORD® (GW)
Proverbs 14 (GW) »
Berean Bible (BSB)
Proverbs 14 (BSB) »
World English Bible (WEB)
Proverbs 14 (WEB) »
French Bible (LSG)
Proverbes 14 (LSG) »
German Bible (LUTH1912)
Sprüche 14 (LUTH1912) »
Telugu Bible (TELIRV)
సామెత 14 (TELIRV) »
Hebrew Bible (HEB)
משלי 14 (HEB) »
Portuguese Bible (BSL)
Provérbios 14 (BSL) »
Vietnamese Bible (VIE)
Châm Ngôn 14 (VIE) »
Spanish Bible (RVA)
Proverbios 14 (RVA) »
Italian Bible (RIV)
Proverbi 14 (RIV) »
Chinese Simplified (CUVS)
箴 言 14 (CUVS) »
Chinese Traditional (CUVT)
箴 言 14 (CUVT) »
Albanian Bible (ALB)
Fjalët e urta 14 (ALB) »
Swedish Bible (SV1917)
Ordspråksboken 14 (SV1917) »
Russian Bible (RUSV)
Притчи 14 (RUSV) »
Hungarian Bible (KAR)
Példabeszédek 14 (KAR) »
Bulgarian Bible (BULG)
Притчи 14 (BULG) »
Japanese Bible (JPN)
箴言 14 (JPN) »
Norwegian Bible (NORSK)
Salomos Ordspråk 14 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List