ಜ್ಞಾನೋಕ್ತಿಗಳು Chapter 21 KANIRV Bible Verse Images

ಜ್ಞಾನೋಕ್ತಿಗಳು 21 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 21 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 21:1 (KANIRV)
Square Portrait Landscape 4K UHD
ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ಇರುವ ನೀರಿನ ಕಾಲುವೆಗಳಂತೆ ಇವೆ, ಆತನು ತನಗೆ ಬೇಕಾದ ಕಡೆಗೆ ಅದನ್ನು ತಿರುಗಿಸುತ್ತಾನೆ.

ಜ್ಞಾನೋಕ್ತಿಗಳು 21:2 (KANIRV)
Square Portrait Landscape 4K UHD
ನರನ ನಡತೆಯು ಸ್ವಂತ ದೃಷ್ಟಿಗೆ ಸರಿಯಾಗಿ ಕಾಣುತ್ತವೆ, ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು.

ಜ್ಞಾನೋಕ್ತಿಗಳು 21:3 (KANIRV)
Square Portrait Landscape 4K UHD
ಯಜ್ಞಕ್ಕಿಂತಲೂ ನೀತಿನ್ಯಾಯಗಳು ಯೆಹೋವನಿಗೆ ಇಷ್ಟ.

ಜ್ಞಾನೋಕ್ತಿಗಳು 21:4 (KANIRV)
Square Portrait Landscape 4K UHD
ಗರ್ವದ ದೃಷ್ಟಿ, ಕೊಬ್ಬಿದ ಹೃದಯ, ದುಷ್ಟರ ಭಾಗ್ಯ, ಇವು ಧರ್ಮವಿರುದ್ಧ.

ಜ್ಞಾನೋಕ್ತಿಗಳು 21:5 (KANIRV)
Square Portrait Landscape 4K UHD
ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ, ಆತುರಪಡುವವರಿಗೆಲ್ಲಾ ಕೊರತೆಯೇ.

ಜ್ಞಾನೋಕ್ತಿಗಳು 21:6 (KANIRV)
Square Portrait Landscape 4K UHD
ಸುಳ್ಳಿನಿಂದ ಸಿಕ್ಕಿದ ಸಂಪತ್ತು ಹಬೆಯಂತೆ ಅಸ್ಥಿರ, ಮೃತ್ಯುಪಾಶದಂತೆ ನಾಶಕರ.

ಜ್ಞಾನೋಕ್ತಿಗಳು 21:7 (KANIRV)
Square Portrait Landscape 4K UHD
ದುಷ್ಟರು ನ್ಯಾಯವನ್ನು ನಿರಾಕರಿಸುವ ಕಾರಣ, ಅವರ ಬಲಾತ್ಕಾರವು ಅವರನ್ನೇ ಎಳೆದುಕೊಂಡು ಹೋಗುವುದು.

ಜ್ಞಾನೋಕ್ತಿಗಳು 21:8 (KANIRV)
Square Portrait Landscape 4K UHD
ದೋಷಿಯ ದಾರಿ ಡೊಂಕು; ಶುದ್ಧನ ನಡತೆ ಸರಳ.

ಜ್ಞಾನೋಕ್ತಿಗಳು 21:9 (KANIRV)
Square Portrait Landscape 4K UHD
ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.

ಜ್ಞಾನೋಕ್ತಿಗಳು 21:10 (KANIRV)
Square Portrait Landscape 4K UHD
ದುರಾತ್ಮನು ಕೇಡಿನ ಮೇಲೇ ಮನಸ್ಸಿಡುವನು ನೆರೆಯವನಿಗೂ ದಯೆತೋರಿಸನು.

ಜ್ಞಾನೋಕ್ತಿಗಳು 21:11 (KANIRV)
Square Portrait Landscape 4K UHD
ಧರ್ಮನಿಂದಕನಿಗೆ ದಂಡನೆಯಾದರೆ ನೋಡಿದ ಮೂಢನೂ ಜ್ಞಾನವನ್ನು ಪಡೆಯುವನು, ಜ್ಞಾನಿಗೆ ಶಿಕ್ಷೆಯಾದರೆ ತಾನೇ ತಿಳಿವಳಿಕೆಯನ್ನು ಹೊಂದುವನು.

ಜ್ಞಾನೋಕ್ತಿಗಳು 21:12 (KANIRV)
Square Portrait Landscape 4K UHD
ನೀತಿಸ್ವರೂಪನು ಅಧರ್ಮಿಯ ಮನೆಯನ್ನು ಲಕ್ಷ್ಯಕ್ಕೆ ತಂದು, ಅಧರ್ಮಿಗಳನ್ನು ಕೆಡವಿ ಅವರನ್ನು ಕೇಡಿಗೆ ತಳ್ಳುವನು.

ಜ್ಞಾನೋಕ್ತಿಗಳು 21:13 (KANIRV)
Square Portrait Landscape 4K UHD
ಬಡವನ ಕೂಗಿಗೆ ಕಿವಿಮುಚ್ಚಿಕೊಳ್ಳುವವನು, ತಾನೇ ಮೊರೆಯಿಡುವಾಗ ಯಾರೂ ಉತ್ತರಕೊಡರು.

ಜ್ಞಾನೋಕ್ತಿಗಳು 21:14 (KANIRV)
Square Portrait Landscape 4K UHD
ಗುಪ್ತ ಬಹುಮಾನವು ಕೋಪವನ್ನಾರಿಸುವುದು, ಮಡಲಲ್ಲಿಟ್ಟ ಲಂಚವು ಕ್ರೋಧವನ್ನು ಅಣಗಿಸುವುದು.

ಜ್ಞಾನೋಕ್ತಿಗಳು 21:15 (KANIRV)
Square Portrait Landscape 4K UHD
ನ್ಯಾಯಮಾರ್ಗವು ಶಿಷ್ಟರಿಗೆ ಸಂತೋಷ, ಕೆಡುಕರಿಗೆ ಕೇಡು.

ಜ್ಞಾನೋಕ್ತಿಗಳು 21:16 (KANIRV)
Square Portrait Landscape 4K UHD
ಜ್ಞಾನಮಾರ್ಗದಿಂದ ತಪ್ಪಿದವನಿಗೆ, ಪ್ರೇತಸಮೂಹವೇ ವಿಶ್ರಾಂತಿಸ್ಥಾನ.

ಜ್ಞಾನೋಕ್ತಿಗಳು 21:17 (KANIRV)
Square Portrait Landscape 4K UHD
ಭೋಗಾಸಕ್ತನು ಕೊರತೆಪಡುವನು, ದ್ರಾಕ್ಷಾರಸವನ್ನು ಮತ್ತು ಸುಗಂಧ ತೈಲವನ್ನು ಆಶಿಸುವವನು ನಿರ್ಭಾಗ್ಯನಾಗುವನು.

ಜ್ಞಾನೋಕ್ತಿಗಳು 21:18 (KANIRV)
Square Portrait Landscape 4K UHD
ಶಿಷ್ಟನಿಗೆ ಪ್ರತಿಯಾಗಿ ದುಷ್ಟನೂ, ಸತ್ಯವಂತರಿಗೆ ಬದಲಾಗಿ ದ್ರೋಹಿಯೂ ದಂಡನೆಗೆ ಈಡಾಗುವರು.

ಜ್ಞಾನೋಕ್ತಿಗಳು 21:19 (KANIRV)
Square Portrait Landscape 4K UHD
ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲೂ, ಕಾಡಿನ ವಾಸವೇ ಲೇಸು.

ಜ್ಞಾನೋಕ್ತಿಗಳು 21:20 (KANIRV)
Square Portrait Landscape 4K UHD
ಜ್ಞಾನಿಯ ನಿವಾಸದಲ್ಲಿ ಎಣ್ಣೆಯು ಮತ್ತು ಶ್ರೇಷ್ಠ ಸಂಪತ್ತು ಇರುವವು, ಜ್ಞಾನಹೀನನು ಇದ್ದದ್ದನ್ನೆಲ್ಲಾ ನುಂಗಿಬಿಡುವನು.

ಜ್ಞಾನೋಕ್ತಿಗಳು 21:21 (KANIRV)
Square Portrait Landscape 4K UHD
ನೀತಿ ಮತ್ತು ಕೃಪೆಗಳನ್ನು ಹುಡುಕುವವನು ಜೀವ ಮತ್ತು ಕೀರ್ತಿಗಳನ್ನು ಪಡೆಯುವನು.

ಜ್ಞಾನೋಕ್ತಿಗಳು 21:22 (KANIRV)
Square Portrait Landscape 4K UHD
ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಮುತ್ತಿಗೆ ಹಾಕಿ, ಅವರು ನಂಬಿದ್ದ ಬಲವಾದ ಕೋಟೆಯನ್ನು ಕೆಡವಿ ಹಾಕುವನು.

ಜ್ಞಾನೋಕ್ತಿಗಳು 21:23 (KANIRV)
Square Portrait Landscape 4K UHD
ತನ್ನ ಬಾಯನ್ನೂ, ನಾಲಿಗೆಯನ್ನೂ ಕಾಯುವವನು ತೊಂದರೆಗಳಿಂದ ರಕ್ಷಿಸಿಕೊಳ್ಳುವನು.

ಜ್ಞಾನೋಕ್ತಿಗಳು 21:24 (KANIRV)
Square Portrait Landscape 4K UHD
“ಧರ್ಮನಿಂದಕ” ಎನ್ನಿಸಿಕೊಳ್ಳುವವನು ಸೊಕ್ಕೇರಿದ ಅಹಂಕಾರಿಯಾಗಿ, ಗರ್ವ ಮತ್ತು ಮದದಿಂದ ಪ್ರವರ್ತಿಸುವನು.

ಜ್ಞಾನೋಕ್ತಿಗಳು 21:25 (KANIRV)
Square Portrait Landscape 4K UHD
ಸೋಮಾರಿಯ ಆಶೆಯು ಅವನನ್ನು ಕೊಲ್ಲುವುದು, ಅವನ ಕೈಗಳು ದುಡಿಯಲಾರವು.

ಜ್ಞಾನೋಕ್ತಿಗಳು 21:26 (KANIRV)
Square Portrait Landscape 4K UHD
ಧರ್ಮಿಯು ಹಿಂತೆಗೆಯದೆ ಕೊಡುವನು, ಲೋಭಿಯು ದಿನವೆಲ್ಲಾ ಆಶಿಸುತ್ತಲೇ ಇರುವನು.

ಜ್ಞಾನೋಕ್ತಿಗಳು 21:27 (KANIRV)
Square Portrait Landscape 4K UHD
ದುಷ್ಟರ ಯಜ್ಞವೇ ಅಸಹ್ಯ, ಅದನ್ನು ದುರ್ಬುದ್ಧಿಯಿಂದ ಅರ್ಪಿಸುವುದು ಮತ್ತೂ ಅಸಹ್ಯ.

ಜ್ಞಾನೋಕ್ತಿಗಳು 21:28 (KANIRV)
Square Portrait Landscape 4K UHD
ಸುಳ್ಳು ಸಾಕ್ಷಿಯು ಅಳಿದುಹೋಗುವುದು, ಕೇಳಿದ್ದನ್ನೇ ಹೇಳುವವನ ಸಾಕ್ಷಿಯು ಶಾಶ್ವತವಾಗಿರುವುದು.

ಜ್ಞಾನೋಕ್ತಿಗಳು 21:29 (KANIRV)
Square Portrait Landscape 4K UHD
ದುಷ್ಟನ ಮುಖದಲ್ಲಿ ಲಜ್ಜೆಯಿಲ್ಲ, ಸತ್ಯವಂತನು ತನ್ನ ನಡತೆಯನ್ನು ಸರಿಪಡಿಸಿಕೊಳ್ಳುತ್ತಿರುವನು.

ಜ್ಞಾನೋಕ್ತಿಗಳು 21:30 (KANIRV)
Square Portrait Landscape 4K UHD
ಯಾವ ಜ್ಞಾನವೂ, ಯಾವ ವಿವೇಕವೂ, ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವುದಿಲ್ಲ.

ಜ್ಞಾನೋಕ್ತಿಗಳು 21:31 (KANIRV)
Square Portrait Landscape 4K UHD
ಅಶ್ವಬಲವು ಯುದ್ಧದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಯೆಹೋವನಿಂದಲೇ.

Available Bible Translations

American Standard Version
Proverbs 21 (ASV) »
King James Version
Proverbs 21 (KJV) »
GOD’S WORD® (GW)
Proverbs 21 (GW) »
World English Bible
Proverbs 21 (WEB) »
Louis Segond 1910
Proverbes 21 (LSG) »
इंडियन रिवाइज्ड वर्जन - हिंदी
नीतिवचन 21 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 21 (PANIRV) »
ভারতীয় সংশোধিত সংস্করণ - বাংলা
হিতোপদেশ 21 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 21 (TAMIRV) »
इंडियन रिवाइज्ड वर्जन - मराठी
नीतिसूत्रे 21 (MARIRV) »
ఇండియన్ రేవిజ్డ్ వెర్షన్ - తెలుగు
సామెత 21 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 21 (GUJIRV) »
الكتاب المقدس باللغة العربية، فان دايك
أَمْثَالٌ 21 (AVD) »
תנ ך עברי מודרני
משלי 21 (HEB) »
Bíblia Sagrada Português
Provérbios 21 (BSL) »
Kinh Thánh: Tiếng Việt
Châm Ngôn 21 (VIE) »
Reina Valera Antigua
Proverbios 21 (RVA) »
La Sacra Bibbia
Proverbi 21 (RIV) »
圣 经 简体中文和合本
箴 言 21 (CUVS) »
聖 經 繁體中文和合本
箴 言 21 (CUVT) »
Библия на русском
Притчи 21 (RUSV) »
Українська Біблія
Екклезіяст 21 (UKR) »
Szent Biblia - Magyar
Példabeszédek 21 (KAR) »
Българска Библия
Притчи 21 (BULG) »
聖書 日本語
箴言 21 (JPN) »
Kitaabka Quduuska Ah
Maahmaahyadii 21 (SOM) »
De Heilige Schrift
Spreuken 21 (NLD) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List