ಜ್ಞಾನೋಕ್ತಿಗಳು Chapter 22 KANIRV Bible Verse Images

ಜ್ಞಾನೋಕ್ತಿಗಳು 22 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 22 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 22:1 (KANIRV)
Square Portrait Landscape 4K UHD
ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.

ಜ್ಞಾನೋಕ್ತಿಗಳು 22:2 (KANIRV)
Square Portrait Landscape 4K UHD
ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.

ಜ್ಞಾನೋಕ್ತಿಗಳು 22:3 (KANIRV)
Square Portrait Landscape 4K UHD
ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.

ಜ್ಞಾನೋಕ್ತಿಗಳು 22:4 (KANIRV)
Square Portrait Landscape 4K UHD
ಧನ, ಮಾನ ಮತ್ತು ಜೀವಗಳು ದೀನಭಾವಕ್ಕೂ, ಯೆಹೋವನ ಭಯಕ್ಕೂ ಫಲ.

ಜ್ಞಾನೋಕ್ತಿಗಳು 22:5 (KANIRV)
Square Portrait Landscape 4K UHD
ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ, ಉರುಲುಗಳೂ ತುಂಬಿವೆ, ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು.

ಜ್ಞಾನೋಕ್ತಿಗಳು 22:6 (KANIRV)
Square Portrait Landscape 4K UHD
ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಿಸು, ಮುಪ್ಪಿನಲ್ಲಿಯೂ ಓರೆಯಾಗರು.

ಜ್ಞಾನೋಕ್ತಿಗಳು 22:7 (KANIRV)
Square Portrait Landscape 4K UHD
ಬಲ್ಲಿದನು ಬಡವನಿಗೆ ಒಡೆಯ, ಸಾಲಗಾರನು ಸಾಲಕೊಟ್ಟವನಿಗೆ ಸೇವಕ.

ಜ್ಞಾನೋಕ್ತಿಗಳು 22:8 (KANIRV)
Square Portrait Landscape 4K UHD
ಕೆಟ್ಟತನವನ್ನು ಬಿತ್ತುವವನು ಕೇಡನ್ನೇ ಕೊಯ್ಯುವನು, ಹೆಮ್ಮೆಯಿಂದ ಹಿಡಿದ ದಂಡವು ಅವನ ಕೈಯಿಂದ ಬಿದ್ದುಹೋಗುವುದು.

ಜ್ಞಾನೋಕ್ತಿಗಳು 22:9 (KANIRV)
Square Portrait Landscape 4K UHD
ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು, ತನ್ನ ಆಹಾರವನ್ನು ಬಡವರಿಗೆ ಕೊಡುತ್ತಾನಲ್ಲವೆ.

ಜ್ಞಾನೋಕ್ತಿಗಳು 22:10 (KANIRV)
Square Portrait Landscape 4K UHD
ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವುದು, ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವುದು.

ಜ್ಞಾನೋಕ್ತಿಗಳು 22:11 (KANIRV)
Square Portrait Landscape 4K UHD
ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.

ಜ್ಞಾನೋಕ್ತಿಗಳು 22:12 (KANIRV)
Square Portrait Landscape 4K UHD
ಯೆಹೋವನ ಕಣ್ಣು ತಿಳಿವಳಿಕೆಗೆ ಕಾವಲು, ಆತನು ವಂಚಕನ ಮಾತುಗಳನ್ನು ಕೆಡವಿಬಿಡುವನು.

ಜ್ಞಾನೋಕ್ತಿಗಳು 22:13 (KANIRV)
Square Portrait Landscape 4K UHD
“ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದ್ದಿತು” ಎಂಬುದು ಸೋಮಾರಿಯ ನೆವ.

ಜ್ಞಾನೋಕ್ತಿಗಳು 22:14 (KANIRV)
Square Portrait Landscape 4K UHD
ಜಾರಸ್ತ್ರೀಯ ಬಾಯಿ ಆಳವಾದ ಹಳ್ಳ, ಯೆಹೋವನಿಗೆ ಸಿಟ್ಟನ್ನೆಬ್ಬಿಸಿದವನು ಅದರಲ್ಲಿ ಬೀಳುವನು.

ಜ್ಞಾನೋಕ್ತಿಗಳು 22:15 (KANIRV)
Square Portrait Landscape 4K UHD
ಮೂರ್ಖತನವು ಮಕ್ಕಳ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವುದು.

ಜ್ಞಾನೋಕ್ತಿಗಳು 22:16 (KANIRV)
Square Portrait Landscape 4K UHD
ಸ್ವಂತ ಲಾಭಕ್ಕಾಗಿ ಬಡವರನ್ನು ಹಿಂಸಿಸುವವನಿಗೂ, ಸಿರಿವಂತರಿಗೆ ಲಂಚಕೊಡುವವನಿಗೂ ಕೊರತೆಯೇ ಗತಿ.

ಜ್ಞಾನೋಕ್ತಿಗಳು 22:17 (KANIRV)
Square Portrait Landscape 4K UHD
ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು, ನನ್ನ ಜ್ಞಾನಬೋಧೆಗೆ ಮನಸ್ಸು ಕೊಡು.

ಜ್ಞಾನೋಕ್ತಿಗಳು 22:18 (KANIRV)
Square Portrait Landscape 4K UHD
ನೀನು ಆ ಮಾತುಗಳನ್ನು ಅಂತರಂಗದಲ್ಲಿ ಕಾಪಾಡುತ್ತಾ, ತುಟಿಗಳಲ್ಲಿ ಸಿದ್ಧಪಡಿಸಿಕೊಂಡಿದ್ದರೆ ಎಷ್ಟೋ ರಮ್ಯ.

ಜ್ಞಾನೋಕ್ತಿಗಳು 22:19 (KANIRV)
Square Portrait Landscape 4K UHD
ನೀನು ಯೆಹೋವನಲ್ಲಿ ಭರವಸವಿಡಬೇಕೆಂದು, ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ.

ಜ್ಞಾನೋಕ್ತಿಗಳು 22:20 (KANIRV)
Square Portrait Landscape 4K UHD
ಸತ್ಯವಚನಗಳು ಎಷ್ಟೋ ಯಥಾರ್ಥವೆಂದು ನೀನು ತಿಳಿದುಕೊಂಡು, ನಿನ್ನನ್ನು ಕಳುಹಿಸಿದವರಿಗೆ ಸತ್ಯವಚನಗಳನ್ನೇ ಅರಿಕೆ ಮಾಡುವಂತೆ,

ಜ್ಞಾನೋಕ್ತಿಗಳು 22:21 (KANIRV)
Square Portrait Landscape 4K UHD
ಸತ್ಯ, ತಿಳಿವಳಿಕೆಯ ವಿಷಯವಾಗಿ ಇದಕ್ಕೆ ಮೊದಲೇ ನಿನಗಾಗಿ ಬರೆದಿರುವೆನಲ್ಲಾ.

ಜ್ಞಾನೋಕ್ತಿಗಳು 22:22 (KANIRV)
Square Portrait Landscape 4K UHD
ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆ ಮಾಡಬೇಡ, ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯಬೇಡ.

ಜ್ಞಾನೋಕ್ತಿಗಳು 22:23 (KANIRV)
Square Portrait Landscape 4K UHD
ಯೆಹೋವನೇ ಅವರ ವ್ಯಾಜ್ಯವನ್ನು ನಡೆಸಿ, ಹಾಳುಮಾಡಿದವರ ಜೀವವನ್ನು ಹಾಳುಮಾಡುವನು.

ಜ್ಞಾನೋಕ್ತಿಗಳು 22:24 (KANIRV)
Square Portrait Landscape 4K UHD
ಕೋಪಿಷ್ಠನ ಸಂಗಡ ಸ್ನೇಹ ಬೆಳಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.

ಜ್ಞಾನೋಕ್ತಿಗಳು 22:25 (KANIRV)
Square Portrait Landscape 4K UHD
ಮಾಡಿದರೆ ಅವನ ದುರ್ನಡತೆಯನ್ನು ಅನುಸರಿಸಿ, ನಿನ್ನ ಆತ್ಮವನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ.

ಜ್ಞಾನೋಕ್ತಿಗಳು 22:26 (KANIRV)
Square Portrait Landscape 4K UHD
ಮಾತುಕೊಟ್ಟು ಸಾಲಕ್ಕೆ ಹೊಣೆಯಾಗುವವರಲ್ಲಿ, ನೀನೂ ಒಬ್ಬನಾಗಬೇಡ,

ಜ್ಞಾನೋಕ್ತಿಗಳು 22:27 (KANIRV)
Square Portrait Landscape 4K UHD
ಆ ಸಾಲವನ್ನು ತೀರಿಸುವುದಕ್ಕೆ ನಿನ್ನಿಂದಾಗದಿರಲು, ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವುದು ಬೇಕೇ?

ಜ್ಞಾನೋಕ್ತಿಗಳು 22:28 (KANIRV)
Square Portrait Landscape 4K UHD
ನಿನ್ನ ಪೂರ್ವಿಕರು ಹಾಕಿದ ಪೂರ್ವಕಾಲದ ಮೇರೆಯನ್ನು ದಾಟಬೇಡ.

ಜ್ಞಾನೋಕ್ತಿಗಳು 22:29 (KANIRV)
Square Portrait Landscape 4K UHD
ತನ್ನ ಕೆಲಸದಲ್ಲಿ ಚಾತುರ್ಯವುಳ್ಳವನನ್ನು ನೋಡು, ಇಂಥವನು ರಾಜನ ಸನ್ನಿಧಿಯಲ್ಲಿ ನಿಲ್ಲುವನೇ ಹೊರತು, ಸಾಮಾನ್ಯ ಜನರ ಮುಂದೆ ಅಲ್ಲ.

Available Bible Translations

American Standard Version
Proverbs 22 (ASV) »
King James Version
Proverbs 22 (KJV) »
GOD’S WORD® (GW)
Proverbs 22 (GW) »
World English Bible
Proverbs 22 (WEB) »
Louis Segond 1910
Proverbes 22 (LSG) »
इंडियन रिवाइज्ड वर्जन - हिंदी
नीतिवचन 22 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 22 (PANIRV) »
ভারতীয় সংশোধিত সংস্করণ - বাংলা
হিতোপদেশ 22 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 22 (TAMIRV) »
इंडियन रिवाइज्ड वर्जन - मराठी
नीतिसूत्रे 22 (MARIRV) »
ఇండియన్ రేవిజ్డ్ వెర్షన్ - తెలుగు
సామెత 22 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 22 (GUJIRV) »
الكتاب المقدس باللغة العربية، فان دايك
أَمْثَالٌ 22 (AVD) »
תנ ך עברי מודרני
משלי 22 (HEB) »
Bíblia Sagrada Português
Provérbios 22 (BSL) »
Kinh Thánh: Tiếng Việt
Châm Ngôn 22 (VIE) »
Reina Valera Antigua
Proverbios 22 (RVA) »
La Sacra Bibbia
Proverbi 22 (RIV) »
圣 经 简体中文和合本
箴 言 22 (CUVS) »
聖 經 繁體中文和合本
箴 言 22 (CUVT) »
Библия на русском
Притчи 22 (RUSV) »
Українська Біблія
Екклезіяст 22 (UKR) »
Szent Biblia - Magyar
Példabeszédek 22 (KAR) »
Българска Библия
Притчи 22 (BULG) »
聖書 日本語
箴言 22 (JPN) »
Kitaabka Quduuska Ah
Maahmaahyadii 22 (SOM) »
De Heilige Schrift
Spreuken 22 (NLD) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List