ಜ್ಞಾನೋಕ್ತಿಗಳು Chapter 1 KANIRV Bible Verse Images

ಜ್ಞಾನೋಕ್ತಿಗಳು 1 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 1 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 1:1 (KANIRV)
Square Portrait Landscape 4K UHD
ಇಸ್ರಾಯೇಲರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು.

ಜ್ಞಾನೋಕ್ತಿಗಳು 1:2 (KANIRV)
Square Portrait Landscape 4K UHD
ಇವುಗಳಿಂದ ಜನರು ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದು, ಬುದ್ಧಿವಾದಗಳನ್ನು ಗ್ರಹಿಸಿಕೊಳ್ಳುವರು.

ಜ್ಞಾನೋಕ್ತಿಗಳು 1:3 (KANIRV)
Square Portrait Landscape 4K UHD
ಅವರು ವಿವೇಕಮಾರ್ಗದಲ್ಲಿ ಅಂದರೆ ನೀತಿ, ನ್ಯಾಯ ಮತ್ತು ಧರ್ಮಮಾರ್ಗಗಳಲ್ಲಿ ಶಿಕ್ಷಿತರಾಗುವರು.

ಜ್ಞಾನೋಕ್ತಿಗಳು 1:4 (KANIRV)
Square Portrait Landscape 4K UHD
ಈ ನುಡಿಗಳು ಮೂಢರಿಗೆ ಜಾಣತನವನ್ನೂ, ಯೌವನಸ್ಥರಿಗೆ ತಿಳಿವಳಿಕೆಯನ್ನು ಮತ್ತು ಬುದ್ಧಿಯನ್ನು ಉಂಟುಮಾಡುವವು.

ಜ್ಞಾನೋಕ್ತಿಗಳು 1:5 (KANIRV)
Square Portrait Landscape 4K UHD
ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಡಿಂತ್ಯವನ್ನು ಹೊಂದುವನು, ವಿವೇಕಿಯು ಮತ್ತಷ್ಟು ಉಚಿತಾಲೋಚನೆಯನ್ನು ಹೊಂದುವನು.

ಜ್ಞಾನೋಕ್ತಿಗಳು 1:6 (KANIRV)
Square Portrait Landscape 4K UHD
ಇವು ಗಾದೆ, ಸಾಮ್ಯ, ಜ್ಞಾನಿಗಳ ನುಡಿ ಮತ್ತು ಒಗಟುಗಳನ್ನು ತಿಳಿಯಲು ಸಾಧನವಾಗಿವೆ.

ಜ್ಞಾನೋಕ್ತಿಗಳು 1:7 (KANIRV)
Square Portrait Landscape 4K UHD
ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು, ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.

ಜ್ಞಾನೋಕ್ತಿಗಳು 1:8 (KANIRV)
Square Portrait Landscape 4K UHD
ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.

ಜ್ಞಾನೋಕ್ತಿಗಳು 1:9 (KANIRV)
Square Portrait Landscape 4K UHD
ಅವು ನಿನ್ನ ತಲೆಗೆ ಸುಂದರವಾದ ಪುಷ್ಪಕಿರೀಟ, ಕೊರಳಿಗೆ ಹಾರದಂತಿರುವುದು.

ಜ್ಞಾನೋಕ್ತಿಗಳು 1:10 (KANIRV)
Square Portrait Landscape 4K UHD
ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.

ಜ್ಞಾನೋಕ್ತಿಗಳು 1:11 (KANIRV)
Square Portrait Landscape 4K UHD
ಅವರು, “ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವುದಕ್ಕೆ ಕಾದಿರೋಣ.

ಜ್ಞಾನೋಕ್ತಿಗಳು 1:12 (KANIRV)
Square Portrait Landscape 4K UHD
ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ, ನಾವೂ ಇವರನ್ನು ಜೀವದೊಡನೆ ನುಂಗಿಬಿಡೋಣ.

ಜ್ಞಾನೋಕ್ತಿಗಳು 1:13 (KANIRV)
Square Portrait Landscape 4K UHD
ಸಕಲವಿಧವಾದ ಅಮೂಲ್ಯ ಸಂಪತ್ತನ್ನು ಕಂಡುಹಿಡಿದು, ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬಿಕೊಳ್ಳೋಣ.

ಜ್ಞಾನೋಕ್ತಿಗಳು 1:14 (KANIRV)
Square Portrait Landscape 4K UHD
ನಮ್ಮ ಸಂಗಡ ಚೀಟು ಹಾಕು; ನಮ್ಮೆಲ್ಲರ ಹಣದ ಚೀಲ ಒಂದೇ ಆಗಿರಲಿ” ಎಂದು ಹೇಳಿದರೆ,

ಜ್ಞಾನೋಕ್ತಿಗಳು 1:15 (KANIRV)
Square Portrait Landscape 4K UHD
ಮಗನೇ, ಅವರೊಡನೆ ದಾರಿಯಲ್ಲಿ ನಡೆಯಬಾರದು, ಅವರ ಮಾರ್ಗದಲ್ಲಿ ನೀನು ಹೆಜ್ಜೆಯಿಡಬೇಡ.

ಜ್ಞಾನೋಕ್ತಿಗಳು 1:16 (KANIRV)
Square Portrait Landscape 4K UHD
ಅವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುವವು, ಅವರು ರಕ್ತವನ್ನು ಸುರಿಸಲು ಆತುರಪಡುವರು.

ಜ್ಞಾನೋಕ್ತಿಗಳು 1:17 (KANIRV)
Square Portrait Landscape 4K UHD
ಪಕ್ಷಿಗಳ ಕಣ್ಣೆದುರಿಗೆ ಬಲೆಯನ್ನೊಡ್ಡುವುದು ವ್ಯರ್ಥ.

ಜ್ಞಾನೋಕ್ತಿಗಳು 1:18 (KANIRV)
Square Portrait Landscape 4K UHD
ಇವರಾದರೋ ಸ್ವರಕ್ತವನ್ನು ಸುರಿಸಿಕೊಳ್ಳುವುದಕ್ಕೆ ಹೊಂಚುಹಾಕುತ್ತಾರೆ, ಸ್ವಜೀವವನ್ನು ತೆಗೆದುಕೊಳ್ಳುವುದಕ್ಕೆ ಕಾದಿರುತ್ತಾರೆ.

ಜ್ಞಾನೋಕ್ತಿಗಳು 1:19 (KANIRV)
Square Portrait Landscape 4K UHD
ಸೂರೆಮಾಡುವವರೆಲ್ಲರ ದಾರಿಯು ಹೀಗೆಯೇ ಸರಿ; ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವುದು.

ಜ್ಞಾನೋಕ್ತಿಗಳು 1:20 (KANIRV)
Square Portrait Landscape 4K UHD
ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ಧ್ವನಿಮಾಡುತ್ತಾಳೆ.

ಜ್ಞಾನೋಕ್ತಿಗಳು 1:21 (KANIRV)
Square Portrait Landscape 4K UHD
ಪೇಟೆಯ ಮುಖ್ಯಸ್ಥಾನದಲ್ಲಿ ಆಕೆ ಕೂಗುತ್ತಾಳೆ, ಊರ ಬಾಗಿಲಿನಲ್ಲಿ ಆಕೆಯು ನುಡಿಯುವುದೇನೆಂದರೆ,

ಜ್ಞಾನೋಕ್ತಿಗಳು 1:22 (KANIRV)
Square Portrait Landscape 4K UHD
“ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ? ಧರ್ಮನಿಂದಕರು ನಿಂದಿಸುವುದಕ್ಕೆ ಎಷ್ಟುಕಾಲ ಇಷ್ಟಪಡುವರು? ಜ್ಞಾನಹೀನರು ತಿಳಿವಳಿಕೆಯನ್ನು ಎಷ್ಟರವರೆಗೆ ಹಗೆಮಾಡುವರು?

ಜ್ಞಾನೋಕ್ತಿಗಳು 1:23 (KANIRV)
Square Portrait Landscape 4K UHD
ನನ್ನ ಗದರಿಕೆಗೆ ಲಕ್ಷ್ಯಕೊಡಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನನ್ನ ಮಾತುಗಳನ್ನು ನಿಮಗೆ ತಿಳಿಯಪಡಿಸುವೆನು.

ಜ್ಞಾನೋಕ್ತಿಗಳು 1:24 (KANIRV)
Square Portrait Landscape 4K UHD
ನಾನು ಕರೆದಾಗ ನೀವು ತಿರಸ್ಕರಿಸಿದಿರಿ. ಕೈ ಚಾಚಿದರೂ ಯಾರೂ ನನ್ನನ್ನು ಗಮನಿಸಲಿಲ್ಲ;

ಜ್ಞಾನೋಕ್ತಿಗಳು 1:25 (KANIRV)
Square Portrait Landscape 4K UHD
ನನ್ನ ಬುದ್ಧಿವಾದವನ್ನು ಲಕ್ಷ್ಯಕ್ಕೆ ತಾರದೆ, ನನ್ನ ತಿದ್ದುಪಾಟನ್ನು ಬೇಡವೆಂದು ತಳ್ಳಿಬಿಟ್ಟಿದ್ದೀರಿ.

ಜ್ಞಾನೋಕ್ತಿಗಳು 1:26 (KANIRV)
Square Portrait Landscape 4K UHD
ಆದಕಾರಣ ಬಿರುಗಾಳಿಯಂತೆ ಅಪಾಯವೂ, ತುಫಾನಿನಂತೆ ಆಪತ್ತೂ ಬಂದು, ನಿಮಗೆ ಶ್ರಮಸಂಕಟಗಳು ಸಂಭವಿಸುವಾಗ

ಜ್ಞಾನೋಕ್ತಿಗಳು 1:27 (KANIRV)
Square Portrait Landscape 4K UHD
ನಿಮ್ಮ ಅಪಾಯದಲ್ಲಿ ನಾನೂ ನಗುವೆನು; ನಿಮ್ಮ ಆಪತ್ತಿನಲ್ಲಿ ಪರಿಹಾಸ್ಯ ಮಾಡುವೆನು.

ಜ್ಞಾನೋಕ್ತಿಗಳು 1:28 (KANIRV)
Square Portrait Landscape 4K UHD
ಆಗ ಅವರು ನನಗೆ ಮೊರೆಯಿಟ್ಟರೂ ನಾನು ಉತ್ತರಕೊಡೆನು, ನನ್ನನ್ನು ಆತುರದಿಂದ ಹುಡುಕಿದರೂ ನಾನು ಕಾಣಿಸೆನು.

ಜ್ಞಾನೋಕ್ತಿಗಳು 1:29 (KANIRV)
Square Portrait Landscape 4K UHD
ಯಾಕೆಂದರೆ ಅವರು ಯೆಹೋವನ ಭಯಭಕ್ತಿಗೆ ಮನಸ್ಸು ಕೊಡದೆ ತಿಳಿವಳಿಕೆಯನ್ನು ಹಗೆಮಾಡಿದರು.

ಜ್ಞಾನೋಕ್ತಿಗಳು 1:30 (KANIRV)
Square Portrait Landscape 4K UHD
ನನ್ನ ಬೋಧನೆಯನ್ನು ಕೇಳಲೊಲ್ಲದೆ, ನನ್ನ ಗದರಿಕೆಯನ್ನೆಲ್ಲಾ ತಾತ್ಸಾರಮಾಡಿದರು.

ಜ್ಞಾನೋಕ್ತಿಗಳು 1:31 (KANIRV)
Square Portrait Landscape 4K UHD
ಆದುದರಿಂದ ಅವರು ತಮ್ಮ ನಡತೆಯ ಫಲವನ್ನು ಅನುಭವಿಸಿ, ಸ್ವಂತ ಕುಯುಕ್ತಿಗಳನ್ನೇ ಹೊಟ್ಟೆತುಂಬಾ ಉಣ್ಣಬೇಕಾಗುವುದು.

ಜ್ಞಾನೋಕ್ತಿಗಳು 1:32 (KANIRV)
Square Portrait Landscape 4K UHD
ಮೂಢರು ತಮ್ಮ ಉದಾಸೀನತೆಯಿಂದಲೇ ಹತರಾಗುವರು, ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು.

ಜ್ಞಾನೋಕ್ತಿಗಳು 1:33 (KANIRV)
Square Portrait Landscape 4K UHD
ನನ್ನ ಮಾತಿಗೆ ಕಿವಿಗೊಡುವವನಾದರೋ ಸುರಕ್ಷಿತನಾಗಿದ್ದು, ಯಾವ ಕೇಡಿಗೂ ಭಯಪಡದೆ ನೆಮ್ಮದಿಯಾಗಿ ಬಾಳುವನು” ಎಂಬುದೇ.

Available Bible Translations

American Standard Version (ASV)
Proverbs 1 (ASV) »
King James Version (KJV)
Proverbs 1 (KJV) »
GOD’S WORD® (GW)
Proverbs 1 (GW) »
Berean Bible (BSB)
Proverbs 1 (BSB) »
World English Bible (WEB)
Proverbs 1 (WEB) »
French Bible (LSG)
Proverbes 1 (LSG) »
German Bible (LUTH1912)
Sprüche 1 (LUTH1912) »
Telugu Bible (TELIRV)
సామెత 1 (TELIRV) »
Hebrew Bible (HEB)
משלי 1 (HEB) »
Portuguese Bible (BSL)
Provérbios 1 (BSL) »
Vietnamese Bible (VIE)
Châm Ngôn 1 (VIE) »
Spanish Bible (RVA)
Proverbios 1 (RVA) »
Italian Bible (RIV)
Proverbi 1 (RIV) »
Chinese Simplified (CUVS)
箴 言 1 (CUVS) »
Chinese Traditional (CUVT)
箴 言 1 (CUVT) »
Albanian Bible (ALB)
Fjalët e urta 1 (ALB) »
Swedish Bible (SV1917)
Ordspråksboken 1 (SV1917) »
Russian Bible (RUSV)
Притчи 1 (RUSV) »
Hungarian Bible (KAR)
Példabeszédek 1 (KAR) »
Bulgarian Bible (BULG)
Притчи 1 (BULG) »
Japanese Bible (JPN)
箴言 1 (JPN) »
Norwegian Bible (NORSK)
Salomos Ordspråk 1 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List