ಜ್ಞಾನೋಕ್ತಿಗಳು Chapter 28 KANIRV Bible Verse Images

ಜ್ಞಾನೋಕ್ತಿಗಳು 28 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 28 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 28:1 (KANIRV)
Square Portrait Landscape 4K UHD
ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು, ಶಿಷ್ಟನು ಸಿಂಹದಂತೆ ಧೈರ್ಯದಿಂದಿರುವನು.

ಜ್ಞಾನೋಕ್ತಿಗಳು 28:2 (KANIRV)
Square Portrait Landscape 4K UHD
ಅಧರ್ಮದಿಂದ ದೇಶದಲ್ಲಿ ಬಹು ನಾಯಕರಿರುವರು, ಜ್ಞಾನಿಗಳೂ, ವಿವೇಕಿಗಳೂ ಆದವರಿಂದ ಧರ್ಮವು ಶಾಶ್ವತವಾಗಿರುವುದು.

ಜ್ಞಾನೋಕ್ತಿಗಳು 28:3 (KANIRV)
Square Portrait Landscape 4K UHD
ಬಡವರನ್ನು ಹಿಂಸಿಸುವ ದರಿದ್ರನು, ಒಂದು ಕಾಳೂ ಉಳಿಯದಂತೆ ಪೈರನ್ನು ಬಡಿಯುವ ಮಳೆಯ ಹಾಗೆ.

ಜ್ಞಾನೋಕ್ತಿಗಳು 28:4 (KANIRV)
Square Portrait Landscape 4K UHD
ಧರ್ಮೋಪದೇಶವನ್ನು ಕೈಕೊಳ್ಳದವರು ದುಷ್ಟರನ್ನು ಹೊಗಳುವರು, ಕೈಕೊಳ್ಳುವವರು ಅವರನ್ನು ಎದುರಿಸುವರು.

ಜ್ಞಾನೋಕ್ತಿಗಳು 28:5 (KANIRV)
Square Portrait Landscape 4K UHD
ಕೆಟ್ಟವರು ನ್ಯಾಯವನ್ನು ಗ್ರಹಿಸರು, ಯೆಹೋವನ ಭಕ್ತರು ಸಮಸ್ತವನ್ನು ಗ್ರಹಿಸುವರು.

ಜ್ಞಾನೋಕ್ತಿಗಳು 28:6 (KANIRV)
Square Portrait Landscape 4K UHD
ವಕ್ರಮಾರ್ಗಿಯಾದ ಐಶ್ವರ್ಯವಂತನಿಗಿಂತ, ನಿರ್ದೋಷವಾಗಿ ನಡೆಯುವ ದರಿದ್ರನು ಶ್ರೇಷ್ಠನು.

ಜ್ಞಾನೋಕ್ತಿಗಳು 28:7 (KANIRV)
Square Portrait Landscape 4K UHD
ಧರ್ಮೋಪದೇಶವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು, ಹೊಟ್ಟೆಬಾಕರ ಗೆಳೆಯನು ತಂದೆಯ ಮಾನವನ್ನು ಕಳೆಯುವನು.

ಜ್ಞಾನೋಕ್ತಿಗಳು 28:8 (KANIRV)
Square Portrait Landscape 4K UHD
ಬಡ್ಡಿ ಮತ್ತು ಅನ್ಯಾಯ ಲಾಭದಿಂದ ವೃದ್ಧಿಯಾದ ಆಸ್ತಿಯು ಬಡವರಲ್ಲಿ ಕನಿಕರಪಡುವವನ ಪಾಲಾಗುವುದು.

ಜ್ಞಾನೋಕ್ತಿಗಳು 28:9 (KANIRV)
Square Portrait Landscape 4K UHD
ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.

ಜ್ಞಾನೋಕ್ತಿಗಳು 28:10 (KANIRV)
Square Portrait Landscape 4K UHD
ಯಥಾರ್ಥವಂತರನ್ನು ದುರ್ಮಾರ್ಗಕ್ಕೆ ಎಳೆಯುವವನು, ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು, ನಿರ್ದೋಷಿಗಳಿಗೋ ಸುಖವು ಸೊತ್ತಾಗುವುದು.

ಜ್ಞಾನೋಕ್ತಿಗಳು 28:11 (KANIRV)
Square Portrait Landscape 4K UHD
ಐಶ್ವರ್ಯವಂತನು ತಾನು ಜ್ಞಾನಿಯೆಂದೆಣಿಸಿಕೊಳ್ಳುವನು, ವಿವೇಕಿಯಾದ ಬಡವನು ಅವನನ್ನು ಇಂಥವನೆಂದು ಗೊತ್ತುಮಾಡುವನು.

ಜ್ಞಾನೋಕ್ತಿಗಳು 28:12 (KANIRV)
Square Portrait Landscape 4K UHD
ಶಿಷ್ಟರಿಗೆ ಉಲ್ಲಾಸವಾದರೆ ದೊಡ್ಡ ಸಂಭ್ರಮವಾಗುವುದು, ದುಷ್ಟರಿಗೆ ಏಳಿಗೆಯಾದರೆ ಜನರು ಅಡಗಿಕೊಳ್ಳುವರು.

ಜ್ಞಾನೋಕ್ತಿಗಳು 28:13 (KANIRV)
Square Portrait Landscape 4K UHD
ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು, ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.

ಜ್ಞಾನೋಕ್ತಿಗಳು 28:14 (KANIRV)
Square Portrait Landscape 4K UHD
ಕೆಟ್ಟದನ್ನು ಮಾಡುವುದಕ್ಕೆ ಯಾವಾಗಲೂ ಭಯಪಡುವವನು ಧನ್ಯನು, ಕಠಿಣಹೃದಯನು ಕೇಡಿಗೆ ಸಿಕ್ಕಿಬೀಳುವನು.

ಜ್ಞಾನೋಕ್ತಿಗಳು 28:15 (KANIRV)
Square Portrait Landscape 4K UHD
ಬಡವರಾದ ಪ್ರಜೆಗಳನ್ನು ಆಳುವ ದುಷ್ಟರಾಜನು, ಗರ್ಜಿಸುವ ಸಿಂಹ ಮತ್ತು ಹುಡುಕಾಡುವ ಕರಡಿಯಂತೆ.

ಜ್ಞಾನೋಕ್ತಿಗಳು 28:16 (KANIRV)
Square Portrait Landscape 4K UHD
ವಿವೇಕಶೂನ್ಯನಾದ ಒಡೆಯನು ಮಹಾ ಹಿಂಸಕನು, ದೋಚಿಕೊಳ್ಳದವನು ದೀರ್ಘಾಯುಷ್ಯನು.

ಜ್ಞಾನೋಕ್ತಿಗಳು 28:17 (KANIRV)
Square Portrait Landscape 4K UHD
ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು, ಅವನನ್ನು ಯಾರೂ ತಡೆಯಬಾರದು.

ಜ್ಞಾನೋಕ್ತಿಗಳು 28:18 (KANIRV)
Square Portrait Landscape 4K UHD
ಸನ್ಮಾರ್ಗಿಗೆ ಉದ್ಧಾರ, ವಕ್ರಮಾರ್ಗಿಗೆ ತಟ್ಟನೆ ಸೋಲು.

ಜ್ಞಾನೋಕ್ತಿಗಳು 28:19 (KANIRV)
Square Portrait Landscape 4K UHD
ದುಡಿದು ಹೊಲಗೇಯುವವನಿಗೆ ಹೊಟ್ಟೆ ತುಂಬಾ ಅನ್ನ, ವ್ಯರ್ಥ ಕಾರ್ಯಾಸಕ್ತನಿಗೆ ಹೊಟ್ಟೆತುಂಬಾ ಬಡತನ.

ಜ್ಞಾನೋಕ್ತಿಗಳು 28:20 (KANIRV)
Square Portrait Landscape 4K UHD
ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು, ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದೆ ಇರನು.

ಜ್ಞಾನೋಕ್ತಿಗಳು 28:21 (KANIRV)
Square Portrait Landscape 4K UHD
ಪಕ್ಷಪಾತವು ಅಧರ್ಮ, ತುತ್ತು ಅನ್ನಕ್ಕಾಗಿಯೂ ಜನರು ದ್ರೋಹಮಾಡುವುದುಂಟು.

ಜ್ಞಾನೋಕ್ತಿಗಳು 28:22 (KANIRV)
Square Portrait Landscape 4K UHD
ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು, ತನಗೆ ಕೊರತೆಯಾಗುವುದೆಂದು ಅರಿಯನು.

ಜ್ಞಾನೋಕ್ತಿಗಳು 28:23 (KANIRV)
Square Portrait Landscape 4K UHD
ಮುಖಸ್ತುತಿ ಮಾಡುವವನಿಗಿಂತಲೂ, ಗದರಿಸುವವನು ಬಳಿಕ ಹೆಚ್ಚು ದಯಾಪಾತ್ರನಾಗುವನು.

ಜ್ಞಾನೋಕ್ತಿಗಳು 28:24 (KANIRV)
Square Portrait Landscape 4K UHD
ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು, ಕೆಡುಕನಿಗೆ ಜೊತೆಗಾರನು.

ಜ್ಞಾನೋಕ್ತಿಗಳು 28:25 (KANIRV)
Square Portrait Landscape 4K UHD
ದುರಾಶೆಯುಳ್ಳವನು ಜಗಳವನ್ನೆಬ್ಬಿಸುವನು, ಯೆಹೋವನಲ್ಲಿ ಭರವಸವಿಡುವವನು ಪುಷ್ಟನಾಗುವನು.

ಜ್ಞಾನೋಕ್ತಿಗಳು 28:26 (KANIRV)
Square Portrait Landscape 4K UHD
ತನ್ನಲ್ಲೇ ಭರವಸವಿಡುವವನು ಮೂಢನು, ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.

ಜ್ಞಾನೋಕ್ತಿಗಳು 28:27 (KANIRV)
Square Portrait Landscape 4K UHD
ಬಡವರಿಗೆ ದಾನಮಾಡುವವನು ಕೊರತೆಪಡನು, ಅವರನ್ನು ಕಂಡು ಕಾಣದಂತೆ ಇರುವವನು ಬಹುಶಾಪಕ್ಕೆ ಒಳಗಾಗುವನು.

ಜ್ಞಾನೋಕ್ತಿಗಳು 28:28 (KANIRV)
Square Portrait Landscape 4K UHD
ದುಷ್ಟರು ಎದ್ದರೆ ಜನರು ಅಡಗಿಕೊಳ್ಳುವರು, ನಾಶನವಾದರೆ ಶಿಷ್ಟರು ವೃದ್ಧಿಯಾಗುವರು.

Available Bible Translations

American Standard Version
Proverbs 28 (ASV) »
King James Version
Proverbs 28 (KJV) »
GOD’S WORD® (GW)
Proverbs 28 (GW) »
World English Bible
Proverbs 28 (WEB) »
Louis Segond 1910
Proverbes 28 (LSG) »
इंडियन रिवाइज्ड वर्जन - हिंदी
नीतिवचन 28 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 28 (PANIRV) »
ভারতীয় সংশোধিত সংস্করণ - বাংলা
হিতোপদেশ 28 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 28 (TAMIRV) »
इंडियन रिवाइज्ड वर्जन - मराठी
नीतिसूत्रे 28 (MARIRV) »
ఇండియన్ రేవిజ్డ్ వెర్షన్ - తెలుగు
సామెత 28 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 28 (GUJIRV) »
الكتاب المقدس باللغة العربية، فان دايك
أَمْثَالٌ 28 (AVD) »
תנ ך עברי מודרני
משלי 28 (HEB) »
Bíblia Sagrada Português
Provérbios 28 (BSL) »
Kinh Thánh: Tiếng Việt
Châm Ngôn 28 (VIE) »
Reina Valera Antigua
Proverbios 28 (RVA) »
La Sacra Bibbia
Proverbi 28 (RIV) »
圣 经 简体中文和合本
箴 言 28 (CUVS) »
聖 經 繁體中文和合本
箴 言 28 (CUVT) »
Библия на русском
Притчи 28 (RUSV) »
Українська Біблія
Екклезіяст 28 (UKR) »
Szent Biblia - Magyar
Példabeszédek 28 (KAR) »
Българска Библия
Притчи 28 (BULG) »
聖書 日本語
箴言 28 (JPN) »
Kitaabka Quduuska Ah
Maahmaahyadii 28 (SOM) »
De Heilige Schrift
Spreuken 28 (NLD) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List