ಜ್ಞಾನೋಕ್ತಿಗಳು Chapter 27 KANIRV Bible Verse Images

ಜ್ಞಾನೋಕ್ತಿಗಳು 27 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 27 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 27:1 (KANIRV)
Square Portrait Landscape 4K UHD
ನಾಳೆ ಎಂದು ಕೊಚ್ಚಿಕೊಳ್ಳಬೇಡ, ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು.

ಜ್ಞಾನೋಕ್ತಿಗಳು 27:2 (KANIRV)
Square Portrait Landscape 4K UHD
ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ, ಆತ್ಮಸ್ತುತಿ ಬೇಡ, ಪರನು ನಿನ್ನನ್ನು ಸ್ತುತಿಸಿದರೆ ಸ್ತುತಿಸಲಿ.

ಜ್ಞಾನೋಕ್ತಿಗಳು 27:3 (KANIRV)
Square Portrait Landscape 4K UHD
ಕಲ್ಲು ಭಾರ, ಮರಳು ಭಾರ, ಎರಡಕ್ಕಿಂತಲೂ ಮೂಢನ ಕೋಪವು ಬಲು ಭಾರ.

ಜ್ಞಾನೋಕ್ತಿಗಳು 27:4 (KANIRV)
Square Portrait Landscape 4K UHD
ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರಕ್ಕೆ ಎದುರಾಗಿ ಯಾರು ನಿಂತಾರು?

ಜ್ಞಾನೋಕ್ತಿಗಳು 27:5 (KANIRV)
Square Portrait Landscape 4K UHD
ಕಾರ್ಯದಿಂದ ಹೊರಪಡದ ಪ್ರೀತಿಗಿಂತಲೂ, ಬಹಿರಂಗವಾದ ಗದರಿಕೆಯು ಲೇಸು.

ಜ್ಞಾನೋಕ್ತಿಗಳು 27:6 (KANIRV)
Square Portrait Landscape 4K UHD
ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ, ಶತ್ರುವಿನ ಮುದ್ದುಗಳು ಹೇರಳವಾಗಿವೆ.

ಜ್ಞಾನೋಕ್ತಿಗಳು 27:7 (KANIRV)
Square Portrait Landscape 4K UHD
ಹೊಟ್ಟೆತುಂಬಿದವನಿಗೆ ಜೇನುತುಪ್ಪವೂ ಅಸಹ್ಯ, ಹೊಟ್ಟೆ ಹಸಿದವನಿಗೆ ಕಹಿಯೆಲ್ಲಾ ಸಿಹಿ.

ಜ್ಞಾನೋಕ್ತಿಗಳು 27:8 (KANIRV)
Square Portrait Landscape 4K UHD
ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು, ಗೂಡನ್ನು ಬಿಟ್ಟು ಅಲೆಯುವ ಹಕ್ಕಿಯ ಹಾಗೆ.

ಜ್ಞಾನೋಕ್ತಿಗಳು 27:9 (KANIRV)
Square Portrait Landscape 4K UHD
ತೈಲವೂ, ಸುಗಂಧದ್ರವ್ಯಗಳೂ ಹೇಗೋ, ಮಿತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ.

ಜ್ಞಾನೋಕ್ತಿಗಳು 27:10 (KANIRV)
Square Portrait Landscape 4K UHD
ನಿನಗೂ, ನಿನ್ನ ತಂದೆಗೂ ಮಿತ್ರನಾದವನನ್ನು ಬಿಡಬೇಡ, ನಿನ್ನ ಇಕ್ಕಟ್ಟಿನ ದಿನದಲ್ಲಿ ಅಣ್ಣನ ಮನೆಯನ್ನು ಆಶ್ರಯಿಸದಿರು, ದೂರವಾಗಿರುವ ಅಣ್ಣನಿಗಿಂತ ಹತ್ತಿರವಾಗಿರುವ ನೆರೆಯವನು ಲೇಸು.

ಜ್ಞಾನೋಕ್ತಿಗಳು 27:11 (KANIRV)
Square Portrait Landscape 4K UHD
ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಹೃದಯವನ್ನು ಸಂತೋಷಪಡಿಸು, ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವುದು.

ಜ್ಞಾನೋಕ್ತಿಗಳು 27:12 (KANIRV)
Square Portrait Landscape 4K UHD
ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.

ಜ್ಞಾನೋಕ್ತಿಗಳು 27:13 (KANIRV)
Square Portrait Landscape 4K UHD
ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆಮಾಡಿಕೋ.

ಜ್ಞಾನೋಕ್ತಿಗಳು 27:14 (KANIRV)
Square Portrait Landscape 4K UHD
ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನು, ಶಪಿಸುವವನೆನಿಸಿಕೊಳ್ಳುವನು.

ಜ್ಞಾನೋಕ್ತಿಗಳು 27:15 (KANIRV)
Square Portrait Landscape 4K UHD
ದೊಡ್ಡ ಮಳೆಯ ದಿನದಲ್ಲಿ ತಟತಟನೆ ತೊಟ್ಟಿಕ್ಕುವ ಹನಿ, ತಂಟೆಮಾಡುವ ಹೆಂಡತಿ, ಎರಡೂ ಒಂದೇ.

ಜ್ಞಾನೋಕ್ತಿಗಳು 27:16 (KANIRV)
Square Portrait Landscape 4K UHD
ಅವಳನ್ನು ಅಡಗಿಸುವವನು ಗಾಳಿಯನ್ನು ಅಡಗಿಸುವನು, ಅವಳನ್ನು ಹಿಡಿಯುವ ಬಲಗೈ ಜಿಡ್ಡಿನ ವಸ್ತುವನ್ನು ಹಿಡಿಯುವುದು.

ಜ್ಞಾನೋಕ್ತಿಗಳು 27:17 (KANIRV)
Square Portrait Landscape 4K UHD
ಕಬ್ಬಿಣವು ಕಬ್ಬಿಣವನ್ನು ಹೇಗೆ ಹರಿತಮಾಡುವುದೋ, ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆಯೇ ಹರಿತಮಾಡುವನು.

ಜ್ಞಾನೋಕ್ತಿಗಳು 27:18 (KANIRV)
Square Portrait Landscape 4K UHD
ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು, ಯಜಮಾನನ ಮಾತಿನಂತೆ ನಡೆಯುವವನು ಸನ್ಮಾನವನ್ನು ಅನುಭವಿಸುವನು.

ಜ್ಞಾನೋಕ್ತಿಗಳು 27:19 (KANIRV)
Square Portrait Landscape 4K UHD
ನೀರು ಮುಖಕ್ಕೆ ಮುಖವನ್ನು ಹೇಗೆ ಪ್ರತಿಬಿಂಬಿಸುತ್ತದೋ, ಹಾಗೆಯೇ ಮನುಷ್ಯನಿಗೆ ಮನುಷ್ಯನ ಹೃದಯವು ತೋರ್ಪಡಿಸುತ್ತದೆ.

ಜ್ಞಾನೋಕ್ತಿಗಳು 27:20 (KANIRV)
Square Portrait Landscape 4K UHD
ಪಾತಾಳಕ್ಕೂ, ನಾಶಲೋಕಕ್ಕೂ ಹೇಗೆ ತೃಪ್ತಿಯಿಲ್ಲವೋ, ಹಾಗೆಯೇ ಮನುಷ್ಯನ ಕಣ್ಣುಗಳಿಗೆ ತೃಪ್ತಿಯಿಲ್ಲ.

ಜ್ಞಾನೋಕ್ತಿಗಳು 27:21 (KANIRV)
Square Portrait Landscape 4K UHD
ಪುಟಕುಲುಮೆಗಳಿಂದ ಬೆಳ್ಳಿಬಂಗಾರಗಳಿಗೆ ಶೋಧನೆಯು ಹೇಗೋ, ಹೊಗಳಿಕೆಯಿಂದ ಮನುಷ್ಯನಿಗೆ ಶೋಧನೆಯು ಹಾಗೆಯೇ.

ಜ್ಞಾನೋಕ್ತಿಗಳು 27:22 (KANIRV)
Square Portrait Landscape 4K UHD
ಗೋದಿರವೆಯ ಸಂಗಡ ಮೂರ್ಖನನ್ನು ಒರಳಿನಲ್ಲಿ ಒನಕೆಯಿಂದ ಕುಟ್ಟಿದರೂ, ಮೂರ್ಖತನವು ಅವನಿಂದ ತೊಲಗದು.

ಜ್ಞಾನೋಕ್ತಿಗಳು 27:23 (KANIRV)
Square Portrait Landscape 4K UHD
ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು, ನಿನ್ನ ಮಂದೆಗಳ ಮೇಲೆ ಮನಸ್ಸಿಡು.

ಜ್ಞಾನೋಕ್ತಿಗಳು 27:24 (KANIRV)
Square Portrait Landscape 4K UHD
ಸಂಪತ್ತು ಶಾಶ್ವತವಾಗಿರುವುದಿಲ್ಲವಷ್ಟೆ, ಕಿರೀಟವು ತಲತಲಾಂತರಗಳ ವರೆಗೆ ನಿಂತೀತೋ?

ಜ್ಞಾನೋಕ್ತಿಗಳು 27:25 (KANIRV)
Square Portrait Landscape 4K UHD
ಹುಲ್ಲನ್ನು ಕೊಯ್ದು ಹೊತ್ತುಕೊಂಡು ಬಂದ ಮೇಲೆ ಹಸಿಹುಲ್ಲು ತಲೆದೋರುವುದು, ಬೆಟ್ಟಗಳ ಸೊಪ್ಪನ್ನೂ ಕೂಡಿಸಿಡುವರು.

ಜ್ಞಾನೋಕ್ತಿಗಳು 27:26 (KANIRV)
Square Portrait Landscape 4K UHD
ಕುರಿಗಳಿಂದ ನಿನಗೆ ಉಡುಪಾಗುವುದು, ಆಡುಗಳಿಂದ ಹೊಲದ ಕ್ರಯ ಹೆಚ್ಚುವುದು.

ಜ್ಞಾನೋಕ್ತಿಗಳು 27:27 (KANIRV)
Square Portrait Landscape 4K UHD
ನಿನ್ನ ಊಟಕ್ಕೂ, ಮನೆಯವರ ಆಹಾರಕ್ಕೂ ಮೇಕೆಯ ಹಾಲು ಬೇಕಾದಷ್ಟಾಗುವುದು, ಅದು ನಿನ್ನ ದಾಸಿಯರಿಗೆ ಜೀವನವಾಗುವುದು.

Available Bible Translations

American Standard Version (ASV)
Proverbs 27 (ASV) »
King James Version (KJV)
Proverbs 27 (KJV) »
GOD’S WORD® (GW)
Proverbs 27 (GW) »
Berean Bible (BSB)
Proverbs 27 (BSB) »
World English Bible (WEB)
Proverbs 27 (WEB) »
French Bible (LSG)
Proverbes 27 (LSG) »
German Bible (LUTH1912)
Sprüche 27 (LUTH1912) »
Telugu Bible (TELIRV)
సామెత 27 (TELIRV) »
Hebrew Bible (HEB)
משלי 27 (HEB) »
Portuguese Bible (BSL)
Provérbios 27 (BSL) »
Vietnamese Bible (VIE)
Châm Ngôn 27 (VIE) »
Spanish Bible (RVA)
Proverbios 27 (RVA) »
Italian Bible (RIV)
Proverbi 27 (RIV) »
Chinese Simplified (CUVS)
箴 言 27 (CUVS) »
Chinese Traditional (CUVT)
箴 言 27 (CUVT) »
Albanian Bible (ALB)
Fjalët e urta 27 (ALB) »
Swedish Bible (SV1917)
Ordspråksboken 27 (SV1917) »
Russian Bible (RUSV)
Притчи 27 (RUSV) »
Hungarian Bible (KAR)
Példabeszédek 27 (KAR) »
Bulgarian Bible (BULG)
Притчи 27 (BULG) »
Japanese Bible (JPN)
箴言 27 (JPN) »
Norwegian Bible (NORSK)
Salomos Ordspråk 27 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List