ಜ್ಞಾನೋಕ್ತಿಗಳು Chapter 11 KANIRV Bible Verse Images

ಜ್ಞಾನೋಕ್ತಿಗಳು 11 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 11 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 11:1 (KANIRV)
Square Portrait Landscape 4K UHD
ಮೋಸದ ತಕ್ಕಡಿ ಯೆಹೋವನಿಗೆ ಅಸಹ್ಯ, ನ್ಯಾಯದ ತೂಕ ಆತನಿಗೆ ಸಂತೋಷ.

ಜ್ಞಾನೋಕ್ತಿಗಳು 11:2 (KANIRV)
Square Portrait Landscape 4K UHD
ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ, ದೀನತೆಯಲ್ಲಿ ಸುಜ್ಞಾನ.

ಜ್ಞಾನೋಕ್ತಿಗಳು 11:3 (KANIRV)
Square Portrait Landscape 4K UHD
ಯಥಾರ್ಥವಂತರಿಗೆ ಸರಳತೆಯು ಮಾರ್ಗದರ್ಶಕ, ವಂಚಕರಿಗೆ ವಕ್ರತೆಯು ನಾಶನ.

ಜ್ಞಾನೋಕ್ತಿಗಳು 11:4 (KANIRV)
Square Portrait Landscape 4K UHD
ಧನವು ಕೋಪದ ದಿನದಲ್ಲಿ ವ್ಯರ್ಥ, ಧರ್ಮವು ಮರಣವಿಮೋಚಕ.

ಜ್ಞಾನೋಕ್ತಿಗಳು 11:5 (KANIRV)
Square Portrait Landscape 4K UHD
ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವುದು, ದುಷ್ಟನು ತನ್ನ ದೋಷದಿಂದಲೇ ಬಿದ್ದುಹೋಗುವನು.

ಜ್ಞಾನೋಕ್ತಿಗಳು 11:6 (KANIRV)
Square Portrait Landscape 4K UHD
ಧರ್ಮವು ಯಥಾರ್ಥವಂತರನ್ನು ಉದ್ಧರಿಸುವುದು, ವಂಚಕರು ತಮ್ಮ ಆಶಾಪಾಶಕ್ಕೆ ಸಿಕ್ಕಿಬೀಳುವರು.

ಜ್ಞಾನೋಕ್ತಿಗಳು 11:7 (KANIRV)
Square Portrait Landscape 4K UHD
ದುಷ್ಟನು ಸಾಯುವಾಗ ಅವನ ನಿರೀಕ್ಷೆಯು ಹಾಳಾಗುವುದು, ಬಲದ ಮೇಲಣ ನಂಬಿಕೆಯು ಬಿದ್ದುಹೋಗುವುದು.

ಜ್ಞಾನೋಕ್ತಿಗಳು 11:8 (KANIRV)
Square Portrait Landscape 4K UHD
ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು, ದುಷ್ಟನು ಅವನಿಗೆ ಬದಲಾಗಿ ಅದರಲ್ಲಿ ಬೀಳುವನು.

ಜ್ಞಾನೋಕ್ತಿಗಳು 11:9 (KANIRV)
Square Portrait Landscape 4K UHD
ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು, ಶಿಷ್ಟನು ತಿಳಿವಳಿಕೆಯಿಂದ ಉದ್ಧಾರವಾಗುವನು.

ಜ್ಞಾನೋಕ್ತಿಗಳು 11:10 (KANIRV)
Square Portrait Landscape 4K UHD
ಸಜ್ಜನರು ಸುಖಿಗಳಾದರೆ ಪಟ್ಟಣಕ್ಕೆ ಉಲ್ಲಾಸ, ದುರ್ಜನರು ಹಾಳಾದರೆ ಜಯಘೋಷ.

ಜ್ಞಾನೋಕ್ತಿಗಳು 11:11 (KANIRV)
Square Portrait Landscape 4K UHD
ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಉನ್ನತಿಗೆ ಬರುವುದು, ಕೆಟ್ಟವರ ಬಾಯಿಂದ ಕೆಡವಲ್ಪಡುವುದು.

ಜ್ಞಾನೋಕ್ತಿಗಳು 11:12 (KANIRV)
Square Portrait Landscape 4K UHD
ನೆರೆಯವನನ್ನು ಹೀನೈಸುವವನು ಬುದ್ಧಿಹೀನನು, ವಿವೇಕಿಯು ಮೌನವಾಗಿರುವನು.

ಜ್ಞಾನೋಕ್ತಿಗಳು 11:13 (KANIRV)
Square Portrait Landscape 4K UHD
ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ನಂಬಿಗಸ್ತನು ಸಂಗತಿಗಳನ್ನು ಗುಪ್ತವಾಗಿಡುವನು.

ಜ್ಞಾನೋಕ್ತಿಗಳು 11:14 (KANIRV)
Square Portrait Landscape 4K UHD
ಉಚಿತಾಲೋಚನೆಯಿಲ್ಲದ ಕಡೆ ಪ್ರಜೆಯು ಬಿದ್ದು ಹೋಗುವುದು, ಬಹು ಮಂದಿ ಸಮಾಲೋಚಕರು ಇರುವಲ್ಲಿ ಸಂರಕ್ಷಣೆ ಇರುವುದು.

ಜ್ಞಾನೋಕ್ತಿಗಳು 11:15 (KANIRV)
Square Portrait Landscape 4K UHD
ಅನ್ಯನ ಸಾಲಕ್ಕೆ ಹೊಣೆಯಾದರೆ ಹಾನಿ, ಅಪರಿಚಿತನ ಹೊಣೆಗೆ ದೂರವಾದರೆ ನಿರ್ಭಯ.

ಜ್ಞಾನೋಕ್ತಿಗಳು 11:16 (KANIRV)
Square Portrait Landscape 4K UHD
ದಯಾಳುವಾದ ಹೆಂಗಸು ಗೌರವವನ್ನು ಪಡೆಯುವಳು, ಬಲಾತ್ಕಾರಿಗಳು ಧನವನ್ನು ಮಾತ್ರ ಕೂಡಿಸಿಕೊಳ್ಳುವರು.

ಜ್ಞಾನೋಕ್ತಿಗಳು 11:17 (KANIRV)
Square Portrait Landscape 4K UHD
ದಯಾಪರನಿಗೆ ಉಪಕಾರವಾಗುವುದು, ಕ್ರೂರನು ತನ್ನ ಶರೀರವನ್ನು ಹಿಂಸಿಸುವನು.

ಜ್ಞಾನೋಕ್ತಿಗಳು 11:18 (KANIRV)
Square Portrait Landscape 4K UHD
ಅಧರ್ಮಿಯ ಸಂಬಳವು ಮೋಸ, ನೀತಿಯನ್ನು ಬಿತ್ತುವವನು ಲಾಭವನ್ನು ಪಡೆಯುವನು.

ಜ್ಞಾನೋಕ್ತಿಗಳು 11:19 (KANIRV)
Square Portrait Landscape 4K UHD
ಧರ್ಮನಿರತನಿಗೆ ಜೀವ, ಅಧರ್ಮಾಸಕ್ತನಿಗೆ ಮರಣ.

ಜ್ಞಾನೋಕ್ತಿಗಳು 11:20 (KANIRV)
Square Portrait Landscape 4K UHD
ವಕ್ರಹೃದಯರು ಯೆಹೋವನಿಗೆ ಅಸಹ್ಯರು, ಸನ್ಮಾರ್ಗಿಗಳು ಆತನ ದಯೆಗೆ ಪಾತ್ರರು.

ಜ್ಞಾನೋಕ್ತಿಗಳು 11:21 (KANIRV)
Square Portrait Landscape 4K UHD
ದುಷ್ಟನಿಗೆ ದಂಡನೆ ಖಂಡಿತ, ಶಿಷ್ಟವಂಶಕ್ಕೆ ರಕ್ಷಣೆ.

ಜ್ಞಾನೋಕ್ತಿಗಳು 11:22 (KANIRV)
Square Portrait Landscape 4K UHD
ಹಂದಿಯ ಮೂಗಿಗೆ ಚಿನ್ನದ ಮೂಗುತಿಯು ಹೇಗೋ, ಅವಿವೇಕಳಿಗೆ ಸೌಂದರ್ಯವು ಹಾಗೆ.

ಜ್ಞಾನೋಕ್ತಿಗಳು 11:23 (KANIRV)
Square Portrait Landscape 4K UHD
ಸಜ್ಜನರ ಆಶೆಯು ಮಂಗಳಾಸ್ಪದ, ದುರ್ಜನರ ನಿರೀಕ್ಷೆಯು ರೋಷಾಸ್ಪದ.

ಜ್ಞಾನೋಕ್ತಿಗಳು 11:24 (KANIRV)
Square Portrait Landscape 4K UHD
ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ, ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ.

ಜ್ಞಾನೋಕ್ತಿಗಳು 11:25 (KANIRV)
Square Portrait Landscape 4K UHD
ಉದಾರಿಯು ಪುಷ್ಟನಾಗುವನು, ನೀರು ಹಾಯಿಸುವವನಿಗೆ ನೀರು ಸಿಕ್ಕುವುದು.

ಜ್ಞಾನೋಕ್ತಿಗಳು 11:26 (KANIRV)
Square Portrait Landscape 4K UHD
ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ, ಮಾರುವವನ ತಲೆಯ ಮೇಲೆ ಆಶೀರ್ವಾದ.

ಜ್ಞಾನೋಕ್ತಿಗಳು 11:27 (KANIRV)
Square Portrait Landscape 4K UHD
ಧರ್ಮಕ್ಕೆ ಆತುರಪಡುವವನಿಗೆ ದಯೆ, ಕೇಡನ್ನು ಹುಡುಕುವವನಿಗೆ ಕೇಡೇ.

ಜ್ಞಾನೋಕ್ತಿಗಳು 11:28 (KANIRV)
Square Portrait Landscape 4K UHD
ಧನವನ್ನೇ ನಂಬಿದವನು ಬಿದ್ದುಹೋಗುವನು, ಸದ್ಧರ್ಮಿಯು ಕುಡಿಯ ಹಾಗೆ ಚಿಗುರುವನು.

ಜ್ಞಾನೋಕ್ತಿಗಳು 11:29 (KANIRV)
Square Portrait Landscape 4K UHD
ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು, ಮೂರ್ಖನು ಜ್ಞಾನವಂತನ ಅಧೀನದಲ್ಲಿ ಬಿದ್ದಿರುವನು;

ಜ್ಞಾನೋಕ್ತಿಗಳು 11:30 (KANIRV)
Square Portrait Landscape 4K UHD
ಧರ್ಮಾತ್ಮನ ಫಲ ಜೀವವೃಕ್ಷ, ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು.

ಜ್ಞಾನೋಕ್ತಿಗಳು 11:31 (KANIRV)
Square Portrait Landscape 4K UHD
ಶಿಷ್ಟನು ಭೂಮಿಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ, ದುಷ್ಟನೂ, ಪಾಪಿಯೂ ದಂಡನೆಯನ್ನು ಅನುಭವಿಸುವರು ಎಂದು ಹೇಳಬೇಕಾಗಿಲ್ಲ.

Available Bible Translations

American Standard Version
Proverbs 11 (ASV) »
King James Version
Proverbs 11 (KJV) »
GOD’S WORD® (GW)
Proverbs 11 (GW) »
World English Bible
Proverbs 11 (WEB) »
Louis Segond 1910
Proverbes 11 (LSG) »
इंडियन रिवाइज्ड वर्जन - हिंदी
नीतिवचन 11 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਹਾਉਤਾਂ 11 (PANIRV) »
ভারতীয় সংশোধিত সংস্করণ - বাংলা
হিতোপদেশ 11 (BENIRV) »
இந்தியன் ரீவைஸ்டு வேர்ஷன் - தமிழ்
நீதிமொழிகள் 11 (TAMIRV) »
इंडियन रिवाइज्ड वर्जन - मराठी
नीतिसूत्रे 11 (MARIRV) »
ఇండియన్ రేవిజ్డ్ వెర్షన్ - తెలుగు
సామెత 11 (TELIRV) »
ઇન્ડિયન રિવાયઝ્ડ વર્ઝન - ગુજરાતી
નીતિવચનો 11 (GUJIRV) »
الكتاب المقدس باللغة العربية، فان دايك
أَمْثَالٌ 11 (AVD) »
תנ ך עברי מודרני
משלי 11 (HEB) »
Bíblia Sagrada Português
Provérbios 11 (BSL) »
Kinh Thánh: Tiếng Việt
Châm Ngôn 11 (VIE) »
Reina Valera Antigua
Proverbios 11 (RVA) »
La Sacra Bibbia
Proverbi 11 (RIV) »
圣 经 简体中文和合本
箴 言 11 (CUVS) »
聖 經 繁體中文和合本
箴 言 11 (CUVT) »
Библия на русском
Притчи 11 (RUSV) »
Українська Біблія
Екклезіяст 11 (UKR) »
Szent Biblia - Magyar
Példabeszédek 11 (KAR) »
Българска Библия
Притчи 11 (BULG) »
聖書 日本語
箴言 11 (JPN) »
Kitaabka Quduuska Ah
Maahmaahyadii 11 (SOM) »
De Heilige Schrift
Spreuken 11 (NLD) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List