ಜ್ಞಾನೋಕ್ತಿಗಳು Chapter 15 KANIRV Bible Verse Images

ಜ್ಞಾನೋಕ್ತಿಗಳು 15 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 15 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 15:1 (KANIRV)
Square Portrait Landscape 4K UHD
ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು, ಬಿರುನುಡಿಯು ಸಿಟ್ಟನ್ನೇರಿಸುವುದು.

ಜ್ಞಾನೋಕ್ತಿಗಳು 15:2 (KANIRV)
Square Portrait Landscape 4K UHD
ಜ್ಞಾನಿಗಳ ನಾಲಿಗೆಯು ತಿಳಿವಳಿಕೆಯನ್ನು ಸಾರ್ಥಕ ಮಾಡುವುದು, ಜ್ಞಾನಹೀನರ ಬಾಯಿಯು ಮೂರ್ಖತನವನ್ನು ಕಾರುವುದು.

ಜ್ಞಾನೋಕ್ತಿಗಳು 15:3 (KANIRV)
Square Portrait Landscape 4K UHD
ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವುದು, ಆತನು ಕೆಟ್ಟವರನ್ನು ಮತ್ತು ಒಳ್ಳೆಯವರನ್ನು ನೋಡುತ್ತಲೇ ಇರುವನು.

ಜ್ಞಾನೋಕ್ತಿಗಳು 15:4 (KANIRV)
Square Portrait Landscape 4K UHD
ಸಂತೈಸುವ ನಾಲಿಗೆ ಜೀವವೃಕ್ಷವು, ಬಲತ್ಕರಿಸುವ ನಾಲಿಗೆ ಮನಮುರಿಯುವುದು.

ಜ್ಞಾನೋಕ್ತಿಗಳು 15:5 (KANIRV)
Square Portrait Landscape 4K UHD
ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು, ಗದರಿಕೆಯನ್ನು ಗಮನಿಸುವವನು ಜಾಣನು.

ಜ್ಞಾನೋಕ್ತಿಗಳು 15:6 (KANIRV)
Square Portrait Landscape 4K UHD
ಶಿಷ್ಟನ ಮನೆಯಲ್ಲಿ ದೊಡ್ಡ ನಿಧಿ, ದುಷ್ಟನ ಆದಾಯವು ನಷ್ಟಕ್ಕೆ ದಾರಿ.

ಜ್ಞಾನೋಕ್ತಿಗಳು 15:7 (KANIRV)
Square Portrait Landscape 4K UHD
ಜ್ಞಾನಿಗಳ ತುಟಿಗಳು ತಿಳಿವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವುದೇ ಇಲ್ಲ.

ಜ್ಞಾನೋಕ್ತಿಗಳು 15:8 (KANIRV)
Square Portrait Landscape 4K UHD
ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ, ಶಿಷ್ಟರ ಬಿನ್ನಹ ಆತನಿಗೆ ಇಷ್ಟ.

ಜ್ಞಾನೋಕ್ತಿಗಳು 15:9 (KANIRV)
Square Portrait Landscape 4K UHD
ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ, ಧರ್ಮಾಸಕ್ತನು ಆತನಿಗೆ ಪ್ರಿಯ.

ಜ್ಞಾನೋಕ್ತಿಗಳು 15:10 (KANIRV)
Square Portrait Landscape 4K UHD
ಧರ್ಮಮಾರ್ಗವನ್ನು ಬಿಟ್ಟವನಿಗೆ ತೀಕ್ಷ್ಣ ಶಿಕ್ಷಣ, ಗದರಿಕೆಯನ್ನು ಕೇಳದವನಿಗೆ ಸಾವು.

ಜ್ಞಾನೋಕ್ತಿಗಳು 15:11 (KANIRV)
Square Portrait Landscape 4K UHD
ಪಾತಾಳವೂ, ನಾಶಲೋಕವೂ ಯೆಹೋವನಿಗೆ ಗೋಚರವಾಗಿರುವಲ್ಲಿ ನರವಂಶದವರ ಹೃದಯಗಳು ಆತನಿಗೆ ಮತ್ತೂ ಸ್ಪಷ್ಟ.

ಜ್ಞಾನೋಕ್ತಿಗಳು 15:12 (KANIRV)
Square Portrait Landscape 4K UHD
ಧರ್ಮನಿಂದಕನು ಗದರಿಕೆಯನ್ನು ಕೇಳನು, ಜ್ಞಾನಿಗಳ ಸಂಗಡ ಸೇರನು.

ಜ್ಞಾನೋಕ್ತಿಗಳು 15:13 (KANIRV)
Square Portrait Landscape 4K UHD
ಹರ್ಷ ಹೃದಯದಿಂದ ಹಸನ್ಮುಖ, ಮನೋವ್ಯಥೆಯಿಂದ ಆತ್ಮಭಂಗ.

ಜ್ಞಾನೋಕ್ತಿಗಳು 15:14 (KANIRV)
Square Portrait Landscape 4K UHD
ವಿವೇಕಿಯ ಹೃದಯ ತಿಳಿವಳಿಕೆಯನ್ನು ಹುಡುಕುವುದು, ಮೂಢರ ಬಾಯಿ ಮೂರ್ಖತನವನ್ನು ಮುಕ್ಕುವುದು.

ಜ್ಞಾನೋಕ್ತಿಗಳು 15:15 (KANIRV)
Square Portrait Landscape 4K UHD
ದೀನನ ದಿನಗಳೆಲ್ಲಾ ದುಃಖಭರಿತ, ಹರ್ಷಹೃದಯನಿಗೆ ನಿತ್ಯವೂ ಔತಣ.

ಜ್ಞಾನೋಕ್ತಿಗಳು 15:16 (KANIRV)
Square Portrait Landscape 4K UHD
ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪ ಧನವೇ ಲೇಸು.

ಜ್ಞಾನೋಕ್ತಿಗಳು 15:17 (KANIRV)
Square Portrait Landscape 4K UHD
ದ್ವೇಷವಿರುವಲ್ಲಿ ಮೃಷ್ಟಾನ್ನಕ್ಕಿಂತಲೂ, ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.

ಜ್ಞಾನೋಕ್ತಿಗಳು 15:18 (KANIRV)
Square Portrait Landscape 4K UHD
ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು, ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.

ಜ್ಞಾನೋಕ್ತಿಗಳು 15:19 (KANIRV)
Square Portrait Landscape 4K UHD
ಸೋಮಾರಿಯ ಮಾರ್ಗ ಮುಳ್ಳುಬೇಲಿ, ಯಥಾರ್ಥವಂತನ ಮಾರ್ಗ ರಾಜಮಾರ್ಗ.

ಜ್ಞಾನೋಕ್ತಿಗಳು 15:20 (KANIRV)
Square Portrait Landscape 4K UHD
ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು, ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು.

ಜ್ಞಾನೋಕ್ತಿಗಳು 15:21 (KANIRV)
Square Portrait Landscape 4K UHD
ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುವನು, ಬುದ್ಧಿವಂತನು ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು.

ಜ್ಞಾನೋಕ್ತಿಗಳು 15:22 (KANIRV)
Square Portrait Landscape 4K UHD
ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು.

ಜ್ಞಾನೋಕ್ತಿಗಳು 15:23 (KANIRV)
Square Portrait Landscape 4K UHD
ತಕ್ಕ ಉತ್ತರಕೊಡುವವನಿಗೆ ಎಷ್ಟೋ ಸಂತೋಷ! ಸಮಯೋಚಿತವಾದ ನುಡಿಯಲ್ಲಿ ಎಷ್ಟೋ ಸ್ವಾರಸ್ಯ!

ಜ್ಞಾನೋಕ್ತಿಗಳು 15:24 (KANIRV)
Square Portrait Landscape 4K UHD
ಜೀವದ ಮಾರ್ಗವು ವಿವೇಕಿಯನ್ನು ಮೇಲಕ್ಕೆತ್ತುವುದು; ಅದು ಅವನನ್ನು ಪಾತಾಳದಿಂದ ತಪ್ಪಿಸುವುದು.

ಜ್ಞಾನೋಕ್ತಿಗಳು 15:25 (KANIRV)
Square Portrait Landscape 4K UHD
ಯೆಹೋವನು ಗರ್ವಿಷ್ಠನ ಮನೆಯನ್ನು ಕೆಡವಿಬಿಡುವನು; ವಿಧವೆಯ ಮೇರೆಯನ್ನು ನೆಲೆಗೊಳಿಸುವನು.

ಜ್ಞಾನೋಕ್ತಿಗಳು 15:26 (KANIRV)
Square Portrait Landscape 4K UHD
ಕುಯುಕ್ತಿಯು ಯೆಹೋವನಿಗೆ ಅಸಹ್ಯ, ನಯನುಡಿಯು ಆತನಿಗೆ ಪ್ರಿಯ.

ಜ್ಞಾನೋಕ್ತಿಗಳು 15:27 (KANIRV)
Square Portrait Landscape 4K UHD
ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು. ಲಂಚವನ್ನೊಪ್ಪದವನು ಸುಖವಾಗಿ ಬಾಳುವನು.

ಜ್ಞಾನೋಕ್ತಿಗಳು 15:28 (KANIRV)
Square Portrait Landscape 4K UHD
ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ, ದುಷ್ಟನ ಬಾಯಿ ಕೆಟ್ಟದ್ದನ್ನು ಕಾರುತ್ತದೆ.

ಜ್ಞಾನೋಕ್ತಿಗಳು 15:29 (KANIRV)
Square Portrait Landscape 4K UHD
ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.

ಜ್ಞಾನೋಕ್ತಿಗಳು 15:30 (KANIRV)
Square Portrait Landscape 4K UHD
ಹಸನ್ಮುಖ ಹೃದಯಕ್ಕೆ ಆನಂದ, ಶುಭಸಮಾಚಾರ ದೇಹಕ್ಕೆ ಆರೋಗ್ಯ.

ಜ್ಞಾನೋಕ್ತಿಗಳು 15:31 (KANIRV)
Square Portrait Landscape 4K UHD
ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ನೆಲೆಗೊಳ್ಳುವನು.

ಜ್ಞಾನೋಕ್ತಿಗಳು 15:32 (KANIRV)
Square Portrait Landscape 4K UHD
ಶಿಕ್ಷೆಯನ್ನು ತಿರಸ್ಕರಿಸುವವನು ತನ್ನನ್ನೇ ನಿರಾಕರಿಸಿಕೊಳ್ಳುವನು, ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು.

ಜ್ಞಾನೋಕ್ತಿಗಳು 15:33 (KANIRV)
Square Portrait Landscape 4K UHD
ಯೆಹೋವನ ಭಯವೇ ಜ್ಞಾನೋಪದೇಶ, ಗೌರವಕ್ಕೆ ಮೊದಲು ವಿನಯ.

Available Bible Translations

American Standard Version (ASV)
Proverbs 15 (ASV) »
King James Version (KJV)
Proverbs 15 (KJV) »
GOD’S WORD® (GW)
Proverbs 15 (GW) »
Berean Bible (BSB)
Proverbs 15 (BSB) »
World English Bible (WEB)
Proverbs 15 (WEB) »
French Bible (LSG)
Proverbes 15 (LSG) »
German Bible (LUTH1912)
Sprüche 15 (LUTH1912) »
Telugu Bible (TELIRV)
సామెత 15 (TELIRV) »
Hebrew Bible (HEB)
משלי 15 (HEB) »
Portuguese Bible (BSL)
Provérbios 15 (BSL) »
Vietnamese Bible (VIE)
Châm Ngôn 15 (VIE) »
Spanish Bible (RVA)
Proverbios 15 (RVA) »
Italian Bible (RIV)
Proverbi 15 (RIV) »
Chinese Simplified (CUVS)
箴 言 15 (CUVS) »
Chinese Traditional (CUVT)
箴 言 15 (CUVT) »
Albanian Bible (ALB)
Fjalët e urta 15 (ALB) »
Swedish Bible (SV1917)
Ordspråksboken 15 (SV1917) »
Russian Bible (RUSV)
Притчи 15 (RUSV) »
Hungarian Bible (KAR)
Példabeszédek 15 (KAR) »
Bulgarian Bible (BULG)
Притчи 15 (BULG) »
Japanese Bible (JPN)
箴言 15 (JPN) »
Norwegian Bible (NORSK)
Salomos Ordspråk 15 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List