ಜ್ಞಾನೋಕ್ತಿಗಳು Chapter 8 KANIRV Bible Verse Images

ಜ್ಞಾನೋಕ್ತಿಗಳು 8 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 8 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 8:1 (KANIRV)
Square Portrait Landscape 4K UHD
ಜ್ಞಾನವೆಂಬಾಕೆಯು ಕರೆಯುತ್ತಾಳಲ್ಲವೇ? ವಿವೇಕವೆಂಬ ಆಕೆಯು ಧ್ವನಿಗೈಯುತ್ತಾಳಲ್ಲವೇ?

ಜ್ಞಾನೋಕ್ತಿಗಳು 8:2 (KANIRV)
Square Portrait Landscape 4K UHD
ಆಕೆಯು ರಾಜಮಾರ್ಗಗಳ ಮುಖ್ಯಸ್ಥಾನದಲ್ಲಿ, ದಾರಿಯ ಪಕ್ಕದಲ್ಲಿ, ನಡುಬೀದಿಯಲ್ಲಿ ನಿಂತುಕೊಳ್ಳುತ್ತಾಳೆ.

ಜ್ಞಾನೋಕ್ತಿಗಳು 8:3 (KANIRV)
Square Portrait Landscape 4K UHD
ಆಕೆ ಪಟ್ಟಣದ ಪ್ರವೇಶ ದ್ವಾರದಲ್ಲಿ, ಬಾಗಿಲುಗಳೊಳಗೆ ಜನಸೇರುವ ಸ್ಥಳದಲ್ಲಿ ಹೀಗೆ ಕೂಗುತ್ತಾಳೆ,

ಜ್ಞಾನೋಕ್ತಿಗಳು 8:4 (KANIRV)
Square Portrait Landscape 4K UHD
“ಜನರೇ, ನಿಮ್ಮನ್ನೇ ಕರೆಯುತ್ತೇನೆ, ಮಾನವರಿಗಾಗಿಯೇ ಧ್ವನಿಗೈಯುತ್ತೇನೆ.

ಜ್ಞಾನೋಕ್ತಿಗಳು 8:5 (KANIRV)
Square Portrait Landscape 4K UHD
ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ, ಜ್ಞಾನಹೀನರೇ, ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.

ಜ್ಞಾನೋಕ್ತಿಗಳು 8:6 (KANIRV)
Square Portrait Landscape 4K UHD
ಕೇಳಿರಿ, ನಾನು ಶ್ರೇಷ್ಠವಾದ ಸಂಗತಿಗಳನ್ನು ಹೇಳುವೆನು, ಯಥಾರ್ಥಕ್ಕಾಗಿಯೇ ತುಟಿಗಳನ್ನು ತೆರೆಯುವೆನು,

ಜ್ಞಾನೋಕ್ತಿಗಳು 8:7 (KANIRV)
Square Portrait Landscape 4K UHD
ನನ್ನ ಬಾಯಿ ಸತ್ಯವನ್ನೇ ಆಡುವುದು, ದುಷ್ಟತನವು ನನ್ನ ತುಟಿಗಳಿಗೆ ಅಸಹ್ಯವಾಗಿದೆ.

ಜ್ಞಾನೋಕ್ತಿಗಳು 8:8 (KANIRV)
Square Portrait Landscape 4K UHD
ನನ್ನ ಮಾತುಗಳೆಲ್ಲಾ ನೀತಿಭರಿತವಾಗಿವೆ, ಅವುಗಳಲ್ಲಿ ಕಪಟವೂ, ವಕ್ರತೆಯೂ ಇಲ್ಲ.

ಜ್ಞಾನೋಕ್ತಿಗಳು 8:9 (KANIRV)
Square Portrait Landscape 4K UHD
ಅವೆಲ್ಲಾ ಗ್ರಹಿಕೆಯುಳ್ಳವನಿಗೆ ನ್ಯಾಯವಾಗಿಯೂ, ತಿಳಿವಳಿಕೆಯನ್ನು ಪಡೆದವರಿಗೆ ಯಥಾರ್ಥವಾಗಿಯೂ ತೋರುವವು.

ಜ್ಞಾನೋಕ್ತಿಗಳು 8:10 (KANIRV)
Square Portrait Landscape 4K UHD
ನನ್ನ ಬೋಧನೆಯನ್ನು ಬೆಳ್ಳಿಗಿಂತಲೂ ಮತ್ತು ಜ್ಞಾನೋಪದೇಶವನ್ನು ಅಪರಂಜಿಗಿಂತಲೂ ಉತ್ತಮವೆಂದು ಹೊಂದಿಕೊಳ್ಳಿರಿ.

ಜ್ಞಾನೋಕ್ತಿಗಳು 8:11 (KANIRV)
Square Portrait Landscape 4K UHD
ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.

ಜ್ಞಾನೋಕ್ತಿಗಳು 8:12 (KANIRV)
Square Portrait Landscape 4K UHD
ಜ್ಞಾನವೆಂಬ ನನಗೆ ಜಾಣ್ಮೆಯೇ ನಿವಾಸ, ಯುಕ್ತಿಗಳ ತಿಳಿವಳಿಕೆಯನ್ನು ಹೊಂದಿದ್ದೇನೆ.

ಜ್ಞಾನೋಕ್ತಿಗಳು 8:13 (KANIRV)
Square Portrait Landscape 4K UHD
ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.

ಜ್ಞಾನೋಕ್ತಿಗಳು 8:14 (KANIRV)
Square Portrait Landscape 4K UHD
ಸದ್ಯೋಚನೆಯೂ, ಸುಜ್ಞಾನವೂ, ಸಾಮರ್ಥ್ಯವೂ ನನ್ನಲ್ಲಿವೆ, ವಿವೇಕವೂ ನಾನೇ.

ಜ್ಞಾನೋಕ್ತಿಗಳು 8:15 (KANIRV)
Square Portrait Landscape 4K UHD
ನನ್ನ ಸಹಾಯದಿಂದ ರಾಜರು ಆಳುವರು, ಅಧಿಪತಿಗಳು ಸಹ ನ್ಯಾಯತೀರಿಸುವರು.

ಜ್ಞಾನೋಕ್ತಿಗಳು 8:16 (KANIRV)
Square Portrait Landscape 4K UHD
ನನ್ನ ಮೂಲಕ ಪ್ರಭುಗಳು, ನಾಯಕರು ಅಂತು ಭೂಪತಿಗಳೆಲ್ಲರೂ ದೊರೆತನ ಮಾಡುವರು.

ಜ್ಞಾನೋಕ್ತಿಗಳು 8:17 (KANIRV)
Square Portrait Landscape 4K UHD
ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು.

ಜ್ಞಾನೋಕ್ತಿಗಳು 8:18 (KANIRV)
Square Portrait Landscape 4K UHD
ನನ್ನಲ್ಲಿ ಧನ, ಘನತೆ, ಶ್ರೇಷ್ಠಸಂಪತ್ತೂ, ನೀತಿಯೂ ಇರುತ್ತವೆ.

ಜ್ಞಾನೋಕ್ತಿಗಳು 8:19 (KANIRV)
Square Portrait Landscape 4K UHD
ನನ್ನಿಂದಾಗುವ ಫಲವು ಬಂಗಾರಕ್ಕಿಂತಲೂ ಹೌದು ಅಪರಂಜಿಗಿಂತಲೂ ಉತ್ತಮ. ನನ್ನ ಮೂಲಕವಾದ ಆದಾಯವು ಚೊಕ್ಕ ಬೆಳ್ಳಿಗಿಂತಲೂ ಅಮೂಲ್ಯವಾಗಿದೆ.

ಜ್ಞಾನೋಕ್ತಿಗಳು 8:20 (KANIRV)
Square Portrait Landscape 4K UHD
ನಾನು ಹಿಡಿದಿರುವ ದಾರಿಯು ನೀತಿಯೇ, ನ್ಯಾಯಮಾರ್ಗಗಳಲ್ಲಿ ನಡೆಯುತ್ತೇನೆ.

ಜ್ಞಾನೋಕ್ತಿಗಳು 8:21 (KANIRV)
Square Portrait Landscape 4K UHD
ಹೀಗಿರಲು ನನ್ನನ್ನು ಪ್ರೀತಿಸುವವರಿಗೆ ಧನದ ಬಾಧ್ಯತೆಯನ್ನು ಅನುಗ್ರಹಿಸಿ, ಅವರ ಬೊಕ್ಕಸಗಳನ್ನು ತುಂಬಿಸುವೆನು.

ಜ್ಞಾನೋಕ್ತಿಗಳು 8:22 (KANIRV)
Square Portrait Landscape 4K UHD
ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ.

ಜ್ಞಾನೋಕ್ತಿಗಳು 8:23 (KANIRV)
Square Portrait Landscape 4K UHD
ಪ್ರಾರಂಭದಲ್ಲಿ, ಭೂಮಿಯು ಹುಟ್ಟುವುದಕ್ಕಿಂತ ಮುಂಚೆ, ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು.

ಜ್ಞಾನೋಕ್ತಿಗಳು 8:24 (KANIRV)
Square Portrait Landscape 4K UHD
ಜಲನಿಧಿಗಳಾಗಲಿ, ನೀರು ತುಂಬಿದ ಬುಗ್ಗೆಗಳಾಗಲಿ ಇಲ್ಲದಿರುವಾಗ ನಾನು ಹುಟ್ಟಿದೆನು.

ಜ್ಞಾನೋಕ್ತಿಗಳು 8:25 (KANIRV)
Square Portrait Landscape 4K UHD
ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ, ಬಯಲನ್ನಾಗಲಿ,

ಜ್ಞಾನೋಕ್ತಿಗಳು 8:26 (KANIRV)
Square Portrait Landscape 4K UHD
ಭೂಮಿಯ ಮೊದಲನೆಯ ಅಣುರೇಣನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು.

ಜ್ಞಾನೋಕ್ತಿಗಳು 8:27 (KANIRV)
Square Portrait Landscape 4K UHD
ಆತನು ಸಾಗರದ ಮೇಲೆ ಚಕ್ರಾಕಾರವಾದ ಗೆರೆಯನ್ನು ಎಳೆದು, ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು.

ಜ್ಞಾನೋಕ್ತಿಗಳು 8:28 (KANIRV)
Square Portrait Landscape 4K UHD
ಆತನು ಗಗನವನ್ನು ಮೇಲೆ ಸ್ಥಿರಪಡಿಸಿ, ಸಾಗರದ ಬುಗ್ಗೆಗಳನ್ನು ನೆಲೆಗೊಳಿಸಿದನು.

ಜ್ಞಾನೋಕ್ತಿಗಳು 8:29 (KANIRV)
Square Portrait Landscape 4K UHD
ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಆತನು ಸಮುದ್ರಕ್ಕೆ ಮೇರೆಯನ್ನು ನೇಮಿಸಿ, ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ,

ಜ್ಞಾನೋಕ್ತಿಗಳು 8:30 (KANIRV)
Square Portrait Landscape 4K UHD
ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ, ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ,

ಜ್ಞಾನೋಕ್ತಿಗಳು 8:31 (KANIRV)
Square Portrait Landscape 4K UHD
ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ, ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.

ಜ್ಞಾನೋಕ್ತಿಗಳು 8:32 (KANIRV)
Square Portrait Landscape 4K UHD
ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ.

ಜ್ಞಾನೋಕ್ತಿಗಳು 8:33 (KANIRV)
Square Portrait Landscape 4K UHD
ನನ್ನ ಉಪದೇಶವನ್ನು ಕೇಳಿರಿ, ಅದನ್ನು ಬಿಡದೆ ಜ್ಞಾನವಂತರಾಗಿರಿ.

ಜ್ಞಾನೋಕ್ತಿಗಳು 8:34 (KANIRV)
Square Portrait Landscape 4K UHD
ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನವೂ ಕಾಯುತ್ತಾ ಬಾಗಿಲಿನ ನಿಲವುಗಳ ಹತ್ತಿರವಿದ್ದು, ಜಾಗರೂಕನಾಗಿ ನನ್ನ ಮಾತುಗಳನ್ನು ಕೇಳುವವನು ಭಾಗ್ಯವಂತನು.

ಜ್ಞಾನೋಕ್ತಿಗಳು 8:35 (KANIRV)
Square Portrait Landscape 4K UHD
ಯಾವನು ನನ್ನನ್ನು ಹೊಂದುತ್ತಾನೋ ಅವನು ಜೀವವನ್ನು ಹೊಂದುತ್ತಾನೆ; ಅವನು ಯೆಹೋವನ ದಯೆಗೆ ಗುರಿಯಾಗುವನು.

ಜ್ಞಾನೋಕ್ತಿಗಳು 8:36 (KANIRV)
Square Portrait Landscape 4K UHD
ಯಾವನು ನನಗೆ ತಪ್ಪುಮಾಡುತ್ತಾನೋ ಅವನು ತನ್ನ ಆತ್ಮಕ್ಕೆ ಕೇಡುಮಾಡಿಕೊಳ್ಳುತ್ತಾನೆ; ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”

Available Bible Translations

American Standard Version (ASV)
Proverbs 8 (ASV) »
King James Version (KJV)
Proverbs 8 (KJV) »
GOD’S WORD® (GW)
Proverbs 8 (GW) »
Berean Bible (BSB)
Proverbs 8 (BSB) »
World English Bible (WEB)
Proverbs 8 (WEB) »
French Bible (LSG)
Proverbes 8 (LSG) »
German Bible (LUTH1912)
Sprüche 8 (LUTH1912) »
Telugu Bible (TELIRV)
సామెత 8 (TELIRV) »
Hebrew Bible (HEB)
משלי 8 (HEB) »
Portuguese Bible (BSL)
Provérbios 8 (BSL) »
Vietnamese Bible (VIE)
Châm Ngôn 8 (VIE) »
Spanish Bible (RVA)
Proverbios 8 (RVA) »
Italian Bible (RIV)
Proverbi 8 (RIV) »
Chinese Simplified (CUVS)
箴 言 8 (CUVS) »
Chinese Traditional (CUVT)
箴 言 8 (CUVT) »
Albanian Bible (ALB)
Fjalët e urta 8 (ALB) »
Swedish Bible (SV1917)
Ordspråksboken 8 (SV1917) »
Russian Bible (RUSV)
Притчи 8 (RUSV) »
Hungarian Bible (KAR)
Példabeszédek 8 (KAR) »
Bulgarian Bible (BULG)
Притчи 8 (BULG) »
Japanese Bible (JPN)
箴言 8 (JPN) »
Norwegian Bible (NORSK)
Salomos Ordspråk 8 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List