ಜ್ಞಾನೋಕ್ತಿಗಳು Chapter 17 KANIRV Bible Verse Images

ಜ್ಞಾನೋಕ್ತಿಗಳು 17 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಜ್ಞಾನೋಕ್ತಿಗಳು 17 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಜ್ಞಾನೋಕ್ತಿಗಳು 17:1 (KANIRV)
Square Portrait Landscape 4K UHD
ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ, ಸಮಾಧಾನದ ಒಣತುತ್ತೇ ಮೇಲು.

ಜ್ಞಾನೋಕ್ತಿಗಳು 17:2 (KANIRV)
Square Portrait Landscape 4K UHD
ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.

ಜ್ಞಾನೋಕ್ತಿಗಳು 17:3 (KANIRV)
Square Portrait Landscape 4K UHD
ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು, ಹೃದಯಗಳನ್ನು ಶೋಧಿಸುವವನು ಯೆಹೋವನೇ.

ಜ್ಞಾನೋಕ್ತಿಗಳು 17:4 (KANIRV)
Square Portrait Landscape 4K UHD
ಕೆಡುಕನು ಕೆಟ್ಟ ತುಟಿಗಳನ್ನು ಗಮನಿಸುವನು, ಸುಳ್ಳುಗಾರನು ನಾಶನದ ನಾಲಿಗೆಗೆ ಕಿವಿಗೊಡುವನು.

ಜ್ಞಾನೋಕ್ತಿಗಳು 17:5 (KANIRV)
Square Portrait Landscape 4K UHD
ಬಡವರನ್ನು ಹಾಸ್ಯಮಾಡುವವನು ಸೃಷ್ಟಿಕರ್ತನನ್ನೇ ಹೀನೈಸುವನು, ಪರರ ವಿಪತ್ತಿಗೆ ಹಿಗ್ಗುವವನು ದಂಡನೆಯನ್ನು ಹೊಂದದಿರನು.

ಜ್ಞಾನೋಕ್ತಿಗಳು 17:6 (KANIRV)
Square Portrait Landscape 4K UHD
ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ, ತಂದೆತಾಯಿಗಳು ಮಕ್ಕಳಿಗೆ ಭೂಷಣ.

ಜ್ಞಾನೋಕ್ತಿಗಳು 17:7 (KANIRV)
Square Portrait Landscape 4K UHD
ಉತ್ತಮವಾದ ಮಾತು ಮೂರ್ಖನಿಗೆ ಅಯುಕ್ತ, ಸುಳ್ಳುಮಾತು ಉತ್ತಮನಿಗೆ ಮತ್ತೂ ಅಯುಕ್ತ.

ಜ್ಞಾನೋಕ್ತಿಗಳು 17:8 (KANIRV)
Square Portrait Landscape 4K UHD
ಕೊಡುವವನ ದೃಷ್ಟಿಗೆ ಲಂಚವು ಚಿಂತಾಮಣಿಯಾಗಿದೆ, ಎಲ್ಲಿ ಹೋದರೂ ಅವನಿಗೆ ಅನುಕೂಲವೇ.

ಜ್ಞಾನೋಕ್ತಿಗಳು 17:9 (KANIRV)
Square Portrait Landscape 4K UHD
ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು, ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.

ಜ್ಞಾನೋಕ್ತಿಗಳು 17:10 (KANIRV)
Square Portrait Landscape 4K UHD
ಮಂದಮತಿಗೆ ನೂರು ಪೆಟ್ಟು ಹೊಡೆಯುವುದಕ್ಕಿಂತಲೂ, ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ.

ಜ್ಞಾನೋಕ್ತಿಗಳು 17:11 (KANIRV)
Square Portrait Landscape 4K UHD
ದುರಾತ್ಮನಿಗೆ ದಂಗೆಯ ಮೇಲೆಯೇ ಮನಸ್ಸು, ಕ್ರೂರದೂತನು ಅವನನ್ನು ಆಕ್ರಮಿಸುವನು.

ಜ್ಞಾನೋಕ್ತಿಗಳು 17:12 (KANIRV)
Square Portrait Landscape 4K UHD
ಮೂರ್ಖತನದಲ್ಲಿ ಮುಳುಗಿರುವ ಮೂಢನನ್ನು ಎದುರಾಗುವುದಕ್ಕಿಂತಲೂ, ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಎದುರಾಗುವುದು ಲೇಸು.

ಜ್ಞಾನೋಕ್ತಿಗಳು 17:13 (KANIRV)
Square Portrait Landscape 4K UHD
ಉಪಕಾರಕ್ಕೆ ಅಪಕಾರಮಾಡುವವನ ಮನೆಗೆ ಕೇಡು ತಪ್ಪದು.

ಜ್ಞಾನೋಕ್ತಿಗಳು 17:14 (KANIRV)
Square Portrait Landscape 4K UHD
ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ, ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.

ಜ್ಞಾನೋಕ್ತಿಗಳು 17:15 (KANIRV)
Square Portrait Landscape 4K UHD
ದುಷ್ಟನನ್ನು ಶಿಷ್ಟನೆಂದು, ಶಿಷ್ಟನನ್ನು ದುಷ್ಟನೆಂದು ನಿರ್ಣಯಿಸುವವರಿಬ್ಬರೂ ಯೆಹೋವನಿಗೆ ಅಸಹ್ಯರು.

ಜ್ಞಾನೋಕ್ತಿಗಳು 17:16 (KANIRV)
Square Portrait Landscape 4K UHD
ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ.

ಜ್ಞಾನೋಕ್ತಿಗಳು 17:17 (KANIRV)
Square Portrait Landscape 4K UHD
ಮಿತ್ರನ ಪ್ರೀತಿಯು ನಿರಂತರ, ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.

ಜ್ಞಾನೋಕ್ತಿಗಳು 17:18 (KANIRV)
Square Portrait Landscape 4K UHD
ನೆರೆಯವನಿಗಾಗಿ ಪ್ರಮಾಣಮಾಡಿ ಹೊಣೆಯಾದವನು ಬುದ್ಧಿಹೀನನೇ ಸರಿ.

ಜ್ಞಾನೋಕ್ತಿಗಳು 17:19 (KANIRV)
Square Portrait Landscape 4K UHD
ಪಾಪಪ್ರಿಯನು ಕಲಹಪ್ರಿಯ, ಸೊಕ್ಕಿನಿಂದ ಮಾತನಾಡುವವನು ಕೇಡು ಬರಮಾಡಿಕೊಳ್ಳುವನು.

ಜ್ಞಾನೋಕ್ತಿಗಳು 17:20 (KANIRV)
Square Portrait Landscape 4K UHD
ವಕ್ರ ಹೃದಯನು ಶುಭವನ್ನು ಪಡೆಯನು, ಕೆಟ್ಟ ನಾಲಿಗೆಯವನು ವಿಪತ್ತಿಗೆ ಸಿಕ್ಕಿಬೀಳುವನು.

ಜ್ಞಾನೋಕ್ತಿಗಳು 17:21 (KANIRV)
Square Portrait Landscape 4K UHD
ಮೂರ್ಖನನ್ನು ಹೆತ್ತವರಿಗೆ ವ್ಯಥೆ, ಮೂರ್ಖನ ತಂದೆಗೆ ವ್ಯಸನ.

ಜ್ಞಾನೋಕ್ತಿಗಳು 17:22 (KANIRV)
Square Portrait Landscape 4K UHD
ಹರ್ಷಹೃದಯವು ಒಳ್ಳೆಯ ಔಷಧ, ಕುಗ್ಗಿದ ಮನದಿಂದ ಅನಾರೋಗ್ಯ.

ಜ್ಞಾನೋಕ್ತಿಗಳು 17:23 (KANIRV)
Square Portrait Landscape 4K UHD
ದುಷ್ಟನು ಲಂಚವನ್ನು ಗುಪ್ತವಾಗಿ ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುವನು.

ಜ್ಞಾನೋಕ್ತಿಗಳು 17:24 (KANIRV)
Square Portrait Landscape 4K UHD
ವಿವೇಕಿಗೆ ಜ್ಞಾನವೇ ಗುರಿಯಾಗಿರುವುದು, ಮೂಢನ ದೃಷ್ಟಿಯು ದಿಗಂತಗಳಲ್ಲಿಯೂ ಅಲೆಯುವುದು.

ಜ್ಞಾನೋಕ್ತಿಗಳು 17:25 (KANIRV)
Square Portrait Landscape 4K UHD
ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ.

ಜ್ಞಾನೋಕ್ತಿಗಳು 17:26 (KANIRV)
Square Portrait Landscape 4K UHD
ಶಿಷ್ಟನಿಗೆ ದಂಡನೆ ಯುಕ್ತವಲ್ಲ, ಧರ್ಮಿಷ್ಠನಿಗೆ ಪೆಟ್ಟು ಅಧರ್ಮ.

ಜ್ಞಾನೋಕ್ತಿಗಳು 17:27 (KANIRV)
Square Portrait Landscape 4K UHD
ಮಿತವಾಗಿ ಮಾತನಾಡುವವನು ಜ್ಞಾನಿ, ಶಾಂತಾತ್ಮನು ವಿವೇಕಿ.

ಜ್ಞಾನೋಕ್ತಿಗಳು 17:28 (KANIRV)
Square Portrait Landscape 4K UHD
ಮೂಢನು ಕೂಡ ಸುಮ್ಮನಿದ್ದರೆ ಜ್ಞಾನಿಯೆಂತಲೂ, ತುಟಿಗಳನ್ನು ಬಿಗಿಹಿಡಿದರೆ ವಿವೇಕಿಯೆಂತಲೂ ಅನ್ನಿಸಿಕೊಳ್ಳುವನು.

Available Bible Translations

American Standard Version (ASV)
Proverbs 17 (ASV) »
King James Version (KJV)
Proverbs 17 (KJV) »
GOD’S WORD® (GW)
Proverbs 17 (GW) »
Berean Bible (BSB)
Proverbs 17 (BSB) »
World English Bible (WEB)
Proverbs 17 (WEB) »
French Bible (LSG)
Proverbes 17 (LSG) »
German Bible (LUTH1912)
Sprüche 17 (LUTH1912) »
Telugu Bible (TELIRV)
సామెత 17 (TELIRV) »
Hebrew Bible (HEB)
משלי 17 (HEB) »
Portuguese Bible (BSL)
Provérbios 17 (BSL) »
Vietnamese Bible (VIE)
Châm Ngôn 17 (VIE) »
Spanish Bible (RVA)
Proverbios 17 (RVA) »
Italian Bible (RIV)
Proverbi 17 (RIV) »
Chinese Simplified (CUVS)
箴 言 17 (CUVS) »
Chinese Traditional (CUVT)
箴 言 17 (CUVT) »
Albanian Bible (ALB)
Fjalët e urta 17 (ALB) »
Swedish Bible (SV1917)
Ordspråksboken 17 (SV1917) »
Russian Bible (RUSV)
Притчи 17 (RUSV) »
Hungarian Bible (KAR)
Példabeszédek 17 (KAR) »
Bulgarian Bible (BULG)
Притчи 17 (BULG) »
Japanese Bible (JPN)
箴言 17 (JPN) »
Norwegian Bible (NORSK)
Salomos Ordspråk 17 (NORSK) »

ಜ್ಞಾನೋಕ್ತಿಗಳು (KANIRV) Chapter Selection

KANIRV Book Selection List